ETV Bharat / state

ಚನ್ನಪಟ್ಟಣ ಉಪಕದನ ಕುತೂಹಲ: 2 ದಶಕಗಳಿಂದ ಚನ್ನಪಟ್ಟಣ ಚುನಾವಣಾ ರಾಜಕೀಯದಲ್ಲಿ ಯಾರ ಪ್ರಾಬಲ್ಯ ಹೇಗಿದೆ ನೋಡಿ

ರಾಜ್ಯದ ಕುತೂಹಲ ಕೆರಳಿಸಿರುವ ಚನ್ನಪಟ್ಟಣ ವಿಧಾನಸಭೆ ಉಪಚುನಾವಣೆ ರಾಜಕೀಯದಲ್ಲಿ ಯಾರ ಪ್ರಾಬಲ್ಯ ಎಷ್ಟಿದೆ. ಇಲ್ಲಿದೆ ಸಂಪೂರ್ಣ ಮಾಹಿತಿ.

ಚನ್ನಪಟ್ಟಣ ಉಪಕದನ ಕುತೂಹಲ
ಚನ್ನಪಟ್ಟಣ ಉಪಕದನ ಕುತೂಹಲ (ETV Bharat)
author img

By ETV Bharat Karnataka Team

Published : Oct 26, 2024, 12:20 PM IST

ಬೆಂಗಳೂರು: ರಾಜ್ಯದ ಮೂರು ಕ್ಷೇತ್ರಗಳ ಉಪಸಮರದಲ್ಲಿ ಚನ್ನಪಟ್ಟಣದ ಕದನ ಕುತೂಹಲ ತೀವ್ರಗೊಂಡಿದೆ. ಸಿ.ಪಿ.ಯೋಗೇಶ್ವರ್​ ಕಾಂಗ್ರೆಸ್​ನಿಂದ ಹಾಗೂ ನಿಖಿಲ್​ ಕುಮಾರಸ್ವಾಮಿ ಎನ್​ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಮೂಲಕ ಜಿದ್ದಾಜಿದ್ದಿನ ರಣಕಣ ಏರ್ಪಟ್ಟಿದೆ. ಎರಡು ದಶಕಗಳಿಂದ ಚನ್ನಪಟ್ಟಣ ಚುನಾವಣಾ ರಾಜಕೀಯದಲ್ಲಿ ಯಾರ ಪ್ರಾಬಲ್ಯ ಎಷ್ಟಿದೆ ಎಂಬ ವರದಿ ಇಲ್ಲಿದೆ.

ಚನ್ನಪಟ್ಟಣ ಉಪಸಮರ. ರಾಜ್ಯದ ಕುತೂಹಲ ಕೆರಳಿಸಿರುವ ಅಖಾಡ. ನ.13ರಂದು ರಾಜ್ಯದ ಮೂರು ಕ್ಷೇತ್ರಗಳಾದ ಚನ್ನಪಟ್ಟಣ, ಶಿಗ್ಗಾಂವಿ ಮತ್ತು ಸಂಡೂರಲ್ಲಿ ಉಪಚುನಾವಣೆ ನಡೆಯಲಿದೆ. ಈ ಮೂರು ಉಪಸಮರದಲ್ಲಿ ಅತಿ ಹೆಚ್ಚು ಕುತೂಹಲ ಕೆರಳಿಸಿರುವುದು ಚನ್ನಪಟ್ಟಣ ಕ್ಷೇತ್ರ. ಚನ್ನಪಟ್ಟಣ ರಣಕಣದಲ್ಲಿ ಕೊನೆ ಕ್ಷಣಕ್ಕೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿ ಅಭ್ಯರ್ಥಿಯಾಗಿರುವ ಸಿ.ಪಿ.ಯೋಗೇಶ್ವರ್ ಹಾಗೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಎನ್​ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಹೀಗಾಗಿ ಕ್ಷೇತ್ರದಲ್ಲಿ ರಣ ರೋಚಕ ಏರ್ಪಟ್ಟಿದೆ. ಡಿ.ಕೆ. ಬ್ರದರ್ಸ್ ಹಾಗೂ ಹೆಚ್​ಡಿಕೆ ಮಧ್ಯೆ ವೈಯ್ಯಕ್ತಿಕ ಹಾಗೂ ರಾಜಕೀಯ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿರುವುದರಿಂದ ಚನ್ನಪಟ್ಟಣ ಕ್ಷೇತ್ರದ ಮೇಲೆ ರಾಜ್ಯದ ಜನರ ಚಿತ್ತ ನೆಟ್ಟಿದೆ.

AE – Assembly Elections, PE – Parliament Elections,ABE- Assembly by ElectionsWinner, Runner and Margin
ಚನ್ನಪಟ್ಟಣ ಕ್ಷೇತ್ರದ ಅಂಕಿ- ಅಂಶ , ಗೆಲುವು ಸಾಧಿಸಿದ ಅಭ್ಯರ್ಥಿಗಳ ಪಟ್ಟಿ (ETV Bharat)

ಚನ್ನಪಟ್ಟಣದಲ್ಲಿ ಯಾರ ಪ್ರಾಬಲ್ಯ: ಚನ್ನಪಟ್ಟಣ ಕ್ಷೇತ್ರ ಜೆಡಿಎಸ್​ ಪ್ರಾಬಲ್ಯದ ಕ್ಷೇತ್ರವಾಗಿದೆ. ಈ ಕ್ಷೇತ್ರದಲ್ಲಿ ಸಿ.ಪಿ.ಯೋಗೇಶ್ವರ್ ವೈಯಕ್ತಿಕ ವರ್ಚಸ್ಸಿನೊಂದಿಗೆ ತಮ್ಮದೇ ಪ್ರಾಬಲ್ಯ ಹೊಂದಿದ್ದಾರೆ. ಚನ್ನಪಟ್ಟಣ ಕ್ಷೇತ್ರದಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿ ಪ್ರಾಬಲ್ಯ ಅಷ್ಟಕಷ್ಟೇ. ಹೀಗಾಗಿ ಚನ್ನಪಟ್ಟಣ ಕ್ಷೇತ್ರ ಜೆಡಿಎಸ್ ಹಾಗೂ ವೈಯ್ಯಕ್ತಿಕವಾಗಿ ಸಿ.ಪಿ.ಯೋಗೇಶ್ವರ್ ನಡುವಣ ಜಿದ್ದಾಜಿದ್ದಿನ ರಣಕಣವಾಗಿದೆ. ಹೆಚ್.ಡಿ. ಕುಮಾರಸ್ವಾಮಿ ತಮ್ಮ ಕ್ಷೇತ್ರವನ್ನು ಉಳಿಸಿಕೊಳ್ಳುವ ಕಸರತ್ತಿನಲ್ಲಿದ್ದರೆ, ಡಿ.ಕೆ. ಬ್ರದರ್ಸ್ ಕಸಿದುಕೊಳ್ಳುವ ತವಕದಲ್ಲಿದ್ದಾರೆ.

ಪಕ್ಷವಾರು ಮತಗಳ ಫಲಿತಾಂಶ ಹೀಗಿದೆ.
ಪಕ್ಷವಾರು ಮತಗಳ ಫಲಿತಾಂಶ ಹೀಗಿದೆ. (ETV Bharat)

ಆದರೆ, ಕೊನೆ ಘಳಿಗೆಯಲ್ಲಿ ಸಿ.ಪಿ. ಯೋಗೇಶ್ವರ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿ ಆಭ್ಯರ್ಥಿಯಾಗಿರುವುದು, ಇತ್ತ ಹೆಚ್​​ಡಿಕೆ ತಮ್ಮ ಪುತ್ರನನ್ನೇ ಕಣಕ್ಕಿಳಿಸಿರುವುದು ಕ್ಷೇತ್ರದ ರಣರೋಚಕತೆ ಇಮ್ಮಡಿಗೊಳಿಸಿದೆ. ಅಷ್ಟಕ್ಕೂ ಕದನ ಕುತೂಹಲ ಕೆರಳಿಸಿರುವ ಚನ್ನಪಟ್ಟಣ ಕ್ಷೇತ್ರದಲ್ಲಿ ಎರಡು ದಶಕಗಳಿಂದ ಚುನಾವಣಾ ರಾಜಕೀಯದಲ್ಲಿ ಯಾರದ್ದು ಪಾಬಲ್ಯ ಎಷ್ಟಿದೆ ಎಂಬ ಸ್ವಾರಸ್ಯಕರ ಮಾಹಿತಿ ಇಲ್ಲಿದೆ.

2023ರ ವಿಧಾನಸಭೆ ಚುನಾವಣೆಯ ಫಲಿತಾಂಶ
2023ರ ವಿಧಾನಸಭೆ ಚುನಾವಣೆಯ ಫಲಿತಾಂಶ (ETV Bharat)

ಕ್ಷೇತ್ರದಲ್ಲಿ ಸಿ.ಪಿ.ಯೋಗೇಶ್ವರ್ ಪ್ರಾಬಲ್ಯ: ಸಿ.ಪಿ.ಯೋಗೇಶ್ವರ್​ ಚನ್ನಪಟ್ಟಣದಿಂದ ಐದು ಬಾರಿ ಶಾಸಕರಾಗಿ ಚುನಾಯಿತರಾಗಿದ್ದಾರೆ. ಒಕ್ಕಲಿಗ ಪ್ರಾಬಲ್ಯದ ಕ್ಷೇತ್ರದಲ್ಲಿ ಸಿ.ಪಿ. ಯೋಗೇಶ್ವರ್ ತಮ್ಮದೇ ವರ್ಚಸ್ಸು ಬೆಳೆಸಿಕೊಂಡಿದ್ದಾರೆ. ತಮ್ಮದೇ ಮತ ಬ್ಯಾಂಕ್​ ಹೊಂದಿರುವ ಸಿ.ಪಿ.ಯೋಗೇಶ್ವರ್​ ಚನ್ನಪಟ್ಟಣ ಕ್ಷೇತ್ರದಲ್ಲಿ ಯಾವತ್ತೂ ಬಲಾಢ್ಯರಾಗಿದ್ದಾರೆ. 1999ರಲ್ಲಿ ಮೊದಲ ಬಾರಿಗೆ ಸಿ.ಪಿ. ಯೋಗೇಶ್ವರ್​ ಪಕ್ಷೇತರರಾಗಿ ಗೆದ್ದು, ಚುನಾವಣಾ ರಾಜಕೀಯ ಪ್ರವೇಶಿಸಿದ್ದರು. 50,716 ಮತಗಳಿಸಿ 18,828 ಮತಗಳ ಅಂತರದಲ್ಲಿ ಗೆಲುವು ಸಾಧಿಸುವ ಅವರು ಶೇ 46.01ರಷ್ಟು ಮತ ಪಾಲು ಪಡೆದುಕೊಂಡಿದ್ದರು. 2004ರ ಚುನಾವಣೆಯಲ್ಲಿ ಕಾಂಗ್ರೆಸ್ ಸೇರ್ಪಡೆಯಾಗುವ ಸಿ.ಪಿ.ಯೋಗೇಶ್ವರ್ 64,162 ಮತಗಳಿಸಿ 16,169 ಅಂತರದಲ್ಲಿ ಮತ್ತೆ ಗೆಲುವು ಸಾಧಿಸುತ್ತಾರೆ. ಕ್ಷೇತ್ರದಲ್ಲಿ ಸುಮಾರು ಶೇ 53.25ರಷ್ಟು ಮತ ಪಡೆದಿದ್ದರು.

position wise assembly election
ಸ್ಥಾನವಾರು ವಿಧಾನಸಭೆ ಚುನಾವಣೆ (ETV Bharat)

2008ರಲ್ಲಿ ನಡೆದ ಚುನಾವಣೆಯಲ್ಲೂ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಿ.ಪಿ.ಯೋಗೇಶ್ವರ್ 69,356 ಮತಗಳಿಸಿ ಹ್ಯಾಟ್ರಿಕ್ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದರು. ಸುಮಾರು ಶೇ 48.31ರಷ್ಟು ಮತಪ್ರಮಾಣ ಪಡೆದಿದ್ದರು. 2009ರಲ್ಲಿ ಆಪರೇಷನ್ ಕಮಲದಿಂದ ಕಾಂಗ್ರೆಸ್ ತೊರೆದು ಸಿ.ಪಿ.ಯೋಗೇಶ್ವರ್ ಬಿಜೆಪಿ ಸೇರ್ಪಡೆಯಾಗುತ್ತಾರೆ. ಆಗ ನಡೆದ ಉಪಚುನಾವಣೆಯಲ್ಲಿ ಸಿ.ಪಿ.ಯೋಗೇಶ್ವರ್ ಜೆಡಿಎಸ್ ಅಭ್ಯರ್ಥಿ ಎದುರು ಬಿಜೆಪಿಯಿಂದ 2,282 ಮತಗಳ ಅಂತರದಿಂದ ಸೋಲು ಕಾಣುತ್ತಾರೆ. 2011ರಲ್ಲಿ ಆಪರೇಷನ್ ಕಮಲದಿಂದ ಚನ್ನಪಟ್ಟಣ ಜೆಡಿಎಸ್ ಶಾಸಕ ರಾಜೀನಾಮೆ ನೀಡುತ್ತಾರೆ. ಬಳಿಕ 2011ರಲ್ಲಿ ಮತ್ತೆ ಉಪ ಚುನಾವಣೆ ನಡೆಯುತ್ತದೆ. ಆಗ ಸಿ.ಪಿ.ಯೋಗೇಶ್ವರ್ ಬಿಜೆಪಿ ಅಭ್ಯರ್ಥಿಯಾಗಿ 75,275 ಮತಗಳಿಂದ ಗೆಲುವು ಸಾಧಿಸುತ್ತಾರೆ. 2013ರ ಚುನಾವಣೆಯಲ್ಲಿ ಸಿ.ಪಿ.ಯೋಗೇಶ್ವರ್ ಎಸ್​ಪಿಯಿಂದ ಸ್ಪರ್ಧಿಸಿ 80,099 ಮತಗಳಿಸಿ ಗೆಲುವು ಜಯ ಸಾಧಿಸಿದ್ದರು. ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ ಅವರನ್ನು ಸೋಲಿಸಿದ್ದರು. ಆಗ ಅವರು ಕ್ಷೇತ್ರದಲ್ಲಿ ಶೇ 47.53ರಷ್ಟು ಮತ ಗಳಿಸಿದ್ದರು.

ಆದರೆ, 2018ರಲ್ಲಿ ಸಿ.ಪಿ.ಯೋಗೇಶ್ವರ್ ಬಿಜೆಪಿಗೆ ಮರು ಸೇರ್ಪಡೆಯಾಗಿ, 2018ರ ವಿಧಾನಸಭೆ ಚುನಾವಣೆಯಿಂದೀಚೆಗೆ ಸಿ.ಪಿ.ಯೋಗೇಶ್ವರ್ ಚನ್ನಪಟ್ಟಣ ಕ್ಷೇತ್ರದಲ್ಲಿ ಗೆಲುವು ಸಿಕ್ಕಿಲ್ಲ. 2018ರಲ್ಲಿ 21,530 ಮತಗಳ ಅಂತರದಿಂದ ಸೋಲು ಕಾಣುತ್ತಾರೆ. 2023ರಲ್ಲೂ ಬಿಜೆಪಿ ಅಭ್ಯರ್ಥಿಯಾಗಿ 15,915 ಮತಗಳ ಅಂತರದಲ್ಲಿ ಪರಾಭವಗೊಳ್ಳುತ್ತಾರೆ.

ಕ್ಷೇತ್ರದಲ್ಲಿ ಜೆಡಿಎಸ್​ ಪಾರುಪತ್ಯ: ಚನ್ನಪಟ್ಟಣ ಕ್ಷೇತ್ರ ಸದ್ಯ ಜೆಡಿಎಸ್​ನ ಭದ್ರಕೋಟೆ. ಹೆಚ್.ಡಿ. ಕುಮಾರಸ್ವಾಮಿ ಚನ್ನಪಟ್ಟಣ ಎಂಟ್ರಿ ಬಳಿಕ ಸಿ.ಪಿ.ಯೋಗೇಶ್ವರ್​ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕಿದ್ದಾರೆ. 2018ರಲ್ಲಿ ಹೆಚ್.ಡಿ.ಕುಮಾರಸ್ವಾಮಿ ಚನ್ನಪಟ್ಟಣ ಚುನಾವಣಾ ಅಖಾಡಕ್ಕೆ ಇಳಿಯುತ್ತಾರೆ. 2018ರ ಚುನಾವಣೆಯಲ್ಲಿ ಹೆಚ್.ಡಿ.ಕುಮಾರಸ್ವಾಮಿ 87,995 ಮತಗಳೊಂದಿಗೆ ಗೆಲುವು ಸಾಧಿಸುತ್ತಾರೆ. ಶೇ 46.83ರಷ್ಟು ಮತ ಪಾಲು ಪಡೆದು ಸಿ.ಪಿ.ಯೋಗೇಶ್ವರ್ ರನ್ನು ಪರಭಾವಗೊಳಿಸಿದ್ದರು. ಅದೇ 2023 ರಲ್ಲೂ ಹೆಚ್.ಡಿ.ಕುಮಾರಸ್ವಾಮಿ ಸಿ.ಪಿ.ಯೋಗೇಶ್ವರ್ ವಿರುದ್ಧ 96,592 ಮತಗಳಿಸಿ ಗೆಲುವು ಸಾಧಿಸಿದ್ದರು. ಒಟ್ಟು ಶೇ 49.11ರಷ್ಟು ಮತ ಪಡೆದಿದ್ದರು ಕುಮಾರಸ್ವಾಮಿ.

1999ರಲ್ಲಿ ಜೆಡಿಎಸ್ 16,269 ಮತಗಳಿಸಿ ಮೂರನೇ ಸ್ಥಾನಗಳಿಸಿರುತ್ತೆ. ಆಗ ಜೆಡಿಎಸ್​​ ಒಟ್ಟು ಶೇ 14.76ರಷ್ಟು ಮತ ಪ್ರಮಾಣ ಹೊಂದಿತ್ತು. 2004ರ ಚುನಾವಣೆಯಲ್ಲಿ ಜೆಡಿಎಸ್ ಕ್ಷೇತ್ರದಲ್ಲಿ ತನ್ನ ಬಲವನ್ನು ವೃದ್ಧಿಸಿಕೊಳ್ಳುತ್ತದೆ. ಜೆಡಿಎಸ್ ಎಂ.ಸಿ.ಅಶ್ವಥ್ 47,993 ಮತಗಳಿಸಿ, ಎರಡನೇ ಅತಿ ಹೆಚ್ಚು ಮತ ಗಳಿಸಿದ ಅಭ್ಯರ್ಥಿಯಾಗಿ ಹೊರಹೊಮ್ಮುತ್ತಾರೆ. 2008ರ ಚುನಾವಣೆಯಲ್ಲಿ ಜೆಡಿಎಸ್ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಸಿ.ಪಿ.ಯೋಗೇಶ್ವರ್​ಗೆ ಪ್ರಬಲ ಪೈಪೋಟಿ ನೀಡುತ್ತೆ ಜಾತ್ಯತೀತ ಜನತಾದಳ. ಜೆಡಿಎಸ್ ಅಭ್ಯರ್ಥಿ ಎಂ.ಸಿ ಅಶ್ವತ್ಥ್ ಆಗ 64,426 ಮತಗಳಿಸಿದ್ದರು. ಒಟ್ಟು ಶೇ 44.88ರ ಮತ ಪ್ರಮಾಣ ಪಡೆದುಕೊಂಡಿದ್ದರು. 2009ರಲ್ಲಿ ನಡೆಯುವ ಚನ್ನಪಟ್ಟಣ ಉಪಚುನಾವಣೆಯಲ್ಲಿ ಜೆಡಿಎಸ್ ಮೊದಲ ಗೆಲುವು ಸಾಧಿಸಿತ್ತು.

ಸಿ.ಪಿ.ಯೋಗೇಶ್ವರ್ ಅವ​ರನ್ನು 2,282 ಅಂತರದಲ್ಲಿ ಸೋಲಿಸುತ್ತೆ. 2011ರಲ್ಲಿ ಆಪರೇಷನ್ ಕಮಲದಿಂದ ಮತ್ತೆ ಕ್ಷೇತ್ರದಲ್ಲಿ ಉಪಚುನಾವಣೆ ನಡೆದು, ಜೆಡಿಎಸ್ ಸೋಲು ಕಾಣುತ್ತದೆ. ಜೆಡಿಎಸ್ ಎಸ್​​ಐ ನಾಗರಾಜು 57,472 ಮತಗಳಿಸುತ್ತಾರೆ. ಜೆಡಿಎಸ್ ಒಟ್ಟು ಶೇ 38.63ರಷ್ಟು ಮತ ಪ್ರಮಾಣ ಪಡೆಯುತ್ತೆ. 2013ರಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಅನಿತಾ ಕುಮಾರಸ್ವಾಮಿ ಸ್ಪರ್ಧಿಸಿ, 73,635 ಮತಗಳಿಸಿ ಸೋಲು ಕಾಣುತ್ತಾರೆ. ಅಂದು ಜೆಡಿಎಸ್ ಶೇ 43.70ರಷ್ಟು ಮತಗಳನ್ನು ಪಡೆಯುವ ಮೂಲಕ ಮತಗಳ ಪ್ರಮಾಣವನ್ನು ಹೆಚ್ಚಿಸಿಕೊಂಡಿತ್ತು. 2018 ರಿಂದೀಚೆಗೆ ಹೆಚ್.ಡಿ.ಕುಮಾರಸ್ವಾಮಿ ಎಂಟ್ರಿಯೊಂದಿಗೆ ಚನ್ನಪಟ್ಟಣ ಜೆಡಿಎಸ್ ಭದ್ರಕೋಟೆಯಾಗಿ ಉಳಿದಿದೆ.

ಕ್ಷೇತ್ರದಲ್ಲಿ ಕಾಂಗ್ರೆಸ್ ಬಲ ಸೀಮಿತ: ಚನ್ನಪಟ್ಟಣದಲ್ಲಿ ಕಾಂಗ್ರೆಸ್​ ಪಕ್ಷದ ಪ್ರಾಬಲ್ಯ ಸೀಮಿತವಾಗಿದೆ. ಸಿ.ಪಿ.ಯೋಗೇಶ್ವರ್​ ಇದ್ದಾಗ ಕ್ಷೇತ್ರವನ್ನು ತನ್ನ ಕೈವಶದಲ್ಲಿರಿಸಿಕೊಂಡಿತ್ತು. 2004ರ ಚುನಾವಣೆಯಲ್ಲಿ ಸಿ.ಪಿ.ಯೋಗೇಶ್ವರ್ ಅಭ್ಯರ್ಥಿಯಾಗಿ 64,162 ಮತಗಳೊಂದಿಗೆ ಹಾಗೂ 2008ರಲ್ಲಿ 69,356 ಮತ ಪಡೆದು ಗೆಲುವು ಸಾಧಿಸಿದ್ದರು. ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್ ತೊರೆದ ಬಳಿಕ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಾಬಲ್ಯ ಕುಸಿಯುತ್ತಾ ಬಂತು. 2011ರ ಉಪ ಚುನಾವಣೆಯ ಬಳಿಕ ನಡೆದ ಎಲ್ಲಾ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಕ್ಷೇತ್ರದಲ್ಲಿ ಮೂರನೇ ಸ್ಥಾನಕ್ಕೆ ತೃಪ್ತಿಪಡುತ್ತಿದೆ.‌ 2013ರ ಚುನಾವಣೆಯಲ್ಲಿ ಕಾಂಗ್ರೆಸ್ ಕ್ಷೇತ್ರದಲ್ಲಿ ಕೇವಲ 8,134 ಮತಗಳೊಂದಿಗೆ ಶೇ4.83ರಷ್ಟು ವೋಟ್​ಗಳನ್ನಷ್ಟೇ ಪಡೆದುಕೊಂಡಿತ್ತು.

2018ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹೆಚ್‌.ಎಂ.ರೇವಣ್ಣ 30,208 ಮತಗಳಿಸಿ, ಮತ ಪ್ರಮಾಣ ಶೇ 15.98ಕ್ಕೆ ಹೆಚ್ಚಿಸಿದ್ದರು. 2023ರಲ್ಲಿ ಕಾಂಗ್ರೆಸ್ 15,374 ಮತಗಳಿಸಿ ಶೇ 7.77ಕ್ಕೆ ಕುಸಿತ ಕಂಡಿತ್ತು. ಆದರೆ, ಲೋಕಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್ ಚನ್ನಪಟ್ಟಣ ಕ್ಷೇತ್ರದಲ್ಲಿ ಆಶಾದಾಯಕ ಫಲಿತಾಂಶ ಪಡೆಯುತ್ತಿದೆ. 2014ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್​​ ಅವರಿಗೆ ಕ್ಷೇತ್ರದಲ್ಲಿ 81,224 ಮತಗಳು ಲಭಿಸಿತ್ತು.‌ ಅದೇ 2019ರ ಲೋಕಸಮರದಲ್ಲಿ ಕಾಂಗ್ರೆಸ್ ಕ್ಷೇತ್ರದಲ್ಲಿ ಒಟ್ಟು 98,350 ಮತ ಪಡೆದುಕೊಂಡಿತ್ತು. ಅದೇ 2024ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಕ್ಷೇತ್ರದಲ್ಲಿ 85,357 ಮತ ಗಳಿಸಿತ್ತು.‌

ಕ್ಷೇತ್ರದಲ್ಲಿ ಬಿಜೆಪಿ ಬಲ ಅಷ್ಟಕಷ್ಟೇ: ಇತ್ತ ಕ್ಷೇತ್ರದಲ್ಲಿ ಬಿಜೆಪಿಯ ಬಲವೂ ಅಷ್ಟಕಷ್ಟೇ ಆಗಿದೆ. ಸಿ.ಪಿ.ಯೋಗೇಶ್ವರ್ ಬಿಜೆಪಿ ಸೇರ್ಪಡೆಯಾದ ಬಳಿಕ ಕ್ಷೇತ್ರದಲ್ಲಿ ಉತ್ತಮ ಪ್ರದರ್ಶನ ತೋರಿದೆ. ಅಂದರೆ ಸಿ.ಪಿ. ಯೋಗೇಶ್ವರ್ ವರ್ಚಸ್ಸು ಬಿಜೆಪಿಗೆ ಮತ ನೀಡುತ್ತಿತ್ತು. ಸಿ.ಪಿ.ಯೋಗೇಶ್ವರ್ ರಹಿತ ಕ್ಷೇತ್ರದಲ್ಲಿ ಬಿಜೆಪಿ ಮತಗಳಿಕೆ ಅತ್ಯಲ್ಪವಾಗಿದೆ. 1999ರ ಚುನಾವಣೆಯಲ್ಲಿ ಬಿಜೆಪಿ ಕ್ಷೇತೃದಲ್ಲಿ 11,350 ಮತಗಳನ್ನು ಪಡೆದುಕೊಂಡಿತ್ತು. ಒಟ್ಟು ಶೇ 10.30ರಷ್ಟು ಮತ ಪಾಲು ಹೊಂದಿತ್ತು. 2004ರಲ್ಲಿ ಬಿಜೆಪಿ ಕೇವಲ 5,698 ಮತಗಳನ್ನು ಪಡೆದುಕೊಂಡಿತ್ತು. ಅದೇ 2008ರಲ್ಲಿ ಚುನಾವಣೆಯಲ್ಲಿ ಬಿಜೆಪಿ ಕೇವಲ 3434 ಮತಗಳಿಸಿತ್ತು‌. ಅಂದರೆ ಕೇವಲ ಶೇ 2.39 ಮತ ಪ್ರಮಾಣ ಹೊಂದಿತ್ತು.

2011ರಲ್ಲಿ ನಡೆದ ಉಪಚುನಾವಣೆಯಲ್ಲಿ ಸಿ.ಪಿ.ಯೋಗೇಶ್ವರ್ ಬಿಜೆಪಿ ಅಭ್ಯರ್ಥಿಯಾದ ಕಾರಣ ಬಿಜೆಪಿ ಮೊದಲ ಗೆಲುವು ಸಾಧಿಸಿತ್ತು. 2013ರಲ್ಲಿ ಬಿಜೆಪಿ ಕ್ಷೇತ್ರದಲ್ಲಿ ಕೇವಲ 1,609 ಮತಗಳಿಸಿ, 0.95ರಷ್ಟು ಮತ ಪಾಲು ಹೊಂದುವಂತಾಯಿತು. 2018ರ ಚುನಾವಣೆ ವೇಳೆ ಸಿ.ಪಿ.ಯೋಗೇಶ್ವರ್ ಬಿಜೆಪಿ ಅಭ್ಯರ್ಥಿಯಾದ ಹಿನ್ನೆಲೆ ಕ್ಷೇತ್ರದಲ್ಲಿ ಬಿಜೆಪಿ ತನ್ನ ಮತಗಳಿಕೆಯನ್ನು ಹೆಚ್ಚಿಸಿಕೊಂಡಿತ್ತು. 2018ರಲ್ಲಿ ಸಿ.ಪಿ.ಯೋಗೇಶ್ವರ್ ಅಭ್ಯರ್ಥಿಯಾಗಿ 66,465 ( ಶೇ 35.16%) ಮತಗಳಿಸಿದ್ದರು. 2023ರಲ್ಲಿ ಸಿ.ಪಿ.ಯೋಗೇಶ್ವರ್ ಅಭ್ಯರ್ಥಿಯಾಗಿದ್ದರಿಂದ ಬಿಜೆಪಿ ಕ್ಷೇತ್ರದಲ್ಲಿ 80,677 (ಶೇ 40.79 ) ಮತ ಪಡೆದುಕೊಂಡಿತ್ತು.

ಇದನ್ನೂ ಓದಿ: ಚನ್ನಪಟ್ಟಣ ಉಪಚುನಾವಣೆ: ₹113 ಕೋಟಿ ಆಸ್ತಿ ಘೋಷಿಸಿದ ನಿಖಿಲ್‌ ಕುಮಾರಸ್ವಾಮಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.