ETV Bharat / state

ದುಷ್ಟರ ಸಂಹಾರ, ಶಿಷ್ಟರ ರಕ್ಷಣೆಯೇ ದಸರಾದ ಸಂಕೇತ; ಮುಖ್ಯಮಂತ್ರಿ ಸಿದ್ದರಾಮಯ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ ದಸರಾ ಆಚರಣೆಯನ್ನು ತಮ್ಮದೇಯಾದ ವ್ಯಾಖ್ಯಾನ ಮಾಡಿದ್ದಾರೆ.

MYSURU DASARA 2024
ಸುತ್ತೂರು ಮಠಕ್ಕೆ ಭೇಟಿ ನೀಡಿದ ಸಂದರ್ಭ (ETV Bharat)
author img

By ETV Bharat Karnataka Team

Published : Oct 12, 2024, 1:33 PM IST

ಮೈಸೂರು: ದುಷ್ಟರ ಸಂಹಾರ, ಶಿಷ್ಟರ ರಕ್ಷಣೆಯೇ ದಸರಾದ ಸಂಕೇತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವರ್ಣಿಸಿದರು. ಇಂದು ಸುತ್ತೂರು ಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

ವಿಜಯದಶಮಿ, ದಸರಾ ಉತ್ಸವದ ಕೊನೆಯ ದಿನ. ಇಂದು ಜಂಬೂಸವಾರಿ ನಡೆಯಲಿದ್ದು, ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ನಡೆಯಲಿದೆ. ಈ ಶುಭ ಸಂದರ್ಭದಲ್ಲಿ ನಾಡಿನ ಹಾಗೂ ದೇಶದ ಜನರಿಗೆ ದಸರಾ ಉತ್ಸವದ ಶುಭಾಶಯಗಳನ್ನು ಕೋರುತ್ತೇನೆ. ಈ ಬಾರಿನಲ್ಲಿ ಉತ್ತಮ ಮಳೆ ಹಾಗೂ ಬೆಳೆಯಾಗಿದ್ದು, ನಾಡಿನ ರೈತರಲ್ಲಿ ಸಂತಸ ಮನೆಮಾಡಿದೆ. ರಾಜ್ಯದ ಎಲ್ಲ ಜಲಾಶಯಗಳು ತುಂಬಿರುವುದು ಸಂತಸದ ವಿಚಾರ. ದುಷ್ಟರ ಸಂಹಾರ, ಶಿಷ್ಟರ ರಕ್ಷಣೆಯೇ ದಸರಾದ ಸಂಕೇತ. ರಾಜ್ಯದಲ್ಲಿ ಅಶಾಂತಿ ಮೂಡಿಸಿ, ಬದುಕುಗಳನ್ನು ಹಾಳುಮಾಡಲು ಸಂಚು ರೂಪಿಸುವವರಿಗೆ ದೇವರು ಸದ್ಭುದ್ಧಿ ನೀಡಲಿ ಎಂದು ತಿಳಿಸಿದರು.

ಸಿಎಂ ಪೋಸ್ಟ್​: ಸತ್ಯ, ನ್ಯಾಯ ಮತ್ತು ನಿಜವಾದ ಧರ್ಮದ ಗೆಲುವಿನ ಸಂದೇಶ ಸಾರುವ ವಿಜಯದಶಮಿ, ಸುಳ್ಳು, ಅನ್ಯಾಯ ಮತ್ತು ಅಧರ್ಮದ ವಿರುದ್ಧ ಧೈರ್ಯದಿಂದ ದನಿ ಎತ್ತಲು ಪ್ರೇರಣೆಯಾಗಲಿ. ಶಾಂತಿ, ಪ್ರೀತಿ, ಸೌಹಾರ್ದತೆ ಮತ್ತು ಸಹಬಾಳ್ವೆಯ ಬೆಳಕು ಎಲ್ಲೆಡೆ ಪಸರಿಸಲಿ ಎಂದು ತಾಯಿ ಚಾಮುಂಡೇಶ್ವರಿಯಲ್ಲಿ ಪ್ರಾರ್ಥಿಸುತ್ತೇನೆ. ನಾಡಬಾಂಧವರಿಗೆ ವಿಜಯದಶಮಿಯ ಹಾರ್ದಿಕ ಶುಭಾಶಯಗಳು ಎಂದು ಸಿಎಂ ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಸಹ ಮಾಡಿಕೊಂಡಿದ್ದಾರೆ.

ಅಂಬಾರಿ ಬಸ್​ನಲ್ಲಿ ರೌಂಡ್​: ವಿಶ್ವವಿಖ್ಯಾತ ಮೈಸೂರು ದಸರಾದ ಕೊನೆಯ ದಿನವಾದ ಶುಕ್ರವಾರ ಸಿಎಂ ನಗರದ ಆಯ್ದ ಭಾಗಗಳ ದೀಪಾಲಂಕಾರ ವೀಕ್ಷಿಸಿದರು. ಅದ್ಭುತ ದೃಶ್ಯಗಳಿಗೆ ಮನ ಸೋತರು. ಅಂಬಾರಿ ಬಸ್ ಮೂಲಕ ಸಿಟಿ ರೌಂಡ್ಸ್ ಹೊರಟ ಸಿಎಂ ಜೊತೆಗೆ ಇಂಧನ ಸಚಿವ ಕೆ.ಜೆ.ಜಾರ್ಜ್, ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ ಮಹದೇವಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ಚಾಮುಂಡೇಶ್ವರಿ ವಿದ್ಯುತ್ ನಿಗಮ ನಿಯಮಿತದ ಅಧ್ಯಕ್ಷ ಎ.ಬಿ.ರಮೇಶ್ ಬಂಡಿಸಿದ್ದೇಗೌಡ, ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಗಣೇಶ್ ಪ್ರಸಾದ್, ಮುಡಾ ಅಧ್ಯಕ್ಷ ಮರಿಗೌಡ ಸೇರಿದಂತೆ ಇನ್ನಿತರ ಅಧಿಕಾರಿಗಳಿದ್ದರು.

ನನ್ನೂರ ಐತಿಹಾಸಿಕ ದಸರಾದ ದೀಪಾಲಂಕಾರವನ್ನು ತೆರೆದ ಬಸ್​​​ನಲ್ಲಿ ಪ್ರಯಾಣಿಸುತ್ತಾ ವೀಕ್ಷಿಸಿದೆ. ಬಾಲ್ಯದ ದಿನಗಳಿಂದ ಹಿಡಿದು ಇಂದಿನ ವರೆಗೂ ಪ್ರತಿ ಬಾರಿ ಮೈಸೂರು ದಸರಾದಲ್ಲಿ ನಾನು ಪಾಲ್ಗೊಂಡಾಗಲೂ ಅದೇ ಖುಷಿ, ಅದೇ ಸೊಗಸು. ಸಾಂಸ್ಕೃತಿಕ ನಗರಿ ಮೈಸೂರು ನಾಡಿನ ಶ್ರೀಮಂತ ಸಂಸ್ಕೃತಿ, ಪರಂಪರೆಯನ್ನು ದಸರೆಯ ಮೂಲಕ ತಲೆಮಾರುಗಳ ವರೆಗೆ ಮುನ್ನಡೆಸಿಕೊಂಡು ಹೋಗುತ್ತಿದೆ. ವರ್ಷಗಳು ಉರುಳಿದಂತೆ ಧಾರ್ಮಿಕ ಆಚರಣೆಯೊಂದು ಎಲ್ಲರನ್ನೂ ಒಳಗೊಂಡ ಸಾಂಸ್ಕೃತಿಕ ಆಚರಣೆಯಾಗಿ, ಜನರ ಉತ್ಸವದಂತಾಗುತ್ತಿರುವುದು ಮತ್ತಷ್ಟು ಖುಷಿಯ ವಿಚಾರ. ದಸರಾದ ಯಶಸ್ಸಿಗೆ ದುಡಿಯುತ್ತಿರುವ ಪ್ರತಿಯೊಬ್ಬರಿಗೂ ಧನ್ಯವಾದಗಳು ಎಂದು ಸಿಎಂ ತಮ್ಮ ಎಕ್ಸ್​ ಖಾತೆಯಲ್ಲಿ ಮತ್ತೊಂದು ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ರಾಜ್ಯಕ್ಕೆ ಪದೇ ಪದೆ ಅನ್ಯಾಯ, ನಮ್ಮ ಹೋರಾಟ ಮುಂದುವರೆಸುತ್ತೇವೆ: ಡಿ.ಕೆ.ಶಿವಕುಮಾರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.