ETV Bharat / state

ಬಜೆಟ್ ಮಂಡನೆಗೆ ಕ್ಷಣಗಣನೆ: ಪಂಚ ಗ್ಯಾರಂಟಿಗೆ ಹಣ ಬಲ, ತೆರಿಗೆ ಭಾರವಿಲ್ಲದ ಉಳಿತಾಯ ಬಜೆಟ್ ಸಾಧ್ಯತೆ - ಕರ್ನಾಟಕ ಬಜೆಟ್ 2024

Karnataka Budget 2024: ಸಿಎಂ ಸಿದ್ದರಾಮಯ್ಯ ಅವರು ತಮ್ಮ 15ನೇ ಬಜೆಟ್ ಮಂಡಿಸಲು ಸಿದ್ಧರಾಗಿದ್ದಾರೆ. ಲೋಕಸಭೆ ಚುನಾವಣೆ ಹತ್ತಿರದಲ್ಲೇ ಇರುವುದರಿಂದ ಈ ಬಾರಿಯ ಮುಂಗಡ ಪತ್ರದ ಮೇಲೆ ನಿರೀಕ್ಷೆ ದುಪ್ಪಟ್ಟಾಗಿದೆ.

ಕರ್ನಾಟಕ ಬಜೆಟ್ karnataka budget 2024
ಕರ್ನಾಟಕ ಬಜೆಟ್
author img

By ETV Bharat Karnataka Team

Published : Feb 16, 2024, 6:52 AM IST

Updated : Feb 16, 2024, 6:58 AM IST

ಬೆಂಗಳೂರು: 14 ಬಾರಿ ಬಜೆಟ್ ಮಂಡಿಸಿ ದಾಖಲೆ ಬರೆದಿರುವ ಸಿಎಂ ಸಿದ್ದರಾಮಯ್ಯ ಇಂದು ತಮ್ಮ 15ನೇ ಆಯವ್ಯಯ ಮಂಡಿಸಲಿದ್ದಾರೆ. ಗ್ಯಾರಂಟಿ ಯೋಜನೆಗೆ ಅನುದಾನ ಹೊಂದಿಸಿ, ಅಭಿವೃದ್ಧಿಗೂ ಹಣಕಾಸು ಕೊರತೆಯಾಗದ ರೀತಿ ಹೊರೆ ಇಲ್ಲದ ಉಳಿತಾಯ ಲೆಕ್ಕ ಪತ್ರ ಮಂಡನೆ ಮಾಡಲು ಸಜ್ಜಾಗಿದ್ದಾರೆ.

2024-25 ಸಾಲಿನ ಬಜೆಟ್ ಮಂಡನೆಗೆ ಕ್ಷಣಗಣನೆ ಆರಂಭವಾಗಿದೆ.‌ ಇಂದು ಬೆಳಗ್ಗೆ 10.15ಕ್ಕೆ ಸಿಎಂ ಸಿದ್ದರಾಮಯ್ಯ ತಮ್ಮ 15ನೇ ಬಜೆಟ್ ಮಂಡನೆ ಮಾಡಲಿದ್ದಾರೆ. ಅಂದಾಜು 3.80 ಲಕ್ಷ ಕೋಟಿ ರೂ.‌ ಗಾತ್ರದ ಬಜೆಟ್ ಮಂಡನೆಯ ನಿರೀಕ್ಷೆ ಇದೆ. ಪ್ರಮುಖವಾಗಿ ಪಂಚ ಗ್ಯಾರಂಟಿಗಳಿಗೆ ಅನುದಾನ ಒದಗಿಸುವ ಜೊತೆಗೆ ಆದಾಯ ಸಂಗ್ರಹದ ಪರ್ಯಾಯ ಮಾರ್ಗೋಪಾಯಗಳೊಂದಿಗೂ ಮುಂಗಡ ಪತ್ರವನ್ನು ಮಂಡಿಸಲಿದ್ದಾರೆ. ಲೋಕಸಭೆ ಚುನಾವಣೆ ಹಿನ್ನೆಲೆ ಈ ಬಾರಿ ರಾಜ್ಯದ ಜನರಿಗೆ ತೆರಿಗೆ ಹೊರೆ ಇಲ್ಲದ, ಅಭಿವೃದ್ಧಿಗೂ ಒತ್ತು ನೀಡುವ ಸಮತೋಲಿತ ಬಜೆಟ್ ಮಂಡನೆಯಾಗಲಿದೆ ಎಂದು ಹೇಳಲಾಗಿದೆ.‌

ಪಂಚ ಗ್ಯಾರಂಟಿಗಳಿಗೆ ಅನುದಾನ ಮೀಸಲು: ಪಂಚ ಗ್ಯಾರಂಟಿಗಳಿಗೆ ಬಜೆಟ್​​ನಲ್ಲಿ ಸಂಪೂರ್ಣ ಅನುದಾನ ಎತ್ತಿಡಲಾಗುವುದು. ಐದೂ ಗ್ಯಾರಂಟಿಗಳ ಅನುಷ್ಠಾನಕ್ಕಾಗಿ ಸುಮಾರು 55,000-60000 ಕೋಟಿ ರೂ. ಅನುದಾನ ಮೀಸಲಿಡುವ ಸಾಧ್ಯತೆ ಇದೆ. 2023-24 ಸಾಲಿನಲ್ಲಿನಲ್ಲಿ ಪಂಚ ಗ್ಯಾರಂಟಿಗಳಿಗಾಗಿ ರಾಜ್ಯ ಸರ್ಕಾರ ಸುಮಾರು 40,000 ಕೋಟಿ ರೂ.‌ ಅನುದಾನ ಹಂಚಿಕೆ ಮಾಡಲಾಗಿತ್ತು. 2024-25 ಸಾಲಿನಲ್ಲಿ ಪಂಚ ಗ್ಯಾರಂಟಿಗೆ ಸಂಪೂರ್ಣ ಅನುದಾನ ಮೀಸಲಿಡುವ ಅನಿವಾರ್ಯತೆ ಇದೆ. ಗೃಹ ಲಕ್ಷ್ಮಿಗೆ ಸುಮಾರು 31,900 ಕೋಟಿ ರೂ. ಬೇಡಿಕೆ ಇಡಲಾಗಿದೆ. ಉಳಿದಂತೆ ಯುವನಿಧಿಗೆ 2,500 ಕೋಟಿ ರೂ., ಶಕ್ತಿ ಯೋಜನೆಗೆ ಸುಮಾರು 6,500 ಕೋಟಿ ರೂ., ಗೃಹ ಜ್ಯೋತಿಗೆ ಸುಮಾರು 12,000 ಕೋಟಿ ರೂ. ಮೀಸಲಿಡುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಬಜೆಟ್ ಗಾತ್ರ ಹಿಗ್ಗಿದರೂ ಅದರಲ್ಲಿ ಬಹುಪಾಲು ಪಂಚ ಗ್ಯಾರಂಟಿಗೆ ಹೋಗುವುದಂತೂ ಖಚಿತ.

ಉಳಿತಾಯದ ಬಜೆಟ್ ಮಂಡನೆ?: ಈ ಬಾರಿ ಸಿಎಂ ಸಿದ್ದರಾಮಯ್ಯ ಅವರು ಉಳಿತಾಯದ ಬಜೆಟ್ ಮಂಡಿಸುವ ಸಾಧ್ಯತೆ ಇದೆ. ಕಳೆದ ಬಾರಿ ಕೊರತೆಯ ಬಜೆಟ್ ಮಂಡಿಸಲಾಗಿತ್ತು. ಎರಡು ಲಕ್ಷಕ್ಕೂ ಅಧಿಕ ತೆರಿಗೆ ಆದಾಯ ಸಂಗ್ರಹದ ಗುರಿಯನ್ನು ಅಂದಾಜಿಸಲಾಗಿದೆ. ಇದಕ್ಕೆ ಪೂರಕವಾಗಿ ತೆರಿಗೇತರ ಆದಾಯ ಸಂಗ್ರಹಕ್ಕೆ ಹೆಚ್ಚಿನ ಒತ್ತು ಕೊಡಲು ಸಿಎಂ ಮುಂದಾಗಿದ್ದಾರೆ. ಈಗಾಗಲೇ ಆಸ್ತಿ ಮಾರ್ಗಸೂಚಿ ದರ, ಬಿಯರ್ ದರ ಹೆಚ್ಚಿಸಲಾಗಿದೆ. ಉಳಿದಂತೆ ಈ ಬಾರಿ ಗಣಿಗಾರಿಕೆ ರಾಯಧನ ಹೆಚ್ಚಿಸುವ ಸಾಧ್ಯತೆ ಇದೆ. ಉಳಿದಂತೆ ಇತರ ತೆರಿಗೇತರ ಆದಾಯಗಳನ್ನು ಹೆಚ್ಚಿಗೆ ಸಂಗ್ರಹಿಸುವ ಗುರಿಯೊಂದಿಗೆ ಉಳಿತಾಯ ಬಜೆಟ್ ಮಂಡನೆಗೆ ಸಜ್ಜಾಗಿದ್ದಾರೆ ಎಂದು ಹೇಳಲಾಗಿದೆ.

ಅಭಿವೃದ್ಧಿಗೆ ಹೆಚ್ಚಿನ ಹಣ, ತೆರಿಗೆ ಹೊರೆ ಇಲ್ಲದ ಬಜೆಟ್ ನಿರೀಕ್ಷೆ: ಈ ಬಾರಿ ಅಭಿವೃದ್ಧಿಗಾಗಿ ಹೆಚ್ಚಿನ ಹಣ ಇಡಲಿದ್ದಾರೆ. ಅಭಿವೃದ್ಧಿಗಾಗಿನ ಬಂಡವಾಳ ವೆಚ್ಚಕ್ಕೆ ಹೆಚ್ಚಿನ ಒತ್ತು ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇನ್ನು ಲೋಕಸಭೆ ಚುನಾವಣೆ ಹಿನ್ನೆಲೆ ತೆರಿಗೆ ಹೊರೆ ಇಲ್ಲದ ಬಜೆಟ್ ಮಂಡನೆ ಸಾಧ್ಯತೆ ಇದೆ. ಅಬಕಾರಿ ಸುಂಕ ಹೆಚ್ಚಿಸುವ ಸಾಧ್ಯತೆ ಇದೆ. ಉಳಿದಂತೆ ಇತರ ಯಾವುದೇ ತೆರಿಗೆ ಹೆಚ್ಚಿಸುವ ಇರಾದೆಯನ್ನು ಸಿಎಂ ಹೊಂದಿಲ್ಲ ಎನ್ನಲಾಗಿದೆ.

1 ಲಕ್ಷ ಕೋಟಿ ರೂ.‌ ಆಸುಪಾಸು ಸಾಲದ ಮೊರೆ?: ಈ ಬಾರಿ ಸಿಎಂ ಸಿದ್ದರಾಮಯ್ಯ ಅವರು ಅಂದಾಜು 1 ಲಕ್ಷ ಕೋಟಿ ರೂ. ಆಸುಪಾಸು ಸಾಲದ ಮೊರೆ ಹೋಗುವ ಸಾಧ್ಯತೆ ಹೆಚ್ಚಿದೆ. ಪ್ರಸಕ್ತ ವಿತ್ತೀಯ ಸ್ಥಿತಿಗತಿ, ಗರಿಷ್ಠ ರಾಜಸ್ವ ವೆಚ್ಚದ ಪ್ರಮಾಣ, ಬೃಹತ್ ಪಂಚ ಗ್ಯಾರಂಟಿ ಹೊರೆಯ ಹಿನ್ನೆಲೆ ಇನ್ನಷ್ಟು ಸಾಲದ ಮೊರೆ ಹೋಗುವ ಸಾಧ್ಯತೆ ಹೆಚ್ಚಿದೆ. ಮೂಲಗಳ ಪ್ರಕಾರ 2024-25 ಸಾಲಿನಲ್ಲಿ ಸಿಎಂ ಸಿದ್ದರಾಮಯ್ಯ ಅಂದಾಜು 1 ಲಕ್ಷ ಕೋಟಿ ರೂ. ಆಸುಪಾಸು ಸಾಲದ ಮೊರೆ ಹೋಗುವುದು ಬಹುತೇಕ ಖಚಿತವಾಗಿದೆ.

ಇದನ್ನೂ ಓದಿ: ಕಳೆದ ಬಜೆಟ್​ನಲ್ಲಿ ಮೈಸೂರಿಗೆ ಘೋಷಣೆಯಾದ ಕೊಡುಗೆಗಳೇನು?, ಅನುಷ್ಠಾನವಾಗಿದ್ದೆಷ್ಟು?

2024-25ರಲ್ಲಿ ರಾಜಸ್ವ ವೆಚ್ಚ ಸುಮಾರು 2.50 ಲಕ್ಷ ಕೋಟಿ ರೂ. ತಲುಪುವ ಅಂದಾಜು ಮಾಡಲಾಗಿದೆ. ಹೀಗಾಗಿ ಅಭಿವೃದ್ಧಿ ಕೆಲಸಗಳಿಗಾಗಿ ಬಂಡವಾಳ ವೆಚ್ಚಕ್ಕೆ ಸಾಲವನ್ನೇ ಬಹುವಾಗಿ ನೆಚ್ಚಿಕೊಳ್ಳುವುದು ಅನಿವಾರ್ಯ. ರಾಜ್ಯದ ಜಿಎಸ್​​ಡಿಪಿ 29.5 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ವಿತ್ತೀಯ ಹೊಣೆಗಾರಿಕೆ ಮತ್ತು ಬಜೆಟ್ ನಿರ್ವಹಣೆ ಕಾಯ್ದೆ ಪ್ರಕಾರ ಒಟ್ಟು ಹೊಣೆಗಾರಿಕೆ ರಾಜ್ಯದ ಜಿಡಿಪಿಯ ಶೇ.3 ಮೀರುವಂತಿಲ್ಲ. ರಾಜ್ಯದ ಪ್ರಸಕ್ತ ಒಟ್ಟು ಹೊಣೆಗಾರಿಕೆ 5.7 ಲಕ್ಷ ಕೋಟಿ ರೂ. ಆಗಿದೆ. ಅದರಂತೆ ರಾಜ್ಯ ಸರ್ಕಾರ ಈ ಬಾರಿ 1.2 ಲಕ್ಷ ಕೋಟಿ ರೂ. ಸಾಲ ಮಾಡಬಹುದಾಗಿದೆ. ಆದರೆ, ಸಿಎಂ ಸಿದ್ದರಾಮಯ್ಯ ಈ ಬಾರಿ ತಮ್ಮ ಬಜೆಟ್​​ನಲ್ಲಿ ಅಂದಾಜು 1 ಲಕ್ಷ ಕೋಟಿ ರೂ. ಆಸುಪಾಸು ಸಾಲ ಮಾಡುವ ಸಾಧ್ಯತೆ ಇದೆ.

ಬೆಂಗಳೂರಿಗೆ ಭರಪೂರ ಕೊಡುಗೆ ನಿರೀಕ್ಷೆ: ಇನ್ನು ಬೆಂಗಳೂರಿಗೆ ಭರಪೂರ ಕೊಡುಗೆ ನೀಡುವ ನಿರೀಕ್ಷೆ ಇದೆ. ಅದರಲ್ಲೂ ಬ್ರಾಂಡ್ ಬೆಂಗಳೂರಿಗೆ ಅಡಿಪಾಯ ಹಾಕುವ ನಿಟ್ಟಿನಲ್ಲಿ ಹೆಚ್ಚಿನ ಅನುದಾನ ನೀಡುವ ಸಾಧ್ಯತೆ ಇದೆ. ಪ್ರಮುಖವಾಗಿ ಬೆಂಗಳೂರು ಟನೆಲ್ ರಸ್ತೆ ಯೋಜನೆಗೆ ಅನುದಾನ ಮೀಸಲಿಡಲಿದ್ದಾರೆ ಎನ್ನಲಾಗಿದೆ. ಉಳಿದಂತೆ ಮೆಟ್ರೋ ಮಾರ್ಗ ವಿಸ್ತರಣೆ, ಮೇಲ್ಸೇತುವೆ, ರಸ್ತೆ ವೈಟ್ ಟಾಪಿಂಗ್​​ಗೆ ಹೆಚ್ಚಿನ ಅನುದಾನ ನೀಡುವ ಸಾಧ್ಯತೆ ಇದೆ. ಆ ಮೂಲಕ ಬ್ರಾಂಡ್ ಬೆಂಗಳೂರಿಗೆ ಸುಮಾರು 40,000 ಕೋಟಿ ರೂ.ಗೂ ಅಧಿಕ ಅನುದಾನ ನೀಡುವ ಸಾಧ್ಯತೆ ಇದೆ.

ಆರೋಗ್ಯ ಇಲಾಖೆ ನಿರೀಕ್ಷೆ:

  • ಆಶಾ ಕಾರ್ಯಕರ್ತೆಯರಿಗೆ 1 ಸಾವಿರ ಗೌರವಧನ ಹೆಚ್ಚಳ ಸಾಧ್ಯತೆ
  • ಮುಖ್ಯಮಂತ್ರಿಗಳ ಆರೋಗ್ಯ ಕೇಂದ್ರಗಳ ಪುನಶ್ಚೇತನ ಕಾರ್ಯಕ್ರಮ 94.80 ಕೋಟಿ. ರೂ. ಅನುದಾನ ಸಾಧ್ಯತೆ
  • ಏಳು 100 ಹಾಸಿಗೆಗಳ ತಾಲೂಕು ಆಸ್ಪತ್ರೆಗಳ ನಿರ್ಮಾಣಕ್ಕೆ 280 ಕೋಟಿ ಬೇಕು. ಈ ಬಾರಿಯ ಬಜೆಟ್​​ನಲ್ಲಿ 93.33 ಕೋಟಿ ಹಣ ಮೀಸಲು ಸಾಧ್ಯತೆ
  • ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ನಾಗರಿಕ ಸಹಾಯ ಕೇಂದ್ರಕ್ಕೆ 25 ಕೋಟಿ ರೂ. ಸಾಧ್ಯತೆ
  • ನೂತನ 50 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಾಪನೆಗೆ 125 ಕೋಟಿ ಈ ಬಾರಿ ಮೀಸಲಿಡುವ ನಿರೀಕ್ಷೆ
  • ರಾಜ್ಯದಲ್ಲಿ ತೀವು ಅಸ್ವಸ್ಥತೆಯಿಂದ ಪ್ರಾಣಾಪಾಯದಲ್ಲಿರುವ ರೋಗಿಗಳಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡುವ ಉದ್ದೇಶದಿಂದ ಜಿಲ್ಲಾ ಮಟ್ಟದಲ್ಲಿ 50 ಹಾಗೂ 100 ಹಾಸಿಗೆಗಳ 7 ಕ್ರಿಟಿಕಲ್ ಕೇರ್ ಬ್ಲಾಕ್‌ಗಳ ಸ್ಥಾಪನೆಗಾಗಿ 186.66 ಕೋಟಿ ರೂ.‌ ಅನುದಾನದ ನಿರೀಕ್ಷೆ

ಇತರೆ ನಿರೀಕ್ಷೆಗಳೇನು?:

  • ಏಳನೇ ವೇತನ ಆಯೋಗ ವರದಿಯ ಕೆಲ ಅಂಶಗಳ ಜಾರಿ ಸಾಧ್ಯತೆ
  • ಕಲ್ಯಾಣ ಕರ್ನಾಟಕಕ್ಕೆ ಈ ಬಾರಿ ಹೆಚ್ಚಿನ ಒತ್ತು ಸಾಧ್ಯತೆ
  • ಅಲ್ಪಸಂಖ್ಯಾತ ಒಲಾಖೆಗೆ 5,000 ಕೋಟಿ ರೂ. ನೀಡುವ ಸಾಧ್ಯತೆ
  • ಬೆಂಗಳೂರು ಅಥವಾ ಕಲಬುರಗಿಯಲ್ಲಿ 'ವಚನ ಮಂಟಪ' ಹಾಗೂ 'ವಚನ ವಿಶ್ವವಿದ್ಯಾಲಯ' ಸ್ಥಾಪಿಸುವ ಸಾಧ್ಯತೆ
  • ಮೇಕೆದಾಟು, ಎತ್ತಿನಹೊಳೆ, ಕೃಷ್ಣಾ ಮೇಲ್ದಂಡೆ ಯೋಜನೆಗೆ ಅನುದಾನ ನೀಡುವ ನಿರೀಕ್ಷೆ
  • ಹಳೆ ದೇವಸ್ಥಾನಗಳ ಜೀರ್ಣೋದ್ಧಾರಕ್ಕಾಗಿ 100 ಕೋಟಿ ರೂ. ಅನುದಾನದ ನಿರೀಕ್ಷೆ

ಇದನ್ನೂ ಓದಿ: ಚುನಾವಣಾ ಬಾಂಡ್ ಎಂದರೇನು? ಇಲ್ಲಿದೆ ಮಾಹಿತಿ

Last Updated : Feb 16, 2024, 6:58 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.