ದೊಡ್ಡಬಳ್ಳಾಪುರ: ರಸ್ತೆ ಅಪಘಾತದಲ್ಲಿ ಬ್ರೈನ್ ಡೆಡ್ನಿಂದ ಮೃತಪಟ್ಟ ಯುವಕನ ಕಣ್ಣುಗಳನ್ನು ದಾನ ಮಾಡುವ ಮೂಲಕ ಪೋಷಕರು ಸಾವಿನಲ್ಲೂ ಸಾರ್ಥಕತೆ ಕಂಡಿದ್ದಾರೆ. ತಿಮ್ಮಸಂದ್ರ ಗ್ರಾಮದ ಯುವಕನ ಕಣ್ಣುಗಳು ಮತ್ತೊಬ್ಬ ವ್ಯಕ್ತಿಯ ಬಾಳಿಗೆ ಬೆಳಕು ನೀಡಿದೆ.
ಮುನೇಗೌಡ (34) ಎಂಬವರು ಆಗಸ್ಟ್ 12ರ ರಾತ್ರಿ 8 ಗಂಟೆ ಸಮಯದಲ್ಲಿ ಬೈಕ್ನಲ್ಲಿ ಮನೆಯತ್ತ ಬರುತ್ತಿದ್ದಾಗ ಅಪಘಾತಕ್ಕೀಡಾಗಿ ಗಂಭೀರವಾಗಿ ಗಾಯಗೊಂಡಿದ್ದರು. ಹೆಬ್ಬಾಳದ ಆಸ್ಟರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.
ಆದರೆ, ಮೆದುಳು ನಿಷ್ಕ್ರಿಯಗೊಂಡಿದ್ದು, ವೈದ್ಯರು ಇಂದು ಅವರು ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ. ಇದೇ ತಿಂಗಳು ಮುನೇಗೌಡರ ಮದುವೆ ನಿಶ್ಚಯಿಸಲಾಗಿತ್ತು.
ಮಗನ ಸಾವಿನ ಶೋಕದ ನಡುವೆಯೂ ಹೆತ್ತವರು ಇಡೀ ದೇಹವನ್ನು ಆಸ್ಪತ್ರೆಗೆ ದಾನ ಮಾಡಲು ತೀರ್ಮಾನ ಮಾಡಿದ್ದರು. ಆದರೆ, ಅಂತಿಮವಾಗಿ ಕಣ್ಣುಗಳನ್ನು ದಾನ ಮಾಡಿ ಸಾರ್ಥಕತೆ ಮರೆದಿದ್ದಾರೆ.
ಇದನ್ನೂ ಓದಿ: ಬ್ರೈನ್ ಡೆಡ್ ಆದ ಮಗನ ಲಿವರ್ ಮುಸ್ಲಿಂ ವ್ಯಕ್ತಿಗೆ ದಾನ; ಮಾನವೀಯತೆ ಮೆರೆದ ಹಿಂದೂ ಕುಟುಂಬ - Liver Donation