ETV Bharat / state

'ನ್ಯಾಯಾಲಯದಲ್ಲಿ ನ್ಯಾಯ ಸಿಗುವ ವಿಶ್ವಾಸವಿದೆ': ಯಡಿಯೂರಪ್ಪ ವಿರುದ್ಧದ ವಾರೆಂಟ್ ಬಗ್ಗೆ ಬಿ.ವೈ.ರಾಘವೇಂದ್ರ ಪ್ರತಿಕ್ರಿಯೆ - B Y Raghavendra - B Y RAGHAVENDRA

ಪೋಕ್ಸೋ ಪ್ರಕರಣದಲ್ಲಿ ಮಾಜಿ ಸಿಎಂ ಬಿ.ಎಸ್​.ಯಡಿಯೂರಪ್ಪ ವಿರುದ್ದ ಜಾಮೀನುರಹಿತ ವಾರೆಂಟ್ ಜಾರಿಯಾದ ಬಗ್ಗೆ ಪುತ್ರ, ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಪ್ರತಿಕ್ರಿಯಿಸಿದ್ದಾರೆ.

BY Raghavendra
ಬಿ.ವೈ.ರಾಘವೇಂದ್ರ (ETV Bharat)
author img

By ETV Bharat Karnataka Team

Published : Jun 13, 2024, 9:37 PM IST

ಬಿ.ವೈ.ರಾಘವೇಂದ್ರ ಪ್ರತಿಕ್ರಿಯೆ (ETV Bharat)

ಶಿವಮೊಗ್ಗ: ನಮ್ಮ ತಂದೆ ಯಡಿಯೂರಪ್ಪನವರ ವಿರುದ್ದ ಕೆಳಹಂತದ ನ್ಯಾಯಾಲಯದಲ್ಲಿ ಜಾಮೀನುರಹಿತ ವಾರೆಂಟ್ ಜಾರಿಯಾಗಿದೆ ಎಂದು ಮಾಧ್ಯಮದ ಮೂಲಕ ತಿಳಿಯಿತು. ನಮಗೆ ನ್ಯಾಯಾಲಯದಲ್ಲಿ ನ್ಯಾಯ ಸಿಗುವ ವಿಶ್ವಾಸವಿದೆ ಎಂದು ಪುತ್ರ, ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ತಮ್ಮ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಇದು ಸುಮಾರು ಎರಡೂವರೆ ತಿಂಗಳ ಹಿಂದೆ ನೀಡಿರುವ ದೂರು. ಇದರಲ್ಲೇನೂ ಸತ್ಯಾಸತ್ಯತೆ ಇಲ್ಲ. ಬಿ-ರಿಪೋರ್ಟ್​ ಹಾಕಬಹುದು. ದೂರು ನೀಡಿರುವ ಮಹಿಳೆ ಸುಮಾರು 50 ಅಧಿಕಾರಿಗಳ ಮೇಲೆ ಇದೇ ರೀತಿ ದೂರು ನೀಡಿದ್ದಾರೆ. ಗೃಹ ಸಚಿವರೇ ಮಾನಸಿಕವಾಗಿ ತೊಂದರೆಯಲ್ಲಿರುವ ಹೆಣ್ಣು ಮಗಳೆಂಬ ಅರ್ಥದಲ್ಲಿ ಮಾತನಾಡಿದ್ದರು. ನಾವೂ ಸಹ ಹಾಗೆ ಅಂದುಕೊಂಡಿದ್ದೆವು'' ಎಂದು ಹೇಳಿದರು.

ಇದನ್ನೂ ಓದಿ: ಪೋಕ್ಸೋ ಕೇಸ್​: ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.