ಹುಬ್ಬಳ್ಳಿ: ಸ್ಪೀಡ್ ಪೋಸ್ಟ್‌ನಲ್ಲಿ ಬಂದ 15 ಲಕ್ಷದ ಗ್ಯಾರಂಟಿ ಸ್ಕ್ರ್ಯಾಚ್ ಕಾರ್ಡ್ ಪಡೆಯಲು ಮುಂದಾದ ನಗರದ ಉದ್ಯಮಿಯೊಬ್ಬರು, ಆನ್‌ಲೈನ್‌ನಲ್ಲಿ 14.86 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.
ಲಿಂಗೇಶ್ವರನಗರದ ನಿವಾಸಿ ಗುರುಪಾದಯ್ಯ ಸೈಬರ್ ವಂಚಕರ ಬಲೆಗೆ ಬಿದ್ದಿರುವ ಉದ್ಯಮಿ. ಕರೆ ಮಾಡಿದ ವಂಚಕ, ಇ-ವಾಣಿಜ್ಯ ಸಂಸ್ಥೆಯ ಹೆಸರಿನಲ್ಲಿ ಪೋಸ್ಟ್ ಬಂದಿದ್ದು, ಅದರಲ್ಲಿ 15 ಲಕ್ಷ ಗ್ಯಾರಂಟಿ ಸ್ಕ್ರ್ಯಾಚ್ ಕಾರ್ಡ್ ಇದೆ. ಹಣವನ್ನು ಬಿಡಿಸಿಕೊಳ್ಳಲು ತೆರಿಗೆ ಪಾವತಿಸಬೇಕಾಗುತ್ತದೆ ಎಂದು ನಂಬಿಸಿ, ತಮ್ಮಿಂದ ಆಧಾರ್ ಕಾರ್ಡ್, ವೋಟರ್ ಐಡಿ ಹಾಗೂ ಇತರ ಮಾಹಿತಿ ಪಡೆದು ಹಣ ವರ್ಗಾಯಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಮತ್ತೊಂದೆಡೆ ಬ್ಯಾಂಕ್ ಅಧಿಕಾರಿ ಹೆಸರಲ್ಲಿ ನಗರದ ದೇವಾಂಗ ಪೇಟೆಯ ಶೈಲಜಾ ಕುಲಕರ್ಣಿ ಅವರಿಗೆ ಕರೆ ಮಾಡಿದ ವ್ಯಕ್ತಿ, ಕೆವೈಸಿ ಅಪ್‌ಡೇಟ್ ಮಾಡಬೇಕು ಎಂದು ನಂಬಿಸಿ ಬ್ಯಾಂಕ್ ಖಾತೆ ವಿವರ ಹಾಗೂ ಒಟಿಪಿ ಪಡೆದು 3 ಲಕ್ಷ ರೂಪಾಯಿ ವರ್ಗಾಯಿಸಿಕೊಂಡು ವಂಚಿಸಿದ್ದಾನೆ. ಈ ಕುರಿತಂತೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮಗಳನ್ನು ಕೈಗೊಂಡಿದ್ದಾರೆ.
ಓದಿ: ತೆಲಂಗಾಣ: ಮನೆಯ ಮೇಲ್ಛಾವಣಿ ಕುಸಿದು ಒಂದೇ ಕುಟುಂಬದ ನಾಲ್ವರು ಸಾವು - Roof Of House Collapses