ETV Bharat / state

ಹೊಸ ವರ್ಷಾಚರಣೆ ಸಮೀಪಿಸಿರುವ ಹಿನ್ನೆಲೆ: ಕೊರಿಯರ್ ಕಂಪನಿ ಕಚೇರಿಗಳಲ್ಲಿ ಸಿಸಿಬಿ ತಪಾಸಣೆ - CCB INSPECTS COURIER OFFICES

ವಿದೇಶಿ ಅಂಚೆ ಕಚೇರಿಯಲ್ಲಿ ತಪಾಸಣೆ ನಡೆಸಿದ್ದ ಸಿಸಿಬಿ ಪೊಲೀಸರಿಗೆ ಯಾರೂ ಸ್ವೀಕರಿಸದೇ ಇದ್ದ ಪಾರ್ಸೆಲ್​ಗಳಲ್ಲಿ ಎಂಡಿಎಂಎ, ಕೊಕೇನ್, ಬ್ರೌನ್ ಶುಗರ್, ಹೈಡ್ರೋಗಾಂಜಾ ಸೇರಿದಂತೆ ವಿವಿಧ ಮಾದರಿಯ ಮಾದಕ ಪದಾರ್ಥಗಳು ಪತ್ತೆಯಾಗಿದ್ದವು.

CCB NARCOTICS CONTROL UNIT INSPECTS COURIER COMPANY OFFICES AS NEW YEAR APPROACHES
ಕೊರಿಯರ್ ಕಂಪನಿ ಕಚೇರಿಗಳಲ್ಲಿ ಸಿಸಿಬಿ ಮಾದಕದ್ರವ್ಯ ನಿಗ್ರಹದಳ ತಪಾಸಣೆ (ETV Bharat)
author img

By ETV Bharat Karnataka Team

Published : Dec 7, 2024, 3:29 PM IST

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಕೊರಿಯರ್ ಮೂಲಕ ಮಾದಕ ಪದಾರ್ಥಗಳು ಆಮದಾಗುತ್ತಿರುವ ಪ್ರಕರಣಗಳು ಬಯಲಾದ ಬೆನ್ನಲ್ಲೇ ಸಿಸಿಬಿ ಪೊಲೀಸರು ಮತ್ತಷ್ಟು ಅಲರ್ಟ್ ಆಗಿದ್ದಾರೆ. ಹೊಸ ವರ್ಷಾಚರಣೆ ಸಹ ಸಮೀಪಿಸುತ್ತಿದ್ದು, ಬೆಂಗಳೂರಿನ ವಿವಿಧ ಕೊರಿಯರ್ ಕಂಪನಿಗಳ ಕಚೇರಿಗಳಲ್ಲಿ ಶ್ವಾನದಳದೊಂದಿಗೆ ತೆರಳಿ ಸಿಸಿಬಿಯ ಮಾದಕದ್ರವ್ಯ ನಿಗ್ರಹದಳ ಪೊಲೀಸರು ತಪಾಸಣೆ ನಡೆಸಿದರು.

ಚಾಮರಾಜಪೇಟೆಯಲ್ಲಿರುವ ವಿದೇಶಿ ಅಂಚೆ ಕಚೇರಿ ತಲುಪಿದ್ದ ಅನೇಕ ಪಾರ್ಸೆಲ್‌ಗಳನ್ನು ಕೆಲ ವರ್ಷಗಳಿಂದ ಯಾರೂ ಸ್ವೀಕರಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಕಳೆದ ಅಕ್ಟೋಬರ್‌ನಲ್ಲಿ ಶ್ವಾನದಳದೊಂದಿಗೆ ಸಿಸಿಬಿ ಪೊಲೀಸರು ತೆರಳಿ ತಪಾಸಣೆ ನಡೆಸಿದ್ದರು. ಪರಿಶೀಲನೆ ಸಂದರ್ಭದಲ್ಲಿ ಬರೋಬ್ಬರಿ 626 ಪಾರ್ಸೆಲ್‌ಗಳಲ್ಲಿ ಎಂಡಿಎಂಎ, ಕೊಕೇನ್, ಬ್ರೌನ್ ಶುಗರ್, ಹೈಡ್ರೋಗಾಂಜಾ ಸೇರಿದಂತೆ ವಿವಿಧ ಮಾದರಿಯ ಮಾದಕ ಪದಾರ್ಥಗಳು ಪತ್ತೆಯಾಗಿದ್ದವು. ಯುನೈಟೆಡ್ ಕಿಂಗ್‌ಡಮ್, ಥೈಲ್ಯಾಂಡ್, ಬ್ಯಾಂಕಾಕ್‌, ನೆದರ್ಲ್ಯಾಂಡ್‌ ಸೇರಿದಂತೆ ವಿವಿಧ ದೇಶಗಳಿಂದ ಮಾದಕ ಪದಾರ್ಥಗಳು ಬಂದಿರುವುದು ಪೊಲೀಸರ ತನಿಖೆಯಲ್ಲಿ ತಿಳಿದು ಬಂದಿತ್ತು.

ಸಿಸಿಬಿ ಹೆಚ್ಚುವರಿ ಪೊಲೀಸ್​ ಆಯುಕ್ತ ಡಾ. ಚಂದ್ರಗುಪ್ತ (ETV Bharat)

ಸಿಸಿಬಿ ಹೆಚ್ಚುವರಿ ಪೊಲೀಸ್​ ಆಯುಕ್ತ ಡಾ.ಚಂದ್ರಗುಪ್ತ ಅವರು ಮಾತನಾಡಿ, "ಮಾದಕ ವಸ್ತುಗಳನ್ನು ಪಾರ್ಸಲ್​ಗಳ ಮೂಲಕ ಹೇಗೆ ತರಿಸಿಕೊಳ್ಳುತ್ತಾರೆ ಎನ್ನುವ ಬಗ್ಗೆ ನಾವು ಸಾಕಷ್ಟು ಪರಿಶೀಲನೆ ಮಾಡಿದ್ದೇವೆ. ಅದಕ್ಕೆ ಸಂಬಂಧಿಸಿದಂತೆ ಹಲವು ಕೊರಿಯರ್​ ಕಂಪೆನಿಗಳ ಜೊತೆಗೆ ಸಭೆ ಕೂಡ ನಡೆಸಿದ್ದೇವೆ. ಪರಿಶೀಲನೆ ವೇಳೆ ವಿದೇಶಿ ಅಂಚೆ ಕಚೇರಿಯಲ್ಲಿ 600ಕ್ಕೂ ಹೆಚ್ಚು ಪಾರ್ಸಲ್​ಗಳಲ್ಲಿ ಮಾದಕವಸ್ತುಗಳು ಬಂದಿರುವುದು ಕಂಡುಬಂದಿತ್ತು. ಅದರಲ್ಲೂ ಹೊಸವರ್ಷ ಸಮೀಪಿಸುತ್ತಿರುವ ಹಿನ್ನೆಲೆ ಬೇರೆ ಬೇರೆ ರೀತಿಯ ಪಾರ್ಸಲ್​ಗಳಲ್ಲಿ ಬೇರೆ ಬೇರೆ ದೇಶಗಳಿಂದ ಮಾದಕವಸ್ತುಗಳನ್ನು ತರಿಸಿಕೊಳ್ಳಲಾಗುತ್ತಿದೆ" ಎಂದು ತಿಳಿಸಿದರು.

"ಇದನ್ನು ತಡೆಯಬೇಕು ಎನ್ನುವ ನಿಟ್ಟಿನಲ್ಲಿ ಯಾವುದೇ ಮಾಹಿತಿ ನೀಡದೆ ನಮ್ಮ ಸ್ನಿಫರ್​ ಡಾಗ್​ಗಳನ್ನು ಬಳಸಿಕೊಂಡು ಪರಿಶೀಲನೆ ಮಾಡುವಂತಹ ಕೆಲಸಕ್ಕೆ ಮುಂದಾಗಿದ್ದೇವೆ. ಸರ್ಪ್ರೈಸ್​ ಆಗಿ ನಾವು ಇದನ್ನು ಆಗಾಗ ಮಾಡುತ್ತಿರುತ್ತೇವೆ. ತಪ್ಪು ವಿಳಾಸಗಳನ್ನು ಕೊಟ್ಟು ಪಾರ್ಸೆಲ್​ಗಳನ್ನು ತರಿಸಿಕೊಳ್ಳುವುದು, ಆಮೇಲೆ ಅದನ್ನು ಅನಾಮಧೇಯರು ಬಂದು ತೆಗೆದುಕೊಂಡು ಹೋಗುವಂತಹ ವ್ಯವಸ್ಥಿತವಾದಂತಹ ಜಾಲ ಏರ್ಪಡುತ್ತಿರುವ ಬಗ್ಗೆ ನಮಗೆ ಕಂಡು ಬಂದಿತ್ತು. ಕೆಲವು ಪ್ರಕರಣಗಳನ್ನು ಕೂಡ ನಾವು ದಾಖಲು ಮಾಡಿದ್ದೆವು. ಹಾಗಾಗಿ ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ವಿಪರೀತಕ್ಕೆ ಹೋಗಬಾರದು ಎನ್ನುವ ನಿಟ್ಟಿನಲ್ಲಿ ನಾವು ಈ ಕ್ರಮಗಳನ್ನು ಕೈಗೊಂಡಿದ್ದೇವೆ. ಇವತ್ತು ನಾವು 7 ಕಡೆ ಕಾರ್ಯಾಚರಣೆಯನ್ನು ಕೈಗೊಂಡಿದ್ದೇವೆ." ಎಂದು ತಿಳಿಸಿದರು.

ಇದನ್ನೂ ಓದಿ: ಹೊಸ ವರ್ಷಾಚರಣೆಗೆ ಮುನ್ನೆಚ್ಚರಿಕೆ: ಬೆಂಗಳೂರು ಪೊಲೀಸರಿಂದ ಪಬ್, ರೆಸ್ಟೋರೆಂಟ್ ಪರಿಶೀಲನೆ, ಹಲವರ ವಿಚಾರಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.