ETV Bharat / state

ವಿಧಾನಸಭೆಯಲ್ಲಿ ಮೋಡಬಿತ್ತನೆ ಖಾಸಗಿ ವಿಧೇಯಕ ಮಂಡನೆ: ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಲು ಅನುಮೋದನೆ - ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ

ವಿಧಾನಸಭೆಯಲ್ಲಿ ಶಾಸಕ ಪ್ರಕಾಶ್ ಕೋಳಿವಾಡ ಅವರು ಕರ್ನಾಟಕ ಮೋಡ ಬಿತ್ತನೆ ಖಾಸಗಿ ವಿಧೇಯಕವನ್ನು ಮಂಡಿಸಿದರು.

Assembly
ವಿಧಾನಸಭೆ
author img

By ETV Bharat Karnataka Team

Published : Feb 29, 2024, 10:28 PM IST

Updated : Feb 29, 2024, 10:41 PM IST

ಸಚಿವ ಎಚ್ ಕೆ ಪಾಟೀಲ್ ಮಾತನಾಡಿದರು.

ಬೆಂಗಳೂರು: ಮೋಡ ಬಿತ್ತನೆ ಕುರಿತಂತೆ ಮಂಡನೆಯಾಗಿರುವ ಖಾಸಗಿ ವಿಧೇಯಕವನ್ನು ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಲು ವಿಧಾನಸಭೆಯಲ್ಲಿ ಅನುಮೋದಿಸಲಾಗಿದೆ. ಕಾಂಗ್ರೆಸ್ ಶಾಸಕ ಪ್ರಕಾಶ್ ಕೋಳಿವಾಡ ಅವರು ಕರ್ನಾಟಕ ಮೋಡ ಬಿತ್ತನೆ ವಿಧೇಯಕ-2024 ಖಾಸಗಿ ವಿಧೇಯಕವನ್ನು ಮಂಡಿಸಿದರು.

ಬೆಳೆಹಾನಿ ಪ್ರಮಾಣ ತಗ್ಗಿಸಲು ಮೋಡಬಿತ್ತನೆ ಅಗತ್ಯ: ಬರಪರಿಸ್ಥಿತಿಯನ್ನು ತಗ್ಗಿಸುವುದು, ಅಂತರ್ಜಲ ಮಟ್ಟ ಹೆಚ್ಚಿಸುವುದು, ಜಲಾಶಯದಲ್ಲಿನ ನೀರಿನ ಒಳಹರಿವು ವೃದ್ಧಿ, ನೀರಾವರಿ ಭೂಮಿಯ ವಿಸ್ತರಣೆ, ವಿದ್ಯುತ್ ಉತ್ಪಾದನೆಗೆ ವ್ಯಾಪಕ ಅವಕಾಶ ಮುಂತಾದ ಕಾರಣಗಳಿಗೆ ಮೋಡಬಿತ್ತನೆ ಅಗತ್ಯವಿದೆ. ಬರಗಾಲದಿಂದಾಗಿ ರಾಜ್ಯದಲ್ಲಿ 35 ಸಾವಿರ ಕೋಟಿ ರೂ ನಷ್ಟವಾಗಿದೆ. ಮೋಡಬಿತ್ತನೆ ಮಾಡಿದರೆ ಶೇ.21 ರಿಂದ 46 ರಷ್ಟು ಮಳೆಯಾಗುವ ಸಾಧ್ಯತೆಯಿದೆ. ಬೆಳೆಹಾನಿಯ ಪ್ರಮಾಣವನ್ನು 7 ಸಾವಿರ ಕೋಟಿ ರೂ.ಗಳಿಗೆ ತಗ್ಗಿಸಬಹುದು ಎಂದು ಹೇಳಿದರು.

ರಾಜ್ಯದಲ್ಲಿ ವರ್ಷಕ್ಕೆ 6 ರಿಂದ 7 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. 27 ವರ್ಷದಲ್ಲಿ 16 ವರ್ಷ ಬರ ಪರಿಸ್ಥಿತಿ ಕಂಡಿದ್ದೇವೆ. 1.10 ಕೋಟಿ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿಯಾಗಿದೆ. ಮೋಡಬಿತ್ತನೆಯಿಂದಾಗಿ ಈ ಪರಿಸ್ಥಿತಿಯನ್ನು ತಪ್ಪಿಸಬಹುದಾಗಿದೆ ಎಂದು ಹೇಳಿದರು.

ಹಿರಿಯ ಶಾಸಕ ಟಿ.ಬಿ.ಜಯಚಂದ್ರ ಮಾತನಾಡಿ, ಮೋಡಬಿತ್ತನೆಯನ್ನು ಸಮಗ್ರವಾಗಿ ನಿರ್ವಹಣೆ ಮಾಡಬೇಕು. ಕೇಂದ್ರ ಸರ್ಕಾರ ಮತ್ತು ಅಕ್ಕಪಕ್ಕದ ನಾಲ್ಕೈದು ರಾಜ್ಯಗಳು ಒಳಗೊಂಡು ಚರ್ಚೆ ಮಾಡಿ ಬಲವಾದ ಮೋಡಗಳಿರುವ ಸಂದರ್ಭದಲ್ಲಿ ಬಿತ್ತನೆ ಮಾಡಿದರೆ ಅದು ಯಶಸ್ವಿಯಾಗುತ್ತದೆ. ವಿಜ್ಞಾನವು ಕೂಡ ಇದನ್ನು ಒಪ್ಪಿಕೊಂಡಿದೆ ಎಂದರು.

ಮೋಡಬಿತ್ತನೆ ತಂತ್ರಜ್ಞಾನ:ಚರ್ಚೆಯ ನಡುವೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್ ಕೆ ಪಾಟೀಲ್ ಮಾತನಾಡಿ, ಗಂಭೀರ ಬರ ಪರಿಸ್ಥಿತಿಯಲ್ಲೂ ಮೋಡಬಿತ್ತನೆಯಂತಹ ತಂತ್ರಜ್ಞಾನ ಬಳಕೆ ಮಾಡಿಕೊಳ್ಳದೇ ಇರುವುದು ಅಜ್ಞಾನವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಹಿಂದೆ ತಾವು ಎಸ್.ಎಂ.ಕೃಷ್ಣ ಅವರ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದಾಗ ಮೋಡಬಿತ್ತನೆ ಮಾಡಿದ್ದ ನೆನಪುಗಳನ್ನು ಸ್ಮರಿಸಿಕೊಂಡರು.

ಆ ವೇಳೆ ಮೋಡಬಿತ್ತನೆ ಬಗ್ಗೆ ಮಾಹಿತಿ ಇರಲಿಲ್ಲ. ಅದು ಯಶಸ್ವಿಯಾಗುವುದಿಲ್ಲ. ಹಣ ವ್ಯರ್ಥ ಎಂಬ ಅಪವಾದಗಳಿದ್ದವು. ರಾಜಕಾರಣಿಗಳು ಅನುಮಾನ ವ್ಯಕ್ತಪಡಿಸಿದರು. ಮುಖ್ಯಮಂತ್ರಿಯವರು ಮೋಡಬಿತ್ತನೆ ಉದ್ಘಾಟನೆಗೆ ಬಂದಿರಲಿಲ್ಲ. ಅದೂ ಚರ್ಚೆಗೆ ಗ್ರಾಸವಾಗಿತ್ತು. ಗೃಹಸಚಿವರಾಗಿದ್ದ ಧರ್ಮಸಿಂಗ್ ತಮ್ಮೊಂದಿಗೆ ಬಂದು ವಿಮಾನದಲ್ಲಿ ಕುಳಿತು ಮೋಡಬಿತ್ತನೆ ಮಾಡುವುದನ್ನು ವೀಕ್ಷಿಸಿದ್ದರು.

ಶಾಸಕ ಪ್ರಕಾಶ್ ಕೋಳಿವಾಡ ಮಾತನಾಡಿದರು.

ನಾವು ಕೆಳಗೆ ಬಂದಾಗ ಅದರ ಉಸ್ತುವಾರಿ ಹೊಂದಿದ್ದ ಅಧಿಕಾರಿ ನಕ್ಷೆಯನ್ನು ಮುಂದಿಟ್ಟುಕೊಂಡು ನಾವು ಎಲ್ಲಿ ಮೋಡಬಿತ್ತನೆ ಮಾಡಿದ್ದೇವೆ. ಅದರ ಪರಿಣಾಮ ಯಾವ ಪ್ರದೇಶದಲ್ಲಿ ಮಳೆಯಾಗುತ್ತದೆ ಎಂಬುದನ್ನು ಕರಾರುವಾಕ್ಕಾಗಿ ಹೇಳಿದ್ದರು. ಕುತೂಹಲದಿಂದ ಪರೀಕ್ಷಿಸಲು ಪತ್ರಕರ್ತರು ಸದರಿ ಗ್ರಾಮಗಳಿಗೆ ತೆರಳಿದರು. ಕೆಲವೇ ನಿಮಿಷಗಳಲ್ಲಿ ನನಗೆ ಸುಮಾರು 12 ಕ್ಕೂ ಹೆಚ್ಚು ಪತ್ರಕರ್ತರು ಕರೆ ಮಾಡಿ ನಾವು ನೆನದು ಹೋಗಿದ್ದೇವೆ. ಮೋಡಬಿತ್ತನೆ ಯಶಸ್ವಿಯಾಗಿದೆ ಎಂದು ಅಭಿನಂದಿಸಿದ್ದರು.

ದೃಶ್ಯ ಮಾಧ್ಯಮಗಳು ನಾಳೆ ಯಾವ ಪ್ರದೇಶದಲ್ಲಿ ಮೋಡಬಿತ್ತನೆ ಯಾಗುತ್ತದೆ ಎಂಬುದನ್ನು ಪ್ರಕಟಿಸಲಾರಂಭಿಸಿದ್ದರು. ಟೀಕೆ ಮಾಡಿದ್ದ ಶಾಸಕರ 5 ತಂಡಗಳ ನಿಯೋಗಗಳು ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಬಳಿ ಹೋಗಿ ಎಚ್.ಕೆ.ಪಾಟಿಲ್‍ರು ಉತ್ತರ ಕರ್ನಾಟಕಕ್ಕೆ ಮಾತ್ರ ಮೋಡಬಿತ್ತನೆ ಮಾಡಿಸುತ್ತಿದ್ದಾರೆ. ದಕ್ಷಿಣ ಕರ್ನಾಟಕಕ್ಕೆ ಮೋಸವಾಗುತ್ತಿದೆ ಎಂದು ಹೇಳಿದ್ದರು. ಆ ಮಟ್ಟಿಗೆ ಮೋಡಬಿತ್ತನೆ ಯಶಸ್ವಿಯಾಗಿತ್ತು ಎಂದರು.

ಆ ಸಂದರ್ಭದಲ್ಲಿ ಮೋಡಬಿತ್ತನೆಗಾಗಿ 9.2 ಕೋಟಿ ರೂ. ಮಾತ್ರ ಖರ್ಚಾಗಿತ್ತು. ಸರಿಸುಮಾರು 10 ಕೋಟಿ ರೂ.ಗಳನ್ನು ಬರದ ಸಂದರ್ಭದಲ್ಲಿ ಯಾವುದ್ಯಾವುದೋ ಉದ್ದೇಶಗಳಿಗೆ ನಾವು ಖರ್ಚು ಮಾಡುತ್ತೇವೆ. ಕರ್ನಾಟಕ ಭೀಕರ ಬರ ಪರಿಸ್ಥಿತಿಯಲ್ಲಿದೆ. ಮೋಡಬಿತ್ತನೆಯಂತಹ ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳದೇ ಇರುವುದು ಅಜ್ಞಾನದ ಅಪರಾಧವಾಗಿದೆ. ಮೋಡಬಿತ್ತನೆ ಯಶಸ್ವಿ ತಂತ್ರಜ್ಞಾನ ಎಂದು ಸಾಬೀತಾಗಿದೆ ಎಂದು ಹೇಳಿದರು.

ರಷ್ಯಾದಲ್ಲಿ ಅಧ್ಯಕ್ಷರ ಮೆರವಣಿಗೆ ನಡೆಯುವಾಗ ತಪ್ಪದೇ ಮಳೆ ಸುರಿಯುತ್ತದೆ. ಇದರಿಂದ ಮೆರವಣಿಗೆಗೆ ಅಡ್ಡಿಯಾಗುತ್ತದೆ. ಅದನ್ನು ತಪ್ಪಿಸಲು ಮೆರವಣಿಗೆ ಜಾಗದಿಂದ 10 ಕಿ.ಮೀ. ಅಂತರದಲ್ಲಿ ಮೋಡಬಿತ್ತನೆ ಮಾಡಿ ಮುಂಚಿತವಾಗಿಯೇ ಮಳೆ ಸುರಿಸುತ್ತಾರೆ. ಇದರಿಂದ ಮೆರವಣಿಗೆ ಸಂದರ್ಭದಲ್ಲಿ ಮಳೆಯಾಗಿ ಅಡ್ಡಿಯಾಗುವುದನ್ನು ತಪ್ಪಿಸಲಾಗುತ್ತಿದೆ. ನಮ್ಮಲ್ಲಿ ಈ ತಂತ್ರಜ್ಞಾನದ ಬಗ್ಗೆ ಅಪಸ್ವರಗಳು, ಅಪನಂಬಿಕೆಗಳು ಕೇಳಿಬರುತ್ತಲೇ ಇವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

10 ರಿಂದ 12 ಕಿ.ಮೀ ಅಂತರದಲ್ಲಿ ಮಳೆ: ಬಲವಾದ ಮೋಡಗಳಿದ್ದಾಗಿಯೂ ಮಳೆ ಬರದೇ ಇರಲು ಗಾಳಿಯ ಸಾಂದ್ರತೆ ಕಾರಣವಾಗಿದೆ. ಸೆಕೆಂಡ್​ಗೆ 5 ಕಿ.ಮೀ. ವೇಗದಲ್ಲಿ ಚಲಿಸುವ ಗಾಳಿ ಮೋಡಗಳನ್ನು ಹೊತ್ತೊಯ್ಯುತ್ತದೆ. ಈ ಚಲನ ಕ್ರಿಯೆಯಲ್ಲಿ ಅವು ಕರಗಿ ಹೋಗಿ ಕೆಲವೆಡೆ ಸಾಧಾರಣವಾಗಿ ಮಳೆಯಾಗಿ ಮುಗಿದು ಹೋಗುತ್ತದೆ. ಮೋಡಬಿತ್ತನೆ ಮಾಡಿದರೆ 10 ರಿಂದ 12 ಕಿ.ಮೀ. ಅಂತರದಲ್ಲಿಯೇ ಮಳೆ ಸುರಿಯುತ್ತದೆ ಎಂದರು.

ಖಾಸಗಿ ವಿಧೇಯಕವನ್ನು ಸರ್ಕಾರವಾಗಿ ಒಪ್ಪುವುದು ಕಷ್ಟಸಾಧ್ಯ. ಅದನ್ನು ಜಂಟಿ ಸದನ ಸಮಿತಿ ಅಥವಾ ಆಯ್ಕೆ ಸಮಿತಿಗೆ ಕಳುಹಿಸುವುದಾಗಿ ಸಾಮಾನ್ಯವಾಗಿ ಪರಿಶೀಲಿಸುತ್ತೇವೆ ಎಂದು ಸಬೂಬು ಹೇಳಲಾಗುತ್ತದೆ. ಆದರೆ ತಾಂತ್ರಿಕವಾಗಿ ಸಾಕಷ್ಟು ಅಡಚಣೆಗಳು ಇವೆ. ಆರ್ಥಿಕ ಹೊರೆ ಸೇರಿದಂತೆ ಹಲವು ವಿಚಾರಗಳನ್ನು ಚರ್ಚಿಸಬೇಕಾಗುತ್ತದೆ.

ಅದೆಲ್ಲದರ ಹೊರತಾಗಿ ಮೋಡಬಿತ್ತನೆಯ ವಿಧೇಯಕವನ್ನು ರಾಜ್ಯಪಾಲರಿಗೆ ಕಳುಹಿಸಲು ನನ್ನ ಸಹಮತ ಇದೆ. ಸಭಾಧ್ಯಕ್ಷರು ಒಪ್ಪಿಗೆ ಕೊಟ್ಟರೆ ರಾಜಭವನಕ್ಕೆ ಖಾಸಗಿ ವಿಧೇಯಕ ಕಳುಹಿಸಲು ಅಗತ್ಯ ಪ್ರಕ್ರಿಯೆಗಳನ್ನು ಮುಂದುವರೆಸಬಹುದು ಎಂದು ಸಲಹೆ ನೀಡಿದರು.
ಸಭಾಧ್ಯಕ್ಷರ ಪೀಠದಲ್ಲಿದ್ದ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ರಾಜ್ಯಪಾಲರಿಗೆ ಖಾಸಗಿ ವಿಧೇಯಕ ಕಳುಹಿಸಲು ಸದನಕ್ಕೆ ಒಪ್ಪಿಗೆ ಇದೆ ಎಂದು ಹೇಳಿದರು.

ಇದನ್ನೂಓದಿ: ರೈತರು, ಬಡವರಿಗೆ ಶೀಘ್ರದಲ್ಲೇ ನ್ಯಾಯ ಒದಗಿಸುವ ಮಸೂದೆಗೆ ರಾಷ್ಟ್ರಪತಿ ಅಂಕಿತ: ಸಚಿವ ಎಚ್.ಕೆ.ಪಾಟೀಲ್

Last Updated : Feb 29, 2024, 10:41 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.