ETV Bharat / state

ಬೆಂಗಳೂರು ಮಹಾನಗರ ವಿಭಜನೆ ಬೇಡ: ಸಿಎಂ, ಡಿಸಿಎಂಗೆ ಪತ್ರ ಬರೆದ ಎನ್‌.ಆರ್.ರಮೇಶ್ - BJP Leader N R Ramesh - BJP LEADER N R RAMESH

ಬೆಂಗಳೂರು ಮಹಾನಗರವನ್ನು ವಿಭಜಿಸದಂತೆ ಬಿಜೆಪಿ ನಾಯಕ ಎನ್.ಆರ್.ರಮೇಶ್​ ಅವರು ಸಿಎಂ ಹಾಗೂ ಡಿಸಿಎಂಗೆ ಪತ್ರ ಬರೆದಿದ್ದಾರೆ.

bjp-leader-n-r-ramesh
ಬಿಜೆಪಿ ನಾಯಕ ಎನ್‌.ಆರ್.ರಮೇಶ್ (ETV Bharat)
author img

By ETV Bharat Karnataka Team

Published : Jun 12, 2024, 6:41 PM IST

ಬೆಂಗಳೂರು: ಯಾವುದೇ ಕಾರಣಕ್ಕೂ ನಾಡಪ್ರಭು ಕೆಂಪೇಗೌಡರು ನಿರ್ಮಿಸಿರುವ ಬೆಂಗಳೂರು ಮಹಾನಗರವನ್ನು ವಿಭಜನೆ ಮಾಡಬಾರದೆಂದು ಕೋರಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ಎನ್.ಆರ್.ರಮೇಶ್ ಪತ್ರ ಬರೆದಿದ್ದಾರೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು 5 ಭಾಗಗಳಾಗಿ ವಿಭಜಿಸಲು ನಿರ್ಧರಿಸಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಒಂದು ಸುಂದರ-ಸುಸಜ್ಜಿತ ನಗರವನ್ನು ನಿರ್ಮಾಣ ಮಾಡಬೇಕೆಂಬ ನಾಡಪ್ರಭು ಕೆಂಪೇಗೌಡರ ಮಹಾತ್ವಾಕಾಂಕ್ಷೆಯಂತೆ ವಿಜಯನಗರ ಸಾಮ್ರಾಜ್ಯದ ಅರಸರಾದ ಅಚ್ಯುತರಾಯರು ನಾಡಪ್ರಭು ಕೆಂಪೇಗೌಡರಿಗೆ ಬೆಂಗಳೂರು ಮಹಾನಗರ ನಿರ್ಮಾಣಕ್ಕೆಂದು ಹನ್ನೆರಡು ಹೋಬಳಿ (ಉತ್ತರಹಳ್ಳಿ, ವರ್ತೂರು, ಯಲಹಂಕ, ಬೇಗೂರು, ಹಲಸೂರು, ಕೆಂಗೇರಿ, ತಲಘಟ್ಟಪುರ, ಜಿಗಣಿ, ಕುಂಬಳಗೋಡು, ಕಾಗಳ್ಳಿ, ಬಾಣಾವಾರ ಮತ್ತು ಹೆಸರುಘಟ್ಟ)ಗಳನ್ನು ಜಹಗೀರಾಗಿ ನೀಡಿರುವುದು ಇತಿಹಾಸದಲ್ಲಿ ದಾಖಲಾಗಿದೆ.

ಈಗಾಗಲೇ ದೆಹಲಿ ಮಹಾನಗರ ಪಾಲಿಕೆಯನ್ನು ಆಡಳಿತಾತ್ಮಕವಾಗಿ ಮೂರು ಭಾಗಗಳಾಗಿ ವಿಭಜಿಸಿ ಆಗಿರುವ ಅನಾಹುತಗಳ ಬಗ್ಗೆ ತಮಗೆ ಅರಿವು ಇದೆ ಎಂದು ಭಾವಿಸುತ್ತೇನೆ. ದೆಹಲಿ ಮಹಾನಗರ ಪಾಲಿಕೆಯನ್ನು ಮೂರು ಭಾಗಗಳಾಗಿ ವಿಭಜಿಸಿದ ನಂತರ ಆರ್ಥಿಕ ಅಸಮತೋಲನ ಉಂಟಾಗಿತ್ತು. ಈ ಆರ್ಥಿಕ ಅಸಮತೋಲನದಿಂದ ಚೇತರಿಸಿಕೊಳ್ಳಲಾಗದೇ ಕೊನೆಗೆ ದೆಹಲಿಯ ಮೂರು ಮಹಾನಗರ ಪಾಲಿಕೆಗಳು ಒಂದಾಗಬೇಕೆಂದು ನಿರ್ಣಯ ತೆಗೆದುಕೊಂಡು, ಒಂದೇ ಮಹಾನಗರ ಪಾಲಿಕೆಯನ್ನಾಗಿ ಮಾಡಿರುತ್ತಾರೆ. ತಾವು ಈ ರೀತಿ ವಿಭಜನೆ ಮಾಡಿದರೆ, ಪ್ರಾದೇಶಿಕವಾಗಿ ಆರ್ಥಿಕ ಅಸಮತೋಲನ ಹೆಚ್ಚಾಗುತ್ತದೆಯೇ ಹೊರತು, ಇದರಿಂದ ಬೆಂಗಳೂರಿಗೆ ಒಳಿತಾಗುವ ಕೆಲಸ ಕಾರ್ಯಗಳಾಗುವುದಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಬೆಂಗಳೂರು ಮಹಾನಗರದ ಪಶ್ಚಿಮ ಭಾಗದ ಬಹುತೇಕ ಭಾಗಗಳಲ್ಲಿ ಆದಾಯ ತೆರಿಗೆ ಸಂಗ್ರಹ ಸೇರಿದಂತೆ ಪಾಲಿಕೆಯ ವಿವಿಧ ಮೂಲಗಳ ಆದಾಯ ಸಂಗ್ರಹವು ಅತ್ಯಂತ ಕಡಿಮೆ ಪ್ರಮಾಣದಲ್ಲಿರುತ್ತದೆ. ಹಾಗೆಯೇ ಬೆಂಗಳೂರು ಮಹಾನಗರದ ಪೂರ್ವ ಭಾಗಗಳ ಪ್ರದೇಶಗಳಲ್ಲಿನ ಆದಾಯ ತೆರಿಗೆ ಸೇರಿದಂತೆ ವಿವಿಧ ಆದಾಯ ಮೂಲಗಳಿಂದ ಸಂಗ್ರಹವಾಗುವ ಹಣದ ಪ್ರಮಾಣ ಬಹಳ ಹೆಚ್ಚಾಗಿದೆ.

ನೀವು ವಿಭಜಿಸಬೇಕೆಂದುಕೊಂಡಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಒಂದು ಭಾಗಕ್ಕೆ ಸೇರ್ಪಡೆಯಾಗುವ ಮಹದೇವಪುರ ವಲಯ ಮತ್ತು ಪೂರ್ವ ವಲಯಗಳನ್ನು ಒಳಗೊಂಡಿರುವ ಪಾಲಿಕೆ ಆರ್ಥಿಕವಾಗಿ ಅತ್ಯಂತ ಶ್ರೀಮಂತ ಪಾಲಿಕೆಯಾಗುತ್ತದೆ ಹಾಗೂ ದಾಸರಹಳ್ಳಿ ವಲಯ ಮತ್ತು ಪಶ್ಚಿಮ ವಲಯಗಳನ್ನು ಒಳಗೊಂಡ ಪಾಲಿಕೆ ಆರ್ಥಿಕವಾಗಿ ಅತ್ಯಂತ ಹಿಂದುಳಿದ ಪಾಲಿಕೆಯಾಗುತ್ತದೆ. ಈ ಎಲ್ಲಾ ವಿಷಯಗಳನ್ನು ಅರ್ಥಮಾಡಿಕೊಂಡು ಪ್ರಾದೇಶಿಕವಾಗಿ ಆರ್ಥಿಕ ಅಸಮತೋಲನ ಉಂಟು ಮಾಡುವ ಪರಿಸ್ಥಿತಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ತರುವಂತಹ ತಮ್ಮ ಯೋಚನೆಯನ್ನು ಕೈಬಿಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಆದಷ್ಟು ಬೇಗ ಬಿಬಿಎಂಪಿ ಚುನಾವಣೆ ನಡೆಸಲು ತಯಾರಿ: ಡಿ.ಕೆ.ಶಿವಕುಮಾರ್ - D K Shivakumar

ETV Bharat Logo

Copyright © 2025 Ushodaya Enterprises Pvt. Ltd., All Rights Reserved.