ETV Bharat / state

ಈ ಬಾರಿ ಜನ ಬದಲಾವಣೆ ಬಯಸಿದ್ದಾರೆ, ಕಾಂಗ್ರೆಸ್​ಗೆ ಒಳ್ಳೆಯ ಜನಸ್ಪಂದನೆ ಇದೆ: ಪ್ರಿಯಾಂಕಾ ಜಾರಕಿಹೊಳಿ - Priyanka Jarakiholi - PRIYANKA JARAKIHOLI

ಐದು ಗ್ಯಾರಂಟಿ ಯೋಜನೆಗಳು, ನನ್ನ ತಂದೆ ಲೋಕೋಪಯೋಗಿ ಸಚಿವರಾಗಿ ಜಿಲ್ಲೆಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಜನರ ಮುಂದಿಟ್ಟು ಮತಯಾಚನೆ ಮಾಡುತ್ತೇನೆಂದು ಚಿಕ್ಕೋಡಿ ಕಾಂಗ್ರೆಸ್​ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು.

chikkodi-congress-candidate-priyanka-jarakiholi-interview
ಈ ಬಾರಿ ಜನ ಬದಲಾವಣೆ ಬಯಸುತ್ತಿದ್ದಾರೆ, ಕಾಂಗ್ರೆಸ್​ಗೆ ಒಳ್ಳೆಯ ಜನಸ್ಪಂದನೆ ಇದೆ: ಪ್ರಿಯಾಂಕಾ ಜಾರಕಿಹೊಳಿ
author img

By ETV Bharat Karnataka Team

Published : Apr 7, 2024, 9:42 PM IST

Updated : Apr 7, 2024, 9:57 PM IST

ಪ್ರಿಯಾಂಕಾ ಜಾರಕಿಹೊಳಿ

ಚಿಕ್ಕೋಡಿ(ಬೆಳಗಾವಿ): ಕಾಂಗ್ರೆಸ್​ಗೆ ಒಳ್ಳೆಯ ಜನಸ್ಪಂದನೆ ಇದೆ. ಎಲ್ಲರೂ ಈ ಬಾರಿ ಬದಲಾವಣೆ ಬಯಸುತ್ತಿದ್ದಾರೆ ಎಂದು ಚಿಕ್ಕೋಡಿ ಕಾಂಗ್ರೆಸ್​ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು. 'ಈಟಿವಿ ಭಾರತ್'​ ಜತೆಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಕೊಟ್ಟ ಐದು ಗ್ಯಾರಂಟಿ ಯೋಜನೆಗಳು, ಐದು ನ್ಯಾಯಗಳನ್ನು ಕೊಡುವುದಾಗಿ ರಾಹುಲ್​ ಗಾಂಧಿ ಮತ್ತು ಮಲ್ಲಿಕಾರ್ಜುನ್​ ಖರ್ಗೆ ಭರವಸೆ ನೀಡಿದ್ದಾರೆ. ನನ್ನ ತಂದೆ ಲೋಕೋಪಯೋಗಿ ಸಚಿವರಾಗಿ ಜಿಲ್ಲೆಯಲ್ಲಿ ಹಲವು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ನಾನು ಯುವ ನಾಯಕಿಯಾಗಿದ್ದೇನೆ. ಇದೆಲ್ಲವನ್ನೂ ಜನರ ಮುಂದಿಟ್ಟು ಈ ಬಾರಿಗೆ ನನಗೆ ಅವಕಾಶ ಮಾಡಿಕೊಡಬೇಕೆಂದು ಕೇಳುತ್ತೇನೆ ಎಂದರು.

ನಮಗೆ ರಾಜಕೀಯ ಹೊಸತಲ್ಲ, ಕಳೆದ 40 ವರ್ಷದಿಂದ ನಮ್ಮ ಕುಟುಂಬ ರಾಜಕೀಯ ಮಾಡಿಕೊಂಡು ಬಂದಿದೆ. ನಾನು ಗೆದ್ದರೆ ಮುಂದಿನ ಐದು ವರ್ಷ ಜನರ ಜತೆ ಸಂಪರ್ಕದಲ್ಲಿದ್ದು ಅವರ ಕುಂದು-ಕೊರತೆಗಳನ್ನು ಬಗೆಹರಿಸಿ, ಅಭಿವೃದ್ಧಿ ಕೆಲಸ ಮಾಡುತ್ತೇನೆ. ಕೈಗಾರಿಕೆ ಮತ್ತು ಕಾಲೇಜುಗಳನ್ನು ಸ್ಥಾಪಿಸಲು ಪ್ರಯತ್ನ ಮಾಡುತ್ತೇನೆ. ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರಿಗೆ ಅನುಕೂಲವಾಗಿದೆ. ಪ್ರತಿ ತಿಂಗಳು ಗೃಹಲಕ್ಷ್ಮಿಯ ಎರಡು ಸಾವಿರ ಹಣ ಅವರ ಖಾತೆಗೆ ಜಮೆಯಾಗುತ್ತಿದೆ. ಸುಮಾರು 90 ರಿಂದ 95% ರಷ್ಟು ಮಹಿಳೆಯರಿಗೆ ಇದರಿಂದ ಅನುಕೂಲವಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಹಾವೇರಿ: ಬಸವರಾಜ ಬೊಮ್ಮಾಯಿ ಪರ ಪುತ್ರನಿಂದ ಮತಯಾಚನೆ - Basavaraj Bommai

Last Updated : Apr 7, 2024, 9:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.