ETV Bharat / state

ಚಾಮರಾಜನಗರ: ರೈತ, ಅರಣ್ಯ, ಸಖಿ ಸೇರಿದಂತೆ ಹಲವು ವಿಶೇಷ ಮತಗಟ್ಟೆ: ಮೊದಲ ಬಾರಿಗೆ ಹಕ್ಕು ಚಲಾಯಿಸಲಿದ್ದಾರೆ 36 ಸಾವಿರ ವೋಟರ್ಸ್ - Chamarajanagar Constituency - CHAMARAJANAGAR CONSTITUENCY

ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 36 ಸಾವಿರ ಮತದಾರರು ಮೊದಲ ಬಾರಿಗೆ ಮತ ಚಲಾಯಿಸಲಿದ್ದಾರೆ.

ವಿಶೇಷ ಮತಗಟ್ಟೆ ಸ್ಥಾಪನೆ
ವಿಶೇಷ ಮತಗಟ್ಟೆ ಸ್ಥಾಪನೆ
author img

By ETV Bharat Karnataka Team

Published : Apr 24, 2024, 10:47 AM IST

ಚಾಮರಾಜನಗರ: ಕರ್ನಾಟಕ ರಾಜ್ಯದಲ್ಲಿ ಮೊದಲ ಹಂತದ ಮತದಾನಕ್ಕೆ ಒಂದು ದಿನ ಮಾತ್ರ ಬಾಕಿ ಇದ್ದು, ಅಂತಿಮ ಹಂತದ ಸಿದ್ಧತೆಗಳನ್ನು ಚಾಮರಾಜನಗರ ಜಿಲ್ಲಾಡಳಿತ ನಡೆಸಿದೆ. ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 17,78,310 ಮಂದಿ ಮತದಾರರು ಇದ್ದಾರೆ ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ತಿಳಿಸಿದ್ದಾರೆ.

ವಿಶೇಷ ಮತಗಟ್ಟೆಗಳ ಸ್ಥಾಪನೆ
ವಿಶೇಷ ಮತಗಟ್ಟೆಗಳ ಸ್ಥಾಪನೆ

ಮಂಗಳವಾರ ಚುನಾವಣಾ ಸಂಬಂಧ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿ, 8,78,702 ಪುರುಷ ಮತದಾರರು, 8,99,501 ಮಹಿಳೆಯರು ಹಾಗೂ 107 ಮಂದಿ ಲಿಂಗತ್ವ ಅಲ್ಪಸಂಖ್ಯಾತ ಮತದಾರರು ಸೇರಿ ಒಟ್ಟು 17,78,310 ಮತದಾರರು ಇರಲಿದ್ದು, 377 ಸೇವಾ ಮತದಾರಿದ್ದಾರೆ ಎಂದು ತಿಳಿಸಿದ್ದಾರೆ. ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 2000 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದ್ದು, ಇವುಗಳಲ್ಲಿ 263 ನಗರ ಪ್ರದೇಶದಲ್ಲಿ 1737 ಮತಗಟ್ಟೆಗಳು ಗ್ರಾಮಾಂತರ ಭಾಗದಲ್ಲಿವೆ.

ವಿಶೇಷ ಮತಗಟ್ಟೆಗಳ ಸ್ಥಾಪನೆ
ವಿಶೇಷ ಮತಗಟ್ಟೆಗಳ ಸ್ಥಾಪನೆ

ಮತದಾರರನ್ನು ಸೆಳೆಯಲು ಹಲವು ವಿಶೇಷ ಮತಗಟ್ಟೆಗಳು: ಮತಗಟ್ಟೆಗಳತ್ತ ಮತದಾರರನ್ನು ಸೆಳೆಯಲು ಈ ಬಾರಿ ಹಲವು ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ. ಮಹಿಳೆಯರನ್ನು ಮತಗಟ್ಟೆಗಳತ್ತ ಸೆಳೆಯಲು ಒಟ್ಟು 16 ಸಖಿ ಸೌರಭ ಮತಗಟ್ಟೆಗಳಿವೆ‌. ಬುಡಕಟ್ಟು ಮತದಾರರಿಗಾಗಿ ಗುಂಡ್ಲುಪೇಟೆ ತಾಲೂಕಿನಲ್ಲಿ 2 ಸಾಂಪ್ರದಾಯಿಕ ಬುಡಕಟ್ಟು ಮತಗಟ್ಟೆ, ವಿಶೇಷ ಮತದಾರರಿಗಾಗಿ ಸಂಜ್ಞಾ ಭಾಷಾ ಅನುವಾದಕರಿರುವ ಒಟ್ಟು 4 ಮತಗಟ್ಟೆಗಳು, ಯುವ ಮತದಾರರು ಅತಿ ಹೆಚ್ಚು ಇರುವ ಕಡೆ ಒಟ್ಟು 8 ಮತಗಟ್ಟೆಗಳು, ಜಿಲ್ಲೆಯ ಸಾಂಸ್ಕೃತಿಕ ಕಲೆಗಳ ಬಗ್ಗೆ ತಿಳಿಸುವ 2 ಎಥ್ನಿಕ್​ ಮತಗಟ್ಟೆಗಳು, ರೈತರ ಮಹತ್ವ ಸಾರುವ 8 ಅನ್ನದಾತ ಮತಗಟ್ಟೆಗಳು, ಅರಣ್ಯದ ಮಹತ್ವ ಸಾರುವ 6 ಹಸಿರು ಮತಗಟ್ಟೆಗಳನ್ನು ಈ ಬಾರಿ ಸ್ಥಾಪಿಸಲಾಗಿದೆ.

ವಿಶೇಷ ಮತಗಟ್ಟೆಗಳ ಸ್ಥಾಪನೆ
ವಿಶೇಷ ಮತಗಟ್ಟೆಗಳ ಸ್ಥಾಪನೆ

ಜಿಲ್ಲಾ ವ್ಯಾಪ್ತಿಯಲ್ಲಿ 197 ಕ್ರಿಟಿಕಲ್ ಮತಗಟ್ಟೆ: ಚಾಮರಾಜನಗರ ಜಿಲ್ಲಾ ವ್ಯಾಪ್ತಿಯಲ್ಲಿರುವ 983 ಮತಗಟ್ಟೆಗಳಲ್ಲಿ 197 ಮತಗಟ್ಟೆಗಳನ್ನು ಕ್ರಿಟಿಕಲ್ ಮತಗಟ್ಟೆಗಳು ಎಂದು ಗುರುತಿಸಲಾಗಿದೆ. ಮೊಬೈಲ್ ನೆಟ್​ವರ್ಕ್ ಲಭ್ಯವಿಲ್ಲದ ಒಟ್ಟು 17 ಮತಗಟ್ಟೆಗಳನ್ನು ಗುರುತಿಸಲಾಗಿದೆ. 1667 ಆರಕ್ಷಕ ಸಿಬ್ಬಂದಿ - ಚಾಮರಾಜನಗರ ಜಿಲ್ಲೆಯಲ್ಲಿ ಚುನಾವಣಾ ಕರ್ತವ್ಯಕ್ಕಾಗಿ 4 ಡಿವೈಎಸ್ಪಿ, 13 ಮಂದಿ ಪಿಐ, 41 ಪಿಎಸ್ಐ, 67 ಎಎಸ್ಐ, 936 ಕಾನ್ಸ್‌ಟೇಬಲ್, 600 ಹೋಂ ಗಾರ್ಡ್, 6 ಮೀಸಲು ಪಡೆ, ಗುಜರಾತ್​ನ 2 ಮೀಸಲು ಪಡೆ ಈ ಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ.

ವಿಶೇಷ ಮತಗಟ್ಟೆಗಳ ಸ್ಥಾಪನೆ
ವಿಶೇಷ ಮತಗಟ್ಟೆಗಳ ಸ್ಥಾಪನೆ

ಮೊದಲ ಮತದಾರರು: ಈ ಬಾರಿ ಜಿಲ್ಲೆಯಲ್ಲಿ ಒಟ್ಟು 36 ಸಾವಿರ ಮತದಾರರು ಮೊದಲ ಬಾರಿಗೆ ತಮ್ಮ ಹಕ್ಕು ಚಲಾಯಿಸಲಿದ್ದಾರೆ.

ವಿಶೇಷ ಮತಗಟ್ಟೆಗಳ ಸ್ಥಾಪನೆ
ವಿಶೇಷ ಮತಗಟ್ಟೆಗಳ ಸ್ಥಾಪನೆ

37 ಲಕ್ಷ ಹಣ, 2.7 ಕೆಜಿ ಚಿನ್ನ ವಶ: ಅಧಿಸೂಚನೆ ಪ್ರಕಟಗೊಂಡ ಬಳಿಕ ಲೋಕಸಭಾ ಕ್ಷೇತ್ರದಲ್ಲಿ ದಾಖಲೆ ಇಲ್ಲದ 37,59,790 ರೂ. ಹಣ ವಶಪಡಿಸಿಕೊಳ್ಳಲಾಗಿದೆ. 106.60 ಕೋಟಿ ಮೌಲ್ಯದ 1.25 ಕೋಟಿ ಲೀಟರ್ ಮದ್ಯ, 4.44 ಕೆಜಿ ಗಾಂಜಾ, 2.17 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.

ಎರಡು ದಿನ ಮದ್ಯ ಮಾರಾಟ ಇಲ್ಲ: ಚಾಮರಾಜನಗರ ಜಿಲ್ಲಾ ವ್ಯಾಪ್ತಿಯಲ್ಲಿ ಏ.24ರ ಬೆಳಗ್ಗೆ 6 ರಿಂದ 26ರ ಮಧ್ಯರಾತ್ರಿವರೆಗೆ ಎಲ್ಲ ರೀತಿಯ ಮದ್ಯದಂಗಡಿಗಳನ್ನು ಮುಚ್ಚುವಂತೆ ಹಾಗೂ ಯಾವುದೇ ರೀತಿಯ ಮದ್ಯ ಮಾರಾಟ ಮಾಡದಂತೆ ನಿಷೇಧಿಸಿ ಘೋಷಿಸಲಾಗಿದೆ. ಮತದಾನದ ದಿನದಂದು ಎಲ್ಲಾ ರೀತಿಯ ಜಾತ್ರೆ, ಸಂತೆಗಳನ್ನೂ ನಿಷೇಧಿಸಲಾಗಿದೆ.

ಇದನ್ನೂ ಓದಿ: ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ಮತದಾನ: ಇಂದು ಸಂಜೆ ಬಹಿರಂಗ ಪ್ರಚಾರಕ್ಕೆ ತೆರೆ - End of open campaign

ETV Bharat Logo

Copyright © 2024 Ushodaya Enterprises Pvt. Ltd., All Rights Reserved.