ETV Bharat / state

'ಸುವರ್ಣ ಸೌಧ ಉತ್ತರದ ಶಕ್ತಿಕೇಂದ್ರವಾಗಲಿ': ಚಳಿಗಾಲದ ಅಧಿವೇಶನದ ವೇಳೆ ಬೆಳಗಾವಿ 2ನೇ ರಾಜಧಾನಿಯ ಕೂಗು - BELAGAVI SUVARNA VIDHANA SOUDHA

ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ನಿರ್ಮಾಣವಾಗಿ ಅಧಿವೇಶನಗಳು ನಡೆದರೂ ಜನರು ಪ್ರತಿಯೊಂದೂ ಕೆಲಸಕ್ಕೂ ಬೆಂಗಳೂರಿಗೆ ಅಲೆಯುವುದು ಮಾತ್ರ ತಪ್ಪಿಲ್ಲ ಎಂಬುದು ಹೋರಾಟಗಾರರ ಬವಣೆ. ಈ ಕುರಿತು 'ಈಟಿವಿ ಭಾರತ್' ಪ್ರತಿನಿಧಿ ಸಿದ್ದನಗೌಡ ಪಾಟೀಲ್ ವಿಶೇಷ ವರದಿ.

Belagavi Suvarna Vidhana Soudha
ಬೆಳಗಾವಿ ಸುವರ್ಣ ವಿಧಾನಸೌಧ (ETV Bharat)
author img

By ETV Bharat Karnataka Team

Published : Dec 5, 2024, 8:02 AM IST

ಬೆಳಗಾವಿ: ಮತ್ತೊಂದು ಚಳಿಗಾಲದ ಅಧಿವೇಶನಕ್ಕೆ ಸುವರ್ಣ ವಿಧಾನಸೌಧ ಸಾಕ್ಷಿಯಾಗುತ್ತಿದೆ. ಅಧಿವೇಶನಕ್ಕೆ ಬರುವ ಮುನ್ನ ಆಳುವ ಸರ್ಕಾರ ಬೆಳಗಾವಿಯನ್ನು ಅಧಿಕೃತವಾಗಿ ಎರಡನೇ ರಾಜಧಾನಿ ಎಂದು ಘೋಷಿಸಲಿ. ಸೌಧಕ್ಕೆ ರಾಜ್ಯ ಮಟ್ಟದ ಕಚೇರಿಗಳನ್ನು ಸ್ಥಳಾಂತರಿಸಲು ಆದೇಶ ಹೊರಡಿಸಿ ಬರಲಿ ಎನ್ನುತ್ತಿದ್ದಾರೆ ಈ ಭಾಗದ ಹೋರಾಟಗಾರರು.

ಉತ್ತರ ಕರ್ನಾಟಕ - ದಕ್ಷಿಣ‌ ಕರ್ನಾಟಕ ಎಂಬ ಭೇದ ಭಾವ ತೊಲಗಿಸಬೇಕು. ಉತ್ತರ ಕರ್ನಾಟಕದ ಜನರ ಹತ್ತಿರವೂ ಸರ್ಕಾರವನ್ನು ಕೊಂಡೊಯ್ಯಬೇಕು. ಈ ಭಾಗದ ಸಮಸ್ಯೆಗಳಿಗೆ ಧ್ವನಿಯಾಗಬೇಕು ಎಂದು 2006ರಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮೊದಲ ಬಾರಿಗೆ ಬೆಂಗಳೂರು ಬಿಟ್ಟು ಬೆಳಗಾವಿಯಲ್ಲಿ ಅಧಿವೇಶನ ನಡೆಸಿದರು. ಈ ಮೂಲಕ ಉ.ಕ. ಭಾಗದ ಅಭಿವೃದ್ಧಿಗೆ ಮುನ್ನುಡಿ ಬರೆದರು.

ಹೋರಾಟಗಾರರ ಪ್ರತಿಕ್ರಿಯೆ (ETV Bharat)

ಅದಾದ ಬಳಿಕ ಅಧಿಕಾರಕ್ಕೆ ಬಂದ ಯಡಿಯೂರಪ್ಪ ಸರ್ಕಾರ 2012ರಲ್ಲಿ ಬೆಳಗಾವಿಯಲ್ಲಿ ಸುಂದರ ಸುವರ್ಣ ವಿಧಾನಸೌಧ ನಿರ್ಮಿಸಿದರು‌. ಅಂದಿನಿಂದ ಪ್ರತೀ ವರ್ಷ ಇಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಾ ಬಂದಿದೆ. ಆದರೆ, ಸೌಧ ನಿರ್ಮಾಣದ ಹಿಂದಿನ ಉದ್ದೇಶ ಮಾತ್ರ ಈಡೇರಿಲ್ಲ. ಪ್ರತಿಯೊಂದು ಕೆಲಸಕ್ಕೂ ಬೆಂಗಳೂರಿಗೆ ಅಲೆಯುವುದು ತಪ್ಪಿಲ್ಲ. ಐದುನೂರು ಕೋಟಿ ರೂ. ಖರ್ಚು ಮಾಡಿ ಕಟ್ಟಿದ ಸೌಧ ಬಿಳಿ ಆನೆಯಂತಾಗಿದೆ. ಪ್ರತಿ ವರ್ಷ 5 ಕೋಟಿಗೂ ಹೆಚ್ಚು ಹಣ ನಿರ್ವಹಣೆಗೆ ವ್ಯಯಿಸಲಾಗುತ್ತಿದೆ. ಆದರೆ, ಇದು ಉತ್ತರ ಕರ್ನಾಟಕಕ್ಕೆ ನ್ಯಾಯ ಒದಗಿಸಲು ವಿಫಲವಾಗಿದೆ ಎಂಬುದು ಹೋರಾಟಗಾರರ ಆರೋಪ.

ಈ ಕುರಿತು ಈಟಿವಿ ಭಾರತ ಜೊತೆಗೆ ಮಾತನಾಡಿದ, ಹಿರಿಯ ವಕೀಲ ಬಿ.ಡಿ.ಹಿರೇಮಠ, "ಉತ್ತರಕರ್ನಾಟಕ ಜನರ ನ್ಯಾಯಯುತ ಬೇಡಿಕೆಗಳ ಬಗ್ಗೆ ಕೇವಲ ಚರ್ಚೆ ಆಗದೇ, ಅವು ಕಾರ್ಯರೂಪಕ್ಕೆ ಬರಬೇಕು. ಆ ನಿಟ್ಟಿನಲ್ಲಿ ಈ ಭಾಗದ ಜನಪ್ರತಿನಿಧಿಗಳು ಇಚ್ಛಾಶಕ್ತಿ ಪ್ರದರ್ಶಿಸಬೇಕಿದೆ. ಇನ್ನು ಸುವರ್ಣ ವಿಧಾನಸೌಧ ನಿರ್ಮಾಣವಾದ ಬಳಿಕ ಇನ್ನೇನು ನಾವು ಬೆಂಗಳೂರಿಗೆ ಹೋಗುವುದು ತಪ್ಪಿತು ಅಂತಾ ಈ ಭಾಗದ ಜನರು ಅಂದುಕೊಂಡಿದ್ದರು. ಆದರೆ, ಅದು ಹುಸಿಯಾಗಿದೆ. 12 ವರ್ಷಗಳಿಂದ ಹೋರಾಟ ಮಾಡುತ್ತಿದ್ದು, ಈವರೆಗೂ ಸೌಧಕ್ಕೆ ರಾಜ್ಯ ಮಟ್ಟದ ಕಚೇರಿಗಳನ್ನು ಸ್ಥಳಾಂತರಿಸಿಲ್ಲ. ಆ ಕೆಲಸ ಕೂಡಲೇ ಆಗಬೇಕು. ಅದೇ ರೀತಿ ಬೆಳಗಾವಿಯನ್ನು 2ನೇ ರಾಜಧಾನಿ ಮಾಡಬೇಕು" ಎಂದು ಒತ್ತಾಯಿಸಿದರು.

ಅಧಿವೇಶನ ಉತ್ತರ ಕರ್ನಾಟಕಕ್ಕೆ ಸೀಮಿತವಾಗಲಿ: ಹಿರಿಯ ಕನ್ನಡ ಹೋರಾಟಗಾರ ಅಶೋಕ್​ ಚಂದರಗಿ ಮಾತನಾಡಿ, "ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ ಭಾಗದ ಸಮಸ್ಯೆಗಳ ಚರ್ಚೆಗೆ ಈ ಅಧಿವೇಶನ ಮೀಸಲಿಡಬೇಕು. ರಾಜಕೀಯ ಚರ್ಚೆಗೆ ಸಭಾಧ್ಯಕ್ಷರು, ಸಭಾಪತಿಗಳು ಅನುಮತಿ ನೀಡಬಾರದು. ಕೋಟ್ಯಂತರ ರೂ‌. ಖರ್ಚು ಮಾಡುವ ಅಧಿವೇಶನ ಕಾಟಾಚಾರಕ್ಕೆ ನಡೆಯಬಾರದು. ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತಾಗಬಾರದು. ಜನಪ್ರತಿನಿಧಿಗಳು ಪ್ರವಾಸಕ್ಕೆ ಬಂದಂತೆ ಆಗದೇ, ಅರ್ಥಪೂರ್ಣವಾಗಲಿ. ಶಾಸಕರ ಹಾಜರಾತಿ ಕಡ್ಡಾಯಗೊಳಿಸಬೇಕು" ಎಂದು ಒತ್ತಾಯಿಸಿದರು.

ಸೌಧ ಕಟ್ಟಡ, ಮ್ಯೂಸಿಯಂ ಆಗಬಾರದು: "ಚಳಿಗಾಲ ಅಧಿವೇಶನಕ್ಕೆ ಬರುವ ಮುನ್ನ ಬೆಳಗಾವಿಯನ್ನು ಅಧಿಕೃತವಾಗಿ ಎರಡನೇ ರಾಜಧಾನಿ ಎಂದು ಘೋಷಿಸಬೇಕು. ಸುವರ್ಣ ವಿಧಾನಸೌಧ ಕೇವಲ ಕಟ್ಟಡ, ಮ್ಯೂಸಿಯಂ ಆಗಬಾರದು. ನಿಜವಾಗಲೂ ಉತ್ತರ ಕರ್ನಾಟಕ ಭಾಗದ ಆಡಳಿತಾತ್ಮಕ ಶಕ್ತಿಕೇಂದ್ರ ಆಗಬೇಕು‌. ಇದು ಸಾಧ್ಯವಾಗಬೇಕಾದರೆ, ರಾಜ್ಯಮಟ್ಟದ ಕಾರ್ಯದರ್ಶಿಗಳ ಕಚೇರಿ ಮತ್ತು ನಿರ್ದೇಶಕ ಮಂಡಳಿಗಳು ಇಲ್ಲಿಗೆ ಬರಬೇಕು. ಆ ಅಧಿಕಾರಿಗಳು ಸೌಧದಿಂದ ಕಾರ್ಯ ನಿರ್ವಹಿಸಿ, ನಮಗೆ ಬೇಕಾದ ಅಂತಿಮ ಆದೇಶ ಇಲ್ಲಿಯೇ ದೊರೆಯಬೇಕು. ಅದೇ ರೀತಿ ಜಿಲ್ಲಾ ಮಟ್ಟದ ಕಚೇರಿಗಳನ್ನು ಅಲ್ಲಿಂದ ಸ್ಥಳಾಂತರಗೊಳಿಸಬೇಕು" ಎಂದು ಉತ್ತರ ಕರ್ನಾಟಕ ಹೋರಾಟಗಾರ ಅಶೋಕ್​ ಪೂಜಾರಿ ಆಗ್ರಹಿಸಿದರು.

ಒಟ್ಟಾರೆ ಈ ಬಾರಿಯಾದರೂ ಇದು ಕಾಟಾಚಾರದ ಅಧಿವೇಶನ ಆಗದೇ, ಅರ್ಥಪೂರ್ಣವಾಗಿ ನಡೆದು ಉ.ಕ. ಭಾಗ ಆಶೋತ್ತರ ಈಡೇರಿಸಲಿ ಎಂಬುದು ಎಲ್ಲರ ಆಶಯ.

ಇದನ್ನೂ ಓದಿ: ಮತ್ತೆ ಬಂತು ಬೆಳಗಾವಿ ಅಧಿವೇಶನ: ಕಾಟಾಚಾರಕ್ಕೆ ಬರಬೇಡಿ; ಉತ್ತರ ಕರ್ನಾಟಕದ ಬಗ್ಗೆ ಚರ್ಚಿಸಲು ಬನ್ನಿ ಅಂತಿದಾರೆ ಇಲ್ಲಿನ ಜನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.