ETV Bharat / state

ಬೆಂಗಳೂರಲ್ಲಿ ಪಾನಮತ್ತ ಕಾರು ಚಾಲಕನಿಂದ ಅಪಘಾತ: ಬೈಕ್ ಸವಾರ ಸಾವು - Car Hits Bike - CAR HITS BIKE

ಮಲ್ಲೇಶ್ವರಂನ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್​ಗೆ ಕಾರು ಚಾಲಕ ಡಿಕ್ಕಿ ಹೊಡೆದಿರುವ ಘಟನೆ ನಡೆದಿದೆ.

ಅಪಘಾತ ನಡೆದ ಸ್ಥಳ
ಅಪಘಾತ ನಡೆದ ಸ್ಥಳ (ETV Bharat)
author img

By ETV Bharat Karnataka Team

Published : May 19, 2024, 7:40 PM IST

ಆಟೋ ಚಾಲಕ ಲಿಂಗರಾಜು (ETV Bharat)

ಬೆಂಗಳೂರು: ಕಾರು ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿದ್ದು, ಹಿಂಬದಿ ಸವಾರ ಗಾಯಗೊಂಡಿರುವ‌ ಘಟನೆ ಮಲ್ಲೇಶ್ವರಂ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಸುಬ್ರಮಣ್ಯನಗರ ಮುಖ್ಯ ರಸ್ತೆಯಲ್ಲಿ ನಡೆದಿದೆ. ಸುಬ್ರಮಣ್ಯ ನಗರ ನಿವಾಸಿ ವಿನಯ್ (32) ಮೃತ ಬೈಕ್ ಸವಾರ. ಕಾರು ಚಲಾಯಿಸುತ್ತಿದ್ದ ಹರಿನಾಥ್ ಎಂಬಾತನನ್ನ ಮಲ್ಲೇಶ್ವರಂ ಸಂಚಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪಾನಮತ್ತನಾಗಿ ಕಾರು ಚಲಾಯಿಸಿಕೊಂಡು ಬಂದಿದ್ದ ಹರಿನಾಥ್, ಮೊದಲು ರಸ್ತೆ ಬದಿ ನಿಂತಿದ್ದ ಆಟೋಗೆ ಡಿಕ್ಕಿ ಹೊಡೆದಿದ್ದಾನೆ. ನಂತರ ಕಾರು ವಿನಯ್ ಹಾಗೂ ಆತನ ಸ್ನೇಹಿತ ತೆರಳುತ್ತಿದ್ದ ಬೈಕಿಗೆ ಡಿಕ್ಕಿಯಾಗಿದೆ. ಆ ರಭಸಕ್ಕೆ ನೆಲಕ್ಕೆ ಬಿದ್ದ ವಿನಯ್‌ನನ್ನ ಸ್ವಲ್ಪದೂರ ಎಳೆದೊಯ್ದಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ವಿನಯ್ ಹಾಗೂ ಆತನ ಸ್ನೇಹಿತನನ್ನ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ವಿನಯ್ ಮೃತಪಟ್ಟಿದ್ದಾನೆ. ಆತನ ಜೊತೆಗಿದ್ದ ಮತ್ತೊಬ್ಬ ಸವಾರನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.

ಅಪಘಾತವೆಸಗಿದ ಬಳಿಕ ಸ್ಥಳೀಯರು ಬಂದು ಕಾರಿನಿಂದ ಇಳಿಯಲು ಸೂಚಿಸಿದರೂ ಸಹ ಚಾಲಕ ಹರಿನಾಥ್ ಕಾರಿನಿಂದ ಇಳಿಯದ ಪ್ರಸಂಗ ಸಹ ನಡೆದಿದೆ. ಪೊಲೀಸರು ಬಂದರೂ ಇಳಿಯದೇ ಕಾರಿನಲ್ಲೇ ಚಾಲಕ ಹರಿನಾಥ್ ಕುಳಿತ್ತಿದ್ದರು. ಕೊನೆಗೆ ಪೊಲೀಸರೇ ಮನವೊಲಿಸಿ ಕಾರಿನಿಂದ ಕೆಳಗಿಳಿಸಿ ವಶಕ್ಕೆ ಪಡೆದಿದ್ದಾರೆ. ಘಟನೆಯಲ್ಲಿ ಆಟೋ ರಿಕ್ಷಾ ಸಹ ಜಖಂಗೊಂಡಿದೆ. ಸದ್ಯ ಕಾರು, ಆಟೋ ಹಾಗೂ ಬೈಕ್ ವಶಕ್ಕೆ ಪಡೆದಿರುವುದಾಗಿ ಮಲ್ಲೇಶ್ವರಂ ಸಂಚಾರಿ ಠಾಣಾ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ : ಬೊಲೆರೊ - ಜೀಪ್ ನಡುವೆ ಭೀಕರ ಅಪಘಾತ; ನಾಲ್ವರು ಸಾವು - Road Accident

ETV Bharat Logo

Copyright © 2024 Ushodaya Enterprises Pvt. Ltd., All Rights Reserved.