ETV Bharat / state

'ವಾಮಮಾರ್ಗದಿಂದ ಉಪಚುನಾವಣೆ ಗೆಲ್ಲಲು ಡಿ.ಕೆ.ಶಿವಕುಮಾರ್ ಹುನ್ನಾರ' - C P Yogeshwar

author img

By ETV Bharat Karnataka Team

Published : Jun 20, 2024, 6:18 PM IST

Updated : Jun 20, 2024, 7:51 PM IST

ಉಪಚುನಾವಣೆಯನ್ನು ಅಕ್ರಮವಾಗಿ ಗೆಲ್ಲಲು ಏನೆಲ್ಲಾ ಮಾಡಬೇಕೋ ಅದನ್ನು ಡಿ.ಕೆ.ಶಿವಕುಮಾರ್ ಈಗಿನಿಂದಲೇ ಮಾಡುತ್ತಿದ್ದಾರೆ ಎಂದು ಸಿ.ಪಿ.ಯೋಗೇಶ್ವರ್​ ಆರೋಪಿಸಿದರು.

ಸಿ.ಪಿ.ಯೋಗೇಶ್ವರ್​
ಸಿ.ಪಿ.ಯೋಗೇಶ್ವರ್​ (ETV Bharat)

ಸಿ.ಪಿ.ಯೋಗೇಶ್ವರ್ ಹೇಳಿಕೆ (ETV Bharat)

ರಾಮನಗರ: "ಡಿ.ಕೆ.ಶಿವಕುಮಾರ್​ ಚನ್ನಪಟ್ಟಣಕ್ಕೆ ಬರುವುದಾದರೆ ಸ್ವಾಗತ. ಆದರೆ ಉಪಚುನಾವಣೆಯನ್ನು ಅಕ್ರಮದಿಂದ ಗೆಲ್ಲಲು ಅವರು ಈಗಿನಿಂದಲೇ ತಯಾರಿ ಮಾಡುತ್ತಿದ್ದಾರೆ. ಕ್ಷೇತ್ರದಲ್ಲಿ ಒಂದು ಕೋಮಿನ ಜನಾಂಗದ ಆರೇಳು ಸಾವಿರ ಮತಗಳನ್ನು ಸೇರ್ಪಡೆಗೊಳಿಸಬೇಕು ಎಂದು ತಾಲೂಕು ಮಟ್ಟದ ಅಧಿಕಾರಿಗಳಿಗೆ ಆದೇಶ ನೀಡುತ್ತಿದ್ದಾರೆ" ಎಂದು ವಿಧಾನ ಪರಿಷತ್​ ಸದಸ್ಯ ಸಿ.ಪಿ.ಯೋಗೇಶ್ವರ್​ ಆರೋಪಿಸಿದ್ದಾರೆ.

ರಾಮನಗರದಲ್ಲಿ ಇಂದು ಮಾತನಾಡಿದ ಅವರು, "ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಎಲ್ಲಿ ಬೇಕಾದರೂ ನಿಲ್ಲಬಹುದು. ಆದರೆ ಚುನಾವಣೆ ಯಾವುದೇ ಅಕ್ರಮಗಳಿಲ್ಲದೇ ಪಾರದರ್ಶಕವಾಗಿ ನಡೆಯಬೇಕು ಎಂಬುದೇ ನಮ್ಮ ಆಗ್ರಹ. ಈಗಾಗಲೇ ತಾಲೂಕಿಗೆ ಬಂದಿರುವ ಡಿ.ಕೆ.ಶಿವಕುಮಾರ್‌ ಅಧಿಕಾರಿಗಳಿಗೆ ಧಮ್ಕಿ ಹಾಕುವ ಕೆಲಸಕ್ಕೆ ಮುಂದಾಗಿದ್ದಾರೆ. ಮುಂಬರುವ ಉಪಚುನಾವಣೆಯನ್ನು ವಾಮಮಾರ್ಗದಿಂದ ಎದುರಿಸುವ ಪ್ರಯತ್ನ ಮಾಡುತ್ತಿದ್ದಾರೆ" ಎಂದು ಟೀಕಿಸಿದರು.

"ಇತ್ತೀಚಿಗೆ ಚನ್ನಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಮೊಬೈಲ್ ಹೊರಗಿಟ್ಟು ಬರಬೇಕು ಎಂದು ಸೂಚನೆ ನೀಡಿದ್ದರು. ಅಷ್ಟೇ ಅಲ್ಲ, ಮಾದ್ಯಮದವರನ್ನೂ ಹೊರಗಿಟ್ಟು ಸಭೆ ಮಾಡಿದ್ದರು. ಇದರ ಅವಶ್ಯಕತೆ ಏನಿತ್ತು?. ಅದೇನು ಅವರ ಖಾಸಗಿ ಕಾರ್ಯಕ್ರಮವಲ್ಲ. ಸಾರ್ವಜನಿಕರ ಸೇವೆ ಮಾಡುವ ಜಾಗದಲ್ಲಿ ಅಧಿಕಾರಿಗಳಿಗೆ ಧಮ್ಕಿ ಹಾಕಿ ವಾಮಮಾರ್ಗದಲ್ಲಿ ಉಪ ಚುನಾವಣೆ ಗೆಲ್ಲಿಸುವ ಹುನ್ನಾರ" ಎಂದು ಆಕ್ರೋಶ ವ್ಯಕ್ತಪಡಿಸಿದರು.

"ಈ ಹಿಂದೆ ಅಧಿಕಾರದಲ್ಲಿದ್ದ ನಾನು ಹಾಗೂ ಹೆಚ್.ಡಿ.ಕುಮಾರಸ್ವಾಮಿ ಎಂದಿಗೂ ಅಧಿಕಾರಿಗಳನ್ನು ಎದುರಿಸಿ ಕೆಲಸ ಮಾಡಿಸಿಕೊಳ್ಳುತ್ತಿರಲಿಲ್ಲ. ಇದಕ್ಕೆ ನಾವು ಅವಕಾಶ ನೀಡುವುದಿಲ್ಲ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ಕೊಡುತ್ತೇವೆ" ಎಂದು ತಿಳಿಸಿದರು.

ಇದನ್ನೂ ಓದಿ: ಸರ್ಕಾರ ಗ್ಯಾರಂಟಿ ಹೆಸರಲ್ಲಿ ಬಡವರ ಮೇಲೆ ಹೊರೆ ಹಾಕಿ, ಬರೆ ಎಳೆದಿದೆ : ಬೊಮ್ಮಾಯಿ - BASAVARAJ BOMMAI

Last Updated : Jun 20, 2024, 7:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.