ETV Bharat / state

ಇತರ ಕಾರ್ಯಗಳಿಗೆ ಕಾವೇರಿ ನೀರಿನ ಬಳಕೆ ಸಂಪೂರ್ಣವಾಗಿ ನಿಲ್ಲಿಸಬೇಕಿದೆ: ಬಿ ಪ್ಯಾಕ್ ಸಂಸ್ಥೆ - cauvery water usage notice

ಕಾವೇರಿ ನೀರು ಕೇವಲ ಕುಡಿಯಲು, ಮನೆಯ ಒಳಗಿನ ದಿನಬಳಕೆಯ ಕಾರ್ಯಗಳಿಗೆ ಮಾತ್ರ ಬಳಸಬೇಕು ಎಂದು ಬಿ ಪ್ಯಾಕ್ ಸಂಯೋಜಕ ಹೇಳಿದ್ದಾರೆ.

ಜಲಮಂಡಳಿಯ ನಿಯಮದಂತೆ ಇತರ ಕಾರ್ಯಗಳಿಗೆ ಕಾವೇರಿ ನೀರಿನ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕಿದೆ: ಬಿ ಪ್ಯಾಕ್ ಸಂಸ್ಥೆ

author img

By ETV Bharat Karnataka Team

Published : Mar 11, 2024, 7:42 PM IST

ಬೆಂಗಳೂರು: ಸಾಮಾನ್ಯವಾಗಿ ನಗರಕ್ಕೆ ಪೂರೈಕೆಯಾಗುವ ಕಾವೇರಿಯ 1450 ಎಂಎಲ್​​ಡಿ ನೀರು ಕೇವಲ ಕುಡಿಯಲು, ಮನೆಯ ಒಳಗಿನ ದಿನಬಳಕೆಯ ಕಾರ್ಯಗಳಿಗೆ ಮಾತ್ರ ಬಳಸಬೇಕಿದೆ. ಜಲಮಂಡಳಿ ತಂದಿರುವ ನಿಯಮದಂತೆ ಕಾರ್ಖಾನೆಗಳಿಗೆ, ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ, ಮನೆಯ ಹೊರಗಿನ ಸ್ವಚ್ಛತೆಗೆ ನದಿಯ ನೀರಿನ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕಿದೆ ಎಂದು ಬಿ ಪ್ಯಾಕ್ ಸ್ವಯಂ ಸೇವಾ ಸಂಸ್ಥೆಯ ಕಾರ್ಯ ಸಂಯೋಜಕ ರಾಘವೇಂದ್ರ ಈಟಿವಿ ಭಾರತಕ್ಕೆ ತಿಳಿಸಿದರು.

ಮಳೆ ನೀರನ್ನು ಅಂತರ್ಜಲ ಅಭಿವೃದ್ಧಿಗೆ ಮತ್ತು ಮರುಬಳಕೆಯ ಕಾರ್ಯಕ್ಕೆ ಬಳಸಿಕೊಳ್ಳುವುದನ್ನು ಎಲ್ಲರೂ ಮರೆತುಬಿಟ್ಟಿದ್ದಾರೆ. 2022ರ ಕರ್ನಾಟಕ ಜಲಸಂರಕ್ಷಣೆ ಕಾಯ್ದೆಯಲ್ಲಿ ಮಳೆ ನೀರಿನ ಬಗ್ಗೆ ಕೂಡ ಉಲ್ಲೇಖಿಸಲಾಗಿದ್ದು ಚಾಚೂ ತಪ್ಪದೇ ನಿಯಮಗಳನ್ನು ಪಾಲಿಸಬೇಕಿದೆ. ಸದ್ಯಕ್ಕೆ ಉಂಟಾಗಿರುವ ನೀರಿನ ಸಮಸ್ಯೆ ಉಂಟಾಗದಂತೆ ಕಾರ್ಯೋನ್ಮುಖರಾಗಬೇಕಿದೆ ಎಂದರು.

2031ಕ್ಕೆ ಬೆಂಗಳೂರಿನ ಜನಸಂಖ್ಯೆ 3 ಕೋಟಿ 10 ಲಕ್ಷ ತಲುಪಲಿದೆ. ಈಗ ಸುಮಾರು 1 ಕೋಟಿ 30 ಲಕ್ಷ ಜನಸಂಖ್ಯೆ ಇದೆ. ಇನ್ನು 6 ವರ್ಷದಲ್ಲಿ ಜನಸಂಖ್ಯೆ ಎರಡುಪಟ್ಟು ಆಗಲಿದೆ ಎಂದು ಹಲವು ವರದಿಗಳು ಅಂದಾಜಿಸಿವೆ. ಈಗ ಹೇಗೋ ನೀರಿನ ಸಮಸ್ಯೆ ಸರಿ ಹೋದರೂ ಮುಂದಿನ ದಿನಗಳಲ್ಲಿ ವಿಕೋಪದ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ನಮ್ಮ ಪೂರ್ವಜರ ಪ್ರಕಾರ ನಗರದ ಬಹುತೇಕ ಕಡೆ ಕೆರೆಗಳು ಇದದ್ದು ಕೇಳಿದ್ದೇವೆ. ಅದನ್ನು ಕುಡಿದೇ ತಲೆಮಾರುಗಳು ಜೀವನ ನಡೆಸಿವೆ. ಆದ್ದರಿಂದ ಬೆಂಗಳೂರು ಸುತ್ತ ಮುತ್ತಲಿನ ಹಳ್ಳಿಗಳ ಕೆರೆಯನ್ನು ಉಳಿಸಿ ಅಲ್ಲಿನ ನೀರನ್ನು ಶುದ್ದೀಕರಿಸಿ ಪೂರೈಸುವುದು ಉತ್ತಮ ಕ್ರಮವಾಗಲಿದೆ. ಎಸ್.ಟಿ.ಪಿಗಳನ್ನು ಅಳವಡಿಸಲಾಗುತ್ತಿದ್ದು, ಅದನ್ನು ನಿರ್ವಹಿಸಿ ಜನರಿಗೆ ನೀರನ್ನು ತಲುಪಿಸಬೇಕಿದೆ. ಇದರಿಂದ ಅಂತರ್ಜಲದ ಮೇಲಿನ ಒತ್ತಡ ಕಡಿಮೆಯಾಗಲಿದೆ ಎಂದು ವಿವರಿಸಿದರು.

ಟ್ಯಾಂಕರ್​ಗಳ ಮಾಲೀಕರು 500 - 600 ರೂಪಾಯಿಗಳನ್ನು ಪಡೆಯುತ್ತಿದ್ದವರು ಈಗ 1000-2000 ರೂಪಾಯಿಗಳನ್ನು ಪಡೆಯಲು ಪ್ರಾರಂಭಿಸಿದ್ದರು. ಇದು ಜನಸಾಮಾನ್ಯರ ಮೇಲೆ ವಿಪರೀತ ಒತ್ತಡವನ್ನು ತಂದಿತ್ತು. ಕಡಿವಾಣ ಹಾಕಲು ಸರ್ಕಾರಕ್ಕೆ ಮನವಿ ಕೂಡಾ ಮಾಡಲಾಗಿತ್ತು. ಅದನ್ನು ಪರಿಗಣಿಸಿರುವ ಸರ್ಕಾರ ದರವನ್ನು ನಿಗದಿಪಡಿಸಿದೆ. ನಂದಿನಿ ಹಾಲಿನ ಟ್ಯಾಂಕರ್​ಗಳ ಮೂಲಕ ಕೂಡ ನೀರಿನ ಪೂರೈಕೆ ಆಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಇನ್ನು ಮೂರು ತಿಂಗಳು ಈ ಕ್ರಮವನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕಿದೆ ಎಂದು ರಾಘವೇಂದ್ರ ತಿಳಿಸಿದರು.

ಸದ್ಯ ರಾಜಧಾನಿಯಲ್ಲಿ ಹನಿ ನೀರಿಗೂ ಸಂಕಷ್ಟ ಶುರುವಾಗಿದೆ. ಕುಡಿಯಲು ನೀರಿಲ್ಲದೇ ಜನ ಪರದಾಡುತ್ತಿದ್ದಾರೆ. ಅಲ್ಲದೆ ಟ್ಯಾಂಕರ್​ಗಳ ಮೊರೆ ಹೋಗಿದ್ದಾರೆ.

ಇದನ್ನೂ ಓದಿ: ಕೆಆರ್​​ಎಸ್​​ನಿಂದ ತಮಿಳುನಾಡಿಗೆ ನೀರು ಬಿಟ್ಟಿಲ್ಲ, ಬೆಂಗಳೂರಿಗಾಗಿ ಹರಿಬಿಡಲಾಗಿದೆ: ನೀರಾವರಿ ಇಲಾಖೆ ಸ್ಪಷ್ಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.