ETV Bharat / state

ಅಪಘಾತಕ್ಕೀಡಾದವರ ಆಪತ್ಬಾಂಧವ 'ಆಪತ್ಕಾಲಯಾನ ಸೇವೆ': ನೂತನ ಆಂಬ್ಯುಲೆನ್ಸ್​ಗಳ ಸೇವೆ ಹೇಗಿರಲಿದೆ? - Apatkalayana Ambulance

ರಾಜ್ಯದಲ್ಲಿ ಅಪಘಾತಕ್ಕೀಡಾದವರಿಗೆ ಆಪತ್ಬಾಂಧವನ ರೀತಿಯಲ್ಲಿ ಕಾರ್ಯ ನಿರ್ವಹಿಸುವ ನಿಟ್ಟಿನಲ್ಲಿ 'ಮುಖ್ಯಮಂತ್ರಿಗಳ ಆಪತ್ಕಾಲಯಾನ' ಎಂಬ ವಿಶೇಷ ಆಂಬ್ಯುಲೆನ್ಸ್ ಸೇವೆಗೆ ಚಾಲನೆ ಸಿಕ್ಕಿದೆ. ಈ ಆಂಬ್ಯುಲೆನ್ಸ್​ಗಳಲ್ಲಿನ ಸೌಲಭ್ಯಗಳೇನು? ಹಾಗೂ ಹೇಗೆ ಕಾರ್ಯನಿರ್ವಹಿಸಲಿವೆ? ಎಂಬ ಮಾಹಿತಿ ಇಲ್ಲಿದೆ.

apatkalayana ambulance
ಮುಖ್ಯಮಂತ್ರಿಗಳ ಆಪತ್ಕಾಲಯಾನ ಸೇವೆ ಅಂಬ್ಯುಲೆನ್ಸ್ (ಕರ್ನಾಟಕ ಆರೋಗ್ಯ ಇಲಾಖೆ)
author img

By ETV Bharat Karnataka Team

Published : Sep 23, 2024, 5:19 PM IST

ಬೆಂಗಳೂರು: ರಸ್ತೆ ಅಪಘಾತಕ್ಕೀಡಾದವರಿಗೆ ಗೋಲ್ಡನ್ ಅವರ್ (Golden Hour) ಒಳಗಾಗಿ ಚಿಕಿತ್ಸೆ ದೊರಕಿಸಿಕೊಡುವ ನಿಟ್ಟಿನಲ್ಲಿ 65 ನೂತನ ಆಂಬ್ಯುಲೆನ್ಸ್​​ಗಳ ಸೇವೆಗೆ ಇಂದು ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ.‌

ಸಾರಿಗೆ ಇಲಾಖೆ ಸಹಕಾರದೊಂದಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ರೋಡ್ ಸುರಕ್ಷತೆ ನಿಧಿಯಡಿ ಯೋಜನೆ ಜಾರಿಗೆ ತರುವಲ್ಲಿ ಯಶಸ್ವಿಯಾಗಿದ್ದು, ಮೊದಲ ಹಂತದಲ್ಲಿ 65 ಆಂಬ್ಯುಲೆನ್ಸ್​ಗಳನ್ನು ಸರ್ಕಾರಿ ಆಸ್ಪತ್ರೆಗಳಿಗೆ ಒದಗಿಸಿಕೊಡಲಾಗಿದೆ. ಸಾರಿಗೆ ಇಲಾಖೆ, ಗೃಹ, ಒಳಾಡಳಿತ ಇಲಾಖೆಗಳಿಂದ ಯೋಜನೆಗೆ ಸಹಕಾರ ದೊರೆತಿದೆ.

ಮುಖ್ಯಮಂತ್ರಿಗಳ ಆಪತ್ಕಾಲಯಾನ ಸೇವೆ ಆಂಬ್ಯುಲೆನ್ಸ್​ಗಳಿಗೆ ಚಾಲನೆ (ETV Bharat)

ಮುಂದಿನ ಸಾಲಿನಲ್ಲಿ ಎಲ್ಲ ತಾಲೂಕು ಆಸ್ಪತ್ರೆಗಳಿಗೆ ವಿಸ್ತರಿಸುವ ಭರವಸೆ: ಆಂಬ್ಯುಲೆನ್ಸ್​​ಗಳಿಗೆ ಸಿಎಂ ಚಾಲನೆ ನೀಡಿದ ಬಳಿಕ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ''ರಾಜ್ಯದಲ್ಲಿ ಪ್ರತಿವರ್ಷ 40 ಸಾವಿರ ಅಪಘಾತ ಪ್ರಕರಣಗಳು ನಡೆಯುತ್ತಿವೆ. ಸರಾಸರಿ 10 ಸಾವಿರ ಜನರು ಸಾವನ್ನಪ್ಪುತ್ತಿದ್ದಾರೆ. ಹೀಗಾಗಿ, ಅಪಘಾತಕ್ಕೆ ಒಳಗಾಗುವ ಜನರ ರಕ್ಷಣೆಗೆ ಪ್ರತ್ಯೇಕವಾಗಿ ಮುಖ್ಯಮಂತ್ರಿಗಳ ಹೆಸರಿನಲ್ಲೇ 'ಆಪತ್ಕಾಲಯಾನ' ಆಂಬ್ಯುಲೆನ್ಸ್​ಗಳ ಸೇವೆಯನ್ನು ಒದಗಿಸುತ್ತಿದ್ದೇವೆ. ಮುಂಬರುವ ವರ್ಷದಲ್ಲಿ ರಾಜ್ಯದ ಎಲ್ಲ ತಾಲೂಕು ಆಸ್ಪತ್ರೆಗಳಿಗೂ ಈ ಯೋಜನೆ ವಿಸ್ತರಿಸುವ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಮ್ಮ ಸರ್ಕಾರ ಬದ್ಧವಾಗಿದೆ'' ಎಂದು ಹೇಳಿದರು.

apatkalayana ambulance
ಮುಖ್ಯಮಂತ್ರಿಗಳ ಆಪತ್ಕಾಲಯಾನ ಸೇವೆ ಅಂಬ್ಯುಲೆನ್ಸ್ (ಕರ್ನಾಟಕ ಆರೋಗ್ಯ ಇಲಾಖೆ)

ಹೆಚ್ಚಿನ ಅಂಬ್ಯುಲೆನ್ಸ್ ಸೇವೆಗೆ ಸಾರಿಗೆ ಇಲಾಖೆಯಿಂದ ಅಗತ್ಯ ಸಹಕಾರ- ಸಚಿವ ರಾಮಲಿಂಗಾರೆಡ್ಡಿ: ಇದೇ ವೇಳೆ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ‌ ಮಾತನಾಡಿ, ''ಯೋಜನೆಗೆ ರಸ್ತೆ ಸುರಕ್ಷತಾ ನಿಧಿಯಡಿ ನೆರವು ಒದಗಿಸಲಾಗಿದೆ. ಇನ್ನೂ ಹೆಚ್ಚಿನ ಆಂಬ್ಯುಲೆನ್ಸ್​ಗಳನ್ನು ಒದಗಿಸುವ ನಿಟ್ಟಿನಲ್ಲಿ ಸಾರಿಗೆ ಇಲಾಖೆಯಿಂದ ಅಗತ್ಯ ಸಹಕಾರ ನೀಡುವುದಾಗಿ'' ಘೋಷಿಸಿದರು.

''ರಸ್ತೆ ಸಂಚಾರದ ಅಪಘಾತಗಳಲ್ಲಿ ಗಾಯಾಳುಗಳು ಹಾಗೂ ಸಾವು - ನೋವುಗಳನ್ನು ತಡೆಯುವ ನಿಟ್ಟಿನಲ್ಲಿ ರಸ್ತೆ ಸುರಕ್ಷತಾ ಪ್ರಾಧಿಕಾರ ರಚನೆಯಾಗಿದೆ. ಅಪಘಾತ ಪ್ರಕರಣಗಳಿಗಾಗಿಯೇ ಪ್ರತ್ಯೇಕ ಆಂಬ್ಯುಲೆನ್ಸ್​ಗಳನ್ನು ಆರೋಗ್ಯ ಇಲಾಖೆ ಒದಗಿಸಿರುವುದು ಅತ್ಯಂತ ಉತ್ತಮ ನಿರ್ಧಾರವಾಗಿದೆ. ರಾಜ್ಯಾದ್ಯಂತ ಯೋಜನೆ ವಿಸ್ತರಿಸಲು ಸಾರಿಗೆ ಇಲಾಖೆ ಸಂಪೂರ್ಣ ಸಹಕಾರ ನೀಡಲಿದೆ'' ಎಂದರು.

apatkalayana ambulances
ಆಪತ್ಕಾಲಯಾನ ಸೇವೆ ಅಂಬ್ಯುಲೆನ್ಸ್​ಗಳಿಗೆ ಸಿಎಂ ಚಾಲನೆ (ಕರ್ನಾಟಕ ಆರೋಗ್ಯ ಇಲಾಖೆ)

ಅಪಘಾತಕ್ಕೀಡಾದವರಿಗೆ ಆಪತ್ಬಾಂಧವನ ರೀತಿಯಲ್ಲಿ ಕಾರ್ಯನಿರ್ವಹಿಸಲಿರುವ ಈ ಆಂಬ್ಯುಲೆನ್ಸ್​ಗಳಲ್ಲಿ 26 ಅಡ್ವಾನ್ಸ್ ಲೈಫ್ ಸಪೋರ್ಟ್ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. 39 BLS ಆಂಬ್ಯುಲೆನ್ಸ್​ಗಳಿವೆ. ರಸ್ತೆ ಸಂಚಾರದಲ್ಲಿ ಹೆಚ್ಚು ಅಪಘಾತ ಸಂಭವಿಸುವ 65 ಬ್ಲಾಕ್ ಸ್ಪಾಟ್​​ಗಳನ್ನು ಗುರುತಿಸಲಾಗಿದೆ. ಅಂತಹ ಸ್ಥಳಗಳ ಹತ್ತಿರದಲ್ಲಿರುವ ತಾಲೂಕು ಹಾಗೂ ಜಿಲ್ಲಾಸ್ಪತ್ರೆಗಳಿಗೆ ಈ ಆಂಬ್ಯುಲೆನ್ಸ್​ಗಳನ್ನು ನೀಡಲಾಗಿದೆ.

apatkalayana ambulances
ಕಾರ್ಯಕ್ರಮದಲ್ಲಿ ಸಿಎಂ, ಇತರ ಸಚಿವರು (ಕರ್ನಾಟಕ ಆರೋಗ್ಯ ಇಲಾಖೆ)

ಆಂಬ್ಯುಲೆನ್ಸ್​ಗಳು ಹೇಗೆ ಕಾರ್ಯನಿರ್ವಹಿಸಲಿವೆ?:

  • ಹೆಚ್ಚು ಅಪಘಾತ ಸಂಭವಿಸುವ ಸ್ಥಳಗಳ ಸನಿಹದ ಆಸ್ಪತ್ರೆಗಳಲ್ಲಿ ಆಂಬ್ಯುಲೆನ್ಸ್​ಗಳು ತಂಗಲಿವೆ.
  • 65 ಹಾಟ್ ಸ್ಪಾಟ್​​ಗಳನ್ನ ಗುರುತಿಸಲಾಗಿದ್ದು, ಆ ಸ್ಥಳಗಳ ಹತ್ತಿರದ ತಾಲೂಕು ಆಸ್ಪತ್ರೆ ಹಾಗೂ ಜಿಲ್ಲಾಸ್ಪತ್ರೆಗಳಿಗೆ ಆಂಬ್ಯುಲೆನ್ಸ್ ಗಳನ್ನು ನೀಡಲಾಗಿದೆ.
  • ತುರ್ತು ಪರಿಸ್ಥಿತಿ ಸಂದರ್ಭದಲ್ಲಿ (ALS) ಅಡ್ವಾನ್ಸ್ ಲೈಫ್ ಸಪೋರ್ಟ್ ಆಂಬ್ಯುಲೆನ್ಸ್ ಸೇವೆ ಲಭ್ಯವಾಗಲಿದೆ.
  • ಜಿಲ್ಲಾಸ್ಪತ್ರೆಗಳ ಮಟ್ಟದಲ್ಲಿ ಚಿಕಿತ್ಸೆ ಅಗತ್ಯವಾದಲ್ಲಿ ಆರೋಗ್ಯ ಇಲಾಖೆಯ ಸ್ಟಾಫ್ ನರ್ಸ್ ಅನ್ನು ಆಂಬ್ಯುಲೆನ್ಸ್​ಗಳಿಗೆ ಡೆಪ್ಯೂಟ್ ಮಾಡಲಾಗುವುದು.
  • ವೆಂಟಿಲೇಟರ್ ಸಹಾಯದೊಂದಿಗೆ ಜಿಲ್ಲಾಸ್ಪತ್ರೆಗಳಿಗೆ ರೋಗಿಗಳನ್ನು ಕರೆದೊಯ್ದು ಚಿಕಿತ್ಸೆ ಕೊಡಿಸುವ ಸೌಲಭ್ಯ ಒದಗಿಸಲಾಗಿದೆ..
  • ಆಂಬ್ಯುಲೆನ್ಸ್​ಗಳು ಸುಸಜ್ಜಿತ ಉಪಕರಣಗಳು ಮತ್ತು ಔಷಧ ಹಾಗೂ ಉಪಭೋಗ್ಯ ವಸ್ತುಗಳನ್ನು ಹೊಂದಿರಲಿವೆ. ಈ ಪ್ರಕ್ರಿಯೆಯು ಅಪಘಾತಕ್ಕೆ ಒಳಗಾದ ವ್ಯಕ್ತಿಯ ಜೀವ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿವೆ. ಅಲ್ಲದೇ, ಸ್ಥಳಾಂತರಕ್ಕೆ ರೋಗಿಗಳ ಸ್ವಂತ ಹಣದ ವ್ಯಯವನ್ನು ತಪ್ಪಿಸಲಿದೆ.

ಇದನ್ನೂ ಓದಿ: ಅತ್ಯಾಧುನಿಕ 65 ಆಂಬ್ಯುಲೆನ್ಸ್​ ಲೋಕಾರ್ಪಣೆ: ಸಂಚಾರ ನಿಯಮ ಪಾಲಿಸದವರ ಲೈಸೆನ್ಸ್ ರದ್ದು ಮಾಡಿ ಎಂದ ಸಿಎಂ - CM inaugurates New Ambulances

ETV Bharat Logo

Copyright © 2024 Ushodaya Enterprises Pvt. Ltd., All Rights Reserved.