ಬೆಂಗಳೂರು: ಸದನದಲ್ಲಿ ಅಂಗೀಕಾರವಾದ 11 ಬಿಲ್ಗಳನ್ನು ರಾಜ್ಯಪಾಲರು ವಾಪಸ್ ಕಳುಹಿಸಿದ್ದಾರೆ. ಈ ಬಗ್ಗೆ ಕ್ಯಾಬಿನೆಟ್ನಲ್ಲಿ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ಗಾಂಧಿಭವನದ ಬಳಿ ಮಾತನಾಡಿದ ಅವರು, ಸದನದಲ್ಲಿ ಪಾಸ್ ಆಗಿರುವ ಬಿಲ್ ಅವು. ವಿವರಣೆ ಕೇಳಿದ್ರೆ ಕೊಡ್ತಾ ಇದ್ದೆವು. ಆದರೆ ವಾಪಸ್ ಕಳುಹಿಸಿದ್ದಾರೆ ಎಂದರು.
ದೆಹಲಿ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿ, ನಿನ್ನೆ ಡಿಸಿಎಂ, ಕೆಲವು ಸಚಿವರುಗಳು ದೆಹಲಿಗೆ ಹೋಗಿದ್ದೆವು. ರಾಜ್ಯದ ಬೆಳವಣಿಗೆಯನ್ನು ಹೈಕಮಾಂಡ್ ಗಮನಕ್ಕೆ ತಂದಿದ್ದೇವೆ. ಮುಡಾ ಪ್ರಕರಣದ ಪಾದಯಾತ್ರೆ ಬಗ್ಗೆ ಚರ್ಚೆ ಮಾಡಿದ್ದೇವೆ. ಪ್ರಾಸಿಕ್ಯೂಷನ್ ಸಂವಿಧಾನ ಮತ್ತು ಕಾನೂನು ಬಾಹಿರ. ಸಚಿವ ಸಂಪುಟ ನಿರ್ಣಯವನ್ನು ರಾಜ್ಯಪಾಲರಿಗೆ ಕಳುಹಿಸಲಾಗಿದೆ. ಕೋರ್ಟ್ನಲ್ಲಿ ಪ್ರಶ್ನಿಸಿ ಅರ್ಜಿ ಹಾಕಲಾಗಿದೆ. ಆ.29ಕ್ಕೆ ವಿಚಾರಣೆ ಮುಂದೂಡಲಾಗಿದೆ ಎಂದು ತಿಳಿಸಿದರು.
ಮುಡಾ ಪ್ರಕರಣದಲ್ಲಿ ಬಿಜೆಪಿಗರು ಪಾದಯಾತ್ರೆ ಮಾಡಿದ್ರು. ನಾವು ಅದನ್ನು ರಾಜಕೀಯವಾಗಿ ಎದುರಿಸಿದ್ದೇವೆ. ರಾಜ್ಯಪಾಲರ ಪ್ರಾಸಿಕ್ಯೂಷನ್ ಅನುಮತಿ ಸಂವಿಧಾನ ಬಾಹಿರ. ರಾಜಭವನ ದುರ್ಬಳಕೆ ಆಗಿದೆ. ಈ ಕುರಿತು ರಾಷ್ಟ್ರಪತಿಗಳಿಗೆ ದೂರು ನೀಡುತ್ತೇವೆ. ಎಲ್ಲಾ ಆಯ್ಕೆಗಳು ಮುಕ್ತವಾಗಿವೆ ಎಂದು ಸಿಎಂ ಹೇಳಿದರು.
ಬಸ್ ಟಿಕೆಟ್ ದರ ಏರಿಕೆ ವಿಚಾರವಾಗಿ ಮಾತನಾಡಿ, ನೀವೇ ಎಲ್ಲ ಹೇಳ್ತಿದ್ದೀರಿ. ಈಗ ನೀರಿನ ದರ ಏರಿಕೆ ಅಂದ್ರಿ, ಇನ್ನೂ ಏರಿಸಿಲ್ಲ. ಬಹಳ ವರ್ಷದಿಂದ ಏರಿಸಿಲ್ಲ. ಬಿಡಬ್ಲ್ಯೂಎಸ್ಎಸ್ಬಿನಲ್ಲಿ ಕಷ್ಟದ ಪರಿಸ್ಥಿತಿ ಇದೆ. ಹೀಗಾಗಿ ಡಿಸಿಎಂ ಹಾಗೆ ಹೇಳಿದ್ದಾರೆ ಎಂದರು.
ಕೆಪಿಎಸ್ಸಿ ಪರೀಕ್ಷೆ ಮುಂದಕ್ಕೆ ಹಾಕಲ್ಲ: ಕೆಪಿಎಸ್ಸಿ ಪರೀಕ್ಷೆ ಗೊಂದಲ ವಿಚಾರವಾಗಿ ಪ್ರತಿಕ್ರಿಯಿಸಿ, ಗೊಂದಲ ಏನೂ ಇಲ್ಲ. ಕೆಲವು ಜನ ಪರೀಕ್ಷೆ ಮುಂದಕ್ಕೆ ಹಾಕಬೇಕು ಅಂತ ಹೇಳ್ತಾ ಇದ್ದಾರೆ. ನಾವು ಈಗ ಮುಂದಕ್ಕೆ ಹಾಕಲ್ಲ. ಒಂದು ಪತ್ರಿಕೆ ಮಾತ್ರ ಮುಂದೂಡಿಕೆ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ನಾನು ಸಿಎಂ ಆದ್ರೆ ಬರಗಾಲ ಬರುತ್ತೆ ಅಂತ ಮೌಢ್ಯ ಬಿತ್ತುವ ಕುಟಿಲ ಯತ್ನ ಮಾಡಲಾಗಿತ್ತು: ಸಿಎಂ - CM Siddaramaiah Slam