ETV Bharat / state

ಮೈಸೂರು ಅರಮನೆ ಆವರಣದಲ್ಲಿದೆ ಭುವನೇಶ್ವರಿ ದೇವಾಲಯ: ಇಲ್ಲಿ ಕನ್ನಡಾಂಬೆಗೆ ನಿತ್ಯ ಪೂಜೆ

ಮೈಸೂರು ಅರಮನೆಯ ಆವರಣದಲ್ಲಿರುವ ರಾಜ್ಯದ ಅತಿದೊಡ್ಡ ಭುವನೇಶ್ವರಿ ದೇವಾಲಯದಲ್ಲಿ ಕನ್ನಡ ರಾಜ್ಯೋತ್ಸವ ಹಿನ್ನೆಲೆ ವಿಶೇಷ ಪೂಜೆ ನೆರವೇರಿತು.

ಭುವನೇಶ್ವರಿ ದೇವಾಲಯ
ಭುವನೇಶ್ವರಿ ದೇವಾಲಯ (ETV Bharat)
author img

By ETV Bharat Karnataka Team

Published : Nov 1, 2024, 4:55 PM IST

ಮೈಸೂರು: ರಾಜ್ಯಾದ್ಯಂತ ಕರ್ನಾಟಕ ರಾಜ್ಯೋತ್ಸವ ಸಂಭ್ರಮ ಕಳೆಗಟ್ಟಿದೆ. ಮೈಸೂರು ಅರಮನೆಯ ಆವರಣದಲ್ಲಿನ ರಾಜ್ಯದ ಅತಿದೊಡ್ಡ ಭುವನೇಶ್ವರಿ ದೇವಾಲಯದಲ್ಲಿ ವರ್ಷಪೂರ್ತಿ ಕನ್ನಡಾಂಬೆಗೆ ಪೂಜೆ ನೆರವೇರುತ್ತದೆ. ಹೌದು, ಅರಮನೆಯ ಮುಂಭಾಗದ ಬಲರಾಮ ದ್ವಾರಕ್ಕೆ ಹೋಗುವ ಮಾರ್ಗದಲ್ಲಿರುವ ಈ ದೇವಾಲಯವನ್ನು ಜಯಚಾಮರಾಜೇಂದ್ರ ಒಡೆಯರ್ 1954 ರಲ್ಲಿ ಕಟ್ಟಿಸಿದ್ದರು.

ಈ ಕುರಿತು ಸಾಹಿತಿ ಬನ್ನೂರು ರಾಜ್‌ ಈಟಿವಿ ಭಾರತ ಜೊತೆ ಮಾತನಾಡಿ, "ಮೈಸೂರು ಸಂಸ್ಥಾನವನ್ನ 25 ರಾಜರು ಆಳ್ವಿಕೆ ಮಾಡಿದ್ದಾರೆ. ಅವರಲ್ಲಿ ಕೊನೆಯವರು ಜಯಚಾಮರಾಜೇಂದ್ರ ಒಡೆಯರ್‌. ಇವರಿಗೆ ಮೂವರು ಹೆಣ್ಣು ಮಕ್ಕಳಿದ್ದ ಕಾರಣ ಗಂಡು ಮಗಿವಿನ ಭಾಗ್ಯ ಕರುಣಿಸುವಂತೆ ಶಕ್ತಿ ದೇವತೆಗೆ ಪ್ರಾರ್ಥನೆ ಸಲ್ಲಿಸಿದ್ದರು. ರಾಜರ 2ನೇ ಪತ್ನಿ ತ್ರಿಪುರ ಸುಂದರಿ ಅಮ್ಮಣಿ ಅವರಿಗೆ ಗಂಡು ಜನಿಸುತ್ತದೆ. ಅವರೇ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌. ಇದರ ನೆನಪಿಗೋಸ್ಕರ ಅರಮನೆ ಮುಂಭಾಗದಲ್ಲಿ ಅಂದಿನ ಮೈಸೂರು ಶಿಲ್ಪಿ ಸಿದ್ದಲಿಂಗಸ್ವಾಮಿ ಅವರಿಂದ ಭುವನೇಶ್ವರಿ ದೇವಾಲಯ ಕೆತ್ತನೆ ಮಾಡಿಸಲಾಗುತ್ತದೆ" ಎಂದು ಮಾಹಿತಿ ನೀಡಿದರು.

ಭುವನೇಶ್ವರಿ ದೇವಾಲಯ (ETV Bharat)

"ನಂತರ ಸುಂದರ ಭುವನೇಶ್ವರಿ ತಾಯಿ ವಿಗ್ರಹ ಪ್ರತಿಷ್ಠಾಪಿಸಲಾಗುತ್ತದೆ. ಅಂದಿನಿಂದಲೂ ಪ್ರತಿನಿತ್ಯ ತಪ್ಪದೇ ಪೂಜೆ ನೆರವೇರಿಸಿಕೊಂಡು ಬರಲಾಗುತ್ತಿದೆ. ರಾಜ್ಯದ ಬಹುದೊಡ್ಡ ಭುವನೇಶ್ವರಿ ದೇವಾಲಯ ಇದಾಗಿದೆ. ರಾಜ್ಯದಲ್ಲಿರುವ ಕನ್ನಡಾಂಬೆಯ ಎರಡನೇ ದೇವಾಲಯವೂ ಸಹ ಇದೇ ಆಗಿರುವುದು ವಿಶೇಷ" ಎಂದು ತಿಳಿಸಿದರು.

ಭುವನೇಶ್ವರಿ ದೇವಾಲಯ
ಭುವನೇಶ್ವರಿ ದೇವಾಲಯ (ETV Bharat)

ದೇವಸ್ಥಾನದ ಪ್ರಧಾನ ಅರ್ಚಕ ಪ್ರಕಾಶ್‌ ಮೂರ್ತಿ ಮಾತನಾಡಿ, "ಮೈಸೂರು ಅರಮನೆಯ ಆವರಣದಲ್ಲಿರುವ ಭುವನೇಶ್ವರಿ ದೇವಾಲಯದಲ್ಲಿ ಪ್ರತಿವರ್ಷ ವಿಜೃಂಭಣೆಯಿಂದ ಕನ್ನಡ ರಾಜ್ಯೋತ್ಸವ ನಡೆಯುತ್ತದೆ. ಈ ದೇವಾಲಯದಲ್ಲಿ ಪ್ರತಿನಿತ್ಯ ಹಾಗೂ ವಿಶೇಷ ಸಂದರ್ಭಗಳಲ್ಲಿ ಸರ್ಕಾರದ ವತಿಯಿಂದ ಪೂಜೆ ನೆರವೇರಿಸಲಾಗುತ್ತದೆ. ಈ ದೇವಾಲಯದಲ್ಲಿ ವಿಶಿಷ್ಟ ಕಲಾಕೃತಿಯಿಂದ ನಿರ್ಮಾಣ ಮಾಡಿರುವ ಭುವನೇಶ್ವರಿ ತಾಯಿ ವಿಗ್ರಹ ಹಾಗೂ ಶಕ್ತಿಪೀಠವೂ ಇದಾಗಿದೆ. ಇದನ್ನು ಜಯಚಾಮರಾಜೇಂದ್ರ ಒಡೆಯರ್‌ ಕಟ್ಟಿಸಿದರು" ಎಂದು ವಿವರಿಸಿದರು.

ಭುವನೇಶ್ವರಿ ದೇವಾಲಯ
ಭುವನೇಶ್ವರಿ ದೇವಾಲಯ (ETV Bharat)

ಇದನ್ನೂ ಓದಿ: ಭಾಷೆ, ಬದುಕು, ಸಾಹಿತ್ಯ ಬೆಳವಣಿಗೆಯಲ್ಲಿ ಕನ್ನಡಕ್ಕೆ ತನ್ನದೇ ಅಸ್ಮಿತೆ ಇದೆ: ಸಚಿವ ಮಹದೇವಪ್ಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.