ETV Bharat / state

ಪೌರ ಕಾರ್ಮಿಕ ದಿನಾಚರಣೆಗೆ ಬಹಿಷ್ಕಾರ; ಬೆಳಗಾವಿಯಲ್ಲಿ ವಿವಿಧ ಬೇಡಿಕೆ ಈಡೇರಿಕೆಗೆ ಪ್ರತಿಭಟನೆ - civic workers protest

ಬೆಳಗಾವಿ ಮಹಾನಗರ ಪಾಲಿಕೆ ಮುಂದೆ ಪೌರ ಕಾರ್ಮಿಕರು ಕೈಗೆ ಕಪ್ಪುಪಟ್ಟಿ ಕಟ್ಟಿಕೊಂಡು ಧರಣಿ ನಡೆಸಿದ್ದಾರೆ. ಕೇವಲ ಪೌರ ಕಾರ್ಮಿಕರ ದಿನ ಆಚರಿಸಿದರೆ ಸಾಲದು, ನಮ್ಮ ಸಮಸ್ಯೆಗಳನ್ನು ಬಗೆಹರಿಸಿ ಎಂದು ಒತ್ತಾಯಿಸಿದ್ದಾರೆ.

civic-workers-protest
ಪೌರ ಕಾರ್ಮಿಕರ ಪ್ರತಿಭಟನೆ (ETV Bharat)
author img

By ETV Bharat Karnataka Team

Published : Sep 23, 2024, 6:24 PM IST

Updated : Sep 23, 2024, 6:54 PM IST

ಬೆಳಗಾವಿ : ಇಂದು ಪೌರ ಕಾರ್ಮಿಕರ ದಿನಾಚರಣೆ. ಆದರೆ, ತಮ್ಮ ದಿನವನ್ನೇ ಬಹಿಷ್ಕರಿಸುವ ಮೂಲಕ ಬೆಳಗಾವಿಯಲ್ಲಿ ಪೌರ ಕಾರ್ಮಿಕರು ಧರಣಿಗೆ ಮುಂದಾಗಿದ್ದಾರೆ. ಸೇವೆ ಖಾಯಂಗೊಳಿಸುವುದು, ಬೆಳಗಿನ‌ ತಿಂಡಿ ಸೇರಿ‌ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದ್ದಾರೆ.

ಬೆಳಗಾವಿ ಮಹಾನಗರ ಪಾಲಿಕೆ ಮುಂದೆ ಧರಣಿ ಕುಳಿತ ಪೌರ ಕಾರ್ಮಿಕರು ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕೇವಲ ಪೌರ ಕಾರ್ಮಿಕರ ದಿನ ಆಚರಿಸಿದರೆ ಸಾಲದು, ನಮ್ಮ ಸಮಸ್ಯೆಗಳನ್ನು ಬಗೆಹರಿಸಿ, ಆ ಮೇಲೆ ಕಾರ್ಯಕ್ರಮ ಮಾಡುವಂತೆ ಆಡಳಿತಕ್ಕೆ ಒತ್ತಾಯಿಸಿದರು.

ಸಫಾಯಿ ಕರ್ಮಚಾರಿ ಸಂಘಟನೆ ಜಿಲ್ಲಾಧ್ಯಕ್ಷ ದೀಪಕ್ ವಾಘೇಲಾ ಮಾತನಾಡಿದರು (ETV Bharat)

ಕಳೆದ ಒಂದೂವರೆ ವರ್ಷದಿಂದ ಖಾಯಂ ನೇಮಕಾತಿ ಮಾಡದೇ ಇರುವ 100 ಜನ ಪೌರಕಾರ್ಮಿಕರಿಗೆ ತಕ್ಷಣವೇ ಖಾಯಂ ನೇಮಕಾತಿ ಆದೇಶ ಪತ್ರ ನೀಡಬೇಕು. ಅದೇ ರೀತಿ 134 ಸಂಖ್ಯಾತಿರಿಕ್ತ (Supernumerary) ಪೌರಕಾರ್ಮಿಕರಿಗೆ ಖಾಯಂ ಆದೇಶ ನೀಡಬೇಕೆಂದು 2023ರ ಅಕ್ಟೋಬರ್ 27ರಂದು ಕರ್ನಾಟಕ ಸರ್ಕಾರದ ಅಧೀನ ಕಾರ್ಯದರ್ಶಿ, ನಗರಾಭಿವೃದ್ಧಿ ಬೆಂಗಳೂರು ಇವರಿಂದ ಸೇರ್ಪಡೆ ಆದೇಶ ನೀಡಿ, ಒಂದು ವರ್ಷ ಆಗುತ್ತಾ ಬಂದಿದೆ. ಆದರೂ ಇನ್ನೂ ಯಾವುದೇ ಕ್ರಮ ಜರುಗಿಸಿಲ್ಲ. ಈ ಸಂಬಂಧ ನೇಮಕಾತಿ ಪ್ರಕಟಣೆ ಹೊರಡಿಸಬೇಕು ಎಂದು ಒತ್ತಾಯಿಸಿದರು.

ಐಚ್ಛಿಕ ಪತ್ರ ನೀಡುವ ಬಗ್ಗೆ ಸೂಚನಾ ಪತ್ರ ಜಾರಿ ಮಾಡಿ: ಇದೇ ಆಗಸ್ಟ್ 21ರಂದು ನಡೆದ ಸಭೆಯಲ್ಲಿ ಒಪ್ಪಿಕೊಂಡಂತೆ ಎಲ್ಲ 253 ಪೌರಕಾರ್ಮಿಕ ವಸತಿ ಗೃಹಕ್ಕೆ ಐಚ್ಛಿಕ ಪತ್ರ ನೀಡುವ ಬಗ್ಗೆ ಸೂಚನಾ ಪತ್ರಗಳನ್ನು ಜಾರಿ ಮಾಡಬೇಕು. ಇನ್ನು ಆನಂದವಾಡಿಯ ರಮಾಬಾಯಿ ಅಂಬೇಡ್ಕರ್​ ಹಾಲ್‌ನಲ್ಲಿ ಆಧುನಿಕ ಜಿಮ್ ಮತ್ತು ಗ್ರಂಥಾಲಯಕ್ಕೆ 2023-24ನೇ ಸಾಲಿನ ಕ್ರಿಯಾ ಯೋಜನೆಯಲ್ಲಿ ಅನುಮೋದನೆಗೊಂಡ 38 ಲಕ್ಷ ರೂಪಾಯಿ ಮೀಸಲಿಟ್ಟ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಬೇಕು. ಅಲ್ಲದೇ 154 ಮಂದಿ ಖಾಯಂ ಪೌರಕಾರ್ಮಿಕರಿಗೆ ಕಳೆದ 7 ತಿಂಗಳಿಂದ ಬಾಕಿ ಉಳಿಸಿಕೊಂಡಿರುವ ಸಂಬಳ ಪಾವತಿ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.

METROPOLITAN CORPORATION
ಬೆಳಗಾವಿ ಮಹಾನಗರ ಪಾಲಿಕೆ (ETV Bharat)

ಸರ್ಕಾರದ ವಿರುದ್ಧ ಆಕ್ರೋಶ: ಪ್ರತಿಭಟನಾನಿರತ ಮುನಿಸ್ವಾಮಿ ಭಂಡಾರಿ ಮಾತನಾಡಿ, 'ನಮ್ಮ ಬೇಡಿಕೆಗಳನ್ನು ಈಡೇರಿಸದೇ ಸರ್ಕಾರ ಇವತ್ತಿನ ದಿನ ನಮ್ಮ ಸೇವೆಗೆ ಗೌರವ ಸಲ್ಲಿಸುವ ಉದ್ದೇಶದಿಂದ ಪೌರ ಕಾರ್ಮಿಕರ ದಿನ ಆಚರಿಸುತ್ತಿರುವುದು ನಮಗೆ ಯಾವುದೇ ರೀತಿ ಖುಷಿ ತಂದಿಲ್ಲ. ನಮ್ಮನ್ನು ಕೇವಲ ದುಡಿಸಿಕೊಳ್ಳುತ್ತಿದ್ದಾರೆ. ಇನ್ನು ಪ್ರಧಾನಿ ಮೋದಿಯವರು ನಮ್ಮ ಪಾದಪೂಜೆ ಮಾಡುತ್ತಾರೆ. ಆದರೆ, ಇಲ್ಲಿ ನೋಡಿದರೆ ನಮ್ಮನ್ನು ಕಾಲ ಕಸದಂತೆ ನೋಡುತ್ತಿದ್ದಾರೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾವಲು ಸಮಿತಿ ಸಫಾಯಿ ಕರ್ಮಚಾರಿ ಸಂಘಟನೆ ಜಿಲ್ಲಾಧ್ಯಕ್ಷ ದೀಪಕ್ ವಾಘೇಲಾ ಮಾತನಾಡಿ, 'ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಒಟ್ಟು 1350 ಪೌರ ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದೇವೆ. ಈ ಪೈಕಿ 540 ಖಾಯಂ ಕಾರ್ಮಿಕರಿದ್ದು, ಇನ್ನು 810 ಜನರ ಸೇವೆ ಖಾಯಂಗೊಳಿಸಿಲ್ಲ. ಹಾಗಾಗಿ, ಸೇವೆ ಖಾಯಂಗೊಳಿಸಬೇಕು. ಅದೇ ರೀತಿ ಹುಬ್ಬಳ್ಳಿ-ಧಾರವಾಡ, ಬೆಂಗಳೂರು, ಮೈಸೂರು ಮಹಾನಗರ ಪಾಲಿಕೆಗಳಲ್ಲಿ ಬೆಳಗಿನ ಉಪಹಾರ ನೀಡುವಂತೆ ಇಲ್ಲಿ ನಮಗೂ ನೀಡಬೇಕು. ಮಲತಾಯಿ ಧೋರಣೆ ಕೈ ಬಿಟ್ಟು ನ್ಯಾಯಯುತವಾಗಿ ನಮ್ಮ ಬೇಡಿಕೆ ಈಡೇರಿಸಬೇಕು. ಅಲ್ಲಿಯವರೆಗೂ ನಾವು ನಗರದ ಸ್ವಚ್ಛತೆ ಮಾಡಲ್ಲ' ಎಂದು ಎಚ್ಚರಿಸಿದರು.

ಇದನ್ನೂ ಓದಿ : Grihabhagya Scheme: ಮಂಜೂರಾದರೂ ಕೆಲ ಪೌರ ಕಾರ್ಮಿಕರಿಗೆ ಸಿಗದ ಗೃಹಭಾಗ್ಯ.. ಮನೆ ನಿರ್ಮಿಸುವಂತೆ ಮನವಿ

Last Updated : Sep 23, 2024, 6:54 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.