ETV Bharat / state

ಬೆಂಗಳೂರು ಅಪಾರ್ಟ್​ಮೆಂಟ್​ಗಳಲ್ಲಿ ಬಳಸಿದ ನೀರು ಸಂಸ್ಕರಿಸಿ ಮಾರಲು ಮುಂದಾದ ಜಲಮಂಡಳಿ - Water Recycling - WATER RECYCLING

ಬಳಸಿದ ನೀರನ್ನು ಖರೀದಿಸಿ, ಸಂಸ್ಕರಿಸಿ ಮಾರಾಟ ಮಾಡುವ ಸಂಬಂಧ ಅಪಾರ್ಟ್​ಮೆಂಟ್​ಗಳ ಜೊತೆ ಜಲಮಂಡಳಿ ಒಡಂಬಡಿಕೆ ಮಾಡಿಕೊಂಡಿದೆ.

Bengaluru water Board
ಬೆಂಗಳೂರು ಜಲ ಮಂಡಳಿ
author img

By ETV Bharat Karnataka Team

Published : Apr 19, 2024, 8:24 PM IST

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಉಂಟಾಗಿರುವ ಜಲಕ್ಷಾಮದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಜಲಮಂಡಳಿ ಮುಂದಾಗಿದೆ. ನಗರದ ಅಪಾರ್ಟ್‌ಮೆಂಟ್‌ಗಳಲ್ಲಿ ಬಳಸಿದ ನೀರನ್ನು ಖರೀದಿಸಿ, ಸಂಸ್ಕರಿಸಿ ಮಾರಾಟ ಮಾಡಲು ಒಡಂಬಡಿಕೆಯನ್ನು ಜಲಮಂಡಳಿ ಮಾಡಿಕೊಂಡಿದೆ. ಈ ಮೂಲಕ ನಗರದ ನೀರಿನ ಸಮಸ್ಯೆಗೆ ಸಣ್ಣ ಮಟ್ಟಿನ ಪರಿಹಾರ ಕಂಡುಕೊಳ್ಳುವತ್ತ ಹೆಜ್ಜೆ ಇರಿಸಿದೆ.

ನೀರು ಪೂರೈಕೆಗೆ ಹೆಚ್ಚಿನ ಮೂಲಗಳ ಹುಡುಕಾಟ ನಡೆಸಿದ್ದ ಜಲಮಂಡಳಿ, ಇದೀಗ ಕುಡಿಯುವ ನೀರಿನ ಉದ್ದೇಶ ಹೊರತುಪಡಿಸಿ ಇತರ ಚಟುವಟಿಕೆಗಳ ಬಳಕೆಗೆ ಹೊಸದೊಂದು ದಾರಿ ಹುಡುಕಿಕೊಂಡಿದೆ. ನಗರದ 10 ಸಾವಿರಕ್ಕೂ ಅಧಿಕ ಅಪಾರ್ಟ್‌ಮೆಂಟ್​​ಗಳಲ್ಲಿ ಬಳಕೆಯಾದ ನೀರನ್ನು ಪಡೆದು ಸಂಸ್ಕರಿಸಿ ಮಾರಾಟ ಮಾಡಲಾಗುತ್ತದೆ. ಇದಕ್ಕಾಗಿ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ಜೊತೆ ಒಡಂಬಡಿಕೆ ಮಾಡಿಕೊಂಡಿದೆ.

ಜಲಮಂಡಳಿಯು ಈ ಮೂಲಕ ಆದಾಯವನ್ನು ಹೆಚ್ಚಿಸಿಕೊಳ್ಳಲು ಸಹ ಮುಂದಾಗಿದೆ. ಹೆಚ್ಚುವರಿಯಾಗಿ 800 ಎಂ.ಎಲ್.ಡಿ ನೀರು ಪಡೆದುಕೊಳ್ಳಲಿದೆ. ಕೆಲ ಅಪಾರ್ಟ್‌ಮೆಂಟ್‌ಗಳು ಈಗಾಗಲೇ ಬಳಸಿದ ನೀರನ್ನು ಸಂಸ್ಕರಿಸಿ ಮರುಬಳಕೆ ಮಾಡಿಕೊಳ್ಳುತ್ತಿವೆ. ಈ ಪೈಕಿ ಶೇ.50 ರಷ್ಟು ಸಂಸ್ಕರಿಸಿದ ನೀರು ಮಾತ್ರ ಅಪಾರ್ಟ್‌ಮೆಂಟ್‌ಗಳಲ್ಲಿ ಬಳಕೆಯಾಗುತ್ತಿದೆ. ಉಳಿದ ನೀರು ನಾಲೆಗಳಿಗೆ, ರಾಜಕಾಲುವೆಗಳಿಗೆ, ಚರಂಡಿಗಳಿಗೆ ಬಿಟ್ಟು ಪೋಲು ಮಾಡಲಾಗುತ್ತಿದೆ. ಸಂಸ್ಕರಿಸಿದ ನೀರಿಗೂ ಬೇಡಿಕೆ ಹೆಚ್ಚಾಗಿದೆ. ಈವರೆಗೆ 62 ಲಕ್ಷ ಲೀಟರ್ ಸಂಸ್ಕರಿತ ನೀರಿಗೆ ಬೇಡಿಕೆ ಸೃಷ್ಟಿಯಾಗಿದೆ. ಕುಡಿಯುವ ನೀರನ್ನು ಹೊರತುಪಡಿಸಿ ಇತರ ಕೆಲಸಗಳಿಗೆ ಬೇಕಾದ ನೀರಿಗಾಗಿ ಈ ಸಂಸ್ಕರಿತ ನೀರು ಬಳಸಲು ತಯಾರಿ ನಡೆಸಲಾಗಿದೆ. ಇದರಿಂದ ಬಂದ ಲಾಭದಲ್ಲಿ ಅಪಾರ್ಟ್‌ಮೆಂಟ್​​ಗಳಿಗೂ ಪಾಲು ನೀಡಲಾಗುತ್ತದೆ.

ಕುಡಿಯುವ ಉದ್ದೇಶ ಹೊರತುಪಡಿಸಿ ಇತರೆ ಚಟುವಟಿಕೆಗಳ ಬಳಕೆಯ ನೀರಿಗಾಗಿ ಹೊಸದೊಂದು ದಾರಿ ಹುಡುಕಲು ಮುಂದಾಗಿದ್ದು, ಈ ನಿಟ್ಟಿನಲ್ಲಿ ನಗರದ 10 ಸಾವಿರಕ್ಕೂ ಅಧಿಕ ಅಪಾರ್ಟ್‌ಮೆಂಟ್​​ಗಳಿಂದ ಬಳಕೆಯಾದ ನೀರನ್ನು ಪಡೆದು ಸಂಸ್ಕರಿಸಿ ಮಾರಾಟ ಮಾಡಲಾಗುತ್ತದೆ. ಇದಕ್ಕಾಗಿ ಅಪಾರ್ಟ್‌ಮೆಂಟ್ ಅಸೋಷಿಯೇಷನ್‌ಗಳ ಜೊತೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದು ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಹೇಳಿದ್ದಾರೆ.

ಇದನ್ನೂ ಓದಿ: ಮಹದೇವಪುರ ವಲಯದ 21 ಐಟಿ ಪಾರ್ಕ್‌ಗಳಿಗೆ ಕಾವೇರಿ ನೀರು ಪೂರೈಸಲು ಜಲಮಂಡಳಿ ಸಿದ್ಧ - Cauvery water supply

ಬೆಂಗಳೂರಲ್ಲಿ ಈ ಬಾರಿ ನೀರಿನ ಅಭಾವ ಉಂಟಾಗಿದ್ದು, ಜನರು ಪರದಾಡುವಂತಾಗಿತ್ತು. ನೀರು ಬಳಸುವುದಕ್ಕೆ ಜಲ ಮಂಡಳಿ ಹಲವು ನಿರ್ಬಂಧಗಳನ್ನು ಹಾಕಿತ್ತು. ಹೆಚ್ಚು ಪ್ರಮಾಣದಲ್ಲಿ ಬಳಸುತ್ತಿರುವ ಗ್ರಾಹಕರಿಗೆ ನೀರು ಕಡಿತಗೊಳಿಸಲು ಮುಂದಾಗಿದ್ದು, ಇದರಿಂದ ಪ್ರತಿನಿತ್ಯ 60 ಎಂಎಲ್‌ಡಿ ನೀರನ್ನು ಉಳಿಸುವ ಗುರಿ ಹಾಕಿಕೊಂಡಿದೆ. ಹಾಗೆಯೇ ಸಂಸ್ಕರಿಸಿದ ನೀರನ್ನು ಕೈಗಾರಿಕೆಗಳಿಗೆ ಪ್ರತ್ಯೇಕ ಪೈಪ್‌ಲೈನ್​​​ದಿಂದ ಸರಬರಾಜು ಮಾಡುವ ನಿಟ್ಟಿನಲ್ಲಿ ಕೂಡ ಬೆಂಗಳೂರು ಜಲಮಂಡಳಿ ಚಿಂತನೆ ನಡೆಸಿದೆ.

ಇದನ್ನೂ ಓದಿ: ವಾಹನ ತೊಳೆಯಲು, ಗಿಡಗಳಿಗೆ ಕುಡಿಯುವ ನೀರು ಬಳಕೆ: ₹20.25 ಲಕ್ಷ ದಂಡ ವಸೂಲಿ - Drinking Water Wastage

ETV Bharat Logo

Copyright © 2025 Ushodaya Enterprises Pvt. Ltd., All Rights Reserved.