ETV Bharat / state

'ನೀವು ಯೋಗ್ಯರಲ್ಲ ಅಂದ್ಮೇಲೆ ಏನ್‌ ಮಾಡಬೇಕೆಂದು ನೀವೇ ತೀರ್ಮಾನಿಸಿ' - Chalavadi Narayanaswamy

author img

By ETV Bharat Karnataka Team

Published : Jun 26, 2024, 11:01 PM IST

ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣ ಸ್ವಾಮಿ ಅವರು ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಕುರಿತು ಮಾತನಾಡಿದರು.

chalavadi-narayanaswamy
ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣ ಸ್ವಾಮಿ (ETV Bharat)

ಬೆಂಗಳೂರು : ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ವಿಷಯದಲ್ಲಿ ಮುಖ್ಯಮಂತ್ರಿಗಳದ್ದು ಬೇಜವಾಬ್ದಾರಿ ನಡವಳಿಕೆಯಾಗಿದ್ದು, ಖಜಾನೆಯ ಹಣವನ್ನು ದುರ್ಬಳಕೆ ಮಾಡಿದ್ದೆಯಾದರೆ ಒಂದು ನಿಮಿಷವೂ ಕೂಡ ಮುಖ್ಯಮಂತ್ರಿಯಾಗಿ ಮುಂದುವರಿಯಲು ಯೋಗ್ಯರಲ್ಲ. ನೀವು ಯೋಗ್ಯರಲ್ಲ ಅಂದ ಮೇಲೆ ಏನು ಮಾಡಬೇಕೆಂದು ನೀವೇ ತೀರ್ಮಾನಿಸಿ ಎಂದು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ.

ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಿಗಮದ ಹಗರಣವು ರೆಡ್ ಹ್ಯಾಂಡ್ ಆಗಿ ಸಿಕ್ಕಿದೆ. ಇದು ಆಪಾದನೆಯಲ್ಲ. ಇದು ಖಾತೆಗಳ ಮೂಲಕ ನೇರಾನೇರ ಸಿಕ್ಕಿದೆ ಎಂದರು.

ಆಪಾದನೆ ಕುರಿತು ತನಿಖೆ ನಡೆಯಲಿ. ನಿಮ್ಮ ಗೌರವ ಉಳಿಸಿಕೊಳ್ಳಲು ನೀವು ತೀರ್ಮಾನ ಮಾಡಬೇಕು. ಮುಖ್ಯಮಂತ್ರಿಗಳೇ ನಿರ್ವಹಿಸುವ ಆರ್ಥಿಕ ಇಲಾಖೆಗೆ ಗೊತ್ತಿಲ್ಲದೇ ವಾಲ್ಮೀಕಿ ನಿಗಮದ ಹಗರಣ ಆಗಲು ಸಾಧ್ಯವೇ ಇಲ್ಲ. ಆದರೆ, ಇದುವರೆಗೂ ನಿಮ್ಮ ಉತ್ತರ ಲಭಿಸಿಲ್ಲ. ಇದರಲ್ಲಿ ನಿಮ್ಮ ಪಾಲೆಷ್ಟು? ಹೈದರಾಬಾದ್‍ನ ಖಾತೆಗಳಿಗೆ ಯಾಕೆ ಹಣ ಹೋಗಿದೆ? ಇದನ್ನು ಚುನಾವಣೆಗಾಗಿ ಕಳಿಸಿದ್ದೇ? ಅಥವಾ ಬೇರೇನಾದರೂ ಉದ್ದೇಶವಿತ್ತೇ? ಎಂದು ಕೇಳಿದರು.

ಸರ್ಕಾರದ ಹಣವನ್ನು ಬಾರ್ ಆಂಡ್ ರೆಸ್ಟೋರೆಂಟಿಗೂ ಹಾಕಿ ವಾಪಸ್ ಪಡೆಯುವುದಾದರೆ ಈ ರಾಜ್ಯದ ಜನರು ನಿಮ್ಮನ್ನು ಹೇಗೆ ನಂಬಬೇಕು? 11 ಜನರನ್ನು ಈಗಾಗಲೇ ಬಂಧಿಸಿದ್ದು, ಅಲ್ಲಿಗೇ ಅದು ಮುಕ್ತಾಯವೇ ಎಂದು ಪ್ರಶ್ನೆಯನ್ನು ಮುಂದಿಟ್ಟರು. ಬಡವರ ಹೆಸರಿನಲ್ಲಿ ಹಣ ದೋಚುವುದು ಎಷ್ಟು ಸರಿ? ಎಂದೂ ಕೇಳಿದರು. ಬಡವರ ಅನ್ನಕ್ಕೆ ಕೈ ಹಾಕುವ ನೀವು ಈ ರಾಜ್ಯ ನಡೆಸಲು ಯೋಗ್ಯರೇ ಎಂದು ಅನಿವಾರ್ಯವಾಗಿ ಕೇಳುತ್ತಿದ್ದೇನೆ ಎಂದು ಹೇಳಿದರು.

ರಾಜ್ಯದ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರದ ಹಗರಣಗಳು ಕಳೆದ ಒಂದೆರಡು ತಿಂಗಳುಗಳಿಂದ ಒಂದೊಂದಾಗಿ ಹೊರಗೆ ಬರುತ್ತಿವೆ. ಗುತ್ತಿಗೆದಾರರ ವಿಚಾರದಲ್ಲಿ ಯಾವ ಮಟ್ಟಕ್ಕೆ ಭ್ರಷ್ಟಾಚಾರ ಆಗಿತ್ತು. ಗುತ್ತಿಗೆದಾರರ ಸಂಘಗಳು ಮಾಡಿದ ಆಪಾದನೆಗಳನ್ನು ಬಯಲಿಗೆ ತರಲಾಗಿದೆ. ಅದಾದ ನಂತರ 187 ಕೋಟಿಯ ಹಗರಣ. ಅದು ಸುಮಾರು 700 ಖಾತೆಗಳಲ್ಲಿ ಹಾಕಿ ಡ್ರಾ ಮಾಡಲಾಗಿದೆ ಎಂದು ಆರೋಪಿಸಿದರು.

ಅಧಿಕಾರಿ ಚಂದ್ರಶೇಖರ್ ಅವರ ಆತ್ಮಹತ್ಯೆಯ ಬಳಿಕ ಇದರ ಸಂಪೂರ್ಣ ತನಿಖೆಗೆ ಆಗ್ರಹಿಸಿ ನಮ್ಮ ಹೋರಾಟ ನಡೆದಿತ್ತು. ಸಚಿವ ನಾಗೇಂದ್ರ ಅವರು ತಲೆದಂಡಕ್ಕೆ ಆಗ್ರಹಿಸಿದ್ದೆವು. ಅಲ್ಲಿಗೆ ನಿಂತು ಹೋಯಿತೇ ಮಾನ್ಯ ಮುಖ್ಯಮಂತ್ರಿಗಳೇ ಎಂದು ಪ್ರಶ್ನಿಸಿದರು.

ಕೇಂದ್ರದಿಂದ ಹಲವು ಇಲಾಖೆಗಳಿಗೆ ಎಸ್‍ಟಿಗಳಿಗೆ ಸಂಬಂಧಿಸಿ ನೂರಾರು ಕೋಟಿ ಹಣ ಬಂದಿದೆ. ಅದರ ಸಂಬಂಧದಲ್ಲಿ 8 ಬಾರಿ ಕೇಂದ್ರದ ಪತ್ರ ಬಂದಿದೆ. ಹಣದ ವಿನಿಯೋಗ, ಖರ್ಚಾದ ಮೊತ್ತ, ಉಳಿಕೆ ಮೊತ್ತವನ್ನು ಕೇಳಿದ್ದಾರೆ. ಆದರೆ, ರಾಜ್ಯ ಉತ್ತರ ಕೊಟ್ಟಿಲ್ಲ. ಬಂದಿದ್ದೆಲ್ಲವನ್ನು ನುಂಗುವ ಉದ್ದೇಶ ಇದು ಎಂದು ಆಕ್ಷೇಪಿಸಿದರು.

ಪ್ರಿಯಾಂಕ್ ಬೇಜವಾಬ್ದಾರಿ ಸಚಿವ : ಸಚಿವ ಪ್ರಿಯಾಂಕ್ ಖರ್ಗೆಯವರು ತಮ್ಮ ತಂದೆ ಕಾಂಗ್ರೆಸ್ಸಿನ ರಾಷ್ಟ್ರೀಯ ಅಧ್ಯಕ್ಷರು, ಆದ್ದರಿಂದ ರಾಷ್ಟ್ರಮಟ್ಟದ ವಿಚಾರಗಳನ್ನು ಮಾತನಾಡಬೇಕೆಂಬ ಭ್ರಮೆಯಲ್ಲಿದ್ದಂತೆ ಕಾಣುತ್ತಿದೆ. ಇವತ್ತು ಅವರು ಪ್ರಧಾನಿಯವರ ಕುರಿತು ಮಾತನಾಡಿದ್ದಾರೆ. ಇವರೊಬ್ಬ ಬೇಜವಾಬ್ದಾರಿ ಸಚಿವ ಎಂದು ರಾಜ್ಯ ವಕ್ತಾರ ಎಂ. ಜಿ ಮಹೇಶ್ ಅವರು ಟೀಕಿಸಿದರು.

ಪ್ರಿಯಾಂಕ್ ಅವರು ತಮ್ಮ ಖಾತೆಯನ್ನು ಸರಿಯಾಗಿ ನಿಭಾಯಿಸದ ಕಾರಣ ಕರ್ನಾಟಕದಲ್ಲಿ ಕೇವಲ 2 ತಿಂಗಳಿನಲ್ಲಿ ಕಲುಷಿತ ನೀರು ಸೇವಿಸಿ 20 ಜನರು ಸಾವನ್ನಪ್ಪಿದ್ದಾರೆ ಎಂದರು. ಸಾಲುಂಡಿ, ಚಿತ್ರದುರ್ಗ, ತುಮಕೂರು, ಕೋಲಾರದಲ್ಲಿ ಈ ಸಾವು ಸಂಭವಿಸಿದೆ ಎಂದು ವಿವರಿಸಿದರು.

ತಮ್ಮ ಕೆಲಸವನ್ನು ಸರಿಯಾಗಿ ಮಾಡಲು ಅಸಮರ್ಥರಾದ ಪ್ರಿಯಾಂಕ್ ಖರ್ಗೆ, ಮೋದಿಯವರು ಉದ್ಯಮಿಗಳಿಗೆ ಫೋನ್ ಮಾಡಿ ಉದ್ದಿಮೆಗಳನ್ನು ಗುಜರಾತ್‍ಗೆ ತರುವಂತೆ ಹೇಳುತ್ತಿರುವುದಾಗಿ ಆರೋಪಿಸಿದ್ದಾರೆ. ಆದರೆ, ಎಲ್ಲ ಕೈಗಾರಿಕೆಗಳು ಯಾಕೆ ಕರ್ನಾಟಕ ಬಿಟ್ಟು ಹೋಗುತ್ತಿವೆ? ಎಂದರಲ್ಲದೆ, ಸರ್ಕಾರದ ನೀತಿ ನಿರೂಪಣೆಯೇ ಇದಕ್ಕೆ ಕಾರಣ ಎಂದು ತಿಳಿಸಿದರು.

ವಿದ್ಯುತ್ ಬೆಲೆ ಹೆಚ್ಚಳ, ವ್ಯಾಪಕ ಭ್ರಷ್ಟಾಚಾರದ ಕಾರಣಕ್ಕಾಗಿ ಯಾವ ಉದ್ದಿಮೆಗಳನ್ನೂ ಕರ್ನಾಟಕದಲ್ಲಿ ಸ್ಥಾಪಿಸಲಾಗುತ್ತಿಲ್ಲ. ಇದರಿಂದ ಅವು ಕರ್ನಾಟಕ ಬಿಟ್ಟು ಹೋಗುತ್ತಿವೆ ಎಂದರಲ್ಲದೆ, ತಾವು ಪ್ರಧಾನಿಯವರ ಬಗ್ಗೆ ಮಾತನಾಡುವಷ್ಟು ದೊಡ್ಡವರಾಗಿದ್ದೀರಾ? ಎಂದು ಕೇಳಿದರು. ಇದನ್ನು ಬಿಜೆಪಿ ಖಂಡಿಸುವುದಾಗಿ ತಿಳಿಸಿದರು. ಪ್ರಿಯಾಂಕ್ ತಮ್ಮ ಖಾತೆಯನ್ನು ಸರಿಯಾಗಿ ನಿಭಾಯಿಸಲಿ ಎಂದು ಒತ್ತಾಯಿಸಿದರು.

ರಾಜ್ಯದ ರೈತರಿಗೆ ರಾಜ್ಯ ಸರ್ಕಾರವು ಕಳೆದ 10 ತಿಂಗಳಿನಿಂದ 1 ಸಾವಿರ ಕೋಟಿ ರೂ. ಪ್ರೋತ್ಸಾಹಧನವನ್ನು ಬಾಕಿ ಉಳಿಸಿಕೊಂಡಿದೆ. ಇನ್ನೊಂದೆಡೆ ಹಾಲಿನ ದರ 2.10 ರೂ ಏರಿಸಿ ಜನರ ಜೇಬಿಗೆ ಕೈ ಹಾಕಿದೆ ಎಂದು ಆರೋಪಿಸಿದರು. ಡೈರಿ ಉದ್ಯಮ ಉಳಿಸಲು ಮಾನ್ಯ ಯಡಿಯೂರಪ್ಪ ಅವರ ಅಧಿಕಾರಾವಧಿಯಲ್ಲಿ ಅಂಗನವಾಡಿ, ಬಡವರಿಗೆ ಉಚಿತ ಹಾಲು ಕೊಡಲಾಗುತ್ತಿತ್ತು. ಆದರೆ, ಬೆಲೆ ಜಾಸ್ತಿ ಮಾಡಿರಲಿಲ್ಲ ಎಂದು ಹೇಳಿದರು.

ಇದನ್ನೂ ಓದಿ : ಜೂ.28ರಂದು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿ ಕಚೇರಿಗಳಿಗೆ ಬಿಜೆಪಿ ಮುತ್ತಿಗೆ: ಬಿ.ವೈ.ವಿಜಯೇಂದ್ರ - B Y Vijayendra

ETV Bharat Logo

Copyright © 2024 Ushodaya Enterprises Pvt. Ltd., All Rights Reserved.