ETV Bharat / state

ಹೊಸೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆಗೆ ಬಸವರಾಜ ಬೊಮ್ಮಾಯಿ ಆಕ್ಷೇಪ - basavaraj bommai

ತಮಿಳುನಾಡು ಸರ್ಕಾರ ಹೊಸೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆ ಯೋಜನೆ ಘೋಷಣೆ ಮಾಡಿರುವುದಕ್ಕೆ ಸಂಸದ, ಮಾಜಿ ಸಿಎಂ ಬಸವರಾಜ​ ಬೊಮ್ಮಾಯಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ (ETV Bharat)
author img

By ETV Bharat Karnataka Team

Published : Jul 4, 2024, 9:17 AM IST

ಬೆಂಗಳೂರು/ನವದೆಹಲಿ: ತಮಿಳುನಾಡಿನ ಸಿಎಂ ಗಡಿಭಾಗದಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸ್ಥಾಪಿಸುವ ಯೋಜನೆಯನ್ನು ಘೋಷಿಸಿರುವುದಕ್ಕೆ ಮಾಜಿ ಸಿಎಂ ಹಾಗೂ ಹಾವೇರಿ-ಗದಗ ಸಂಸದ ಬಸವರಾಜ ಬೊಮ್ಮಾಯಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 150 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಮತ್ತೊಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾಡುವಂತಿಲ್ಲ. ಹೊಸೂರು ತಮಿಳುನಾಡಿನಲ್ಲಿದ್ದರೂ ಅದರ ಭಾಗ ಬೆಂಗಳೂರಿನ ಮೇಲಿದೆ. ಬೆಂಗಳೂರು‌ ಬೆಳೆಯುತ್ತಿರುವುದನ್ನು ನೋಡಿದರೆ ಇನ್ನೊಂದು ವಿಮಾನ ನಿಲ್ದಾಣದ ಅವಶ್ಯಕತೆ ಇದೆ.

ಹೊಸದಾಗಿ ವಿಮಾನ ನಿಲ್ದಾಣ ಇಲ್ಲಿ ಮಾಡದಿದ್ದರೂ ಹೆಚ್‌ಎಎಲ್ ಅನ್ನು ದೇಶಿಯ ವಿಮಾನ ನಿಲ್ದಾಣವಾಗಿ ಬಳಕೆ ಮಾಡಬಹುದಾಗಿದೆ. ನಾನು ಸಿಎಂ ಆಗಿದ್ದಾಗ ರಕ್ಷಣಾ ಸಚಿವರ ಬಳಿ ಇದರ ಬಗ್ಗೆ ಮಾತನಾಡಿದ್ದೆ. ಹೆಚ್‌ಎಎಲ್ ಅನುಮತಿ ನೀಡಿದರೆ ಅದರ ಬಳಕೆಗೆ ಸರ್ಕಾರ ಸಿದ್ಧವಿದೆ ಎಂದರು. ಹೊಸೂರು ವಿಮಾನ ನಿಲ್ದಾಣದಿಂದ ಬೆಂಗಳೂರಿನಲ್ಲಿ ಐಟಿ ಅಭಿವೃದ್ಧಿ ಆಗುವುದಿಲ್ಲ. ಬೆಂಗಳೂರು ಐಟಿ ಕ್ಷೇತ್ರ ಈಗಾಗಲೇ ಬೆಳೆದಿದೆ. ನಮ್ಮ ಜನರು‌ ಬುದ್ಧಿವಂತರಿದ್ದಾರೆ. ಅವರ ಟ್ಯಾಲೆಂಟ್‌ ನಿಂದ ಬೆಂಗಳೂರು ಬೆಳೆದಿದೆ ಎಂದರು.

ಇನ್ನು, ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿಯ ಹಿಂದೂ ಹೇಳಿಕೆಗೆ ತಿರುಗೇಟು ನೀಡಿದ ಬೊಮ್ಮಾಯಿ ಅವರು, ರಾಹುಲ್‌ ಗಾಂಧಿಗೆ ಏನು ಹೇಳಬೇಕು, ಏನು ಮಾತನಾಡಬೇಕು ಎನ್ನುವುದು ಅವರಿಗೇ ಗೊತ್ತಿಲ್ಲ. ತಮ್ಮ ಮಾತಿನಿಂದ ಬೇರೆಯವರನ್ನು ಗೊಂದಲಕ್ಕೆ ಒಳಪಡಿಸುತ್ತಾರೆ. ದೇಶ ಸುತ್ತಿದ ಮೇಲೆ ಅವರ ಪ್ರಬುದ್ಧತೆ ಹೆಚ್ಚಾಗಬೇಕಿತ್ತು. ಆದರೆ ಧಾರ್ಮಿಕ ಭಾವನೆಗಳಿಗೆ ದಕ್ಕೆ ಬರುವಂತೆ ಮಾತನಾಡುತ್ತಿದ್ದಾರೆ. ಸಂಸತ್ತಿನಲ್ಲಿ ಹೀಗೆ ಮಾತನಾಡುವುದಿದ್ದರೆ ಕಾಂಗ್ರೆಸ್ ಪಕ್ಷ ಜಾತ್ಯತೀತ ವಾದ ಬಿಡುವುದು ಒಳ್ಳೆಯದು ಎಂದು ಟಾಂಗ್​ ಕೊಟ್ಟರು.

ಇಳಕಲ್ ಕಾರವಾರ ಎನ್​ಹೆಚ್: ಇಳಕಲ್- ಕಾರವಾರ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಲು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಬೊಮ್ಮಾಯಿ ಮನವಿ ಮಾಡಿದ್ದಾರೆ. ನವದೆಹಲಿಯಲ್ಲಿ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ, ಕರ್ನಾಟಕದ ಮುಖ್ಯಮಂತ್ರಿ ಕೆಲಸ ಮಾಡಿದ್ದು ಅತ್ಯಂತ ಹೆಮ್ಮೆಯ ಸಂಗತಿ.

ಕರ್ನಾಟಕದಲ್ಲಿ ರಸ್ತೆ ಹಾಗೂ ಹೆದ್ದಾರಿ ಮೂಲ ಸೌಕರ್ಯ ಅಭಿವೃದ್ಧಿಯಲ್ಲಿ ಕ್ರಾಂತಿಕಾರಕ ಬದಲಾವಣೆಯಾಗಿದೆ. ಪ್ರಸ್ತುತ ಇಳಕಲ್ ಕಾರವಾರ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯನ್ನಾಗಿ ಪರಿವರ್ತಿಸುವುದು, ರೋಣ ತಾಲೂಕಿನ ಗಜೇಂದ್ರಗಢ ರಿಂಗ್ ರಸ್ತೆ ಹಾಗೂ ಗದಗ ರಿಂಗ್ ರಸ್ತೆ ಯೋಜನೆಗಳನ್ನು ಜಾರಿಗೊಳಿಸುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಸಂಸದ ಡಾ. ಸುಧಾಕರ್ ಹಾಜರಿದ್ದರು.

ಇದನ್ನೂ ಓದಿ: ನಿರ್ಮಾಣ ಹಂತದ 1.30 ಲಕ್ಷ ಮನೆಗಳ ಕಾಮಗಾರಿ ಶೀಘ್ರ ಪೂರ್ಣಗೊಳಿಸುವಂತೆ ಸಿಎಂ ಸೂಚನೆ - CM INSTRUCTIONS ON HOUSING SCHEMES

ETV Bharat Logo

Copyright © 2024 Ushodaya Enterprises Pvt. Ltd., All Rights Reserved.