ETV Bharat / state

ಹಣಕಾಸು ಇಲಾಖೆ ಗಮನಕ್ಕೆ ಬಾರದೇ ನಿಗಮದ ಹಣ ವರ್ಗಾವಣೆ, ಇದರಲ್ಲಿ ನನ್ನ ಪಾತ್ರ ಇಲ್ಲ: ಸಿಎಂ ಸಿದ್ದರಾಮಯ್ಯ - Valmiki Nigama scam

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ವರ್ಗಾವಣೆಯಲ್ಲಿ ನನ್ನ ಪಾತ್ರ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

cm-siddaramaiah
ಸಿಎಂ ಸಿದ್ದರಾಮಯ್ಯ (ETV Bharat)
author img

By ETV Bharat Karnataka Team

Published : Jul 19, 2024, 8:27 PM IST

ಹಣಕಾಸು ಇಲಾಖೆ ಗಮನಕ್ಕೆ ಬಾರದೆ ನಿಗಮದ ಹಣ ವರ್ಗಾವಣೆ, ಇದರಲ್ಲಿ ನನ್ನ ಪಾತ್ರ ಇಲ್ಲ : ಸಿಎಂ ಸಿದ್ದರಾಮಯ್ಯ (ETV Bharat)

ಬೆಂಗಳೂರು : ಹಣಕಾಸು ಇಲಾಖೆ ಗಮನಕ್ಕೆ ಬಾರದೆ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ವರ್ಗಾವಣೆ ಮಾಡಲಾಗಿದ್ದು, ಇದರಲ್ಲಿ ನನ್ನ ಪಾತ್ರ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿಯವರು ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ನನಗೂ ಅದಕ್ಕೂ ಏನು ಸಂಬಂಧ ಇದೆ. ನಿಗಮದ ಒಂದನೇ ಕಂತಿನ‌ ಹಣ ಹಣಕಾಸು ಇಲಾಖೆಯಿಂದ ಸಂಬಂಧಿತ ಇಲಾಖೆ ಕಾರ್ಯದರ್ಶಿಗೆ ಕೊಡುತ್ತಾರೆ. ಅವರಿಂದ ಇಲಾಖೆ ಮುಖ್ಯಸ್ಥರಿಗೆ ಹಣ ಕೊಡುತ್ತಾರೆ. ಅವರಿಂದ ನಿಗಮದ ಎಂಡಿಗೆ ಹಣ ಮೂವ್ ಆಗುತ್ತೆ. ಅದರಂತೆ ಕೊನೆ ಕಂತಿನ ಹಣ ಖಜಾನೆಯಲ್ಲಿರುತ್ತದೆ‌‌. ಹಣ ಬಿಡುಗಡೆ ಮಾಡುವಂತೆ ಎಂಡಿ ನಿಗಮದ ನಿರ್ದೇಶಕ ಕಲ್ಲೇಶ್​ಗೆ ಪತ್ರ ಬರೆಯುತ್ತಾರೆ. ಖಜಾನೆಯಿಂದ ನಿಗಮದ ನಿರ್ದೇಶಕ ಕಲ್ಲೇಶ್ ನೇರವಾಗಿ ಹಣ ಡ್ರಾ ಮಾಡಿದ್ದಾನೆ. ಅದರಲ್ಲಿ ನನ್ನ ಪಾತ್ರ ಏನಿದೆ? ಎಂದು ಪ್ರಶ್ನಿಸಿದರು.

ಹಣಕಾಸು ಇಲಾಖೆಯ ಗಮನಕ್ಕೆ ತರದೇ ಹಣ ಡ್ರಾ ಮಾಡಿದ್ದಾರೆ. ಮಂಡಳಿ ಸಭೆಯಲ್ಲಿ ಅನುಮತಿ ನೀಡಲಾಗಿದೆ ಎಂದು ನಕಲಿ ದಾಖಲೆ ಸೃಷ್ಟಿಸಿದ್ದಾರೆ. 30.3.2024 ಮಂಡಳಿ ಸಭೆ ಆಗಿದೆ ಎಂದು ನಕಲಿಯಾಗಿ ಸೃಷ್ಟಿ ಮಾಡುತ್ತಾರೆ. ಆವಾಗ ನೀತಿ ಸಂಹಿತೆ ಇತ್ತು. ನೀತಿ ಸಂಹಿತೆ ಇದೆ. ಮಂಡಳಿ ಸಭೆ ಮಾಡಲು ಆಗಲ್ಲ ಎಂದು ಬ್ಯಾಂಕ್ ಅಧಿಕಾರಿಗಳಿಗೆ ಗೊತ್ತಿರಲ್ವಾ? ಎಂದು ತಿಳಿಸಿದರು.‌

ಬಿಜೆಪಿ, ಜೆಡಿಎಸ್ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮದ ಬಗ್ಗೆ ಪ್ರಸ್ತಾಪಿಸಿದರು. ನಿಯಮ 69ರಡಿ ಸುದೀರ್ಘ ಚರ್ಚೆ ನಡೆಸಲಾಯಿತು. ಗುರುವಾರ ಮಧ್ಯಾಹ್ನದವರೆಗೆ ಚರ್ಚೆ ಮಾಡಿದ್ದಾರೆ.‌ ಸರ್ಕಾರಕ್ಕೂ ಅದರ ನಿಲುವು ಹೇಳುವ ಹಕ್ಕು ಇದೆ. ಅದಕ್ಕೆ ಉತ್ತರ ಕೊಡುವ ಹಕ್ಕಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅಕ್ರಮ ಆಗಿಲ್ಲ ಅಂತಿಲ್ಲ. ಅಕ್ರಮ ಯಾರು ಮಾಡಿದ್ದಾರೆ ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.‌

ಅಕ್ರಮ ಸಂಬಂಧ ಎಸ್​ಐಟಿ ಒಂದು ತನಿಖೆ ಮಾಡುತ್ತಿದೆ. ಇ.ಡಿ‌ ತನಿಖೆ ಮಾಡುತ್ತಿದೆ. ಇನ್ನೊಂದು ಕಡೆ ಸಿಬಿಐ ತನಿಖೆ ಮಾಡುತ್ತಿದೆ. ಬಿಜೆಪಿಯವರು ಸಿಬಿಐಗೆ ಕೊಡಿ ಅಂತಾರೆ. ಆದರೆ, ನಮ್ಮ ಪೊಲೀಸರ ಮೇಲೆ ನಮಗೆ ನಂಬಿಕೆ ಇದೆ. ಸಿಬಿಐ ಈಗಾಗಲೇ ತನಿಖೆ ಮಾಡುತ್ತಿದ್ದಾರೆ. ಇ.ಡಿ ಮಾಡುತ್ತಿದೆ. ಎಸ್​ಐಟಿ ತನಿಖೆ ಮಾಡುತ್ತಿದೆ. ಬಿಜೆಪಿಯವರು ಸಿಎಂ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ. ಬಳಿಕ ದಲಿತ ಹಣ ಎಂದು ಹೇಳುತ್ತಿದ್ದಾರೆ ಎಂದರು.

ಬೋವಿ ಅಭಿವೃದ್ಧಿ ನಿಗಮ ಯಾರದ್ದು ಅದು?. ಆಗ ಬೊಮ್ಮಾಯಿ ಸಿಎಂ ಆಗಿದ್ದರು. 87 ಕೋಟಿ ಅವ್ಯವಹಾರ ಆಗಿದೆ ಎಂದು ಗೂಳಿಹಟ್ಟಿ ಶೇಖರ್​ ಆರೋಪಿಸಿದ್ದರು. ಆಗ ಬೊಮ್ಮಾಯಿ ರಾಜೀನಾಮೆ ನೀಡಿದ್ರಾ?. ಬೋವಿ ನಿಗಮ ಅಕ್ರಮವನ್ನ ಸಿಐಡಿ ತನಿಖೆ ಮಾಡುತ್ತಿದೆ. ದೇವರಾಜು ಅರಸು ಟ್ರಕ್ ಟರ್ಮಿನಲ್ 50 ಕೋಟಿ ಅಧಿಕ ಹಗರಣ ಆಗಿದೆ‌. ಕೆಲಸ ಮಾಡದೆ ಹಣ ತೆಗೆದುಕೊಂಡಿದ್ದಾರೆ. ಡಿ. ಹೆಚ್ ವೀರಯ್ಯ ಖಾತೆಗೆ ಹಣ ಹೋಗಿದೆ. ಆಗ ಬೊಮ್ಮಾಯಿ ರಾಜೀನಾಮೆ ಕೊಟ್ಟಿದ್ದಾರಾ? ಎಂದು ಪ್ರಶ್ನಿಸಿದರು.

ಬೇರೆ ಹಗರಣಗಳಿಗೆ ಇ.ಡಿ ಏಕೆ ಬಂದಿಲ್ಲ : ಎಪಿಎಂಸಿ, ಟ್ರಕ್ ಟರ್ಮಿನಲ್ ಅಕ್ರಮ, ಬೋವಿ ಅಭಿವೃದ್ಧಿ ನಿಗಮ ಅಕ್ರಮಗಳು ಮನಿ ಲಾಂಡ್ರಿಂಗ್ ಕಾಯ್ದೆಯಡಿ ಬರಲ್ವಾ?. ಬಿಜೆಪಿ ಅವಧಿಯಲ್ಲಾಗಿರುವ ನಿಗಮ ಅಕ್ರಮಗಳಲ್ಲಿ ಇ.ಡಿ ಏಕೆ ಬಂದಿಲ್ಲ?. ಇಷ್ಟೆಲ್ಲಾ ಹಗರಣ ಮಾಡಿರುವ ಅವರೇನು ಸತ್ಯ ಹರಿಶ್ಚಂದ್ರರಾ?. ಬಿಜೆಪಿ ಅವಧಿಯಲ್ಲಿ 21 ಹಗರಣಗಳು ನಡೆದಿವೆ ಎಂದು ವಾಗ್ದಾಳಿ ನಡೆಸಿದರು.

ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿ ಪತ್ನಿಗೆ 25 ಲಕ್ಷ ಪರಿಹಾರ : ಇದೇ ವೇಳೆ ಸಿಎಂ ಸಿದ್ದರಾಮಯ್ಯ ಆತ್ಮಹತ್ಯೆ ಮಾಡಿದ ಚಂದ್ರಶೇಖರ್ ಪತ್ನಿ ಕವಿತಾಗೆ 25 ಲಕ್ಷ ರೂ.‌ ಪರಿಹಾರ ಘೋಷಣೆ ಮಾಡಿದರು. ಡೇಟಾ ಆಪರೇಟರ್ ಆಗಿರುವ ಅವರ ಪತ್ನಿ ಕವಿತಾಗೆ ಇಬ್ಬರು ಮಕ್ಕಳು ಇದ್ದಾರೆ. ಅವರ ವಿದ್ಯಾಭ್ಯಾಸಕ್ಕಾಗಿ ಪರಿಹಾರ ಹಣ ನೀಡಲಾಗುತ್ತದೆ. ಸದನದಲ್ಲೂ ಪ್ರತಿಪಕ್ಷಗಳು ಮೃತರ ಕುಟುಂಬಕ್ಕೆ ಪರಿಹಾರ ನೀಡಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿತ್ತು.‌ ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದ ಸಿಎಂ ಬಳಿಕ ಸದನದಲ್ಲೇ ಘೋಷಣೆ ಮಾಡ್ತೇನೆ. ಈ ಸುದ್ದಿ ಹಾಕಬೇಡಿ ಎಂದು ಪತ್ರಕರ್ತರಿಗೆ ಮನವಿ ಕೂಡಾ ಮಾಡಿದರು.

34 ಕೋಟಿ ಹಣ ನಗದು ರಿಕವರಿ ಮಾಡಲಾಗಿದೆ : ಎಸ್​ಐಟಿಯವರು ಇಲ್ಲಿಯವರೆಗೆ 12 ಮಂದಿಯನ್ನು ಬಂಧನ ಮಾಡಿದ್ದಾರೆ. ಒಂಬತ್ತು ಜನರನ್ನು ಜೈಲಿಗೆ ಕಳುಹಿಸಿದ್ದಾರೆ. ಮೂವರು ಪಿಸಿಯಲ್ಲಿದ್ದಾರೆ. ಅಕ್ರಮವಾಗಿ ವರ್ಗಾವಣೆಯಾಗಿರುವ 89.63 ಕೋಟಿ ರೂ. ಪೈಕಿ ನಗದು ರೂಪದಲ್ಲಿ 34 ಕೋಟಿ ರೂ‌. ಹಿಂಪಡೆಯಲಾಗಿದೆ. ಈ ಪೈಕಿ ಬೇರೆ ಬೇರೆಯವರಿಗೆ ವರ್ಗಾವಣೆ ಮಾಡಲಾದ ಹಣದಲ್ಲಿ ಒಟ್ಟು 14 ಕೋಟಿ ರೂ.‌ ನಗದು ವಶಪಡಿಸಿಕೊಳ್ಳಲಾಗಿದೆ. ನಿಗಮದ ಹಣದಲ್ಲಿ ಖರೀದಿಸಲಾದ ಚಿನ್ನದ ಮೊತ್ತ 13.50 ಲಕ್ಷ ವಶ ಪಡಿಸಿಕೊಳ್ಳಲಾಗಿದೆ‌.

1.50 ಕೋಟಿ ಸತ್ಯನಾರಾಯಣ ವರ್ಮರಿಂದ ವಸೂಲಿ ಮಾಡಲಾಗಿದೆ. ಬಳಿಕ ಮೂರು ಕೋಟಿ ಮೌಲ್ಯದ ಲ್ಯಾಂಬೋರ್ಗಿನಿ ಕಾರನ್ನು ಖರೀದಿಸಿದ್ದ ಆರೋಪಿಯಿಂದ ನಗದನ್ನು ವಶಪಡಿಸಿಕೊಳ್ಳಲಾಗಿದೆ. ಹೀಗೆ ಒಟ್ಟು 34 ಕೋಟಿ ರೂ. ನಗದು ರೂಪದಲ್ಲಿ ವಾಪಸ್​ ಬಂದಿದೆ. ಉಳಿದಂತೆ 46 ಕೋಟಿ ರೂ. ಆರ್​ಬಿಎಲ್ ಬ್ಯಾಂಕ್​ನಲ್ಲಿದೆ. ಅದು ತಕರಾರಿನಲ್ಲಿದೆ. ಅದನ್ನು ಮುಟ್ಟುಗೋಲು ಮಾಡಲಾಗಿದೆ. ಅದೂ ಬಂದರೆ 85.25 ಕೋಟಿ ರೂ‌. ರಿಕವರಿಯಾಗಲಿದೆ. ಬಹುತೇಕ ಎಲ್ಲ ಹಣವನ್ನು ರಿಕವರಿ ಮಾಡಲಾಗಿದೆ ಎಂದು ತಿಳಿಸಿದರು.

ಪರಿಶೀಲಿಸಿ ನಿಗಮಗಳಿಗೆ ಹಣ ಬಿಡುಗಡೆ ಮಾಡಲು ಸೂಚನೆ : ಈ ತರದ ಅಕ್ರಮ ಆಗದಂತೆ ಎಲ್ಲಾ ನಿಗಮಗಳಿಗೆ ನೀಡಿರುವ ಹಣವನ್ನು ವಾಪಸ್​ ಪಡೆದು, ಪರಿಶೀಲನೆ ನಡೆಸಲು ಸೂಚನೆ ನೀಡಿದ್ದೇನೆ. ಮಾನಿಟರ್ ಮಾಡಿ ಹಣ ಬಿಡುಗಡೆ ಮಾಡಲು ಸೂಚನೆ ನೀಡಿದ್ದೇನೆ ಎಂದು ಇದೇ ವೇಳೆ ಸಿಎಂ ಸ್ಪಷ್ಟಪಡಿಸಿದರು.

ಇದನ್ನೂ ಓದಿ : ವಾಲ್ಮೀಕಿ ಹಗರಣದ ಗದ್ದಲ: ಪರಿಷತ್ ಕಲಾಪ ಸೋಮವಾರಕ್ಕೆ ಮುಂದೂಡಿಕೆ - COUNCIL ADJOURNED

ETV Bharat Logo

Copyright © 2024 Ushodaya Enterprises Pvt. Ltd., All Rights Reserved.