ETV Bharat / state

ಸಗಟು ಮಾರಾಟ ಮಳಿಗೆಯಿಂದ ನ್ಯಾಯಬೆಲೆ ಅಂಗಡಿಗೆ ಆಹಾರ ಧಾನ್ಯ ಪೂರೈಸಬೇಕು: ಸಿಎಜಿ ವರದಿ - CAG REPORT ON FOOD GRAINS SUPPLY

ಸಗಟು ಮಾರಾಟ ಮಳಿಗೆಯಿಂದ ನ್ಯಾಯಬೆಲೆ ಅಂಗಡಿಗಳಿಗೆ ಆಹಾರ ಧಾನ್ಯ ಪೂರೈಸಲು ಕ್ರಮ ವಹಿಸುವಂತೆ ಸಿಎಜಿ ವರದಿ ಆಗ್ರಹಿಸಿದೆ.

cag report
ವಿಧಾನಸಭೆ ಕಲಾಪ (ETV Bharat)
author img

By ETV Bharat Karnataka Team

Published : 5 hours ago

ಬೆಳಗಾವಿ: ತಾಲೂಕು ವ್ಯಾಪ್ತಿಯ ಗಡಿಯ ಬದಲಿಗೆ ಹತ್ತಿರದ ಸಗಟು ಮಾರಾಟ ಮಳಿಗೆಯಿಂದ (ಡಬ್ಲ್ಯೂಎಸ್‌ಡಿ) ನ್ಯಾಯಬೆಲೆ ಅಂಗಡಿಗಳಿಗೆ ಆಹಾರ ಧಾನ್ಯಗಳನ್ನು ಪೂರೈಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಲೆಕ್ಕನಿಯಂತ್ರಕರು ಮತ್ತು ಮಹಾ ಲೆಕ್ಕಪರಿಶೋಧಕರ ವರದಿ (ಸಿಎಜಿ) ಒತ್ತಾಯಿಸಿದೆ.

ವಿಧಾನಸಭೆಯಲ್ಲಿ ಮಂಡಿಸಲಾದ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಸರಬರಾಜು ನಿರ್ವಹಣೆ ಕುರಿತ ವರದಿಯಲ್ಲಿ, ಡಬ್ಲ್ಯೂಎಸ್‌ಡಿಗಳಿಂದ ಗೋದಾಮಿನ ಕಾರ್ಯಾಚರಣೆಗಳಿಗೆ ರಾಜ್ಯ ಸರ್ಕಾರ ಮಾರ್ಗಸೂಚಿಗಳನ್ನು ರೂಪಿಸಬೇಕು. ಕಳಪೆ ನಿರ್ವಹಣೆಯ ಮೇಲೆ ನಿಗಾಹಿಸಬೇಕು ಮತ್ತು ವ್ಯವಸ್ಥಾಪಕರ ಮೇಲೆ ಜವಾಬ್ದಾರಿಗಳನ್ನು ನಿಗದಿಪಡಿಸಬೇಕು. ವಾಹನಗಳ ಸಾಮರ್ಥ್ಯ ಮೀರಿ ಅಧಿಕ ಹೊರೆ ಹೊತ್ತ ಸಾಗಾಣಿಕೆದಾರರಿಗೆ ದಂಡ ವಿಧಿಸುವುದನ್ನು ರಾಜ್ಯ ಸರ್ಕಾರ ಖಚಿತಪಡಿಸಿಕೊಳ್ಳಬೇಕು ಎಂದು ತಿಳಿಸಲಾಗಿದೆ.

ಇದನ್ನೂ ಓದಿ: ಮುದ್ರಾಂಕ ಇಲಾಖೆಯಲ್ಲಿ ಸರ್ಕಾರಕ್ಕೆ ಬರಬೇಕಾದ ಕೋಟ್ಯಂತರ ರೂ. ವರಮಾನ ವಂಚನೆ:

ನ್ಯಾಯಬೆಲೆ ಅಂಗಡಿಗಳ ಪರವಾನಗಿ ನೀಡುವ ವೇಳೆ ನಿಗದಿಪಡಿಸಿದ ಷರತ್ತುಗಳ ಪಾಲನೆಗಳನ್ನು ಗಮನಿಸಬೇಕು. ಷರತ್ತುಗಳನ್ನು ಉಲ್ಲಘಿಸಿದರೆ ತಪ್ಪಿತಸ್ಥ ನ್ಯಾಯಬೆಲೆ ಅಂಗಡಿ ಮಾಲೀಕರ ಪರವಾನಗಿಗಳನ್ನು ರದ್ದುಗೊಳಿಸಬೇಕು. ನಿಗದಿಪಡಿಸಿದ ಷರತ್ತುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಸಿಎಜಿ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.

ಇದನ್ನೂ ಓದಿ: ಹೈಕೋರ್ಟ್​ ನಿರ್ದೇಶನ ಉಲ್ಲಂಘಿಸಿ ಅನುದಾನರಹಿತ ಶಾಲೆಗಳಿಂದ 345.80 ಕೋಟಿ ಹೆಚ್ಚುವರಿ ಶುಲ್ಕ ವಸೂಲಿ: ಸಿಎಜಿ ವರದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.