ಬೆಂಗಳೂರು: ಪ್ರಾಸಿಕ್ಯೂಷನ್ಗೆ ಗವರ್ನರ್ ಶೋಕಾಸ್ ನೋಟಿಸ್ ವಿಚಾರವಾಗಿ ಮೊದಲ ಬಾರಿಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.
ಖಾಸಗಿ ಹೊಟೇಲ್ನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, "ಪ್ರಾಸಿಕ್ಯೂಷನ್ಗೆ ಕ್ಯಾಬಿನೆಟ್ನಿಂದ ಎಲ್ಲ ಪ್ರಶ್ನೆಗಳಿಗೂ ಉತ್ತರಗಳನ್ನೂ ಕೊಟ್ಟಿದ್ದೇವೆ. ಕಾಬಿನೆಟ್ ಉತ್ತರಗಳನ್ನು ಈಗಾಗಲೇ ರೆಡಿ ಮಾಡಿಟ್ಟುಕೊಂಡಿದೆ. ಅಲ್ಲದೇ ಚೀಫ್ ಮಿನಿಸ್ಟರ್ಗೆ ಕೊಟ್ಟಂತ ನೋಟಿಸನ್ನು ವಾಪಸ್ ಪಡೆಯುವಂತೆ ಒತ್ತಾಯಿಸಲು ಕ್ಯಾಬಿನೆಟ್ ನಿರ್ಧಾರ ಮಾಡಿದೆ. ಹಾಗೂ ಟಿ.ಜೆ.ಅಬ್ರಾಹಂ ಕೊಟ್ಟಂತಹ ದೂರನ್ನು ತಿರಸ್ಕರಿಸಲು ನಿರ್ಣಯ ತೆಗೆದುಕೊಳ್ಳಲಾಗಿದೆ" ಎಂದಷ್ಟೇ ಹೇಳಿ ತೆರಳಿದರು.
ಮಳೆ ಪೀಡಿತ ಪ್ರದೇಶಗಳಲ್ಲಿ ಪ್ರವಾಸ ವಿಚಾರವಾಗಿ ಪ್ರತಿಕ್ರಿಯಿಸಿ, "ನಾನು ಕೊಡಗಿಗೆ ಹೋಗುತ್ತಿದ್ದೇನೆ. ನಾಳೆ ಮೈಸೂರು ಜಿಲ್ಲೆ ನೋಡಿಕೊಂಡು ರಾಮನಗರದಲ್ಲಿ ಪಕ್ಷದ ಸಭೆಯಲ್ಲಿ ಭಾಗವಹಿಸುತ್ತೇನೆ" ಎಂದರು.
ಇದನ್ನೂ ಓದಿ: ಮುಡಾ ಪ್ರಕರಣ: ರಾಜ್ಯಪಾಲರು ಸಿಎಂಗೆ ಕಳುಹಿಸಿದ ಶೋಕಾಸ್ ನೋಟಿಸ್ನಲ್ಲಿ ಏನಿದೆ? - Governor Show Cause Notice