ETV Bharat / state

ಮೋದಿ ಮತ್ತೆ ಅಧಿಕಾರಕ್ಕೆ ಬಂದ 3 ತಿಂಗಳಲ್ಲಿ ವೆಗಾಸಿಟಿ-ನಾಯಂಡಹಳ್ಳಿ ಮೆಟ್ರೋ ಮಾರ್ಗಕ್ಕೆ ಅನುಮೋದನೆ: ತೇಜಸ್ವಿ ಸೂರ್ಯ - Tejasvi Surya - TEJASVI SURYA

ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರು ವೆಗಾಸಿಟಿಯಿಂದ ನಾಯಂಡಹಳ್ಳಿ ಮೆಟ್ರೋ ಮಾರ್ಗಕ್ಕೆ ಅನುಮೋದನೆ ಬಗ್ಗೆ ಮಾತನಾಡಿದರು.

bjp-candidate-tejasvi-surya
ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ
author img

By ETV Bharat Karnataka Team

Published : Apr 12, 2024, 10:41 PM IST

ಬೆಂಗಳೂರು: ರಾಜ್ಯ ರಾಜಧಾನಿಗೆ ಮೋದಿ ನೇತೃತ್ವದ ಬಿಜೆಪಿ ಸರ್ಕಾರದಿಂದ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗಿದೆ. ಬಹುನಿರೀಕ್ಷಿತ ವೆಗಾಸಿಟಿಯಿಂದ ನಾಯಂಡಹಳ್ಳಿವರೆಗಿನ 24 ಕಿ.ಮೀ ಉದ್ದದ 3ನೇ ಹಂತದ ಮೆಟ್ರೋ ರೈಲು ಮಾರ್ಗಕ್ಕೆ ಮೋದಿ ಅವರು ಮತ್ತೊಮ್ಮೆ ಅಧಿಕಾರಕ್ಕೆ ಬಂದ 3 ತಿಂಗಳಲ್ಲೇ ಒಪ್ಪಿಗೆ ದೊರಕಿಸಿಕೊಡಲಾಗುವುದು ಎಂದು ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಭರವಸೆ ನೀಡಿದ್ದಾರೆ.

ಜೆ.ಪಿ.ನಗರದ ಪಾಂಡುರಂಗ ನಗರದ ನಿವಾಸಿಗಳೊಂದಿಗೆ ಇಂದು ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಸಂಚಾರ ದಟ್ಟಣೆ ನಿಯಂತ್ರಣಕ್ಕೆ 40 ವರ್ಷಗಳಿಂದ ಬೇಡಿಕೆಯಾಗಿದ್ದ ಸಬ್‌ ಅರ್ಬನ್‌ ರೈಲು ಯೋಜನೆಗೆ ಈಗಾಗಲೇ ಕೇಂದ್ರದಿಂದ ಒಪ್ಪಿಗೆ ದೊರೆತಿದೆ. ಉಪನಗರ ವರ್ತುಲ ರಸ್ತೆ ಯೋಜನೆಗೂ ಮಂಜೂರಾತಿ ದೊರೆತಿದೆ. ಆರ್‌.ವಿ.ರಸ್ತೆಯಿಂದ ಎಲೆಕ್ಟ್ರಾನಿಕ್‌ ಸಿಟಿವರೆಗಿನ ಹಳದಿ ಮೆಟ್ರೋ ರೈಲು ಮಾರ್ಗ ಸೆಪ್ಟೆಂಬರ್​ನಲ್ಲಿ ಆರಂಭಗೊಳ್ಳಲಿದೆ ಎಂದು ತಿಳಿಸಿದರು.

ಪ್ರಧಾನಿ ಅಮೆರಿಕಕ್ಕೆ ಭೇಟಿ ನೀಡಿದ್ದ ವೇಳೆ ಬೆಂಗಳೂರಿನಲ್ಲಿ ಅಮೆರಿಕ ದೂತವಾಸ ಕಚೇರಿ ಆರಂಭಕ್ಕೆ ಒಪ್ಪಿಗೆ ದೊರೆತಿದೆ. ಆದರೆ, ಕಾಂಗ್ರೆಸ್‌ ಸರ್ಕಾರ ಜಾಗ ನೀಡುತ್ತಿಲ್ಲ ಎಂದು ಆರೋಪಿಸಿದರು.

ಕೋವಿಡ್‌ ಸಾಂಕ್ರಾಮಿಕವನ್ನು ಎದುರಿಸುವಲ್ಲಿ ತಾವು ಹಾಗೂ ತಮ್ಮ ಕಚೇರಿಯ ಕಾರ್ಯನಿರ್ವಹಣೆ ಕುರಿತು ಇದೇ ಸಂದರ್ಭದಲ್ಲಿ ವಿವರಿಸಿದ ಅವರು, ಬೆಡ್‌ ಬುಕಿಂಗ್‌ ಪದ್ಧತಿಯಲ್ಲಿದ್ದ ಅಕ್ರಮಗಳನ್ನು ಬಯಲಿಗೆಳೆದು ವೈಪರೀತ್ಯಗಳನ್ನು ಸರಿಪಡಿಸಿದ ನಂತರ, 4 ಸಾವಿರಕ್ಕೂ ಅಧಿಕ ಹಾಸಿಗೆಗಳು ಸೋಂಕಿತರಿಗೆ ಲಭ್ಯವಾದವು. ದೇಶದಲ್ಲೇ ಅತಿ ದೊಡ್ಡ ಆಕ್ಸಿಜನ್‌ ಕಾನ್ಸಂಟ್ರೇಟರ್‌ ಬ್ಯಾಂಕ್‌ ಸ್ಥಾಪಿಸುವ ಮೂಲಕ ನೂರಾರು ಜನರ ಜೀವ ಉಳಿದಿದೆ ಎಂದು ತಿಳಿಸಿದರು.

ನಿಷ್ಕ್ರಿಯಗೊಂಡಿದ್ದ ನಾಲ್ಕು ಆಸ್ಪತ್ರೆಗಳನ್ನು ಮರು ನವೀಕರಣಗೊಳಿಸಿ ವೈದ್ಯಕೀಯ ಮೂಲಸೌಕರ್ಯಗಳನ್ನು ಹೆಚ್ಚಿಸಿ 350 ಐಸಿಯು ಹೆಚ್ಚುವರಿ ಬೆಡ್​ಗಳನ್ನು ಒದಗಿಸಲಾಯಿತು. ಕ್ಷೇತ್ರದಲ್ಲಿ ಅತಿದೊಡ್ಡ ಲಸಿಕೆ ಅಭಿಯಾನ ನಡೆಸಲಾಯಿತು. ಇದರಿಂದ ಸುಮಾರು 28 ಲಕ್ಷ ನಾಗರಿಕರು ತ್ವರಿತವಾಗಿ ಉಚಿತ ಲಸಿಕೆ ಪಡೆಯಲು ಸಾಧ್ಯವಾಯಿತು ಎಂದು ಹೇಳಿದರು.

ಇದನ್ನೂ ಓದಿ: ಸ್ವಂತ ಬೈಕ್​, ಕಾರು, ಮನೆಯಿಲ್ಲದ ತೇಜಸ್ವಿ ಸೂರ್ಯ: ಒಟ್ಟು 4.10 ಕೋಟಿ ಆಸ್ತಿ ಒಡೆಯ - MP Tejasvi Surya

ETV Bharat Logo

Copyright © 2025 Ushodaya Enterprises Pvt. Ltd., All Rights Reserved.