ETV Bharat / state

ವಲ್ಲಭಭಾಯ್​ ಪಟೇಲ್ ಆರ್​ಎಸ್​ಎಸ್​​ ​ಬ್ಯಾನ್ ಮಾಡಿದ್ದರು​: ಸಂತೋಷ್​ ಲಾಡ್ - Valabhabhai Patel statue

ವಲ್ಲಭಭಾಯ್​ ಅವರು ಆರ್​ಎಸ್​ಎಸ್​​ ಅನ್ನು ಬ್ಯಾನ್​ ಮಾಡಿದ್ದು ಸುಳ್ಳಲ್ಲ, ಇದಕ್ಕೆ ದಾಖಲೆಗಳಿವೆ ಎಂದು ಸಚಿವ ಸಂತೋಷ್​ ಲಾಡ್​ ಹೇಳಿದ್ದಾರೆ.

Minister Santhosh Lad
ಸಚಿವ ಸಂತೋಷ್​ ಲಾಡ್​
author img

By ETV Bharat Karnataka Team

Published : Feb 24, 2024, 1:08 PM IST

Updated : Feb 24, 2024, 1:25 PM IST

ಹುಬ್ಬಳ್ಳಿ: "ಸರ್ಧಾರ್​ ವಲ್ಲಭಬಾಯಿ ಪಟೇಲ್ ಅವರು ಈ ಹಿಂದೆಯೇ ಆರ್​ಎಸ್​ಎಸ್​ ಬ್ಯಾನ್ ಮಾಡಿದ್ದರು. ಬಿಜೆಪಿಯವರು ಇದೀಗ ರಾಜಕೀಯಕ್ಕಾಗಿ ಪಟೇಲರ ಪ್ರತಿಮೆಯನ್ನು ನಿಲ್ಲಿಸಿದ್ದಾರೆ" ಎಂದು ಸಚಿವ ಸಂತೋಷ ಲಾಡ್ ಹೇಳಿದ್ದಾರೆ.

ಸಚಿವ ಸಂತೋಷ್​ ಲಾಡ್​

ನಗರದಲ್ಲಿಂದು ಮಾತನಾಡಿದ ಅವರು, "ವಲ್ಲಭಭಾಯ್​ ಪಟೇಲರು ಆರ್​ಎಸ್​ಎಸ್​​ ಬ್ಯಾನ್ ಮಾಡಿದ್ದು ಸುಳ್ಳಲ್ಲ, ಇದಕ್ಕೆ ಪೂರಕವಾದ ದಾಖಲೆಗಳಿವೆ. ಬಿಜೆಪಿಯವರು ಚುನಾವಣೆ ಬಂದಾಗೊಮ್ಮೆ ಜಾತಿ ಧರ್ಮ ಮಂದೆ ತಂದು ಅಧಿಕಾರಕ್ಕೆ ಬರತ್ತಾರೆ. ಅಭಿವೃದ್ಧಿ ಬಗ್ಗೆ ಚಕಾರ ಎತ್ತುವುದಿಲ್ಲ, ಇಂದು ಪಾಸ್​ಪೋರ್ಟ್ ಪವರ್​ನಲ್ಲಿ ದೇಶ 85ನೇ ಸ್ಥಾನದಲ್ಲಿದೆ. ವಿಶ್ವಗುರು ಎಂದು ಕರೆಸಿಕೊಳ್ಳುವ ನಮ್ಮ ಪ್ರಧಾನಿ ದೇಶವನ್ನು ಯಾಕೆ ಒಂದನೇ ಸ್ಥಾನಕ್ಕೆ ತರಲಿಲ್ಲ. ಇಂದು ಅಭಿವೃದ್ಧಿ ವಿಷಯದಲ್ಲಿ ದೇಶವನ್ನು ಯಾವ ದೇಶಕ್ಕೆ ಹೋಲಿಸಬೇಕು" ಎಂದು ಹರಿಹಾಯ್ದರು.

ಸುಖಾಸುಮ್ಮನೆ ಬಿಜೆಪಿ ಚುನಾವಣೆ ಹೊಸ್ತಿಲಲ್ಲಿ ಅಭಿವೃದ್ಧಿ ಬಗ್ಗೆ ಮಾತನಾಡದೇ ವಿವಾದಾತ್ಮಕ ಹೇಳಿಕೆಗಳನ್ನು ನೀಡುವುದರತ್ತ ಚಿತ್ತ ಹರಿಸಿದೆ. ಇಂದು ಮೇಕ್ ಇನ್ ಇಂಡಿಯಾ ಎಂಬ ಯೋಜನೆ ಹಳ್ಳ ಹಿಡಿದಿದೆ. ಇದರ ಪ್ರಚಾರಕ್ಕಾಗಿ ಕೇಂದ್ರ ಸರ್ಕಾರ 450 ಕೋಟಿ ರೂಪಾಯಿ ಖರ್ಚು ಮಾಡಿದೆ. ಈ ಬಗ್ಗೆ ಯಾಕೆ ಬಿಜೆಪಿಯವರು ಮಾತನಾಡುವುದಿಲ್ಲ? ಎಂದು ಸಚಿವ ಸಂತೋಷ್​ ಲಾಡ್​ ಕಿಡಿಕಾರಿದರು.

"ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮ ರಾಜ್ಯದಲ್ಲಿ ಅಭೂತಪೂರ್ವ ಯಶಸ್ಸು ಕಂಡಿದೆ. ಎಲ್ಲರೂ ಪಕ್ಷಾತೀತ ಸಹಕಾರ ನೀಡಿದ್ದಾರೆ. ಹೀಗಾಗಿ ಈ ಕಾರ್ಯಕ್ರಮ ಇಂದು ಬುಕ್ ಆಫ್ ರೆಕಾರ್ಡ್​ಗೆ ಸೇರ್ಪಡೆ ಆಗುತ್ತಿದೆ. ಇದು ಖುಷಿಯ ವಿಚಾರ ಎಂದು ಸಚಿವರು ಇದೇ ವೇಳೆ ಹರ್ಷ ವ್ಯಕ್ತಪಡಿಸಿದರು.

"ಇಂದು ಸಂಜೆ ನವಲಗುಂದದಲ್ಲಿ ಸಿಎಂ ಸಿದ್ದರಾಮಯ್ಯ ಹಲವಾರು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಿದ್ದಾರೆ. ಶಾಸಕ ಎನ್.ಹೆಚ್.ಕೊನರೆಡ್ಡಿ ಅವರ ಮುತುವರ್ಜಿಯಿಂದ 40 ಎಕರೆ ಭೂಮಿಯಲ್ಲಿ ಬಡ ಕುಟುಂಬಗಳಿಗೆ ಮನೆ ನಿರ್ಮಿಸಿ ಹಕ್ಕುಪತ್ರ ನೀಡುತ್ತಿದ್ದಾರೆ. ಇದಲ್ಲದೇ 120 ಕಿ.ಮೀ.ಗೂ ಅಧಿಕ ಹೊಲದ ರಸ್ತೆಗಳನ್ನು ಅಭಿವೃದ್ಧಿ ಪಡಿಸಿದ್ದಾರೆ. ಇವೆಲ್ಲ ಕಾರ್ಯಕ್ರಮಗಳಿಗೆ ರಾಜ್ಯದ ಜನಪ್ರಿಯ ಮುಖ್ಯಮಂತ್ರಿಗಳಾಗಿರುವ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ" ಎಂದು ಸಚಿವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ಇದನ್ನೂ ಓದಿ: ಮೈತ್ರಿ ಅಭ್ಯರ್ಥಿಯಿಂದ ಕಾಂಗ್ರೆಸ್ ಶಾಸಕರಿಗೆ 10 ಕೋಟಿ ಆಮಿಷ, ಬೆದರಿಕೆ: ಶಾಸಕ ಗಣಿಗ ರವಿಕುಮಾರ್ ಆರೋಪ

Last Updated : Feb 24, 2024, 1:25 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.