ETV Bharat / state

ಬಿಎಂಟಿಸಿ ಬಸ್ ಚಕ್ರ ಹರಿದು ಬೈಕ್ ಸವಾರ ಸಾವು - Bike rider dies - BIKE RIDER DIES

ಬೆಂಗಳೂರಿನ ಯಶವಂತಪುರ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಸವಾರನ ಮೇಲೆ ಬಿಎಂಟಿಸಿ ಬಸ್ ಹರಿದು ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿರುವ ದುರಂತ ಘಟನೆ ನಡೆದಿದೆ.

bike-rider-dies-after-bus-accident-in-bengaluru
ಬಿಎಂಟಿಸಿ ಬಸ್ ಚಕ್ರ ಹರಿದು ಬೈಕ್ ಸವಾರ ಸಾವು (ETV Bharat)
author img

By ETV Bharat Karnataka Team

Published : Sep 30, 2024, 10:54 PM IST

ಬೆಂಗಳೂರು : ಬೈಕ್ ಸವಾರನ ಮೇಲೆ ಬಿಎಂಟಿಸಿ ಬಸ್ ಹರಿದು ಸ್ಥಳದಲ್ಲಿ ಸಾವನ್ನಪ್ಪಿರುವ ದುರಂತ ಘಟನೆ ಯಶವಂತಪುರ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.

ವಿದ್ಯಾರಣ್ಯಪುರ ತಿಂಡ್ಲು ನಿವಾಸಿ ಈಶ್ವರ್ (43) ಮೃತ ದುದೈರ್ವಿ. ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದರು. ಜೀವನಕ್ಕಾಗಿ ಅಕ್ಕಸಾಲಿಗ ವೃತ್ತಿ ಮಾಡುತ್ತಿದ್ದರು. ಇಂದು ಮಧ್ಯಾಹ್ನ ಮನೆಯಿಂದ ಅವೆನ್ಯೂ ರಸ್ತೆಗೆ ಕೆಲಸ ನಿಮಿತ್ತ ಬೈಕ್ ನಲ್ಲಿ ಟಾಟಾ ಇನ್​ಸ್ಟಿಟ್ಯೂಟ್ ಬಳಿ ಬರುವಾಗ ದುರಂತ ಸಂಭವಿಸಿದೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ.

ಟಾಟಾ ಇನ್​ಸ್ಟಿಟ್ಯೂಟ್ ಬಳಿ ಬರುವಾಗ ಬೈಕ್​ಗೆ ಕಾರು ಟಚ್ ಆದ ಪರಿಣಾಮ ಎಡಭಾಗದಲ್ಲಿ ಬೈಕ್ ಸವಾರ ಬಿದ್ದಿದ್ದಾರೆ. ಈ ವೇಳೆ ಯಶವಂತಪುರದಿಂದ ಯಲಹಂಕಕ್ಕೆ ಹೋಗುತ್ತಿದ್ದ ಬಿಎಂಟಿಸಿ ಬಸ್ ಹಿಂಬದಿ ಚಕ್ರ ತಲೆ ಮೇಲೆ ಹರಿದ ಪರಿಣಾಮ ತಲೆಯ ಅರ್ಧ ಭಾಗ ಹೊರಬಂದು, ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲಿ ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ತಿಳಿಸಿದ್ಧಾರೆ.

ಹೆಲ್ಮೆಟ್ ಧರಿಸಿದರೂ ಉಳಿಯಲಿಲ್ಲ ಜೀವ : ಸುರಕ್ಷಿತ ವಾಹನ ಚಾಲನೆಗೆ ಹೆಲ್ಮೆಟ್ ಧರಿಸಿಕೊಂಡು ಬೈಕ್ ಸವಾರ ಚಾಲನೆ ಮಾಡಿದ್ದರೂ ಸಂಭವಿಸಿದ ಅಪಘಾತದಲ್ಲಿ ಈಶ್ವರ್ ಅವರ ಪ್ರಾಣಪಕ್ಷಿ ಹಾರಿಹೋಗಿರುವುದು ದುರದೃಷ್ಟಕರವಾಗಿದೆ. ಏಕಾಏಕಿ ಬೈಕ್ ಸವಾರ ಕೆಳಗೆ ಬಿದ್ದಿದ್ದರಿಂದ ನಿಯಂತ್ರಿಸಲಾಗದೇ ಸವಾರನ ಮೇಲೆ ಬಸ್ ಹರಿದಿದೆ.

ಬಸ್ ಚಾಲನೆ ವೇಗಕ್ಕೆ ತಲೆಯ ಅರ್ಧ ಭಾಗ ಅಪ್ಪಚ್ಚಿಯಾಗಿದೆ. ಸದ್ಯ ಮೃತನ ಪತ್ನಿ ನೀಡಿದ ದೂರಿನ ಮೇರೆಗೆ ಬಸ್ ಚಾಲಕನನ್ನ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ. ಮೃತದೇಹವನ್ನ ಎಂ. ಎಸ್ ರಾಮಯ್ಯ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಟ್ರಾಫಿಕ್ ಪೊಲೀಸರು ಮಾಹಿತಿ ನೀಡಿದ್ಧಾರೆ.

ಇದನ್ನೂ ಓದಿ : ಮಂಡ್ಯ: ಕಂಟೈನರ್​ಗೆ ಡಿಕ್ಕಿ ಹೊಡೆದು ಬಸ್ ಪಲ್ಟಿ, 20ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ - Mandya Road Accident

ETV Bharat Logo

Copyright © 2025 Ushodaya Enterprises Pvt. Ltd., All Rights Reserved.