ETV Bharat / state

'ಕುಮಾರಸ್ವಾಮಿ ಅವರನ್ನು ಅಗತ್ಯಬಿದ್ದರೆ ಮುಲಾಜಿಲ್ಲದೆ ಅರೆಸ್ಟ್ ಮಾಡ್ತೀವಿ, ಆದರೆ..': ಸಿಎಂ ಸಿದ್ದರಾಮಯ್ಯ - CM Siddaramaiah - CM SIDDARAMAIAH

ಹೆಚ್‌.ಡಿ.ಕುಮಾರಸ್ವಾಮಿ ಅವರ ಬಂಧನದ ಕುರಿತು ನಾವು ಎಲ್ಲಿಯೂ ಹೇಳಿಲ್ಲ. ಒಂದು ವೇಳೆ ಆ ಸನ್ನಿವೇಶ ಬಂದರೆ ಬಂಧಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಬಾಗಲಕೋಟೆಯಲ್ಲಿ ಹೇಳಿದರು.

cm-siddaramaiah
ಸಿಎಂ ಸಿದ್ದರಾಮಯ್ಯ (ETV Bharat)
author img

By ETV Bharat Karnataka Team

Published : Aug 21, 2024, 9:34 PM IST

ಸಿಎಂ ಸಿದ್ದರಾಮಯ್ಯ ಹೇಳಿಕೆ (ETV Bharat)

ಕೊಪ್ಪಳ: ಕುಮಾರಸ್ವಾಮಿ ಅವರನ್ನು ಅಗತ್ಯಬಿದ್ದರೆ ಬಂಧಿಸುತ್ತೇವೆ. ಅದರಲ್ಲಿ ಯಾವುದೇ ಮುಲಾಜಿಲ್ಲ. ಹಾಗಂತ, ಅವರು ಹೆದರಬೇಕಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಟಾಂಗ್‌ ಕೊಟ್ಟರು.

ಕೊಪ್ಪಳದ ಬಸಾಪುರದ ಖಾಸಗಿ ವಿಮಾನ ನಿಲ್ದಾಣದಲ್ಲಿ ಇಂದು ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

ನನಗೆ ಮಾತ್ರ ರಾಜ್ಯಪಾಲರು ನೋಟಿಸ್ ಕೊಟ್ಟರು. ಆದರೆ, ಕುಮಾರಸ್ವಾಮಿ ವಿಚಾರದಲ್ಲಿ ಏಕೆ ಕೊಟ್ಟಿಲ್ಲ?. ಇಂತಹ ತಾರತಮ್ಯವನ್ನು ಅವರು ಮಾಡಬಾರದು. ಕುಮಾರಸ್ವಾಮಿ ವಿಚಾರದಲ್ಲಿ ಲೋಕಾಯುಕ್ತರು, ಎಸ್ಐಟಿಯವರು ತನಿಖೆ ನಡೆಸಿ ಸಾಕ್ಷ್ಯ ಸಂಗ್ರಹಿಸಿ ಪ್ರಾಸಿಕ್ಯೂಷನ್‌ಗೆ ಒಪ್ಪಿಗೆ ಕೇಳಿದ್ದಾರೆ. ಈ ಕುರಿತು ಸೋಮವಾರ ರಾಜ್ಯಪಾಲರಿಗೆ ಎರಡನೇ ಪತ್ರವನ್ನೂ ಬರೆದಿದ್ದಾರೆ. ಅಬ್ರಾಹಂ ಕೊಟ್ಟ ದೂರಿಗೆ 8-9 ಗಂಟೆಯಲ್ಲೇ ನನಗೆ ಶೋಕಾಸ್ ನೋಟಿಸ್​ ಕೊಟ್ಟಿದ್ದಾರೆ. ಕುಮಾರಸ್ವಾಮಿ ವಿಷಯದಲ್ಲಿ ತನಿಖೆ ಮಾಡಿ ಸ್ಯಾಂಕ್ಷನ್ ಕೇಳಿದರೂ ನೀಡಿಲ್ಲ. ಇದು ತಾರತಮ್ಮ ಅಲ್ಲವೇ ಎಂದು ಪ್ರಶ್ನಿಸಿದರು.

ಕುಮಾರಸ್ವಾಮಿ ಯಾವತ್ತೂ ಹಿಟ್ ಆ್ಯಂಡ್ ರನ್ ಕೇಸ್. ಯಾವುದನ್ನು ಅವರು ಲಾಜಿಕಲ್ ಎಂಡ್​ಗೆ ತೆಗೆದುಕೊಂಡು ಹೋಗಿದ್ದಾರೆ ಹೇಳಿ?. ಈ ಹಿಂದೆ ಪೆನ್ ಡ್ರೈವ್ ಇದೆ ಎಂದರು. ಆದರೆ, ಬಿಟ್ಟರಾ? ಎಂದು ಟೀಕಿಸಿದರು.

ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಜನಪರ ಕೆಲಸಕ್ಕೆ ಮೊದಲ ಆದ್ಯತೆ ನೀಡುತ್ತಿದೆ. ಬಡವರ ಪರವಾಗಿ ಹಾಗು ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ನಾವು ಯಾವುದೇ ಕಾರಣಕ್ಕೂ ರಾಜಕೀಯ ಮಾಡಿಲ್ಲ, ಮಾಡೋದೂ ಇಲ್ಲ ಎಂದು ಹೇಳಿದರು.‌

ಹೆಸರು ಕಾಳಿಗೆ ಬೆಂಬಲ ಬೆಲೆ ವಿಚಾರ: ಕೊಪ್ಪಳ ಬಗ್ಗೆ ನನಗೆ ವಿಶೇಷ ಪ್ರೀತಿ ಇದೆ. ಹಾಗಾಗಿ ಇಲ್ಲಿಯ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದೇನೆ. ರೈತರು ಬೆಳೆದ ಹೆಸರು ಕಾಳಿಗೆ ಬೆಂಬಲ ಬೆಲೆ ನೀಡುವ ವಿಚಾರದಲ್ಲಿ ನಾನು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಆದಷ್ಟು ಬೇಗ ಖರೀದಿ ಕೇಂದ್ರ ಆರಂಭಿಸುವಂತೆ ಒತ್ತಾಯಿಸಿದ್ದೇನೆ ಎಂದರು.

ಇದನ್ನೂ ಓದಿ: ನನ್ನನ್ನು ಬಂಧಿಸಲು ನೂರು ಸಿದ್ದರಾಮಯ್ಯ ಬರಬೇಕು: ಹೆಚ್​.ಡಿ.ಕುಮಾರಸ್ವಾಮಿ ಗರಂ - H D Kumaraswamy

ETV Bharat Logo

Copyright © 2024 Ushodaya Enterprises Pvt. Ltd., All Rights Reserved.