ETV Bharat / state

ದೋಸ್ತಿಗಳ ಸಮನ್ವಯತೆ ಸಭೆ: ಇದು ಬ್ರ್ಯಾಂಡ್ ಬೆಂಗಳೂರು ಅಲ್ಲ, ಲೂಟಿ ಬೆಂಗಳೂರು ಎಂದು ಹೆಚ್​​ಡಿಕೆ ಕಿಡಿ - BJP JDS Meeting

ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರಗಳ ಪರಿಷತ್ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಗಳ ಗೆಲುವುಗಾಗಿ ಬಿಜೆಪಿ-ಜೆಡಿಎಸ್ ದೋಸ್ತಿ ನಾಯಕರು ಸಮನ್ವಯ ಸಭೆ ನಡೆಸಿದರು.

author img

By ETV Bharat Karnataka Team

Published : May 26, 2024, 4:21 PM IST

ದೋಸ್ತಿಗಳ ಸಮನ್ವಯತೆ ಸಭೆ
ದೋಸ್ತಿಗಳ ಸಮನ್ವಯತೆ ಸಭೆ (ETV Bharat)

ಬೆಂಗಳೂರು: ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರಗಳ ಪರಿಷತ್ ಚುನಾವಣೆ ಹಿನ್ನೆಲೆ ಜೆ. ಪಿ. ಭವನದಲ್ಲಿ ಬಿಜೆಪಿ-ಜೆಡಿಎಸ್ ದೋಸ್ತಿ ನಾಯಕರ ಸಮನ್ವಯ ಸಭೆ ನಡೆಯಿತು‌.‌ ಸಭೆಯಲ್ಲಿ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಯಾವ ಬ್ರ್ಯಾಂಡ್ ಬೆಂಗಳೂರು ಮಾಡಿರೋದು ಇವರು?. ಅದು ಬ್ರ್ಯಾಂಡ್ ಬೆಂಗಳೂರು ಅಲ್ಲ, ಲೂಟಿ ಬೆಂಗಳೂರು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

ಎರಡು ಮೂರು ಮಳೆಗೆ ಬೆಂಗಳೂರಿನಲ್ಲಿ ಮನೆಗಳಿಗೆ ನೀರು ತುಂಬಿಕೊಂಡಿದೆ. ಬಿಡಿಎನಲ್ಲಿ ಮೊನ್ನೆ ಕ್ಲೋಸ್ಡ್ ಡೋರ್ ಮೀಟಿಂಗ್ ಮಾಡಿದ್ದಾರಂತೆ. ಬಹಳ ರಹಸ್ಯವಾಗಿ ಸಭೆ ಮಾಡಿದ್ದಾರಂತೆ. ಬೆಂಗಳೂರಿಗೆ ಇವರ ಕೊಡುಗೆ ಏನು?. ಈ ಸರ್ಕಾರ ಬಂದ ನಂತರ ಬೆಂಗಳೂರಿನಲ್ಲಿ, ರಾಜ್ಯದಲ್ಲಿ ಒಂದೂ ಹೊಸ ಅಭಿವೃದ್ಧಿ ಆಗಿಲ್ಲ. ಯಾವ ಬ್ರ್ಯಾಂಡ್ ಬೆಂಗಳೂರು ಮಾಡಿರೋದು ಇವರು? ಎಂದು ವಾಗ್ದಾಳಿ ನಡೆಸಿದರು.

ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಬೇಕು. ಕಾಂಗ್ರೆಸ್ ಹಣದ ಹೊಳೆಯೇ ಹರಿಸುತ್ತಿದೆ. ಅ.ದೇವೇಗೌಡರಿಗೆ ಅಷ್ಟೊಂದು ಹಣ ಹರಿಸುವ ಸಾಮರ್ಥ್ಯ ಇಲ್ಲ. ಬೂತ್ ಮಟ್ಟದಲ್ಲಿ ನಮ್ಮ ಕಾರ್ಯಕರ್ತರು ಮನೆ ಮನೆಗೆ ಹೋಗಿ ವಿಶ್ವಾಸ ಗಳಿಸುವ ಕೆಲಸ ಮಾಡಿಸಬೇಕು. ಮೈಮರೆಯದೇ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು. ಕಾಂಗ್ರೆಸ್​​ನವರು ಏನು ಬೇಕಾದರು ಆಮಿಷವೊಡ್ಡಲಿ. ಲೋಕಸಭೆ ಚುನಾವಣೆಯಲ್ಲಿ ಐತಿಹಾಸಿಕ ಫಲಿತಾಂಶ ತರುವಲ್ಲಿ ನೀವು ಯಶ ಕಂಡಿದ್ದೀರ ಎಂಬುದನ್ನು ನೋಡುತ್ತಿದ್ದೇನೆ. ರಾಜ್ಯದಲ್ಲಿ ಒಂದೇ ಒಂದು ಹೊಸ ಕೆಲಸ ಆಗಿಲ್ಲ. ಕಳೆದ ಮೂರು ತಿಂಗಳಲ್ಲಿ 175 ರೂ. ಅನ್ನಭಾಗ್ಯ ನಗದು ಸಂದಾಯವಾಗಿಲ್ಲ.‌ ಬಿತ್ತನೆ ಬೀಜ ಬೆಲೆ ಶೇ.70ರಷ್ಟು ಹೆಚ್ಚಾಗಿದೆ. ಗೊಬ್ಬರ ಸಿಗುತ್ತಿಲ್ಲ. ಈ ಸರ್ಕಾರ ಒಪಿಎಸ್ ಜಾರಿ ಮಾಡುತ್ತೇವೆ ಎಂದು ಮತ ಪಡೆದರು. ಒಂದು ವರ್ಷ ಆದರೂ ಜಾರಿ ಮಾಡಿಲ್ಲ. ಈಗ ಸಮಿತಿ ರಚನೆ ಮಾಡುತ್ತಾರಂತೆ. ಗ್ಯಾರಂಟಿಯಿಂದ ಅಭಿವೃದ್ಧಿ ಕೆಲಸ ಸ್ಥಗಿತವಾಗಿದೆ ಎಂದು ಕಿಡಿ ಕಾರಿದರು.

ದೋಸ್ತಿಗಳ ಸಮನ್ವಯತೆ ಸಭೆ
ದೋಸ್ತಿಗಳ ಸಮನ್ವಯತೆ ಸಭೆ (ETV Bharat)

ಸಿದ್ದರಾಮಯ್ಯ ಸಾಲ ಮಾಡಿ ಅಧಿಕಾರ ನಡೆಸ್ತಿದ್ದಾರೆ: ಇದೇ ವೇಳೆ ಮಾತನಾಡಿದ ಪ್ರತಿಪಕ್ಷ ನಾಯಕ ಆರ್.ಅಶೋಕ್, ಸಿದ್ದರಾಮಯ್ಯ ಸಾಲಗಾರ ಆಗಿದ್ದಾರೆ. ಲಕ್ಷಾಂತರ ಕೋಟಿ ಸಾಲ ಮಾಡಿದ್ದಾರೆ. ಬಿಡಿಎ ಕಾಂಪ್ಲೆಕ್ಸ್‌ಗಳನ್ನು ಮಾರಲು ಹೊರಟಿದ್ದಾರೆ. ಸಿಎಂ ಸಿದ್ದರಾಮಯ್ಯ ಕಂಡವರ ಮನೆ ಮುಂದೆ ಹೋಗಿ ಸಾಲ ಮಾಡುತ್ತಿದ್ದಾರೆ. ಇಲ್ಲಿ ದುಡ್ಡು ಹೊಡೆದು ದಿಲ್ಲಿಗೆ ಕಳುಹಿಸುತ್ತಿದ್ದಾರೆ. ಎಲ್ಲಾ ಕಾಂಗ್ರೆಸ್ ಮನೆಯವರಲ್ಲಿ ದುಡ್ಡು ಸಿಗುತ್ತಿದೆ. ರಾಜ್ಯ ಕಾಂಗ್ರೆಸ್ ನಾಯಕರ ಮನೆಯಲ್ಲಿ ಎಷ್ಟು ದುಡ್ಡು ಇರಬಹುದು?. ನಮ್ಮ ಜಿಡಿಪಿ ಮೈನಸ್ ಹೋಗಿದೆ ಎಂದು ವಾಗ್ದಾಳಿ ನಡೆಸಿದರು.

ಲೋಕಸಭೆ ಚುನಾವಣೆ ವೇಳೆ ಹಾಲು ಜೇನು ರೀತಿಯಲ್ಲಿ ಸಮನ್ವಯತೆಯಿಂದ ಕೆಲಸ ಮಾಡಿದ್ದೇವೆ. ನಾಯಕರೇ ಖುದ್ದು ಹೇಳಲೇ ಬೇಕು ಎಂದು ಕಾಯದೇ ಸಮನ್ವಯತೆ ಸಾಧಿಸಿ ಕೆಲಸ ಮಾಡಿದ್ದೀರಿ. ಕೇಂದ್ರದಲ್ಲಿ ನರೇಂದ್ರ ಮೋದಿ ಪ್ರಧಾನಿ ಆಗಬೇಕು ಎಂದು ಒಟ್ಟಾಗಿ ಕೆಲಸ ಮಾಡಿದ್ದಾರೆ. ಪಾಪಿಗಳ ಸರ್ಕಾರ ಮಾಡಿ ನಾನು ಕ್ಲರ್ಕ್ ಆಗಿ ಕೆಲಸ ಮಾಡಿದ್ದೆ ಎಂದು ಕುಮಾರಸ್ವಾಮಿ ಅವರೇ ಹಲವು ಬಾರಿ ಹೇಳಿದ್ದಾರೆ. ಬಿಜೆಪಿ ಜೊತೆ ಮೈತ್ರಿಯಲ್ಲಿ ಸಿಎಂ ಆಗಿದ್ದಾಗ ಕುಮಾರಣ್ಣಗೆ ಹೆಸರು ತಂದು ಕೊಟ್ಟಿತ್ತು‌. ಕಾಂಗ್ರೆಸ್ ಜೊತೆ ಅವತ್ತು ಕೈ ಎತ್ತಿ ಜೋಡೆತ್ತು ಎಂದ್ರು. ಕೆಲಸ ಆಗ ಬೇಕಾದರೆ ಕೈ ಎತ್ತು. ಕೆಲಸ ಆದ ಮೇಲೆ ಚೂರಿ ಹಾಕು. ಅದು ಕಾಂಗ್ರೆಸ್ ಸಂಸ್ಕೃತಿ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಕೋವಿಡ್ ಅಕ್ರಮದ ವಿಚಾರಣಾ ಆಯೋಗದ ಅವಧಿ ಎರಡನೇ ಬಾರಿ ವಿಸ್ತರಿಸಿ ಆದೇಶ - Covid

ಒಂದು ವರ್ಷದ ಹಿಂದೆ ಮೈತ್ರಿ ಮಾಡುವ ಸ್ವಲ್ಪ ಮನಸ್ಸು ಮಾಡಿದ್ರೆ ಈ ದರಿದ್ರ ಸರ್ಕಾರ ಬರುತ್ತಿರಲಿಲ್ಲ. ಈ ಲೂಟಿಕೋರರ ಸರ್ಕಾರ ಬರುತ್ತಿರಲಿಲ್ಲ. ಅಭ್ಯರ್ಥಿ ಅ. ದೇವೇಗೌಡರನ್ನು ಗೆಲ್ಲಿಸಿದರೆ ನಮ್ಮ ದೇವೇಗೌಡರಿಗೆ ಕಿರೀಟ ಬರುತ್ತೆ ಎಂದು ಕುಮಾರಸ್ವಾಮಿ ಹೇಳಿದರು.

ಜೂ.4ರಂದು ನಾವು ಫಸ್ಟ್ ರ್ಯಾಂಕ್ ಬರುತ್ತೇವೆ: ಇದೇ ವೇಳೆ ಮಾತನಾಡಿದ ಮಾಜಿ ಡಿಸಿಎಂ ಅಶ್ವತ್ಥ್ ನಾರಾಯಣ್, ಜೂನ್4 ರ ಫಲಿತಾಂಶ ದಲ್ಲಿ ನಾವು ಫಸ್ಟ್ ರ್ಯಾಂಕ್ ಬರುತ್ತೇವೆ. ರಾಜ್ಯದಲ್ಲಿ ಮೂರು ಪ್ರಬಲ ಪಕ್ಷಗಳು ಪೈಪೋಟಿಯಲ್ಲಿ ಇವೆ. ಅಭಿವೃದ್ಧಿಗಾಗಿ ಪೈಪೋಟಿಯಲ್ಲಿವೆ. ಬದಲಾದ ಪರಿಸ್ಥಿತಿಯಲ್ಲಿ ಜೆಡಿಎಸ್, ಬಿಜೆಪಿ ಇಬ್ಬರೂ ಸೇರಿ ಕಾಂಗ್ರೆಸ್ ಮುಕ್ತ ಮಾಡಲು ಮೈತ್ರಿ ಮಾಡಿಕೊಂಡಿವೆ. ಜನ ಕಾಂಗ್ರೆಸ್ ಪರವಾಗಿ ಇಲ್ಲ ಎಂದು ಮೈತ್ರಿ ಮಾಡಿಕೊಂಡಿದ್ದೇವೆ. ಮತ್ತೆ ಮೋದಿ ಪ್ರಧಾನಿ ಆಗಲಿ ಎಂಬ ಉದ್ದೇಶದಿಂದ ಈ ಮೈತ್ರಿ ಆಗಿದೆ. ಬಿಜೆಪಿ ಜೆಡಿಎಸ್ ಮೈತ್ರಿ ಆಗಲಿ ಎಂದು ಕಾರ್ಯಕರ್ತರೇ ಬಯಸುತ್ತಿದ್ದರು. ಕುಮಾರಸ್ವಾಮಿ ಬಹಳ ಪ್ರೀತಿಯಿಂದ ನಮ್ಮನ್ನು ನಡೆಸಿಕೊಂಡಿದ್ದಾರೆ ಎಂದು ತಿಳಿಸಿದರು.

ಜೆಪಿ ಭವನದಲ್ಲಿ ನಡೆದ ಸಮನ್ವಯ ಸಭೆಯಲ್ಲಿ ಸಭೆಯಲ್ಲಿ ಹೆಚ್.ಡಿ. ಕುಮಾರಸ್ವಾಮಿ, ಆರ್.ಅಶೋಕ್, ಅಶ್ವತ್ಥ್ ನಾರಾಯಣ್, ಶಾಸಕ ಗೋಪಾಲಯ್ಯ, ಶಾಸಕ ಮುನಿರತ್ನ, ನಿಖಿಲ್ ಕುಮಾರಸ್ವಾಮಿ, ಟಿ.ಎ.ಶರವಣ, ನಿಸರ್ಗ ನಾರಾಯಣ ಸ್ವಾಮಿ, ಜವರಾಯಿ ಗೌಡ ಮತ್ತಿತರ ನಾಯಕರು ಭಾಗಿಯಾಗಿದ್ದರು.

ಇದನ್ನೂ ಓದಿ: ಯಾವುದೇ ಕಾರಣಕ್ಕೂ ಕಾನೂನು ಸುವ್ಯವಸ್ಥೆ ಹಾಳಾಗಲು ಬಿಡುವುದಿಲ್ಲ, ಯಾರೇ ತಪ್ಪು ಮಾಡಿದರೂ ಕ್ರಮ: ಪರಮೇಶ್ವರ್ - G Parameshwara

ETV Bharat Logo

Copyright © 2024 Ushodaya Enterprises Pvt. Ltd., All Rights Reserved.