ETV Bharat / state

ವಿಧಾನಪರಿಷತ್​ನಲ್ಲಿ ಸಿಎಂ ವಿಷಾದಕ್ಕೆ ಪ್ರತಿಪಕ್ಷಗಳ ಪಟ್ಟು, ಒಪ್ಪದ ಸರ್ಕಾರ: ಬಿಜೆಪಿ-ಜೆಡಿಎಸ್ ಸಭಾತ್ಯಾಗ - ಸಿಎಂ ಸಿದ್ದರಾಮಯ್ಯ

ನಾನು ಉತ್ತರ ಕೊಡುತ್ತಿದ್ದೆ, ರುದ್ರೇಗೌಡರು ಮಧ್ಯಪ್ರವೇಶಕ್ಕೆ ಯತ್ನಿಸಿದರು. ಅವರಿಗೆ ಕುಳಿತುಕೊಳ್ಳಿ ಎಂದೆ ಅಷ್ಟೇ, ಅಗೌರವದಿಂದ ಅಲ್ಲ, ಆಗ ಬಳಸಿದ ಕೆಲ ಪದ ಕಡತದಿಂದ ತೆಗೆದ ನಂತರ ಮತ್ತೆ ಚರ್ಚೆ ಯಾಕೆ? ಅವು ಅಸಂಸದೀಯ ಪದ ಅಲ್ಲ, ಸಭಾಪತಿ ತೀರ್ಪು ನಾವು ಗೌರವಿಸಿ ಒಪ್ಪಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು.

Legislative Council
ವಿಧಾನಪರಿಷತ್
author img

By ETV Bharat Karnataka Team

Published : Feb 15, 2024, 3:49 PM IST

Updated : Feb 15, 2024, 11:03 PM IST

ವಿಧಾನಪರಿಷತ್ ಕಲಾಪ

ಬೆಂಗಳೂರು: ಪ್ರಶ್ನೋತ್ತರ ಕಲಾಪದಲ್ಲಿ ಪ್ರತಿಪಕ್ಷಗಳ ವಿರುದ್ಧ ಸಿಎಂ ಸಿದ್ದರಾಮಯ್ಯ ಅವರು ಬಳಸಿದ ಕೆಲ ಪದಗಳು ವಿಧಾನ ಪರಿಷತ್​​ನಲ್ಲಿ ಗದ್ದಲ ಕೋಲಾಹಲ ಸೃಷ್ಟಿಗೆ ಕಾರಣವಾದವು. ಪದಗಳನ್ನು ಕಡತದಿಂದ ತೆಗೆದರೂ ಸಮಾಧಾನಗೊಳ್ಳದ ಪ್ರತಿಪಕ್ಷದ ಸದಸ್ಯರು, ಆ ಪದಗಳ ಬಳಕೆಗೆ ಸಂಬಂಧಿಸಿದಂತೆ ಸಿಎಂ ವಿಷಾದ ವ್ಯಕ್ತಪಡಿಸಬೇಕೆಂದು ಪಟ್ಟುಹಿಡಿದರು. ಆದರೆ, ಸಿಎಂ ತಮ್ಮ ನಿಲುವನ್ನು ಸಮರ್ಥಿಸಿಕೊಂಡರು. ಈ ಹಿನ್ನೆಲೆ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಸಭಾತ್ಯಾಗ ಮಾಡಿದರು.

ಪ್ರಶ್ನೋತ್ತರ ಕಲಾಪದಲ್ಲಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾದ ತೆರಿಗೆ ಬಾಕಿ ವಿಚಾರದ ಕುರಿತ ಪ್ರಶ್ನೆಗೆ ಸಿಎಂ ಉತ್ತರಿಸುವ ವೇಳೆ ನಡೆದ ಗದ್ದಲದಿಂದ 10 ನಿಮಿಷ ಮುಂದೂಡಿಕೆ ಆಗಿದ್ದ ಕಲಾಪ ಮ. 1.15 ಗಂಟೆ ನಂತರ ಆರಂಭವಾಯಿತು. ಕಲಾಪ ಆರಂಭವಾಗುತ್ತಿದ್ದಂತೆ ಮಾತನಾಡಿದ ಜೆಡಿಎಸ್ ಸದಸ್ಯ ಶರವಣ ಪ್ರಶ್ನೋತ್ತರಕ್ಕೆ ಎಷ್ಟು ಸಮಯ ನಿಗದಿ ಇದೆ. ಐದು ನಿಮಿಷದವರೆಗೆ ಮಾತನಾಡಬಹುದು. ಆದರೆ ಸಿಎಂ ಭಾಷಣದ ರೀತಿ ಮಾತನಾಡಿದ್ದಾರೆ, ಒಂದು ಪ್ರಶ್ನೆಗೆ ಎಷ್ಟು ಸಮಯ ನಿಗದಿಯಾಗಿದೆ? ಸಿಎಂ ಭಾಷಣದಲ್ಲಿ ನಮ್ಮನ್ನೆಲ್ಲಾ ಉದ್ದೇಶಿಸಿ ಬಳಸಿದ ಕೆಲ ಪದಗಳು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು. ಈ ವೇಳೆ ಮತ್ತೆ ಸದನದಲ್ಲಿ ಗದ್ದಲದ ವಾತಾವರಣ ಸೃಷ್ಟಿಯಾಯಿತು. ಸದಸ್ಯರ ವರ್ತನೆಗೆ ಅಸಮಾಧಾನ ವ್ಯಕ್ತಪಡಿಸಿದ ಸಭಾಪತಿ ಬಸವರಾಜ ಹೊರಟ್ಟಿ, ನನ್ನ ಸೌಜನ್ಯ ದುರುಪಯೋಗ ಪಡಿಸಿಕೊಳ್ಳಬೇಡಿ, ಸದನ ನಡೆಸಲು ಅವಕಾಶ ನೀಡಿ ಎಂದು ಸೂಚಿಸಿದರು.

ಈ ವೇಳೆ ಮಾತನಾಡಿದ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಒಂದು ಪ್ರಶ್ನೆಗೆ 4 ನಿಮಿಷ ಉತ್ತರ ನೀಡಬಹುದು. ಆದರೆ ಸಿಎಂ ಸಿದ್ದರಾಮಯ್ಯ ಹೆಚ್ಚು ಮಾತನಾಡಿದ್ದಾರೆ. ಇದಕ್ಕೆ ಆಕ್ಷೇಪ ಇಲ್ಲ, ಆದರೆ ಸಿಎಂ ಬಳಸಿದ ಪದಗಳು ನಮಗೆ ನೋವಾಗಿದೆ. ಸಿಎಂ ಎನ್ನುವುದು ವ್ಯಕ್ತಿಯಲ್ಲ ಹುದ್ದೆ. ಸುದೀರ್ಘ ಅನುಭವ ಇರುವ ಸಿಎಂ ಈ ರೀತಿ ಪದ ಬಳಸಿದ್ದಕ್ಕೆ ನೋವಾಗಿದೆ. ಹಾಗಾಗಿ ಅವರು ವಿಷಾದ ವ್ಯಕ್ತಪಡಿಸಬೇಕು ಎಂದು ಮನವಿ ಮಾಡಿದರು.

ಬಿಜೆಪಿ ಬೇಡಿಕೆ ತಳ್ಳಿಹಾಕಿದ ಕಾನೂನು ಸಚಿವ ಹೆಚ್​​​ ಕೆ ಪಾಟೀಲ್, ಗಂಭೀರ ಸಮಸ್ಯೆಗೆ ಉತ್ತರ ಹೇಳುವಾಗ ಎರಡೂ ಕಡೆ ಆಕ್ರೋಶದ ವಾತಾವರಣ ಇತ್ತು. ಸದನ ಮುಂದೂಡಿ ಮತ್ತೆ ಈಗ ಆರಂಭವಾಗಿದೆ, ಕೆಲ ಪದ ಕಡತದಿಂದ ತೆಗೆಸಿದ್ದೀರಿ. ಒಮ್ಮೆ ಆ ವಿಷಯ ತೆಗೆದುಹಾಕಿದ ನಂತರ ಅದು ಅಲ್ಲಿಗೆ ಮುಕ್ತಾಯವಾಗಿದೆ. ಹಾಗಾಗಿ ಅದರ ಬಗ್ಗೆ ಮತ್ತೆ ಚರ್ಚೆ, ಮತ್ತೆ ಪ್ರಸ್ತಾಪ ಸರಿಯಲ್ಲ ಎಂದು ತಿಳಿಸಿದರು.

ಸಿಎಂ ಕ್ಷಮೆಗೆ ಆಗ್ರಹ: ಸರ್ಕಾರದ ಸಮಜಾಯಿಷಿಗೆ ಪ್ರತಿಪಕ್ಷ ಸಚೇತಕ ರವಿಕುಮಾರ್ ಅಸಮಾಧಾನ ವ್ಯಕ್ತಪಡಿಸಿ, ಸಿಎಂ ಕ್ಷಮೆಗೆ ಆಗ್ರಹಿಸಿದರು. ಕಡತದಿಂದ ತೆಗೆದಿದ್ದನ್ನು ಒಪ್ಪಿಕೊಳ್ಳುತ್ತೇವೆ, ಆದರೆ ಕ್ಷಮೆ ಕೇಳಬೇಕು. ಹೌದು ತಪ್ಪಾಗಿದೆ ಎಂದು ಕ್ಷಮೆ ಕೇಳಿದರೆ ಏನು ತಪ್ಪಾಗಲಿದೆ? ಎಂದರು. ಇದಕ್ಕೆ ದನಿಗೂಡಿಸಿದ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಯಾರು ಏನು ಬೇಕಾದರೂ ಹೇಳಿ ಕಡತದಿಂದ ತೆಗೆದರೆ ಮುಂದೆ ಇದೇ ಸಂಪ್ರದಾಯ ಮುಂದುವರೆಯುವ ಅಪಾಯ ಇದೆ. ಮಾತಾಡಿ ಕಡತದಿಂದ ತೆಗೆಸಿದರೆ ಆಯಿತು ಎನ್ನುವ ಪರಿಪಾಠ ಶುರುವಾಗಲಿದೆ. ಹಾಗಾಗಿ ಸಿಎಂ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದರು.

ಸಿಎಂ ಸ್ಪಷ್ಟೀಕರಣ: ಇದಕ್ಕೆ ಸ್ಪಷ್ಟೀಕರಣ ನೀಡಿದ ಸಿಎಂ ಸಿದ್ದರಾಮಯ್ಯ, ನನ್ನ ಹೇಳಿಕೆಯಲ್ಲಿ ಯಾವುದೇ ದುರುದ್ದೇಶ ಇಲ್ಲ, ನಾನು ಉತ್ತರ ಕೊಡುತ್ತಿದ್ದೆ. ರುದ್ರೇಗೌಡರು ಮಧ್ಯಪ್ರವೇಶಕ್ಕೆ ಯತ್ನಿಸಿದರು, ಅವರಿಗೆ ಕುಳಿತುಕೊಳ್ಳಿ ಎಂದೆ ಅಷ್ಟೇ. ಅಗೌರವದಿಂದ ಅಲ್ಲ, ಆಗ ಬಳಸಿದ ಕೆಲ ಪದ ಕಡತದಿಂದ ತೆಗೆದ ನಂತರ ಮತ್ತೆ ಚರ್ಚೆ ಯಾಕೆ? ಅವು ಅಸಂಸದೀಯ ಪದ ಅಲ್ಲ, ಸಭಾಪತಿ ತೀರ್ಪನ್ನು ನಾವು ಗೌರವಿಸಿ ಒಪ್ಪಿದ್ದೇವೆ ಎಂದರು.

ಇನ್ನು ಒಂದು ಪ್ರಶ್ನೆಗೆ ಬಹಳ ಉದ್ದವಾದ ಉತ್ತರ ಎನ್ನುವ ಆರೋಪ ಮಾಡಿದ್ದಾರೆ. ಆದರೆ ಆ ಪ್ರಶ್ನೆಗೆ ಅಷ್ಟು ವಿಸ್ತಾರವಾದ ಉತ್ತರ ಅಗತ್ಯವಿದೆ, ನಾನು ಉತ್ತರ ಮುಗಿಸಿಲ್ಲ, ಮುಗಿದ ನಂತರ ಉಪ ಪ್ರಶ್ನೆ ಕೇಳಿದರೆ ಉತ್ತರ ನೀಡಲು ಸಿದ್ಧ, ಅದಕ್ಕೆ ಕುಳಿತುಕೊಳ್ಳಿ ಎಂದಿದ್ದೆ ಅಷ್ಟೆ ಎಂದು ಸ್ಪಷ್ಟನೆ ನೀಡಿದರು.

ಸಿಎಂ ಸ್ಪಷ್ಟೀಕರಣ ಒಪ್ಪದ ಕೋಟ ಶ್ರೀನಿವಾಸ ಪೂಜಾರಿ, ಸಿಎಂ ರಂತಹ ದೊಡ್ಡ ವ್ಯಕ್ತಿ ಇಂತಹ ಪದ ಬಳಸಿದರೆ ಹೇಗೆ? ವಿಷಾದ ಸಹ ವ್ಯಕ್ತಪಡಿಸಲ್ಲ ಎಂದರೆ ಹೇಗೆ? ಎಂದರು ಇದಕ್ಕೆ ಟಕ್ಕರ್ ನೀಡಿದ ಸಿಎಂ ಎಲ್ಲರೂ ಎದ್ದು ನಿಂತು ಒಮ್ಮೆಲೆ ಪ್ರಶ್ನೆ ಕೇಳಿದರೆ ಏನು ಮಾಡಬೇಕು? ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು. ಉತ್ತರದ ವೇಳೆ ಮಧ್ಯ ಪ್ರವೇಶ ಮಾಡಬಹುದು, ಅಡ್ಡಿಪಡಿಸಬಹುದು ಎಂದು ನಿಯಮಾವಳಿಗೆ ಸೇರಿಸಿಬಿಡಿ ಎಂದು ಅಸಮಾಧಾನ ಹೊರಹಾಕಿದರು.

ಈ ವೇಳೆ ಪ್ರತಿಪಕ್ಷ, ಆಡಳಿತ ಪಕ್ಷದ ನಡುವೆ ಗದ್ದಲ ತಿಳಿಗೊಳಿಸುವ ವಿಚಾರದಲ್ಲಿ ಒಮ್ಮತ ಮೂಡದ ಕಾರಣ ಪ್ರಶ್ನೋತ್ತರ ಕಲಾಪ ಮೊಟಕುಗೊಳಿಸಿ ಮುಂದಿನ ಕಲಾಪ ಆರಂಭಕ್ಕೆ ಸಭಾಪತಿ ರೂಲಿಂಗ್ ನೀಡಿದರು.

ಸಭಾಪತಿ ನಿರ್ಧಾರಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸಿತು. ಸಿಎಂ ಕಡೆಯಿಂದ ಸ್ಪಷ್ಟೀಕರಣದ ನಂತರವೇ ಮುಂದಿನ ಕಲಾಪ ಆರಂಭಕ್ಕೆ ಬಿಜೆಪಿ ಜೆಡಿಎಸ್ ಸದಸ್ಯರು ಪಟ್ಟು ಹಿಡಿದರು. ಈ ವೇಳೆ ಮಾತನಾಡಿದ ಪ್ರತಿಪಕ್ಷ ಸಚೇತಕ ರವಿಕುಮಾರ್, ಸಿಎಂ ಅವರು ಬಳಸಿದ ಪದದಿಂದ ನಮಗೆ ನಾಚಿಕೆಯಾಗಿದೆ, ಬೇಸರವಾಗಿದೆ. ಹಾಗಾಗಿ ಸಿಎಂ ಕ್ಷಮೆ ಕೇಳಬೇಕು, ಇಲ್ಲದೇ ಇದ್ದಲ್ಲಿ ಸಭಾತ್ಯಾಗ ಮಾಡುತ್ತೇವೆ ಎಂದರು.

ಬಿಜೆಪಿ ಜೆಡಿಎಸ್ ಸದಸ್ಯರು ಸಭಾತ್ಯಾಗ: ಆದರೂ ಸಿಎಂ ವಿಷಾದ ವ್ಯಕ್ತಪಡಿಸದಿರುವುದನ್ನು ಖಂಡಿಸಿ ಬಿಜೆಪಿ ಜೆಡಿಎಸ್ ಸದಸ್ಯರು ಸಭಾತ್ಯಾಗ ಮಾಡಿದರು. ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತ ಹೊರನಡೆದರು. ಪ್ರತಿಪಕ್ಷಗಳ ಸಭಾತ್ಯಾಗದ ನಡುವೆ ಮಾತನಾಡಿದ ಸಿಎಂ, ಗೂಂಡಾಗಳಂತೆ ವರ್ತಿಸಬೇಡಿ ಅಂದೆ. ಗೂಂಡಾ ಎನ್ನಲಿಲ್ಲ ಎಂದು ಮತ್ತೊಮ್ಮೆ ಸಮಜಾಯಿಷಿ ನೀಡಿದರು. ಆದರೂ ಪ್ರತಿಪಕ್ಷ ಸದಸ್ಯರು ಸದನದಿಂದ ಹೊರನಡೆದರು.

ಇದನ್ನೂಓದಿ:ಎನ್​ಡಿಎ ಮೈತ್ರಿಕೂಟದಿಂದ ಇಬ್ಬರು ಅಭ್ಯರ್ಥಿಗಳು ರಾಜ್ಯಸಭಾ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ

Last Updated : Feb 15, 2024, 11:03 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.