ETV Bharat / state

ನಿಖಿಲ್​ಗೆ ಟಿಕೆಟ್ ಕೊಡೋದಿದ್ದರೆ ಕೊಡಲಿ, ಕಾಂಗ್ರೆಸ್ ಸಂಪರ್ಕದಲ್ಲಿದ್ದೇನೆ ಎಂದು ಆರೋಪಿಸುವುದು ಬೇಡ : HDKಗೆ ಯೋಗೇಶ್ವರ್​ ತಿರುಗೇಟು - C P YOGESHWAR

ಚನ್ನಪಟ್ಟಣದ ಟಿಕೆಟ್ ಆಕಾಂಕ್ಷಿ ಸಿ. ಪಿ ಯೋಗೇಶ್ವರ್ ಅವರು ಹೆಚ್.​ ಡಿ ಕುಮಾರಸ್ವಾಮಿ ಕುರಿತು ಮಾತನಾಡಿದ್ದಾರೆ. ಕುಮಾರಸ್ವಾಮಿ ನನ್ನ ಮೇಲೆ ಅನಾವಶ್ಯಕ ಆರೋಪ ಮಾಡುವ ಅಗತ್ಯ ಇಲ್ಲ ಎಂದಿದ್ದಾರೆ.

c-p-yogeshwar
ಚನ್ನಪಟ್ಟಣದ ಟಿಕೆಟ್ ಆಕಾಂಕ್ಷಿ ಸಿ. ಪಿ ಯೋಗೇಶ್ವರ್ (ETV Bharat)
author img

By ETV Bharat Karnataka Team

Published : Oct 21, 2024, 1:51 PM IST

ಬೆಂಗಳೂರು : ನಾನು ಕಾಂಗ್ರೆಸ್ ನಾಯಕರ ಭೇಟಿ ಆಗೋದಾದರೆ ನೇರವಾಗಿಯೇ ಭೇಟಿ ಆಗ್ತೇನೆ, ಯಾವುದೇ ಮುಚ್ಚುಮರೆ ಮಾಡಲ್ಲ. ಆದರೆ, ಈವರೆಗೆ ಯಾರನ್ನೂ ಭೇಟಿ ಮಾಡಿಲ್ಲ. ಕುಮಾರಸ್ವಾಮಿ ನನ್ನ ಮೇಲೆ ಅನಾವಶ್ಯಕವಾಗಿ ಆರೋಪ ಮಾಡುವ ಅಗತ್ಯ ಇಲ್ಲ. ಅವರು ಟಿಕೆಟ್ ಕೊಡುವುದಿದ್ರೆ ಅವರ ಮಗನಿಗೇ ಕೊಡಲಿ. ಆದರೆ ಕಾಂಗ್ರೆಸ್ ನಾಯಕರ ಭೇಟಿ ಮಾಡಿದ್ದೆ ಅಂತ ಅನಾವಶ್ಯಕ ಆರೋಪ ಮಾಡೋದು ಬೇಡ ಎಂದು ಬಿಜೆಪಿ ಪರಿಷತ್ ಸದಸ್ಯ, ಚನ್ನಪಟ್ಟಣ ಟಿಕೆಟ್ ಆಕಾಂಕ್ಷಿ ಸಿ. ಪಿ ಯೋಗೇಶ್ವರ್ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚನ್ನಪಟ್ಟಣದಲ್ಲಿ ನನಗೆ ಅವಕಾಶ ಕೊಟ್ರೆ ಎನ್‌ಡಿಎ ಅಭ್ಯರ್ಥಿ ಆಗ್ತೇನೆ. ಅವಕಾಶ ಸಿಗಬೇಕು ಅಷ್ಟೇ. ನಾನು ಹಾಗೂ ನಮ್ಮ ಮಿತ್ರಪಕ್ಷದ ನಾಯಕ ಪಾರ್ಟನರ್ ಕುಮಾರಸ್ವಾಮಿ ಮೂರು ದಿನಗಳಿಂದ ಚರ್ಚೆ ಮಾಡ್ತಿದೀವಿ. ನಾನು ಜೆಡಿಎಸ್​ನಿಂದ ನಿಂತರೆ ಕಷ್ಟ ಆಗುತ್ತದೆ. ಬಿಜೆಪಿಯಿಂದಲೇ ನಿಲ್ಲಬೇಕು ಅಂತ ಆಸೆ ಇದೆ. ಅವರು ಆಗಲ್ಲ ಅಂತಿದ್ದಾರೆ. ಕುಮಾರಸ್ವಾಮಿ ಅವರಿಗೆ ಅವರ ಮಗನಿಗೆ ಟಿಕೆಟ್ ಕೊಡಬೇಕು ಅಂತ ಇದೆ. ಅವರ ಮನಸಲ್ಲಿ ನಿಖಿಲ್​ಗೆ ಕೊಡಬೇಕು ಅಂತ ಇದೆ. ಅವರ ಮನಸಲ್ಲೇ ಆ ಥರ ಇದ್ದರೆ ಏನು ಮಾಡೋಕಾಗುತ್ತೆ?‌ ಎಂದರು.

ಚನ್ನಪಟ್ಟಣದ ಟಿಕೆಟ್ ಆಕಾಂಕ್ಷಿ ಸಿ. ಪಿ ಯೋಗೇಶ್ವರ್ ಮಾತನಾಡಿದರು (ETV Bharat)

ಬಿಜೆಪಿಯಿಂದಲೇ ನಿಲ್ಲಲು ನಿರ್ಧರಿಸಿದ್ದೇನೆ: ನಾನು ಸುದೀರ್ಘವಾಗಿ ನನ್ನ ತಾಲೂಕಿನ ಜನರ ಜತೆ ಚರ್ಚೆ ಮಾಡಿದೆ. ಅವರೆಲ್ಲ ಜೆಡಿಎಸ್ ಚಿಹ್ನೆಯಿಂದ ಸ್ಪರ್ಧೆ ಬೇಡ ಅಂತಿದ್ದಾರೆ. ಮೊದಲೇ ನನಗೆ ಪಕ್ಷಾಂತರಿ ಅಂತ ಕರೀತಾರೆ. ಹಾಗಾಗಿ ಬಿಜೆಪಿಯಿಂದಲೇ ನಿಲ್ಲಿ ಅಂತಿದ್ದಾರೆ. ನಾನು ಬಿಜೆಪಿಯಿಂದಲೇ ನಿಲ್ಲಲು ನಿರ್ಧರಿಸಿದ್ದೇನೆ. ಆದರೆ ನನಗೆ ಯಾರೂ ಬೆಂಬಲ ಕೊಡ್ತಿಲ್ಲ ಎಂದರು.

ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಅವರಿಗೆ ಅವರ ಕುಟುಂಬದವರಿಗೆ ಟಿಕೆಟ್ ಕೊಡಬೇಕು ಅಂತ ಇದೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ನಂತರದಿಂದಲೂ ನಿಖಿಲ್​ ಅವರನ್ನ ಅಲ್ಲಿ ನಿಲ್ಲಿಸಬೇಕು ಅಂತ ಕುಮಾರಸ್ವಾಮಿ ಮನಸಲ್ಲಿದೆ. ಅದಕ್ಕಾಗಿ ಅವರು ಪ್ರಯತ್ನನೂ ಮಾಡ್ತಿದ್ರು. ಅವರ ಮನಸಲ್ಲಿ ಆ ಭಾವನೆ ಇರುವಾಗ ಏನು ಬಲವಂತ ಮಾಡೋಕೆ ಆಗುತ್ತದೆ. ನೋಡೋಣ ಏನಾಗುತ್ತೆ ಅಂತ? ಜೆಡಿಎಸ್ ಚಿಹ್ನೆಯಲ್ಲಿ ನಿಲ್ಲಿ ಅಂತ ಅವರು ಮುಕ್ತವಾಗಿ ಏನೂ ಹೇಳಿಲ್ಲ. ಅವರ ಪಕ್ಷದ ಮುಖಂಡರು ಬಂದಾಗ ಹೇಳಿದ್ರು ಅಷ್ಟೇ. ನಾನು ನನ್ನ ತಾಲೂಕಿನ ಜನರ ಜತೆಗೂ ಇದರ ಬಗ್ಗೆ ಚರ್ಚೆ ಮಾಡಿದೆ. ಬಹಳ ಭಿನ್ನಾಭಿಪ್ರಾಯ ಬಂತು. ಇಷ್ಟು ವರ್ಷ ವಿರೋಧ ಮಾಡಿಕೊಂಡು ಬಂದಿದ್ದೀರಿ. ಈಗ ಮೈತ್ರಿ ಆಗಿದೆ. ಈಗ ಅನಾವಶ್ಯಕವಾಗಿ ಜೆಡಿಎಸ್‌ಗೆ ಹೋಗೋದು ಬೇಡ ಅಂತ ತಾಲೂಕಿನಲ್ಲಿ ಅಭಿಪ್ರಾಯ ಬಂದಿದೆ. ಹಾಗಾಗಿ ಜೆಡಿಎಸ್​ನಿಂದ ಸ್ಪರ್ಧಿಸಲ್ಲ ಎಂದು ಹೇಳಿದರು.

ದೊಡ್ಡ ಮನಸು ಇದ್ದಿದ್ರೆ ಅನುಕೂಲ ಆಗ್ತಿತ್ತು: ಚನ್ನಪಟ್ಟಣ ಜೆಡಿಎಸ್ ಕ್ಷೇತ್ರ ಎಂದು ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಯಡಿಯೂರಪ್ಪ ಆ ಹೇಳಿಕೆ ಕೊಡುವ ಅಗತ್ಯ ಇರಲಿಲ್ಲ. ಅದು ಕುಮಾರಸ್ವಾಮಿ ಅವರ ಕ್ಷೇತ್ರನೇ, ಅವರೇ ತೀರ್ಮಾನ ಮಾಡಬೇಕು. ಆದರೆ ಕುಮಾರಸ್ವಾಮಿ ಅವರಿಗೆ ದೊಡ್ಡ ಮನಸು ಇದ್ದಿದ್ರೆ ಅನುಕೂಲ ಆಗ್ತಿತ್ತು. ಯಡಿಯೂರಪ್ಪ ಈಗ ಹೇಳಿಕೆ ಕೊಡೋ ಅಗತ್ಯ ಇರಲಿಲ್ಲ. ಅವರು ಉದ್ದೇಶಪೂರ್ವಕ ಹೇಳಿಕೆ ಕೊಟ್ಟಿದ್ದಾರೆ. ಯಡಿಯೂರಪ್ಪ ಹೇಳಿಕೆ ಹಿಂದೆ ದುರುದ್ದೇಶ ಇದೆ. ಯಡಿಯೂರಪ್ಪ ಮೂಲಕ ಉದ್ದೇಶಪೂರ್ವಕವಾಗಿ ಆ ಹೇಳಿಕೆ ಕೊಡಿಸಿದ್ದಾರೆ ಎಂದರು.

ಇದನ್ನೂ ಓದಿ : ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್ ನಾಯಕರ ಸಂಪರ್ಕದಲ್ಲಿದ್ದಾರೆ: ಹೆಚ್.ಡಿ.ಕುಮಾರಸ್ವಾಮಿ ಸ್ಫೋಟಕ ಹೇಳಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.