ETV Bharat / state

ಸಚಿವ ಮಧು ಬಂಗಾರಪ್ಪ ಬಳಸುವ ಪದಗಳು ಅತ್ಯಂತ ಅಸಹ್ಯ ಎನ್ನಿಸುತ್ತಿದೆ: ಬಿ ವೈ ರಾಘವೇಂದ್ರ ಖಂಡನೆ - BJP candidate B Y Raghavendra - BJP CANDIDATE B Y RAGHAVENDRA

ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರಚಾರ ಸಭೆಯಲ್ಲಿ ಉಪಯೋಗಿಸುವ ಪದಗಳು ಅತ್ಯಂತ ವಿಷಾದಕರ ಅನ್ನಿಸುತ್ತದೆ ಎಂದು ಬಿಜೆಪಿ ಅಭ್ಯರ್ಥಿ ಬಿ. ವೈ ರಾಘವೇಂದ್ರ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಬಿ ವೈ ರಾಘವೇಂದ್ರ
ಬಿ ವೈ ರಾಘವೇಂದ್ರ
author img

By ETV Bharat Karnataka Team

Published : Mar 28, 2024, 5:10 PM IST

ಬಿಜೆಪಿ ಅಭ್ಯರ್ಥಿ ಬಿ. ವೈ ರಾಘವೇಂದ್ರ

ಶಿವಮೊಗ್ಗ : ಸಚಿವ ಮಧು ಬಂಗಾರಪ್ಪ ಅವರು ತಮ್ಮ ವಿರುದ್ದ ಬಳಸುತ್ತಿರುವ ಪದಗಳು ಅತ್ಯಂತ ಅಸಹ್ಯ ಹಾಗೂ ವಿಷಾದದಿಂದ ಕೂಡಿದೆ ಎಂದು ಬಿಜೆಪಿ ಅಭ್ಯರ್ಥಿ ಬಿ. ವೈ ರಾಘವೇಂದ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗಕ್ಕೆ ತನ್ನದೇ ಆದ ರಾಜಕೀಯ ಇತಿಹಾಸವಿದೆ. ಅನೇಕ ಸಿಎಂಗಳನ್ನು ನೀಡಿದ ಜಿಲ್ಲೆಯಾಗಿದೆ. ನಮ್ಮ ದೌರ್ಭಾಗ್ಯ ಎಂದರೆ ಅಭಿವೃದ್ದಿಯ ಬಗ್ಗೆ ಚರ್ಚೆ ಆಗುತ್ತದೆ ಎಂದುಕೊಂಡಿದ್ದೆ. ಆದರೆ, ಶಿಕ್ಷಣ ಸಚಿವ ಮಧು ಬಂಗಾರಪ್ಪನವರು ಪ್ರಚಾರ ಸಭೆಯಲ್ಲಿ ಉಪಯೋಗಿಸುವ ಪದಗಳು ಅತ್ಯಂತ ವಿಷಾದಕರ ಅನ್ನಿಸುತ್ತಿದೆ ಎಂದಿದ್ದಾರೆ.

ಮೋದಿಯವರನ್ನು ವಿಶ್ವ ಮಾನವ ಎಂದಿದ್ದಕ್ಕೆ ನಾವೇನು ಪುಕ್ಸಟ್ಟೆ ಸಿಕ್ಕಿದ್ದೇವಾ? ಎಂಬ ಮಾತನ್ನು ಆಡಿದ್ದಾರೆ. ನಾವು ಆಡಳಿತ ನಡೆಸಲು ಶುರು ಮಾಡಿ ಕೇವಲ 10 ವರ್ಷ ತುಂಬುತ್ತಿದೆ. ಆದರೆ ಹಿಂದಿನ ಅವಧಿಯಲ್ಲಿ ನೀವು ಏನೆಲ್ಲ ಸಾಧನೆ ಮಾಡಿದ್ದೀರಿ ಎಂದು ಒಮ್ಮೆ ಅವಲೋಕನ ಮಾಡಿಕೊಳ್ಳಿ. ಬಿಜೆಪಿ ಕಾರ್ಯಕರ್ತರನ್ನು ಚೇಲಾಗಳು ಎಂದು ಸಚಿವರು ಕರೆದಿದ್ದಾರೆ. ಇದು ಸರಿಯಲ್ಲ ಎಂದು ತಿರುಗೇಟು ನೀಡಿದರು.

'ಬಿಜೆಪಿ ಕಾರ್ಯಕರ್ತರು ಚೇಲಾಗಳಲ್ಲ' : ಎಲ್ಲ ಪಕ್ಷಗಳ ಕಾರ್ಯಕರ್ತರಿಗೆ ಅವರದ್ದೇ ಆದ ಗೌರವವಿದೆ. ಬಿಜೆಪಿ ಕಾರ್ಯಕರ್ತರನ್ನು ಮಧು ಬಂಗಾರಪ್ಪನವರು ಚೇಲಾ ಕಾರ್ಯಕರ್ತರು ಎಂದು ಕರೆದಿರುವುದು ಖಂಡನೀಯ. ಇದೇ ಕಾರ್ಯಕರ್ತರು ನಿಮ್ಮ ತಂದೆಯನ್ನು ಈ ಹಿಂದೆ ಗೆಲ್ಲಿಸಿದ್ದನ್ನು ಮರೆತು ಬಿಟ್ರಾ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಕಾರ್ಯಕರ್ತರು ಮಧು ಬಂಗಾರಪ್ಪ ಅವರ ಮಾತನ್ನು ಖಂಡಿಸಿ ಫೋನ್ ಮಾಡುತ್ತಿದ್ದರು. ನಿಮ್ಮ ತಂದೆಗಿಂತ ಮುಂಚೆ ನಮ್ಮ ತಂದೆ ಸಿಎಂ ಆಗಿದ್ರು ಎಂಬ ಮಾತಿಗೆ ಪ್ರತಿಕ್ರಿಯಿಸಿ, ಹೌದು. ನಿಮ್ಮ ತಂದೆ ಸಿಎಂ ಆಗಿದ್ರು. ನಮಗೆ ಅವರ ಬಗ್ಗೆ ನನಗೆ ಗೌರವವಿದೆ. ಸಚಿವರು ಹಡಬಿಟ್ಟಿ ಪದ ಬಳಕೆ ಸರಿಯಲ್ಲ. ಅವರ ನಾಲಿಗೆ ಅವರ ಸಂಸ್ಕೃತಿಯನ್ನು ತೋರಿಸುತ್ತಿದೆ. ನಾನು ನಡೆಸಿದ ಅಭಿವೃದ್ದಿಯ ಬಗ್ಗೆ ಕರಪತ್ರ ಹಂಚುತ್ತಿದ್ದೇನೆ. ನೀವು ಏನ್ ಮಾಡಿದ್ರಿ ಎಂದು ನೀವು ಹೇಳಬೇಕು. ಅದನ್ನು ಮಾಡದೇ ಈಗ ಖಂಡಿಸಿದ್ರೆ ಹೇಗೆ? ಎಂದು ಪ್ರಶ್ನಿಸಿದರು.

60 ವರ್ಷ ಬಿಜೆಪಿಯೇತರ ಸರ್ಕಾರ ಆಡಳಿತ ನಡೆಸಿದೆ. ನಿಮ್ಮದೇ ಕುಟುಂಬದ ಕೈಯಲ್ಲಿ ಆಡಳಿತ ಇದ್ದಾಗ ಏನ್ ಮಾಡಿದ್ರಿ ಎಂದು ರಾಘವೇಂದ್ರ ಅವರು ಪ್ರಶ್ನಿಸಿದರು. ಸಂಸತ್​ನಲ್ಲಿ ನಾನು ಮಾತನಾಡಿಲ್ಲ ಎಂಬ ಆರೋಪ ಸರಿಯಲ್ಲ. ನಾನು ಯಾವ ಸಮಯದಲ್ಲಿ ಮಾತನಾಡಿದ್ದೇನೆ ಎಂದು ನನ್ನ ಬಳಿ ದಾಖಲೆ ಇದೆ. ಅಡಕೆ, ಅರಣ್ಯ ಹಕ್ಕು ಕಾಯ್ದೆ ಬದಲಾವಣೆ ಸೇರಿದಂತೆ ಮಲೆನಾಡಿನ ಸಮಸ್ಯೆಯನ್ನು ಸರ್ಕಾರದ ಮುಂದೆ ಇಟ್ಟಿದ್ದೇನೆ ಎಂದರು.

ನೀವು ಮಾಡಿದ ತಪ್ಪಿಗೆ ಶರಾವತಿ ಮುಳುಗಡೆ ಸಂತ್ರಸ್ತರು ಪರಿತಪಿಸುತ್ತಿದ್ದಾರೆ. ಮತಕ್ಕಾಗಿ ಜನರನ್ನು ತಪ್ಪು ದಾರಿಗೆ ಎಳೆಯುವ ಕೆಲಸವನ್ನು ಮಧು ಮಾಡುತ್ತಿದ್ದಾರೆ. ಕಾನೂನಿನ ಚೌಕಟ್ಟಿನಲ್ಲಿ ಎಲ್ಲರೂ ಕೆಲಸ ಮಾಡಬೇಕಿದೆ ಎಂದರು. ಶರಾವತಿ ಸಂತ್ರಸ್ತರ ಪರವಾಗಿ ಸುಪ್ರಿಂಕೋರ್ಟ್​ಗೆ ಅಫಿಡವಿಟ್ ಹಾಕಿ ಅಂದ್ರೆ ಇನ್ನೂ ಹಾಕಿಲ್ಲ. ವಿಐಎಸ್ಎಲ್​ಗೆ ಈ ಗತಿ ತಂದವರು ಯಾರು?. ಎಂಪಿಎಂಗೆ ಕೊನೆ ಮೊಳೆ ಹೊಡೆದಿದ್ದು ಸಿದ್ದರಾಮಯ್ಯ ಅವರೇ ಅಲ್ಲವೇ?. ಎಂಪಿಎಂ 124 ಕೋಟಿ ಸಾಲ ಮಾಡಿ ಕಾರ್ಖಾನೆಯ ಜಾಗವನ್ನು ಅಡವಿಟ್ಟಿತ್ತು. ಅದನ್ನು ಒನ್ ಟೈಂ ಸೆಟ್ಲ್​ಮೆಂಟ್ ಮಾಡಿ ಜಾಗ ಉಳಿಸಿಕೊಳ್ಳಲಾಗಿದೆ. ನಾನು ವಿಐಎಸ್ಎಲ್​ಗೆ ಬೀಗ ಹಾಕಲು ಬಿಟ್ಟಿಲ್ಲ ಎಂದು ಹೇಳಿದರು.

ನಿಮ್ಮಿಂದ ನೈತಿಕತೆಯ ಪಾಠ ಕಲಿಯುವ ದಿವಾಳಿತನ ನಮಗೆ ಇನ್ನೂ ಬಂದಿಲ್ಲ. ಚರ್ಚೆ ಮೂಲಕ, ಅಭಿವೃದ್ದಿ ಪಡಿಸಬಹುದು ಎಂದುಕೊಂಡಿದ್ದೆ. ಈ ರೀತಿಯ ಮಾತುಗಳಿಗೆ ಕಳೆದ ಮೂರು ಚುನಾವಣೆಯಲ್ಲಿ ಜನ‌ ಪಾಠ ಕಲಿಸಿದ್ದಾರೆ ಎಂದರು.

ಬಿತ್ತನೆ ಬೀಜ ನೀಡಿದ್ದು, ಉಚಿತ ವಿದ್ಯುತ್ ನೀಡುವ ಕುರಿತು, ಸಚಿವರು ನಿಮಗೆ ನೀಡಿದ್ದನ್ನೇ ಬಡ್ಡಿ ಸಮೇತ ನೀಡಬೇಕು ಎಂದು ಹೇಳುವುದು ಎಷ್ಟು ಸರಿ? ಎಂದರು. ನೀರಾವರಿ ಪಾದಯಾತ್ರೆ ಮಾಡಿ ಡಿಪಿಆರ್ ಮಾಡಿಸಿದ್ದು ನಾವೇ ಎಂದು ಹೇಳಿದ್ರಿ. ಡಿಪಿಆರ್ ಮಾಡಿಸಿದ್ರೆ ಆಗಲ್ಲ. ಅದನ್ನು ಜಾರಿ ಮಾಡಿದ್ದು ಯಡಿಯೂರಪ್ಪನವರು. ಲೋಕಸಭೆಯಲ್ಲಿ ಅಧಿಕೃತ ವಿರೋಧ ಪಕ್ಷ ಆಗದೇ, ಮುಂದೆ ಗ್ಯಾಲರಿಯಲ್ಲಿ ಕುಳಿತುಕೊಳ್ಳುವ ಸಂದರ್ಭ ಬರಬಹುದು ಎಂದರು. ಶರಾವತಿ ಸಂತ್ರಸ್ತರಿಗೆ ಅವರ ಹಕ್ಕನ್ನು ಕೊಡಿಸುತ್ತೇನೆ ಎಂದು ಧೈರ್ಯವಾಗಿ ಹೇಳುತ್ತೇನೆ ಎಂದು ತಿಳಿಸಿದರು.

ಈಶ್ವರಪ್ಪನವರ ಬಗ್ಗೆ ನಮಗೆ ಗೌರವವಿದೆ : ಈಶ್ವರಪ್ಪನವರು ಪಕ್ಷಕ್ಕೆ ನೀಡಿರುವ ಸೇವೆಯನ್ನು ಗಮನದಲ್ಲಿಟ್ಟುಕೊಂಡು ತಾಳ್ಮೆಯಿಂದ ಇದ್ದೇವೆ. ಕಾದು ನೋಡೋಣ ಎಂದು ಈಶ್ವರಪ್ಪನವರ ಬಂಡಾಯ ಸ್ಪರ್ಧೆ ಕುರಿತು ಉತ್ತರಿಸಿದರು. ಅವರು ಪಕ್ಷದ ಹಿರಿಯರಿದ್ದಾರೆ. ನಮ್ಮ ಪಕ್ಷದ ಹೈಕಮಾಂಡ್ ಗಮನಿಸುತ್ತದೆ ಎಂದರು.

ನಮ್ಮ ಕುಟುಂಬದ ಬಗ್ಗೆ ಆರೋಪ‌ ಮಾಡಿದ್ದಾರೆ. ನಮ್ಮ ಕುಟುಂಬದಿಂದ ಸಂಘಟನೆ ಹಾಳಾಗಿದೆ ಎಂದು ಅವರು ಹೇಳಿದ್ದಾರೆ. ಆದರೆ ಶಿಕಾರಿಪುರದಲ್ಲಿ ಯಡಿಯೂರಪ್ಪನವರನ್ನು ಎಂಟು ಬಾರಿ ಆಯ್ಕೆ ಮಾಡಿದ್ದಾರೆ. ಅದೇ ರೀತಿ ವಿಜಯೇಂದ್ರ ಈಗ ಆಯ್ಕೆ ಆಗಿದ್ದಾರೆ. ನನಗೂ ಜನ ಆಶೀರ್ವಾದ ಮಾಡಿದ್ದಾರೆ. ನಾನು ಸಹ ಸಂಘದ ಶಾಲೆಯಲ್ಲೇ ಓದಿದ್ದು, ನಾನು ಬಿಜೆಪಿಯ ಅಧಿಕೃತ ಅಭ್ಯರ್ಥಿ. ನಾನು ಮೋದಿ ಫೋಟೋ ಹಾಕಿಕೊಂಡು ಪ್ರಚಾರ ಮಾಡುತ್ತಿದ್ದೇನೆ. ನಾನು ಸದನದಲ್ಲಿ ಮೋದಿ ಕುರಿತು ಕೈ ಎತ್ತುತ್ತೇನೆ. ಮುಂದೆ ಒಳ್ಳೆಯದಾಗುತ್ತದೆ ಎಂಬ ಆಶಾಭಾವವಿದೆ ಎಂದು ತಿಳಿಸಿದರು.

ಇದನ್ನೂ ಓದಿ : ಈಗಿರುವ ಎಲ್ಲ ಸಮಸ್ಯೆಗಳನ್ನು ಪಕ್ಷದ ನಾಯಕರು ಬಗೆಹರಿಸುವ ವಿಶ್ವಾಸವಿದೆ: ಬಿ ವೈ ರಾಘವೇಂದ್ರ - Lok Sabha Election

ETV Bharat Logo

Copyright © 2025 Ushodaya Enterprises Pvt. Ltd., All Rights Reserved.