ETV Bharat / state

ಪ್ರಯಾಣ ದರ ಹೆಚ್ಚಳ ಮಾಡದ ಕಾರಣ 649 ಕೋಟಿ ರೂ. ಬಿಎಂಟಿಸಿ ಸಂಚಾರ ಆದಾಯ ಖೋತಾ: ಸಿಎಜಿ ವರದಿ - BMTC

ಪ್ರಯಾಣ ದರ ಹೆಚ್ಚಳ ಮಾಡದ ಕಾರಣದಿಂದಾಗಿ ಬಿಎಂಟಿಸಿ ಆರ್ಥಿಕ ಪರಿಸ್ಥಿತಿ ಸುಧಾರಿಸಿಲ್ಲ ಎಂದು ಸಿಎಜಿ ವರದಿಯಲ್ಲಿ ತಿಳಿಸಲಾಗಿದೆ.

CAG REPORT ON BMTC  BENGALURU  BELAGAVI  WINTER SESSION 2024
ಬಿಎಂಟಿಸಿ (IANS)
author img

By ETV Bharat Karnataka Team

Published : 5 hours ago

ಬೆಳಗಾವಿ/ಬೆಂಗಳೂರು: ಪ್ರಯಾಣ ದರ ಹೆಚ್ಚಳ ಮಾಡದ ಕಾರಣದಿಂದಾಗಿ ಬಿಎಂಟಿಸಿ ಆರ್ಥಿಕ ಪರಿಸ್ಥಿತಿ ಸುಧಾರಿಸಿಲ್ಲ ಎಂದು 2024ನೇ ಸಾಲಿನ ಲೆಕ್ಕಪರಿಶೋಧನಾ ವರದಿ ತಿಳಿಸಿದೆ.

ವಿಧಾನಸಭೆಯಲ್ಲಿ ಮಂಡಿಸಲಾದ ಬಿಎಂಟಿಸಿ ಕಾರ್ಯನಿರ್ವಹಣೆಯ ಕಾರ್ಯಕ್ಷಮತೆಯ ಲೆಕ್ಕಪರಿಶೋಧನಾ ವರದಿಯಲ್ಲಿ 2014 ರಿಂದ ಪ್ರಯಾಣ ದರ ಪರಿಷ್ಕರಣೆ ಮಾಡದ ಕಾರಣದಿಂದಾಗಿ 649.74 ಕೋಟಿ ರೂ. ಸಂಭಾವ್ಯ ಸಂಚಾರ ಆದಾಯ ಖೋತಾ ಆಗುವಂತಾಗಿದೆ. ಅದರ ಜತೆಗೆ ಹಿರಿಯ ನಾಗರಿಕರು, ವಿದ್ಯಾರ್ಥಿಗಳು ಸೇರಿದಂತೆ ಇನ್ನಿತರ ಪ್ರಯಾಣಿಕರಿಗೆ ರಿಯಾಯಿತಿ ಬಸ್​​ ಪಾಸ್​ಗೆ ರಾಜ್ಯ ಸರ್ಕಾರ ಅನುದಾನ ನೀಡುತ್ತಿರುವ ಕಾರಣದಿಂದಾಗಿ ಸರ್ಕಾರವೂ ಬಿಎಂಟಿಸಿಗೆ ನೆರವು ನೀಡಲು ಸಾಧ್ಯವಾಗಿಲ್ಲ ಎಂದಿದೆ.

ವರದಿಯಲ್ಲಿ ಬಿಎಂಟಿಸಿ ಆರ್ಥಿಕ ನಿರ್ವಹಣೆಯಲ್ಲಿನ ಸಮಸ್ಯೆಗಳ ಕುರಿತಂತೆ ಹಲವು ಅಂಶಗಳನ್ನು ಬಹಿರಂಗಪಡಿಸಲಾಗಿದೆ. ಅದರಂತೆ ನಿಗಮದ ಬಸ್‌ಗಳ ಪ್ರತಿ ಕಿಮೀಗಳಿಕೆಯು ವೆಚ್ಚಕ್ಕಿಂತ ಕಡಿಮೆಯಿದೆ. ಅದರಂತೆ 2017-18ರಲ್ಲಿ ಶೇ. 133.59ರಷ್ಟಿದ್ದ ನಿರ್ವಹಣಾ ವೆಚ್ಚದ ಅನುಪಾತ ಶೇ. 133.59 ರಿಂದ 2021-22ಕ್ಕೆ ಶೇ. 222.62 ಹೆಚ್ಚಳವಾಯಿತು. ಅದರಲ್ಲಿ ಸಿಬ್ಬಂದಿ ವೆಚ್ಚ ಶೇ. 60, ಇಂಧನ ವೆಚ್ಚ ಶೇ. 27ರಷ್ಟಾಗಿದೆ ಎಂದು ತಿಳಿಸಿದೆ.

ಇದೆಲ್ಲವೂ ಬಿಎಂಟಿಸಿ ಸಂಸ್ಥೆ ಆರ್ಥಿಕವಾಗಿ ಕುಸಿಯಲು ಕಾರಣವಾಗಿದ್ದು, ಅದನ್ನು ಸರಿಪಡಿಸಲು ಸರ್ಕಾರ ಕಾಲಕಾಲಕ್ಕೆ ಬಜೆಟ್‌ ಬೆಂಬಲ ನೀಡಬೇಕು ಹಾಗೂ ರಿಯಾಯಿತಿ ಬಸ್‌ ಪಾಸ್ ಯೋಜನೆಗಳಲ್ಲಿ ಸರ್ಕಾರದ ಪಾಲನ್ನು ಮರುಪಾವತಿಸಬೇಕು. ಬಿಎಂಟಿಸಿ ಘಟಕಗಳಲ್ಲಿ ಬಸ್‌ಗಳ ಸಮರ್ಪಕ ನಿರ್ವಹಣೆ ಮಾಡದ ಕಾರಣದಿಂದಾಗಿ ಬಸ್‌ಗಳ ಎಂಜಿನ್‌ಗಳು, ಬ್ಯಾಟರಿ, ಬಿಡಿಭಾಗಗಳ ಕಾರ್ಯಕ್ಷಮತೆ ಪ್ರತಿಕೂಲ ಪರಿಣಾಮ ಉಂಟಾಗಿದೆ. ಕೆಲ ಬಿಡಿಭಾಗಗಳ ಖರೀದಿ, ಎಂಜಿನ್‌ಗಳು, ಇಂಧನ ಇಂಜೆಕ್ಷನ್‌ ಪಂಪ್‌ಗಳ ಮರುಪರಿಶೀಲನೆಗಾಗಿ ಕೆಎಸ್ಸಾರ್ಟಿಸಿಯನ್ನು ಅವಲಂಬಿಸಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಮುದ್ರಾಂಕ ಇಲಾಖೆಯಲ್ಲಿ ಸರ್ಕಾರಕ್ಕೆ ಬರಬೇಕಾದ ಕೋಟ್ಯಂತರ ರೂ. ವರಮಾನ ವಂಚನೆ:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.