ETV Bharat / state

ಸ್ಪೀಕರ್ ಯು.ಟಿ.ಖಾದರ್ ಕಲಾಪದ ವೈಖರಿಗೆ ಬಿಜೆಪಿ - ಜೆಡಿಎಸ್ ಸದಸ್ಯರ ಆಕ್ಷೇಪ - BJP and JDS members objection

ಪ್ರತಿಪಕ್ಷದ ನಾಯಕ ಆರ್.ಅಶೋಕ್, ಜೆಡಿಎಸ್‍ನ ಶಾಸಕಾಂಗ ಪಕ್ಷದ ನಾಯಕ ಸುರೇಶ್‍ ಬಾಬು, ಶಾಸಕರಾದ ವಿ.ಸುನಿಲ್‍ ಕುಮಾರ್, ಎಸ್.ಸುರೇಶ್‍ ಕುಮಾರ್, ಸಿ.ಸಿ.ಪಾಟೀಲ್ ಮತ್ತಿತರರು ಸಹಿ ಹಾಕಿದ ದೂರಿನ ಪತ್ರವನ್ನು ಸ್ಪೀಕರ್​ ಯು.ಟಿ.ಖಾದರ್​ ಅವರಿಗೆ ನೀಡಲಾಗಿದೆ.

Assembly Session
ವಿಧಾನಸಭೆ ಕಲಾಪ (ETV Bharat)
author img

By ETV Bharat Karnataka Team

Published : Jul 22, 2024, 7:24 PM IST

ಬೆಂಗಳೂರು: ಪ್ರತಿಪಕ್ಷಗಳು ಧರಣಿ ನಡೆಸುತ್ತಿರುವ ಸಂದರ್ಭದಲ್ಲಿ ನಿಯಮ 69ರ ಅನ್ವಯ ಸಾರ್ವಜನಿಕ ಮಹತ್ವದ ವಿಚಾರ ಚರ್ಚೆಗೆ ಅವಕಾಶ ನೀಡಿದ್ದು ಸರಿಯಲ್ಲ ಎಂದು ಪ್ರತಿಪಕ್ಷಗಳಾದ ಜೆಡಿಎಸ್ ಮತ್ತು ಬಿಜೆಪಿ, ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಅವರ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿವೆ.

ಸ್ಪೀಕರ್ ಅವರಿಗೆ ದೂರಿನ ಪತ್ರವನ್ನು ನೀಡಲಾಗಿದ್ದು, ಅದರಲ್ಲಿ ಪ್ರತಿಪಕ್ಷದ ನಾಯಕ ಆರ್.ಅಶೋಕ್, ಜೆಡಿಎಸ್‍ನ ಶಾಸಕಾಂಗ ಪಕ್ಷದ ನಾಯಕ ಸುರೇಶ್‍ ಬಾಬು, ಶಾಸಕರಾದ ವಿ.ಸುನಿಲ್‍ ಕುಮಾರ್, ಎಸ್.ಸುರೇಶ್‍ ಕುಮಾರ್, ಸಿ.ಸಿ.ಪಾಟೀಲ್ ಮತ್ತಿತರರು ಸಹಿ ಹಾಕಿದ್ದಾರೆ.

ಪತ್ರದಲ್ಲೇನಿದೆ?: ಪ್ರತಿಪಕ್ಷಗಳ ಧ್ವನಿಯನ್ನು ಹತ್ತಿಕ್ಕುವುದು ನಿಮ್ಮ ಕಾರ್ಯಶೈಲಿಯ ಭಾಗವೇನೋ? ಎಂಬ ಅನುಮಾನ ನಮ್ಮೆಲ್ಲರನ್ನೂ ಬಲವಾಗಿ ಕಾಡಲಾರಂಭಿಸಿದೆ. ಮೊದಲ ಕಲಾಪದಲ್ಲಿಯೇ ಪ್ರತಿಪಕ್ಷದ ಶಾಸಕರನ್ನು ಅಮಾನತು ಮಾಡಿದ ಕೀರ್ತಿ ನಿಮ್ಮದು. ಈ ಸರ್ಕಾರದ ಹಲವು ಸ್ವತ್ತುಗಳನ್ನು ಸದನದಲ್ಲಿ ಅನಾವರಣಗೊಳಿಸಬೇಕು ಎಂಬ ವಿಪಕ್ಷದ ಪ್ರಯತ್ನ ಜನರ ಬೇಡಿಕೆಯಾಗಿತ್ತು. ಆದರೆ ಅದಕ್ಕೆ ಅವಕಾಶವನ್ನೇ ನೀಡದೇ ಪ್ರಜಾತಂತ್ರ ವ್ಯವಸ್ಥೆಯನ್ನು ಅಪಾಯಕ್ಕೆ ಸಿಲುಕಿಸಲಾಗುತ್ತಿದೆ ಎಂಬ ಆತಂಕ ಶುರುವಾಗಿದೆ. ಮುಂದಿನ ಅವಧಿಯಲ್ಲಿ ತ್ರಿಕರಣ ಪೂರಕವಾಗಿ ಪ್ರತಿಪಕ್ಷಗಳ ಪರ ನಿಲುವು ತಾಳಬೇಕು ಎಂದು ಒತ್ತಾಯಿಸಲಾಗಿದೆ.

ಪ್ರತಿಪಕ್ಷಗಳು ಧರಣಿ ನಡೆಸುತ್ತಿರುವ ಸಂದರ್ಭದಲ್ಲಿ ವಿಧೇಯಕ ಮಂಡನೆ ಹೊಸದಲ್ಲ. ಆದರೆ, ಆಡಳಿತ ಪಕ್ಷದ ಶಾಸಕರು ನೀಡಿದ ಸೂಚನಾಪತ್ರದ ಆಧಾರದ ಮೇಲೆ ನಿಯಮ 69ರನ್ವಯ ಚರ್ಚೆಗೆ ಅವಕಾಶ ಮಾಡಿಕೊಟ್ಟಿರುವ ಪರಂಪರೆ ಸರಿಯಲ್ಲ. ಪ್ರತಿಪಕ್ಷದ ಶಾಸಕರು ಪದೇ ಪದೆ ಹೇಳಿದರೂ ಲಕ್ಷ್ಯ ನೀಡದೇ ಏಕಪಕ್ಷೀಯವಾಗಿ ಕಲಾಪ ನಿರ್ವಹಣೆ ಮಾಡಿದ್ದು, ವಿಧಾನಸಭಾ ಇತಿಹಾಸದಲ್ಲೇ ಇದು ದುರ್ದಿನ ಎಂದು ಆಕ್ಷೇಪಿಸಿದ್ದಾರೆ.

ಕರ್ನಾಟಕ ವಿಧಾನಸಭೆಯ ಗುಣಮಟ್ಟದ ಕಲಾಪ ಮತ್ತು ವ್ಯವಹಾರ ನಿರ್ವಹಣೆ ದೇಶಕ್ಕೆ ಮಾದರಿಯಾಗಿದೆ. ಈ ಹಿಂದೆ ಸ್ಪೀಕರ್ ಆಗಿ ಕೆಲಸ ಮಾಡಿದ ಹಲವು ಹಿರಿಯರ ಕಾರ್ಯವೈಖರಿಯನ್ನು ಶ್ಲಾಘಿಸಿರುವ ಬಿಜೆಪಿಯ ನಾಯಕರು ಇತ್ತೀಚಿನ ದಿನಗಳಲ್ಲಿನ ಕಲಾಪದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: 2024ನೇ ಸಾಲಿನ ಕರ್ನಾಟಕ ನೀರಾವರಿ (ತಿದ್ದುಪಡಿ) ವಿಧೇಯಕ, ಕರ್ನಾಟಕ ಮುನ್ಸಿಪಾಲಿಟಿ, ಇತರ ಕಾನೂನು (ತಿದ್ದುಪಡಿ) ವಿಧೇಯಕ ಮಂಡನೆ - Irrigation Amendment Bill

ETV Bharat Logo

Copyright © 2024 Ushodaya Enterprises Pvt. Ltd., All Rights Reserved.