ETV Bharat / state

ಮಾಧ್ಯಮಗಳಿಂದ ನ್ಯಾಯ ಸಿಗುವ ಜನರ ನಂಬಿಕೆ ಸುಳ್ಳಾಗದಿರಲಿ: ಪತ್ರಕರ್ತರ ಸಮ್ಮೇಳನದಲ್ಲಿ ಸಿಎಂ

ದಾವಣಗೆರೆಯಲ್ಲಿ ಏರ್ಪಡಿಸಲಾದ 38ನೇ ರಾಜ್ಯ ಪತ್ರಕರ್ತರ ಸಮ್ಮೇಳನಕ್ಕೆ ಶನಿವಾರ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು.

author img

By ETV Bharat Karnataka Team

Published : Feb 4, 2024, 10:13 AM IST

ರಾಜ್ಯ ಪತ್ರಕರ್ತರ ಸಮ್ಮೇಳನ
ರಾಜ್ಯ ಪತ್ರಕರ್ತರ ಸಮ್ಮೇಳನ

ದಾವಣಗೆರೆ: "ಪತ್ರಿಕೋದ್ಯಮದಿಂದ ನ್ಯಾಯ ಸಿಗುತ್ತೆ ಎಂದು ಜನ ನಂಬಿಕೆ ಇಟ್ಟಿದ್ದಾರೆ. ಆ ನಿರೀಕ್ಷೆಗಳು ಸುಳ್ಳಾಗಬಾರದು. ಮಾಧ್ಯಮದ ಕೆಲಸ ಸತ್ಯ ನಿಷ್ಠೆಯಿಂದ ಕೂಡಿರಬೇಕು. ಧ್ವನಿ ಇಲ್ಲದವರಿಗೆ, ಅವಕಾಶ ವಂಚಿತರಿಗೆ ಮಾಧ್ಯಮ ಆಸರೆಯಾಗಬೇಕು. ಸರ್ಕಾರ ಹೇಗೆ ಸಾಗಬೇಕು ಎಂಬ ಎಚ್ಚರಿಕೆ, ಸಲಹೆ ನೀಡುವ ಕೆಲಸ ಪತ್ರಿಕೋದ್ಯಮ ಮಾಡ್ಬೇಕು" ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ದಾವಣಗೆರೆಯಲ್ಲಿ ಶನಿವಾರ 38ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. "ನಾನು ಈ ಸಮ್ಮೇಳನದಲ್ಲಿ ಅತ್ಯಂತ ಸಂತೋಷದಿಂದ ಭಾಗಿಯಾಗಿದ್ದೇನೆ. ಡಿ.ವಿ.ಗುಂಡಪ್ಪನವರು ಈ ಸಂಘವನ್ನು ಸ್ಥಾಪಿಸಿದ್ದರು. ಸುದೀರ್ಘಕಾಲದವರೆಗೆ ಪತ್ರಕರ್ತ ಸಂಘ ನಡೆದುಕೊಂಡು ಬಂದಿದೆ‌. ಬಾಬಾ ಸಾಹೇಬ್ ಅಂಬೇಡ್ಕರ್, ಗಾಂಧೀಜಿಯವರು ಪತ್ರಿಕೋದ್ಯಮದಿಂದ ಹಲವು ಸಮುದಾಯಗಳ ಪರ ಜನಜಾಗೃತಿ ಮಾಡುವ ಕೆಲಸ ಮಾಡಿದ್ದರು. ಮಾಧ್ಯಮಗಳು ಸ್ವತಂತ್ರಪೂರ್ವದಲ್ಲೂ ಮಹತ್ವದ ಪಾತ್ರ ವಹಿಸಿವೆ. ಸ್ವಾತಂತ್ರ್ಯಾ ಬಳಿಕ ಪ್ರಜಾಪ್ರಭುತ್ವ ಕಾಯುವ, ಸಂವಿಧಾನ ಕಾಯುವ, ಅಭಿವೃದ್ಧಿ ಯಾವ ದಿಕ್ಕಿನಲ್ಲಿ ಸಾಗಿದೆ ಎಂದು ಜ‌ನರಿಗೆ ತಿಳಿಸುವ ಪ್ರಯತ್ನ ಮಾಡುತ್ತಿವೆ" ಎಂದರು.

"ಸಮಾಜದಲ್ಲಿ ಕಂದಾಚಾರ, ಮೌಢ್ಯ ಆಚಾರಗಳನ್ನು ಪೋಷಿಸಬಾರದು. ಈ ಹಿಂದೆ ನಾನು ಸಿಎಂ ಆಗಿದ್ದಾಗ ಕಾಗೆ ಬಂದು ಕಾರ್ ಮೇಲೆ ಕೂತಿದ್ದೇ ತಡ ಈ ಟಿವಿಗಳಲ್ಲಿ ಚರ್ಚೆ ಆರಂಭವಾಯಿತು. ಚಾಮರಾಜನಗರ ಜಿಲ್ಲೆಗೆ ಸಿಎಂ ಆದವರು ಹೋದರೆ ಸಿಎಂ ಸ್ಥಾನ ಹೋಗುತ್ತೆ ಎಂಬಂತ ಮೌಢ್ಯಗಳಿಗೆ ಆದ್ಯತೆ ಕೊಡಬಾರದು" ಎಂದು ಹೇಳಿದರು.

ರಾಜ್ಯ ಪತ್ರಕರ್ತರ ಸಮ್ಮೇಳನ
ರಾಜ್ಯ ಪತ್ರಕರ್ತರ ಸಮ್ಮೇಳನ

"ಸಮ ಸಮಾಜ ನಿರ್ಮಾಣವಾದರೆ, ಬಡವರಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿ ಬಂದರೆ ಶೋಷಣೆ ಮಾಡಲು ಆಗಲ್ಲ ಎಂದು ಪಟ್ಟಭದ್ರ ಹಿತಾಸಕ್ತಿಗಳ ಸಂಚು ಮಾಡುತ್ತಿವೆ" ಎಂದು ಸಿಎಂ ಇದೇ ವೇಳೆ ಅಭಿಪ್ರಾಯಪಟ್ಟರು.

ದಾವಣಗೆರೆ ನಗರದ ಹದಡಿ ರಸ್ತೆಯಲ್ಲಿರುವ ಶಾಮನೂರು ಪಾರ್ವತಮ್ಮ‌ ಕಲ್ಯಾಣ ಮಂಟಪದಲ್ಲಿ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಸಹಯೋಗದಲ್ಲಿ ನಡೆದ ಸಮ್ಮೇಳನದ ಅಧ್ಯಕ್ಷತೆಯನ್ನು ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ವಹಿಸಿದ್ದರು. ಅಂದಾಜು ನಾಲ್ಕು ಸಾವಿರ ಪತ್ರಕರ್ತರು ಸಮ್ಮೇಳನದಲ್ಲಿ ಸೇರಿದ್ದರು.

ಮಾಜಿ ಸಚಿವರಾದ ಶಾಮನೂರು ಶಿವಶಂಕರಪ್ಪ, ತೋಟಗಾರಿಕಾ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಶಾಸಕರಾದ ಮಾಯ್ಕೊಂಡ ಬಸಂತಪ್ಪ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಇದಕ್ಕೂ ಮುನ್ನ ದಾವಣಗೆರೆ ನಗರದ ಜಯದೇವ ವೃತ್ತದಿಂದ ಹಮ್ಮಿಕೊಂಡ ಮೆರವಣಿಗೆಗೆ ಮೇಯರ್ ವಿನಾಯಕ್ ಪೈಲ್ವಾನ್ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಕಲಾ ತಂಡಗಳು ಗಮನ ಸೆಳೆದವು. ಮೆರವಣಿಗೆಯಲ್ಲಿ ಮಾಧ್ಯಮ ವೃಕ್ಷ ನಿರ್ಮಿಸಿದ್ದು ವಿಶೇಷವಾಗಿತ್ತು. ರಾಜ್ಯದಿಂದ ಬರುವ ಪತ್ರಕರ್ತರಿಗೆಲ್ಲ ಬೆಣ್ಣೆ ದೋಸೆ ಬಡಿಸಿ ಆತಿಥ್ಯಕ್ಕೆ ಚಾಲನೆ ನೀಡಲಾಯಿತು.

ಇದನ್ನೂ ಓದಿ: ಗ್ಯಾರಂಟಿ, ಬರ, ತೆರಿಗೆ ಸಂಗ್ರಹ ಕುಂಠಿತ ಎಫೆಕ್ಟ್: ಸಾಲದ ಮೊರೆ ಹೋದ ರಾಜ್ಯ ಸರ್ಕಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.