ETV Bharat / state

ಸಿಇಟಿ - ನೀಟ್: ಆಯ್ಕೆ ದಾಖಲಿಸಲು ​ಮತ್ತೊಂದು ದಿನ ಅವಕಾಶ - CHOICE REGISTRATION PERIOD EXTENDED

author img

By ETV Bharat Karnataka Team

Published : Sep 4, 2024, 10:36 PM IST

ಯುಜಿಸಿಇಟಿ- ನೀಟ್ ಕೋರ್ಸ್​ಗಳಿಗೆ ಮೊದಲ ಸುತ್ತಿನಲ್ಲಿ ಸೀಟು ಹಂಚಿಕೆಯಾಗಿರುವ ಇನ್ನೂ ಕೆಲವು ಅಭ್ಯರ್ಥಿಗಳು ಯಾವ ಚಾಯ್ಸ್​ಗಳನ್ನೂ ದಾಖಲು ಮಾಡದ ಕಾರಣ ಅವರಿಗೆ ಅನುಕೂಲ ಆಗಲಿ ಎಂದು ಚಾಯ್ಸ್​ ದಾಖಲು ದಿನಾಂಕವನ್ನು ಒಂದು ದಿನ ವಿಸ್ತರಿಸಲಾಗಿದೆ.

Etv Bharat
Etv Bharat (Etv Bharat)

ಬೆಂಗಳೂರು: ಯುಜಿಸಿಇಟಿ- ನೀಟ್ ಕೋರ್ಸ್​ಗಳಿಗೆ ಮೊದಲ ಸುತ್ತಿನಲ್ಲಿ ಸೀಟು ಹಂಚಿಕೆಯಾಗಿರುವ ಇನ್ನೂ ಕೆಲವು ಅಭ್ಯರ್ಥಿಗಳು ಯಾವ ಚಾಯ್ಸ್​ಗಳನ್ನೂ ದಾಖಲು ಮಾಡದ ಕಾರಣ ಅವರಿಗೆ ಅನುಕೂಲ ಆಗಲಿ ಎಂದು ಚಾಯ್ಸ್​ ದಾಖಲು ದಿನಾಂಕವನ್ನು ಮತ್ತೆ ಸೆ.5ರ ಬೆಳಗ್ಗೆ 11ಗಂಟೆವರೆಗೆ ವಿಸ್ತರಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದ್ದಾರೆ.

ಶುಲ್ಕ ಪಾವತಿಗೆ ನಾಳೆ ಸಂಜೆ 4 ಗಂಟೆವರೆಗೆ ಅವಕಾಶ ಇರಲಿದೆ. ಕಾಲೇಜಿಗೆ ವರದಿ ಮಾಡಿಕೊಳ್ಳಲು ಸೆ.6 ಕೊನೆ ದಿನ ಎಂದು ಮಾಹಿತಿ ನೀಡಿದ್ದಾರೆ.

ಡಿಸಿಇಟಿ ದಾಖಲೆ ಪರಿಶೀಲನೆ: ಡಿಪ್ಲೋಮಾ ಮರು ಪರೀಕ್ಷೆಯಲ್ಲಿ ಅರ್ಹರಾದ ಅಭ್ಯರ್ಥಿಗಳ ರ‍್ಯಾಂಕ್ ಪಟ್ಟಿಯನ್ನು ವೆಬ್​ಸೈಟ್​ನಲ್ಲಿ ಪ್ರಕಟಿಸಿದ್ದು, ಅರ್ಹರು ಸೆ.10 ರಂದು ನಿಗದಿತ ಡಿಪ್ಲೋಮಾ ಕಾಲೇಜುಗಳಲ್ಲಿ ನಡೆಯುವ ದಾಖಲೆ ಪರಿಶೀಲನೆಗೆ ಹಾಜರಾಗಬೇಕು ಎಂದು ಪ್ರಸನ್ನ ತಿಳಿಸಿದ್ದಾರೆ. ಹೆಚ್ಚಿನ ವಿವರಗಳಿಗೆ ವೆಬ್​ಸೈಟ್​ಗೆ ಭೇಟಿ ನೀಡಲು ಕೋರಲಾಗಿದೆ.

ಎಂಇ, ಎಂ.ಟೆಕ್ ಪರೀಕ್ಷೆ: ಎಂ.ಇ, ಎಂ.ಟೆಕ್ ಮತ್ತು ಎಂ.ಆರ್ಕಿಟೆಕ್ಚರ್ ಕೋರ್ಸ್​ಗಳ ಪ್ರವೇಶಕ್ಕೆ ಸಂಬಂಧಿಸಿದಂತೆ ಇದೇ 18ರಂದು ಆಫ್‌ಲೈನ್ ಪರೀಕ್ಷೆ ನಡೆಯಲಿದ್ದು, ಸೆ.11ರಿಂದ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ. ಓಎಂಆರ್ ಮಾದರಿಯಲ್ಲಿ ಪರೀಕ್ಷೆ ನಡೆಯಲಿದೆ ಎಂದು ಅವರು ವಿವರಿಸಿದ್ದಾರೆ.

ಇದನ್ನೂ ಓದಿ: ಉತ್ತಮ ಶಿಕ್ಷಕರ ಪ್ರಶಸ್ತಿ ಪಟ್ಟಿ ಪ್ರಕಟ: ನಾಳೆ ಪ್ರಶಸ್ತಿ ಪ್ರದಾನ - Best Teacher Award List

ETV Bharat Logo

Copyright © 2024 Ushodaya Enterprises Pvt. Ltd., All Rights Reserved.