ETV Bharat / state

ಹಾವೇರಿ: ವೃದ್ಧೆ ರಕ್ಷಣೆಗೆ ಪ್ರಾಣದ ಹಂಗು ತೊರೆದು ನದಿಗೆ ಜಿಗಿದ ಬಸ್ ಚಾಲಕ - Bus driver tried to save old woman - BUS DRIVER TRIED TO SAVE OLD WOMAN

ತಮ್ಮ ಪ್ರಾಣದ ಹಂಗು ತೊರೆದು ನದಿಗೆ ಹಾರಿ ವೃದ್ಧೆಯನ್ನು ರಕ್ಷಿಸಲು ಪ್ರಯತ್ನಿಸಿದರೂ, ಯಾವುದೇ ಪ್ರಯೋಜನವಾಗಿಲ್ಲ. ನೀರು ಕುಡಿದು, ಉಸಿರುಗಟ್ಟಿ ವೃದ್ಧೆ ಸಾವನ್ನಪ್ಪಿದ್ದಾರೆ.

Bus driver jumped into the river to save the old woman in Haveri
ವೃದ್ಧೆ ರಕ್ಷಣೆಗೆ ಪ್ರಾಣದ ಹಂಗು ತೊರೆದು ನದಿಗೆ ಜಿಗಿದ ಬಸ್ ಚಾಲಕ (ETV Bharat)
author img

By ETV Bharat Karnataka Team

Published : Jul 27, 2024, 7:30 PM IST

ಹಾವೇರಿ: ಕಾಲು ಜಾರಿ ನದಿಗೆ ಬಿದ್ದ ವೃದ್ಧೆಯನ್ನು ಕಾಪಾಡಲು ಬಸ್ ಚಾಲಕ ಪ್ರಾಣದ ಹಂಗು ತೊರೆದು ನದಿಗೆ ಜಿಗಿದು ರಕ್ಷಣೆಗೆ ಮುಂದಾದ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ. ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲ್ಲೂಕಿನ ಮಾಸೂರು ಗ್ರಾಮದ ಬಳಿ ಕುಮದ್ವತಿ ನದಿಗೆ ವೃದ್ಧೆ ಕಾಲು ಜಾರಿ ಬಿದ್ದಿದ್ದಾಳೆ. ಇದನ್ನು ನೋಡಿದ ಚಾಲಕ, ಬಸ್ ನಿಲ್ಲಿಸಿ ನದಿಗೆ ಹಾರಿ ವೃದ್ಧೆಯ ಪ್ರಾಣ ರಕ್ಷಣೆಗೆ ಮುಂದಾಗಿದ್ದಾರೆ. ಚಾಲಕನನ್ನು ಮುಜೀದ್ ಗುಬ್ಬಿ ಎಂದು ಗುರುತಿಸಲಾಗಿದೆ.

ಆದರೆ, ನೀರಿಗೆ ಬಿದ್ದಿದ್ದ ವೃದ್ಧೆ ನೀರು ಕುಡಿದು, ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಕೊನೆಗೆ ಚಾಲಕ ಮುಜೀದ್ ಮೃತದೇಹವನ್ನು ನದಿಯಿಂದ ಹೊರಗೆ ತಂದಿದ್ದಾರೆ. ಬಸ್​ ಚಾಲಕ ಮುಜೀದ್​ ಅವರಿಗೆ ಸ್ಥಳೀಯ ಯುವಕನೊಬ್ಬ ಸಾಥ್​ ನೀಡಿದ್ದಾನೆ. ಮುಜೀದ್ ಅವರು ಮಾಸೂರಿನಿಂದ ಹೊನ್ನಾಳಿಗೆ ಹೋಗುವ ಹಿರೇಕೆರೂರು ಬಸ್ ಚಾಲಕ. ಚಾಲಕನ ಸಾಹಸಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮೃತಪಟ್ಟ ವೃದ್ಧೆಯ ವಿವರ ತಿಳಿದು ಬರಬೇಕಿದೆ. ಹಿರೇಕೆರೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಇದನ್ನೂ ಓದಿ: ಡಾಂಬರ್ ಗುಂಡಿಗೆ ಬಿದ್ದು ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಕುರಿಗಾಹಿಯ ರಕ್ಷಣೆ ಮಾಡಿದ ಎನ್​ಸಿಸಿ ತಂಡ - NCC team rescued a shepherd

ETV Bharat Logo

Copyright © 2024 Ushodaya Enterprises Pvt. Ltd., All Rights Reserved.