ಬೆಂಗಳೂರು : ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ 10ರ ಮೊದಲ ರನ್ನರ್ ಅಪ್ ಆಗಿ ಡ್ರೋನ್ ಪ್ರತಾಪ್ ಹೊರಹೊಮ್ಮಿದ್ದಾರೆ. ಇದರ ಬೆನ್ನಲ್ಲೇ ಪ್ರತಾಪ್ಗೆ ಮತ್ತೊಂದು ಅಘಾತ ಎದುರಾಗಿದೆ. ರೈತರಿಂದ ಹಣ ಪಡೆದು ಡ್ರೋನ್ ಪ್ರತಾಪ್ ವಂಚಿಸಿರುವ ಆರೋಪ ಕೇಳಿ ಬಂದಿದೆ. ಈ ಸಂಬಂಧ ಬೆಂಗಳೂರಿನ ಆರ್. ಆರ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಡ್ರೋನ್ ಪ್ರತಾಪ್, ಸಿರಣ್ ಮಾಧವ್, ಸಾರಂಗ ಶ್ರೀಮಂತ್ ಮಾನೆ ಮತ್ತು ಸಾಗರ್ ಗರ್ಗ್ ಎಂಬುವರು ಡ್ರೋನಾರ್ಕ್ ಏರೋಸ್ಪೇಸ್ ಪ್ರೈವೇಟ್ ಲಿಮಿಟೆಡ್ ಹಾಗೂ ಕ್ಯಾಸ್ಟರ್ ಡ್ರೋಣಾಟಿಕ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಗಳನ್ನು ತೆರೆದು ಸುಳ್ಳು ಮಾಹಿತಿ ನೀಡಿ ರೈತರಿಂದ ಹಣ ಪಡೆದು ವಂಚಿಸುತ್ತಿದ್ದಾರೆ ಎಂದು ಡಾ. ಪ್ರಯಾಗ್ ಎಂಬುವರು ಆರೋಪಿಸಿದ್ದಾರೆ. ಈ ಕುರಿತು ಸೂಕ್ತ ತನಿಖೆ ನಡೆಸಿ ಆರೋಪಿ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ.
ಇದನ್ನೂ ಓದಿ : 'ಇವತ್ತು ನಾನ್ ಹೇಳ್ತೀನಿ, ನೀವ್ ಕೇಳ್ಬೇಕ್': ವಿನಯ್ ಏಟಿಗೆ ಪ್ರತಾಪ್ ತಿರುಗೇಟು!