ಹುಬ್ಬಳ್ಳಿ: ನಾವು ಅಕ್ಕಿ ಕೊಡ್ತೇವೆ ಅಂದ್ರೂ ಖರೀದಿಸೋಕೆ ಸಿಎಂ ಸಿದ್ದರಾಮಯ್ಯ ಬಳಿ ದುಡ್ಡಿಲ್ಲ. ಅಕ್ಕಿ ವಿಚಾರದಲ್ಲಿ ಕ್ಷುಲ್ಲಕ ರಾಜಕಾರಣ ಮಾಡಲು ಹೊರಟಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದರು.
ನಗರದಲ್ಲಿಂದು ಮಾತನಾಡಿದ ಅವರು, ಕಳೆದ ಬಾರಿ ನಮ್ಮ ಬಳಿ ಅಕ್ಕಿ ಸ್ಟಾಕ್ ಇರಲಿಲ್ಲ. ಹೀಗಾಗಿ ಓಪನ್ ಮಾರುಕಟ್ಟೆಯಲ್ಲಿ ಅಕ್ಕಿ ನಿಲ್ಲಿಸಿದ್ದೆವು. ಈಗ 330 ಲಕ್ಷ ಟನ್ ಲಭ್ಯವಿದೆ. ಮುಕ್ತ ಮಾರುಕಟ್ಟೆಯಲ್ಲಿ ಖರೀದಿಗೆ ಅವಕಾಶ ನೀಡಿದ್ದೇವೆ. ಅಕ್ಕಿ ದರ ಕೆ.ಜಿ.ಗೆ 34 ರೂಪಾಯಿಯಿಂದ 28 ರುಪಾಯಿಗೆ ಇಳಿಸಿದ್ದೇವೆ. ಯಾವುದೇ ರಾಜ್ಯ ಸರ್ಕಾರಗಳು ಬೇಕಿದ್ದರೂ ಖರೀದಿಸಬಹುದು. ಸಿದ್ದರಾಮಯ್ಯನವರು ಮೊಸರಲ್ಲಿ ಕಲ್ಲು ಹುಡುಕುವುದನ್ನು ಕೈಬಿಡಬೇಕು. ಈಗ ನಾವು ಅಕ್ಕಿ ಕೊಡಲು ಸಿದ್ಧ. ಎಷ್ಟು ಬೇಕಾದ್ರೂ ಅಕ್ಕಿ ಖರೀದಿಸಿ. ಆದರೆ ಸದ್ಯ ಅವರು ಅಕ್ಕಿ ತಗೋಳಲ್ಲ. ಖರೀದಿಗೆ ಅವರಲ್ಲಿ ಹಣ ಇಲ್ಲ ಎಂದರು.
ಗೃಹಲಕ್ಷ್ಮಿ ಹಣ ಎರಡು ತಿಂಗಳಿಂದ ಕೊಟ್ಟಿಲ್ಲ. ಪೆಟ್ರೋಲ್ ಮತ್ತು ಹಾಲಿನ ದರ ಏರಿಸಲಾಗಿದೆ. ರೈತರಿಗೆ ಕೊಡುತ್ತಿರುವ ಸಬ್ಸಿಡಿ ಹಣ ಕಡಿತ ಮಾಡಿ ರೈತರಿಗೆ ದ್ರೋಹ ಮಾಡಿದ್ದಾರೆ. ಸಿದ್ದರಾಮಯ್ಯ ಬರೀ ಸುಳ್ಳು ಹೇಳುತ್ತಿದ್ದಾರೆ. ಯಾವುದೇ ಅಭಿವೃದ್ಧಿ ಕೆಲಸಗಳಿಗೆ ಹಣ ಕೊಡ್ತಿಲ್ಲ. ಅನೇಕ ಕಾಂಗ್ರೆಸ್ ಶಾಸಕರು ಕೇಂದ್ರದ ಬಳಿ ಹಣ ಕೊಡಿಸಿ ಅಂತ ದುಂಬಾಲು ಬಿದ್ದಿದ್ದಾರೆ. ಭಾರತ ಅಕ್ಕಿ, ಹಿಟ್ಟಿನ ಬಗ್ಗೆ ಸಿದ್ದರಾಮಯ್ಯ ಕಾಮೆಂಟ್ ಮಾಡಿದ್ದಾರೆ. ಜುಲೈ ತಿಂಗಳಿನಲ್ಲಿಯೂ ಇದನ್ನು ಮುಂದುವರಿಸುತ್ತಿದ್ದೇವೆ. ಸ್ಟಾಕ್ ಇಲ್ಲದೆ ಇರೋದಕ್ಕೆ ಮಾರುಕಟ್ಟೆಯಲ್ಲಿ ಲಭ್ಯವಿರಲಿಕ್ಕಿಲ್ಲ. ಭಾರತ ಅಕ್ಕಿ ಮತ್ತು ಹಿಟ್ಟು ಮುಂದುವರಿಯುತ್ತವೆ. ಸಿದ್ದರಾಮಯ್ಯ ತಿಳಿದುಕೊಂಡು ಮಾತನಾಡಬೇಕು ಎಂದು ಹೇಳಿದರು.
ಪ್ರವಾಹ ತಂಡದ ಬಗ್ಗೆ ಆತಂಕಪಡುವ ಅಗತ್ಯವಿಲ್ಲ. ಈ ತಂಡ ಮಹದಾಯಿ ಯೋಜನೆ ವ್ಯಾಪ್ತಿಗೆ ಭೇಟಿ ಕೊಟ್ಟು ವಸ್ತುಸ್ಥಿತಿ ಅಧ್ಯಯನ ಮಾಡುತ್ತೆ. ಯಾವುದೇ ಜಲ ಆಯೋಗ ಅಸ್ತಿತ್ವಕ್ಕೆ ಬಂದ ನಂತರ ಪ್ರವಾಹ ಪ್ರಾಧಿಕಾರವು ಅಸ್ತಿತ್ವಕ್ಕೆ ಬಂದಿರುತ್ತೆ. ಇದಕ್ಕೆ ಬೇರೆ ಬೇರೆ ರೀತಿಯ ಅರ್ಥ ಕೊಡಬಾರದು. ಅವರು ಬಂದು ಭೇಟಿ ನೀಡಿ ಅಧ್ಯಯನ ಮಾಡುತ್ತಾರೆ. ಆದರೆ ಕೇಂದ್ರಕ್ಕೆ ಯಾವುದೇ ವರದಿ ಸಲ್ಲಿಸುವುದಿಲ್ಲ. ಯೋಜನೆ ಆರಂಭಗೊಂಡ ನಂತರ ನೀರು ಹರಿವು ಕುರಿತು ವರದಿ ಕೊಡುತ್ತಾರೆ. ಮಹದಾಯಿ ಯೋಜನೆ ನೀರನ್ನು ಈಗಾಗಲೇ ಮೂರು ರಾಜ್ಯಗಳಿಗೆ ನಿಗದಿಗೊಳಿಸಲಾಗಿದೆ. ಸದ್ಯ ಪ್ರಕರಣ ಸುಪ್ರೀಂ ಕೋರ್ಟ್ನಲ್ಲಿದೆ ಎಂದು ತಿಳಿಸಿದರು.
ಇದನ್ನೂ ಓದಿ: ರಾಜ್ಯದಲ್ಲಿ ಮೆಡಿಕಲ್ ಎಮರ್ಜೆನ್ಸಿ ಘೋಷಿಸಿ ಜನರನ್ನು ರಕ್ಷಿಸಿ: ಆರ್.ಅಶೋಕ್ - R Ashok