ETV Bharat / state

ಭಾರತ್ ಮಾತಾ ಕಿ ಜೈ ಘೋಷಣೆ ಸಾಮರಸ್ಯ ಉತ್ತೇಜಿಸುವ ಸಂಕೇತ: ಹೈಕೋರ್ಟ್ - High Court

author img

By ETV Bharat Karnataka Team

Published : 2 hours ago

ಭಾರತ್​ ಮಾತಾ ಕಿ ಜೈ ಎಂಬ ಘೋಷಣೆಯು ಸಾಮರಸ್ಯ ಉತ್ತೇಜಿಸುವ ಸಂಕೇತ ಎಂದು ಹೈಕೋರ್ಟ್​ ತಿಳಿಸಿದೆ.

high-court
ಹೈಕೋರ್ಟ್ (ETV Bharat)

ಬೆಂಗಳೂರು : ‘ಭಾರತ್ ಮಾತಾ ಕಿ ಜೈ’ ಎನ್ನುವ ಘೋಷಣೆಯು ಸಾಮರಸ್ಯ ಉತ್ತೇಜಿಸುತ್ತದೆಯೇ ಹೊರತು, ವೈಷಮ್ಯ ಹರಡುವುದಿಲ್ಲ ಎಂದು ಹೈಕೋರ್ಟ್ ತಿಳಿಸಿದೆ. ಮಂಗಳೂರಿನ ಸುರೇಶ್, ಎಂ. ವಿನಯ್ ಕುಮಾರ್, ಸುಭಾಷ್, ರಂಜನ್ ಅಲಿಯಾಸ್ ರಂಜಿತ್ ಮತ್ತು ಧನಂಜಯ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಅಭಿಪ್ರಾಯ ಪಟ್ಟಿದೆ.

ಅಲ್ಲದೇ, ಮಸೀದಿ ಮುಂದೆ ಪ್ರತಿಭಟನೆ ನಡೆಸಿ ‘ಭಾರತ್ ಮಾತಾ ಕಿ ಜೈ’ ಎಂದು ಘೋಷಣೆ ಕೂಗಿದ ಸಂಬಂಧ ಎರಡು ಧರ್ಮಗಳ ವಿರುದ್ಧ ದ್ವೇಷ ಹರಡುವ ಆರೋಪದ ಮೇಲೆ ಮಂಗಳೂರಿನ ಐವರು ಹಿಂದೂ ಕಾರ್ಯಕರ್ತರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ರದ್ದುಪಡಿಸಿದೆ.

ಪ್ರಕರಣ ಸಂಬಂಧ ಅರ್ಜಿದಾರರು ಹೂಡಿದ್ದ ಪ್ರಕರಣಕ್ಕೆ ಪ್ರತಿಯಾಗಿ ಹೂಡಿದ್ದ ಪ್ರಕರಣವಾಗಿದೆ. ಇದರಲ್ಲಿ ಸೆಕ್ಷನ್ 153ಎ ಅನ್ವಯವಾಗುವ ಒಂದೇ ಒಂದು ಅಂಶವೂ ಇಲ್ಲ. ವಾಸ್ತವವಾಗಿ ಧರ್ಮ, ಭಾಷೆ ಸೇರಿದಂತೆ ನಾನಾ ಅಂಶಗಳನ್ನು ಮುಂದಿಟ್ಟುಕೊಂಡು ಬೇರೆ ಬೇರೆ ಗುಂಪುಗಳ ನಡುವೆ ದ್ವೇಷ ಭಾವನೆ ಮೂಡಿಸುವ ಘಟನೆ ನಡೆದಿರಬೇಕಾಗುತ್ತದೆ. ಆದರೆ, ಇಲ್ಲಿ ಅಂತಹ ಘಟನೆ ನಡೆದಿಲ್ಲ. ಈ ಪ್ರಕರಣ ಐಪಿಸಿ ಸೆಕ್ಷನ್ 153 ದುರ್ಬಳಕೆಗೆ ಉದಾಹರಣೆಯಾಗಿದೆ ಎಂದು ಪೀಠ ಹೇಳಿದೆ.

ದೂರು - ಪ್ರತಿದೂರಿನ ಪ್ರಕರಣ, ಅರ್ಜಿದಾರರು ಕೇವಲ ಭಾರತ್ ಮಾತಾ ಕಿ ಜೈ ಎಂದು ಘೋಷಣೆ ಕೂಗಿದ್ದಾರೆ ಹಾಗೂ ಪ್ರಧಾನಮಂತ್ರಿಯನ್ನು ಹೊಗಳಿದ್ದಾರೆ. ದೂರಿನಲ್ಲೂ ಕೂಡ ಯಾವ ಅಂಶಗಳನ್ನೂ ಉಲ್ಲೇಖಿಸಿಲ್ಲ. ಹಾಗಾಗಿ ಪ್ರಕರಣ ರದ್ದುಗೊಳಿಸಲಾಗುತ್ತಿದೆ ಎಂದು ನ್ಯಾಯಪೀಠ ಹೇಳಿದೆ.

ಪ್ರಕರಣದ ಹಿನ್ನೆಲೆ : ಕಳೆದ ಜೂ. 9ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧಿಕಾರ ಸ್ವೀಕಾರ ಸಮಾರಂಭ ವೀಕ್ಷಣೆ ಬಳಿಕ ವಾಪಸ್ಸಾಗುತ್ತಿದ್ದಾಗ ಒಂದು ಗುಂಪು ಅರ್ಜಿದಾರರನ್ನು ಏಕೆ ‘ಭಾರತ್ ಮಾತಾ ಕಿ ಜೈ’ ಎಂದು ಘೋಷಣೆ ಕೂಗುತ್ತಿದ್ದೀರಾ? ಎಂದು ಆಕ್ಷೇಪಣೆ ಎತ್ತಿದ್ದರು. ಆ ಸಂದರ್ಭದಲ್ಲಿ ಸುಮಾರು 25 ವ್ಯಕ್ತಿಗಳು ಅಲ್ಲಿದ್ದರು. ಅವರ ಪೈಕಿ ಒಬ್ಬರು ಅರ್ಜಿದಾರರಲ್ಲಿ ಇಬ್ಬರನ್ನು ಚಾಕುವಿಂದ ಚುಚ್ಚಿದ್ದರು.

ಆದರೆ ಮರುದಿನ ಮುಸ್ಲಿಂ ವ್ಯಕ್ತಿ ಪಿ. ಕೆ ಅಬ್ದುಲ್ಲಾ, ಅರ್ಜಿದಾರರು ಮಸೀದಿ ಮುಂದೆ ಬಂದು ಬೆದರಿಕೆ ಹಾಕಿದರು ಎಂದು ಆರೋಪಿಸಿ ಮಂಗಳೂರಿನ ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅದರಂತೆ ಪೊಲೀಸರು ಐಪಿಸಿ ಸೆಕ್ಷನ್ 153 ಎ ಸೇರಿದಂತೆ ಹಲವು ಕಲಂಳಡಿ ಅರ್ಜಿದಾರರ ಮೇಲೆ ಪ್ರಕರಣ ದಾಖಲಿಸಿ, ಎಫ್‌ಐಆರ್ ದಾಖಲು ಮಾಡಿದ್ದರು. ಅದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ : ಚುನಾವಣೆ ವೇಳೆ ಕೋಮುದ್ವೇಷದ ಪೋಸ್ಟ್​​: ನಡ್ಡಾ, ಅಮಿತ್ ಮಾಳವೀಯ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್ ತಡೆ - High court stays against BJP case

ETV Bharat Logo

Copyright © 2024 Ushodaya Enterprises Pvt. Ltd., All Rights Reserved.