ETV Bharat / state

ಮೊದಲ ಬಾರಿ ವೋಟ್​ ಮಾಡಿದ ಅನುಭವ ಹೇಗಿತ್ತು? ಯುವ ಮತದಾರರ ಪ್ರತಿಕ್ರಿಯೆಗಳು - First Time Voters Reaction - FIRST TIME VOTERS REACTION

ಲೋಕಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ವೋಟ್‌ ಮಾಡಿದ ಯುವ ಮತದಾರರು ಹರ್ಷ ವ್ಯಕ್ತಪಡಿಸಿದರು.

ಚಿತ್ರದುರ್ಗ: ಮೊದಲ ಬಾರಿಗೆ ವೋಟ್​ ಮಾಡಿ ಸಂತಸ ಹಂಚಿಕೊಂಡ ಯುವತಿಯರು

author img

By ETV Bharat Karnataka Team

Published : Apr 26, 2024, 9:17 PM IST

Updated : Apr 26, 2024, 10:29 PM IST

ಯುವ ಮತದಾರರ ಪ್ರತಿಕ್ರಿಯೆಗಳು

ಚಿತ್ರದುರ್ಗ: ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಚಿತ್ರದುರ್ಗದಲ್ಲಿ ಯಶಸ್ವಿಯಾಗಿ ಮುಗಿದಿದೆ. ಇದೇ ಮೊದಲ ಬಾರಿಗೆ ಯುವ ಮತದಾರರು ತಮ್ಮ ಅಮೂಲ್ಯ ಮತ ಚಲಾಯಿಸಿ ಸಂತಸಪಟ್ಟರು.

ಮತದಾನದ ಮೂಲಕ ಒಳ್ಳೆಯ ಅಭ್ಯರ್ಥಿಯನ್ನು ಗೆಲ್ಲಿಸಿ: ಯುವ ಮತದಾರೆ ಅಪೂರ್ವ ಮಾತನಾಡಿ, "ಜವಾಬ್ದಾರಿಯುತ ಪ್ರಜೆಗಳಾಗಿ ನಾವು ಮತ ಚಲಾಯಿಸುವುದು ಬಹಳ ಮುಖ್ಯ. ನಾನು ರಜೆ ಪಡೆದು ಮತದಾನ ಮಾಡಲು ಬಂದಿದ್ದೇನೆ. ಮನೆಯಲ್ಲಿ ಕುಳಿತುಕೊಂಡು ನಾಯಕರು ಅದು ಮಾಡಿಲ್ಲ, ಇದು ಮಾಡಿಲ್ಲ ಎನ್ನುವ ಬದಲು ಮತದಾನದ ಮೂಲಕ ಒಳ್ಳೆಯ ಅಭ್ಯರ್ಥಿಯನ್ನು ಗೆಲ್ಲಿಸಿ, ಅವರಿಗೆ ಕೆಲಸ ಮಾಡಿಕೊಡಿ ಎಂದು ಪ್ರಶ್ನೆ ಮಾಡಬಹುದು" ಎಂದು ಹೇಳಿದರು.

ಯುವ ಮತದಾರರು ಪ್ರಜ್ಞಾವಂತರು: ಮತ್ತೋರ್ವ ಯುವ ಮತದಾರೆ ಅಶ್ವಿನಿ ಮಾತನಾಡಿ, "ನಾನು ಮೊದಲ ಬಾರಿಗೆ ಮತ ಚಲಾಯಿಸುತ್ತಿದ್ದು, ಮತದಾನ ಮಾಡುವ ಸರಿಯಾದ ಪ್ರಕ್ರಿಯೆ ನನಗೆ ತಿಳಿದಿಲ್ಲ. ಮೊದಲ ಬಾರಿಗೆ ವೋಟ್​ ಮಾಡುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಯುವ ಮತದಾರರು ಪ್ರಜ್ಞಾವಂತರಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಬೇಕು" ಎಂದರು.

ಹಿರಿಯ ಮತದಾರರು ಹೇಳಿದ್ದೇನು?: ಅನಂತ್ ಮೂರ್ತಿ ಎಂಬುವರು ಮಾತನಾಡಿ, "8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಚಿತ್ರದುರ್ಗದ ಲೋಕಸಭಾ ಕ್ಷೇತ್ರದಲ್ಲಿ ಮತದಾನ ನಡೆಯುತ್ತಿದೆ. ಬೇರೆ ಜಿಲ್ಲೆಯವರು ಇಲ್ಲಿಗೆ ಬಂದು ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಒಂದು ಬಾಟಲ್​ ಮದ್ಯ, ಹಣದಾಸೆಗೆ ಮತ ಹಾಕದೆ ಪಾರದರ್ಶಕವಾಗಿ ಮತ ಚಲಾಯಿಸಬೇಕು" ಎಂದು ಸಲಹೆ ನೀಡಿದರು.

ಪಾರ್ವತಿ ಎಂಬುವರು ಮಾತನಾಡಿ, "5 ವರ್ಷಕ್ಕೂಮ್ಮೆ ಬರುವ ಲೋಕಸಭಾ ಚುನಾವಣೆಯಲ್ಲಿ ಉತ್ತಮ ನಾಯಕನನ್ನು ಆರಿಸಿದರೆ ದೇಶ ಪ್ರಗತಿ ಸಾಧಿಸುತ್ತದೆ. ಮತದಾನ ಮಾಡುವುದು ನಮ್ಮ ಕರ್ತವ್ಯವಾಗಿದೆ. ಎಲ್ಲರೂ ತಪ್ಪದೇ ಮತದಾನ ಮಾಡಬೇಕು" ಎಂದು ಮನವಿ ಮಾಡಿದರು.

ಒಂದೊಂದು ಮತವೂ ಅತ್ಯಮೂಲ್ಯ: ಮತ್ತೊಂದೆಡೆ, ಹಾಸನದಲ್ಲಿ ಸುಪ್ರಿತ್ ಮತ್ತು ಸ್ಪೂರ್ತಿ ಎಂಬ ಸಹೋದರ-ಸಹೋದರಿ ಮೊದಲ ಬಾರಿಗೆ ಮತದಾನ ಮಾಡಿ ಹರ್ಷ ವ್ಯಕ್ತಪಡಿಸಿದರು. ಸ್ಪೂರ್ತಿ ಮಾತನಾಡುತ್ತಾ, "ನಾನು ಇದೇ ಮೊದಲ ಬಾರಿಗೆ ಮತದಾನ ಮಾಡುತ್ತಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ. ಪ್ರಜಾಪ್ರಭುತ್ವ ದೇಶದಲ್ಲಿ ಮತದಾನ ತುಂಬಾ ಮುಖ್ಯ. ಒಳ್ಳೆ ಲೀಡರ್ ಅಧಿಕಾರಕ್ಕೆ ಬರಬೇಕಾದರೆ ಒಂದೊಂದು ಮತವೂ ಕೂಡ ಅತ್ಯಮೂಲ್ಯ" ಎಂದು ತಿಳಿಸಿದರು.

ಇದನ್ನೂ ಓದಿ: ಫಿಲಿಪ್ಪಿನ್ಸ್​​ನಿಂದ ಚಿತ್ರದುರ್ಗಕ್ಕೆ ಬಂದು ಮೆಡಿಕಲ್ ವಿದ್ಯಾರ್ಥಿನಿ ಮತದಾನ; ವೋಟಿಂಗ್​ಗೆ ಯುಎಸ್​ನಿಂದ ಕೋಲಾರಕ್ಕೆ ಬಂದ ಮಹಿಳೆ - Young woman voting

Last Updated : Apr 26, 2024, 10:29 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.