ETV Bharat / state

ಹುಬ್ಬಳ್ಳಿ ಗಲಭೆ ಕೇಸ್ ವಾಪಸ್ ಖಂಡಿಸಿ ಫ್ರೀಡಂ ಪಾರ್ಕ್​​ನಲ್ಲಿ ಬಿಜೆಪಿ ಪ್ರತಿಭಟನೆ: ಹುಬ್ಬಳ್ಳಿಯಲ್ಲೂ ಪ್ರತಿಭಟನೆಯ ಎಚ್ಚರಿಕೆ

ಹುಬ್ಬಳ್ಳಿ ಗಲಭೆ ಕೇಸ್ ವಾಪಸ್ ಪಡೆದ ರಾಜ್ಯ ಸಚಿವ ಸಂಪುಟ ನಿರ್ಣಯದ ವಿರುದ್ಧ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ರಾಜ್ಯ ಬಿಜೆಪಿ ಪ್ರತಿಭಟನೆ ನಡೆಸಿತು. ವಿಜಯೇಂದ್ರ, ಅಶೋಕ್, ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಹಲವರು ಭಾಗಿಯಾಗಿದ್ದರು.

author img

By ETV Bharat Karnataka Team

Published : 3 hours ago

BJP protests at Freedom Park condemning Hubli riot case
ಹುಬ್ಬಳ್ಳಿ ಗಲಭೆ ಕೇಸ್ ವಾಪಸ್ ಖಂಡಿಸಿ ಫ್ರೀಡಂ ಪಾರ್ಕ್​​ನಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿ ಮುಖಂಡರು (ETV Bharat)

ಬೆಂಗಳೂರು: "ತಮ್ಮ ಖುರ್ಚಿ ಉಳಿಸಿಕೊಳ್ಳಲು ಸಿಎಂ ಸಿದ್ದರಾಮಯ್ಯ ಹುಬ್ಬಳ್ಳಿ ಗಲಭೆ ಕೇಸ್ ವಾಪಸ್ ಪಡೆಯುವ ಬೇಜವಾಬ್ದಾರಿ ಕೆಲಸ ಮಾಡ್ತಿದಾರೆ. ದುಷ್ಟ ಮುಖ್ಯಮಂತ್ರಿ ವಿರುದ್ಧ ಹೋರಾಟ ಮಾಡಲು‌ ಜನ‌ ಬೀದಿಗಿಳಿದಿದ್ದಾರೆ. ಮುಂದಿನ ದಿನಗಳಲ್ಲಿ ಹುಬ್ಬಳ್ಳಿಯಲ್ಲೂ ಪ್ರತಿಭಟನೆ ನಡೆಸುತ್ತೇವೆ. ಅವರು ರಾಜೀನಾಮೆ ಕೊಡುವ ದಿನ ದೂರವಿಲ್ಲ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.

ನಗರದ ಫ್ರೀಡಂ ಪಾರ್ಟ್​ನಲ್ಲಿಂದು ರಾಜ್ಯ ಬಿಜೆಪಿಯಿಂದ ಪ್ರತಿಭಟನೆ ನಡೆಸಲಾಯಿತು. ಈ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ವಿಜಯೇಂದ್ರ, "ಸಿದ್ದರಾಮಯ್ಯನವರು ಕಳೆದ ಮೂರು ತಿಂಗಳಿನಿಂದ ವಿಲವಿಲ ಒದ್ದಾಡ್ತಿದ್ದಾರೆ. ಕಾವೇರಿ ನಿವಾಸದಿಂದ ಹೊರಬರಲು ಯೋಚನೆ ಮಾಡ್ತಿದ್ದಾರೆ. ಈಗ‌ ಜಾತಿ‌ ಜನಗಣತಿ ವಿಚಾರ ತೆಗೆದಿದ್ದಾರೆ. ಎನ್​ಐಎ ತನಿಖೆ ಇನ್ನೂ ನಡೀತಿದೆ. ಇಷ್ಟಿದ್ದರೂ ಜವಾಬ್ದಾರಿಯುತ ಸಿಎಂ ಆಗಿ ಈ ರೀತಿ ಕರ್ತವ್ಯ ನಿರ್ವಹಿಸಿರೋದು ಸರೀನಾ? ಇವತ್ತು ಮತ್ತೊಮ್ಮೆ ಹೇಳ್ತೇನೆ, ಸಿದ್ದರಾಮಯ್ಯನವರೇ ನೀವು ರಾಜೀನಾಮೆ ಕೊಡೋದು‌ ನಿಶ್ಚಿತ.‌ ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿರ್ತಾರೆ ಅಂತಾ ಮಲ್ಲಿಕಾರ್ಜುನ ಖರ್ಗೆ ಅವರ‌ ಬಳಿ ಹೇಳಿಸಿ ನೋಡೋಣ? ಎಂದು ಸವಾಲು ಹಾಕಿದರು.

ಪ್ರತಿಪಕ್ಷ ನಾಯಕ ಆರ್.ಅಶೋಕ್ ಮಾತನಾಡುತ್ತಿರುವುದು (ETV Bharat)

"ರಾಜೂ ಕಾಗೆ ಅವರು ಇಂತಹ ಸರ್ಕಾರದಲ್ಲಿ ಶಾಸಕರಾಗಿ ಇರೋದಕ್ಕಿಂತ ಆತ್ಮಹತ್ಯೆ ಮಾಡಿಕೊಳ್ಳೋದು ಸೂಕ್ತ ಎಂದಿದ್ದಾರೆ. ಭ್ರಷ್ಟಾಚಾರದಲ್ಲಿ ಕಾಂಗ್ರೆಸ್ ಮುಳುಗಿ ಹೋಗಿದೆ. ಸಿದ್ದರಾಮಯ್ಯ ರಾಜೀನಾಮೆ ನೀಡು ಕಾಲ‌ ಸನ್ನಿಹಿತ. ದೇಶದ್ರೋಹಿಗಳ ಕೇಸ್ ವಾಪಸ್ ತೆಗೆದುಕೊಳ್ತಿದಾರೆ. ಇನ್ನೆಷ್ಟು ದಿನ ಅಲ್ಪಸಂಖ್ಯಾತರ‌ ತುಷ್ಟೀಕರಣ‌ ಮಾಡ್ತೀರಿ? ಜಮ್ಮು ಕಾಶ್ಮೀರ ರಿಸಲ್ಟ್ ನೋಡಿಯೂ ತಿಳಿದುಕೊಳ್ತಿಲ್ಲ" ಎಂದು ವಾಗ್ದಾಳಿ ನಡೆಸಿದರು.

ಪ್ರತಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, "ಕಾಂಗ್ರೆಸ್​ನವರು ಯಾರೋ ಋಣ ತೀರಿಸೋಕೆ‌ ಹೊರಟಿದ್ದಾರೆ. ಈಗ ಖರ್ಗೆ ಅವರು ಸೈಟ್‌ ವಾಪಸ್ ಕೊಟ್ಟಿದ್ದಾರೆ. ಮತ್ತೊಂದೆಡೆ ಸಿದ್ದರಾಮಯ್ಯ ಅವರು ಸೈಟ್ ವಾಪಸ್ ಕೊಟ್ಟಿದಾರೆ. ಇನ್ನೊಂದೆಡೆ ಕೇಸ್ ವಾಪಸ್ ಪಡೀತಿದಾರೆ. ಸಿದ್ದರಾಮಯ್ಯ ಅವರನ್ನು ಎಲ್ರೂ ಕೈಬಿಟ್ಟಿದ್ದಾರೆ. ಸಿ.ಟಿ.ರವಿ ಅವರೇನು ಕೇಳಿರಲಿಲ್ಲ, ಕೇಸ್ ವಾಪಸ್ ತಗೋಳಿ ಎಂದಿರಲಿಲ್ಲ, ಕನ್ನಡ ಹೋರಾಟಗಾರ ನಾರಾಯಣ ಗೌಡ್ರನ್ನು ಯಾಕೆ ತಿಂಗಳುಗಟ್ಟಲೆ ಜೈಲಿಗೆ ಹಾಕಿದ್ರಿ? ಮುನಿರತ್ನರನ್ನು ನಾವ್ಯಾರೂ ಸಪೋರ್ಟ್ ಮಾಡಲ್ಲ, ವಿನಯ್ ಕುಲಕರ್ಣಿ ಅವರನ್ನು ಯಾಕೆ ಅರೆಸ್ಟ್ ಮಾಡಿಲ್ಲ? ಎನ್​ಐಎ ಕೇಸ್ ನಡೀತಿದೆ, ಕೋರ್ಟ್ ಜಾಮೀನು ನೀಡಲಿಲ್ಲ, ಪಬ್ಲಿಕ್ ಪ್ರಾಸಿಕ್ಯೂಟರ್ ಚೇಂಜ್‌ ಮಾಡಿ‌ ಅವರಿಗೆ ಬೇಲ್ ಸಿಗುವಂತೆ ಮಾಡಿದ್ರು" ಎಂದು ಆರೋಪಿಸಿದರು.

ಇದೇ ವೇಳೆ ಸಂಸದ ಗೋವಿಂದ ಕಾರಜೋಳ, ಮಾಜಿ ಡಿಸಿಎಂ ಡಾ.ಅಶ್ವಥ್ ‌ನಾರಾಯಣ್ ಕೂಡಾ ಸರ್ಕಾರದ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ: ಸಿಎಂ ತೆರಳುತ್ತಿದ್ದ ಮಾರ್ಗದಲ್ಲಿ ಪ್ರತಿಭಟನೆ: ಬಳ್ಳಾರಿಯಲ್ಲಿ ಭೂ ಸಂತ್ರಸ್ತ ಹೋರಾಟಗಾರರು ಪೊಲೀಸ್​​ ವಶಕ್ಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.