ETV Bharat / state

ಪ್ರತಾಪ ಸಿಂಹರನ್ನ ಸೋಲಿಸಬೇಕೆಂದು ಟಿಕೆಟ್ ಪಡೆದೆ; ಆದರೆ, ರಾಜಕೀಯ ಕುಸ್ತಿಗೆ ಅವರೇ ಇಲ್ಲ- ಲಕ್ಷ್ಮಣ್ ವ್ಯಂಗ್ಯ - Congress candidate M Lakshman

author img

By ETV Bharat Karnataka Team

Published : Mar 29, 2024, 5:17 PM IST

Updated : Mar 29, 2024, 5:23 PM IST

ಮೈಸೂರು ಕೊಡಗು ಭಾಗದಲ್ಲಿ ಕಾಂಗ್ರೆಸ್‌‍ ಪಕ್ಷಕ್ಕೆ ಪೂರಕ ವಾತಾವರಣವಿದೆ ಎಂದು ಕಾಂಗ್ರೆಸ್‌‍ ಅಭ್ಯರ್ಥಿ ಎಂ. ಲಕ್ಷ್ಮಣ್‌‍ ಅವರು ತಿಳಿಸಿದ್ದಾರೆ.

ಕಾಂಗ್ರೆಸ್‌‍ ಅಭ್ಯರ್ಥಿ ಎಂ. ಲಕ್ಷ್ಮಣ್‌‍
ಕಾಂಗ್ರೆಸ್‌‍ ಅಭ್ಯರ್ಥಿ ಎಂ. ಲಕ್ಷ್ಮಣ್‌‍
ಕಾಂಗ್ರೆಸ್‌‍ ಅಭ್ಯರ್ಥಿ ಎಂ. ಲಕ್ಷ್ಮಣ್‌‍

ಮೈಸೂರು : ನನ್ನನ್ನು ಗೆಲ್ಲಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗೌರವ ತಂದುಕೊಡಿ ಎಂದು ಮೈಸೂರು - ಕೊಡಗು ಕ್ಷೇತ್ರದ ಕಾಂಗ್ರೆಸ್‌‍ ಅಭ್ಯರ್ಥಿ ಎಂ. ಲಕ್ಷ್ಮಣ್‌‍ ಅವರು ಮನವಿ ಮಾಡಿದರು. ನಗರದ ಕಾಂಗ್ರೆಸ್‌‍ ಭವನದಲ್ಲಿ ಜಿಲ್ಲಾ, ನಗರ ಕಾಂಗ್ರೆಸ್‌‍ ಮತ್ತು ಅಲ್ಪಸಂಖ್ಯಾತರ ಜಿಲ್ಲಾ ಘಟಕದ ಸಹಯೋಗದಲ್ಲಿ ನಡೆದ ಜಿಲ್ಲೆಯ ವಿಧಾನ ಸಭಾ ಕ್ಷೇತ್ರಗಳ ಅಲ್ಪಸಂಖ್ಯಾತರ ಘಟಕದ ಪದಾಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಕಳೆದ 10 ವರ್ಷಗಳಿಂದ ಸ್ವಂತ ಜಿಲ್ಲೆಯಲ್ಲಿ ಲೋಕಸಭಾ ಅಭ್ಯರ್ಥಿ ಸೋತಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮನಸ್ಸಿನಲ್ಲಿ ಕೊರಗಿದೆ. ಕುರುಬ ಸಮುದಾಯಕ್ಕೆ ಟಿಕೆಟ್‌‍ ನೀಡಿದ್ದರಿಂದ ಸೋಲಾಯಿತು ಎಂಬ ಕಾರಣ ಬಂದ ಹಿನ್ನೆಲೆಯಲ್ಲಿ ಈ ಬಾರಿ ಒಕ್ಕಲಿಗ ಸಮುದಾಯದವರು ನನಗೆ ಟಿಕೆಟ್‌‍ ಕೊಟ್ಟಿದ್ದಾರೆ. ಒಕ್ಕಲಿಗ ಸಮುದಾಯ ಮತ ನೀಡಬೇಕು ಎಂದು ಮನವಿ ಮಾಡಿದರು.

ನಾನು ಹಣೆಯ ಮೇಲೆ ಜಾತಿ ಹೆಸರು ಬರೆದುಕೊಂಡವನಲ್ಲ. ನಾನು ಹುಟ್ಟಿದ್ದು ಒಕ್ಕಲಿಗನಾಗಿ. ಆದರೆ, ಬೆಳೆಯುತ್ತ ವಿಶ್ವಮಾನವನಾದೆ. ಆದರೆ, ಪ್ರತಾಪ ಸಿಂಹ ಟಿಕೆಟ್‌‍ ತಪ್ಪಿರುವ ಹತಾಶೆಯಿಂದ ಮಾಧ್ಯಮಗಳ ಮುಂದೆ ಜಾತಿ ಪ್ರಶ್ನಿಸುತ್ತಿದ್ದಾರೆ. ನನ್ನನ್ನು ಜೈಲಿಗೆ ಕಳುಹಿಸುತ್ತೇನೆ ಎಂಬ ಬೆದರಿಕೆಗಳನ್ನು ಹಾಕುತ್ತಿದ್ದಾರೆ. ಅವರ ವಿರುದ್ಧ ಮಾತನಾಡಬಾರದು ಎಂದು ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದಾರೆ. ಇದಕ್ಕೆ ಕಾರಣ ಕೇಳಿದರೆ ಉತ್ತರಿಸುತ್ತಿಲ್ಲ ಎಂದು ಹೇಳಿದರು.

ಮೈಸೂರು ಕೊಡಗು ಭಾಗದಲ್ಲಿ ಕಾಂಗ್ರೆಸ್‌‍ ಪಕ್ಷಕ್ಕೆ ಪೂರಕ ವಾತಾವರಣವಿದೆ. ಇಂತಹ ಸಂದರ್ಭದಲ್ಲಿ ನನ್ನನ್ನು ಸೋಲಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅವಮಾನ ಮಾಡಬೇಡಿ. ನಾನು ಸೋತು ಸೋತು ಸಾಕಾಗಿದೆ. ಕೊನೆಯದಾಗಿ ಕಾಂಗ್ರೆಸ್‌‍ ಪಕ್ಷ ಅವಕಾಶ ನೀಡಿದೆ. ಈ ಬಾರಿ ಸೋತರೆ ಸತ್ತಂತೆ ಎಂದು ಪುನರ್‌‍ ಉಚ್ಚರಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಜೈಲಿಗೆ ಕಳುಹಿಸಲು ಯತ್ನಿಸಲಾಗುತ್ತಿದೆ. ಕೇಂದ್ರದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಅಲ್ಪಸಂಖ್ಯಾತರು, ದಲಿತರು, ಹಿಂದುಳಿದ ವರ್ಗಗಳನ್ನು ಭಿಕ್ಷುಕರನ್ನಾಗಿ ಮಾಡಲಿದೆ. ಈಗಾಗಲೇ ಸರ್ಕಾರಿ ಸಂಸ್ಥೆಗಳನ್ನು ಖಾಸಗೀಕರಣಗೊಳಿಸಿ ಮೀಸಲಾತಿ ಸೌಲಭ್ಯ ದೊರೆಕದಂತೆ ಮಾಡುತ್ತಿದೆ. ಏಕರೂಪ ಚುನಾವಣೆ ನಡೆಸಿ ಪ್ರಜಾಪ್ರಭುತ್ವವನ್ನು ಸಂಪೂರ್ಣ ನಾಶಗೊಳಿಸಲಿದೆ ಎಂದು ದೂರಿದರು.

ಸಂಸದ ಪ್ರತಾಪ ಸಿಂಹ ಅವರನ್ನು ಸೋಲಿಸಬೇಕು ಎಂದು ಹೋರಾಟ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ. ಕೆ ಶಿವಕುಮಾರ್‌‍ ಅವರಿಗೆ ಮನವರಿಕೆ ಮಾಡಿ, ಟಿಕೆಟ್‌‍ ಪಡೆದುಕೊಂಡೆ. ಆದರೆ, ರಾಜಕೀಯ ಕುಸ್ತಿಗೆ ಅವರೇ ಇಲ್ಲ. ಬೇರೆಯವರನ್ನು ಕಳುಹಿಸಿದ್ದಾರೆ ಎಂದು ಹೇಳಿದರು.

ಕಳೆದ ಹತ್ತು ವರ್ಷಗಳಲ್ಲಿ ಕಿಡಿ ಹೊತ್ತಿಸುವುದು ಬಿಟ್ಟರೆ ಏನನ್ನೂ ಮಾಡಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾರಿಗೆ ತಂದ ಯೋಜನೆಗಳನ್ನು ಪುಸ್ತಕದಲ್ಲಿ ಪ್ರಕಟಿಸಿ, ತನ್ನದು ಎಂದು ಸುಳ್ಳು ಹೇಳಿ ಊರೆಲ್ಲಾ ತಿರುಗಾಡುತ್ತಿದ್ದಾರೆ. ಇವರ ಸುಳ್ಳುಗಳನ್ನು ಕಾಂಗ್ರೆಸ್ಸಿಗರು ಬಯಲು ಮಾಡದಿದ್ದರೆ ಕೆಆರ್‌‍ಎಸ್‌‍ ಅಣೆಕಟ್ಟೆಯನ್ನು ನಮ್ಮ ತಾತ ನಿರ್ಮಿಸಿದರು ಎಂದು ಹೇಳುತ್ತಿದ್ದರು. ಇದನ್ನು ನಂಬುವ ಮೂರ್ಖರು ನಮ್ಮಲ್ಲಿದ್ದಾರೆ ಎಂದು ಟೀಕಿಸಿದರು.

ಇದಕ್ಕೂ ಮುನ್ನ ನಮ್ಮ ಸಂಸದರು ನಮ್ಮ ಹೆಮ್ಮೆ ಪೋಸ್ಟರ್‌‍ ಬಿಡುಗಡೆಗೊಳಿಸಲಾಯಿತು. ಕಾಂಗ್ರೆಸ್‌‍ ಜಿಲ್ಲಾಧ್ಯಕ್ಷ ಡಾ. ಬಿ. ಜೆ ವಿಜಯಕುಮಾರ್‌‍, ನಗರಾಧ್ಯಕ್ಷ ಆರ್‌‍. ಮೂರ್ತಿ, ಮಾಜಿ ಸಚಿವ ಕೋಟೆ ಎಂ. ಶಿವಣ್ಣ, ಪ್ರಧಾನ ಕಾರ್ಯದರ್ಶಿ ಶಿವಣ್ಣ, ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಮೋಸಿನ್‌‍ ಖಾನ್‌‍, ಶಿವಪ್ರಸಾದ್‌‍, ಮಾಧ್ಯಮ ವಕ್ತಾರ ಕೆ. ಮಹೇಶ್‌‍ ಮುಂತಾದವರು ಹಾಜರಿದ್ದರು.

ಯದುವೀರ್‌‍ ಕೃಷ್ಣದತ್ತ ಚಾಮರಾಜ ಒಡೆಯರ್‌‍ ಅವರು ಮಹಾರಾಜರು. ಅರಮನೆ ಇರುವವರು. ನಾನು ಬೀದಿಯಲ್ಲಿ ಇರುವವನು. 30 ವರ್ಷಗಳಿಂದ ಹೋರಾಟ ಮಾಡಿ ಬಂದವನು. ರಿಯಲ್‌‍ ಎಸ್ಟೇಟ್‌‍ ಮಾಡುವವನಲ್ಲ. ಸಾವಿರಾರು ಕೋಟಿ ಒಡೆಯನಲ್ಲ. ಫುಟ್​ಬಾತ್‌‍ನಲ್ಲಿ ಊಟ-ತಿಂಡಿ-ಟೀ ಕುಡಿಯುವವನು. ಈಗ ಜನ ಸಾಮಾನ್ಯರು ತೀರ್ಮಾನ ಮಾಡಬೇಕು. ಸಾಮಾನ್ಯರಿಗೆ ಸಿಗುವ ವ್ಯಕ್ತಿ ಬೇಕಾ ಅಥವಾ ಟಿಕೆಟ್‌‍ ತೆಗೆದುಕೊಂಡು ಅರಮನೆಗೆ ಹೋಗಿ ಭೇಟಿ ಮಾಡುವ ವ್ಯಕ್ತಿ ಬೇಕಾ? ಎಂದಿದ್ದಾರೆ.

ಇದನ್ನೂ ಓದಿ : ಮಾಧ್ಯಮಗಳ ಮುಂದೆ ಜಾತಿ ಪ್ರಮಾಣ ಪತ್ರ ಪ್ರದರ್ಶಿಸಿದ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್; ಏಕೆ ಗೊತ್ತಾ? - Congress Candidate M Laxman

Last Updated : Mar 29, 2024, 5:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.