ETV Bharat / state

ಬೆಂಗಳೂರು TO ಮೈಸೂರು ಪಾದಯಾತ್ರೆ: 'ದೋಸ್ತಿ'ಗಳಿಂದ ಕಾಂಗ್ರೆಸ್ ವಿರುದ್ಧ ಬೃಹತ್ ಹೋರಾಟಕ್ಕೆ ಸಿದ್ಧತೆ - BJP JDS Padayatra - BJP JDS PADAYATRA

ಬೆಂಗಳೂರಿಂದ ಮೈಸೂರುವರೆಗೆ ದೋಸ್ತಿ ಪಕ್ಷಗಳಿಂದ ಕಾಂಗ್ರೆಸ್ ವಿರುದ್ಧ ಬೃಹತ್ ಹೋರಾಟಕ್ಕೆ ಅಖಾಡ ಸಿದ್ದವಾಗಿದೆ.

MASSIVE FIGHT AGAINST THE CONGRESS  JDS AND BJP PARTIES  BENGALURU
ದೋಸ್ತಿ ಪಕ್ಷಗಳಿಂದ ಕಾಂಗ್ರೆಸ್ ವಿರುದ್ಧ ಬೃಹತ್ ಹೋರಾಟಕ್ಕೆ ವೇದಿಕೆ ಸಿದ್ದ (ETV Bharat)
author img

By ETV Bharat Karnataka Team

Published : Jul 26, 2024, 2:29 PM IST

ಬೆಂಗಳೂರು: ಮುಡಾ ಹಗರಣ ಹಾಗು ವಾಲ್ಮೀಕಿ ನಿಗಮ ಹಗರಣಗಳನ್ನು ಜನರ ಮುಂದಿಡಲು ಬಿಜೆಪಿ ನಿರ್ಧರಿಸಿದ್ದು, ದೋಸ್ತಿ ಪಕ್ಷ ಜೆಡಿಎಸ್ ಜೊತೆಗೂಡಿ ಬೆಂಗಳೂರು ಟು ಮೈಸೂರು ಪಾದಯಾತ್ರೆಗೆ ಮುಂದಾಗಿದೆ. ಒಂದೂವರೆ ದಶಕದ ನಂತರ ರಾಜ್ಯದಲ್ಲಿ ಮೊದಲ ಬೃಹತ್ ರಾಜಕೀಯ ಹೋರಾಟದ ಪಾದಯಾತ್ರೆ ನಡೆಯುತ್ತಿದೆ.

ಮುಡಾ ಹಾಗು ವಾಲ್ಮೀಕಿ ನಿಗಮ ಹಗರಣ ಕುರಿತು ಸದನದಲ್ಲಿ ಚರ್ಚೆಗೆ ಸರಿಯಾದ ವೇದಿಕೆ ಲಭ್ಯವಾಗದ ಹಿನ್ನೆಲೆಯಲ್ಲಿ ಜನತಾ ನ್ಯಾಯಾಲಯಕ್ಕೆ ಕೊಂಡೊಯ್ಯಲು ಬಿಜೆಪಿ ಮತ್ತು ಜೆಡಿಎಸ್ ನಿರ್ಧರಿಸಿದೆ. ಬೃಹತ್ ಪಾದಯಾತ್ರೆ ಮೂಲಕ ಜನರಿಗೆ ಕಾಂಗ್ರೆಸ್ ಸರ್ಕಾರದ ಹಗರಣಗಳನ್ನು ಮನವರಿಕೆ ಮಾಡಿಕೊಡಲು ತೀರ್ಮಾನಿಸಿದೆ. ಅದಕ್ಕಾಗಿ 140 ಕಿಲೋಮೀಟರ್​ಗಳ ಬೃಹತ್ ಪಾದಯಾತ್ರೆಗೆ ನಿರ್ಧರಿಸಲಾಗಿದೆ.

ಬೆಂಗಳೂರು ಹೊರವಲಯದ ನೈಸ್​ ರೋಡ್ ಜಂಕ್ಷನ್​ನಿಂದ ಪಾದಯಾತ್ರೆ ಆರಂಭಿಸಿ ಬಿಡದಿ, ರಾಮನಗರ, ಮದ್ದೂರು, ಮಂಡ್ಯ, ಶ್ರೀರಂಗಪಟ್ಟಣದ ಮೂಲಕ ಮೈಸೂರಿಗೆ ಸಾಗಲು ಬಿಜೆಪಿ ಜೆಡಿಎಸ್ ನಾಯಕರು ನಿರ್ಧರಿಸಿದ್ದಾರೆ. ಕೇವಲ ರಾಷ್ಟ್ರೀಯ ಹೆದ್ದಾರಿ ಮಾರ್ಗದಲ್ಲಿ ಸಾಗದೆ ಪ್ರಮುಖ ಪಟ್ಟಣಗಳ ಒಳಹಾದಿ ಮೂಲಕ‌ ಸಾಗಿ ಜನರನ್ನು ತಲುಪಬೇಕು. ಅಲ್ಲಲ್ಲಿ ಸಮಾವೇಶಗಳನ್ನು ಆಯೋಜನೆ ಮಾಡುವ ಮೂಲಕ ಸರ್ಕಾರದ ಹಗರಣಗಳನ್ನು ಎಳೆ ಎಳೆಯಾಗಿ ಜನತೆಯ ಮುಂದೆ ಬಿಚ್ಚಿಡಬೇಕು ಎಂದು ನಿರ್ಧರಿಸಿದ್ದು, ಅದಕ್ಕಾಗಿ ರೂಪುರೇಶೆ ಸಿದ್ದಪಡಿಸಲಾಗುತ್ತಿದೆ. ಯಾವ ಮಾರ್ಗದ ಮೂಲಕ ಸಾಗಬೇಕು. ಯಾವ ಪಟ್ಟಣದಲ್ಲಿ ಒಳಗೆ ಸಾಗಬೇಕು. ಸಮಾವೇಶಗಳು ಎಲ್ಲಿ ನಡೆಸಬೇಕು. ಮೈಸೂರಿನಲ್ಲಿ ಪಾದಯಾತ್ರೆಯ ಸಮಾರೋಪ ಸಮಾರಂಭ ಬೃಹತ್ ಪ್ರಮಾಣದಲ್ಲಿ ನಡೆಸುವ ಕುರಿತು ಅಂತಿಮ ಹಂತದ ಪರಿಶೀಲನೆಗಳು ನಡೆಯುತ್ತಿದೆ.

ಬೆಂಗಳೂರಿನಿಂದ ಮೈಸೂರುವರೆಗೂ ಪಾದಯಾತ್ರೆ ಸಾಗುವ ಇಡೀ ಮಾರ್ಗ ಜನತಾದಳದ ಕಾರಿಡಾರ್ ಆಗಿದೆ. ದಳಪತಿಗಳ ಕೋಟೆಯೊಳಗೆ ಕೇಸರಿ ಪಡೆ ನಡೆಸುತ್ತಿರುವ ಪಾದಯಾತ್ರೆ ಇದಾಗಿದೆ. ಜೆಡಿಎಸ್ ಈಗ ಎನ್​ಡಿಎ ಭಾಗವಾಗಿರುವ ಹಿನ್ನೆಲೆಯಲ್ಲಿ ಬಿಜೆಪಿಯ ಪಾದಯಾತ್ರೆಯಲ್ಲಿ ಜನತಾದಳ ಪೂರ್ಣ ಪ್ರಮಾಣದಲ್ಲಿ ಭಾಗಿಯಾಗುತ್ತಿದೆ. ಜನತಾದಳದ ವಿಶ್ವಾಸದೊಂದಿಗೆ ಪಾದಯಾತ್ರೆ ನಡೆಸಲಾಗುತ್ತಿದೆ. ಇದು ಬಿಜೆಪಿಯ ಸಂಘಟಿತ ಕೇಡರ್ ಬೇಸ್ ಅಲ್ಲದ ಭಾಗವಾಗಿರುವ ಕಾರಣ ಪಾದಯಾತ್ರೆ ಕಳೆಗುಂದದಿರಲು ಜೆಡಿಎಸ್​ನ ಸಹಕಾರವನ್ನು ಪಡೆದುಕೊಳ್ಳಲಾಗುತ್ತಿದೆ. ಪಾದಯಾತ್ರೆ ಮಾರ್ಗದುದ್ದಕ್ಕೂ ಸ್ಥಳೀಯ ಬಿಜೆಪಿ ಜೆಡಿಎಸ್ ಕಾರ್ಯಕರ್ತರು ಪಾಲ್ಗೊಂಡು ಪಾದಯಾತ್ರೆಯನ್ನು ಸಫಲಗೊಳಿಸಬೇಕು ಎಂದು ನಿರ್ಧರಿಸಿದ್ದು, ಇದಕ್ಕಾಗಿ ಬೂತ್ ಮಟ್ಟದ ಸಿದ್ದತೆಗಳು ಆರಂಭವಾಗಿವೆ. ಉಭಯ ಪಕ್ಷಗಳ ವಿಧಾನಸಭಾವಾರು ನಾಯಕರು ಸಮ್ಮಿಳಿತ ರೀತಿಯಲ್ಲಿ ಕಾರ್ಯಕರ್ತರ ಪಡೆಯನ್ನು ಪಾದಯಾತ್ರೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವ ನಿರ್ಧಾರ ಮಾಡಲಾಗಿದೆ.

ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ನಡೆಸುವ ನಿರ್ಧಾರ ಮಾಡಿದ್ದರೂ ದಿನಾಂಕವನ್ನು ಅಂತಿಮಗೊಳಿಸಿಲ್ಲ. ಜೆಡಿಎಸ್ ನಾಯಕ ಹೆಚ್.ಡಿ ಕುಮಾರಸ್ವಾಮಿ ಈಗ ಕೇಂದ್ರ ಸಚಿವರಾಗಿದ್ದು, ದೆಹಲಿಯಲ್ಲಿರುವ ಹಿನ್ನೆಲೆ ಅವರೊಂದಿಗೆ ಚರ್ಚಿಸಲು ಸಾಧ್ಯವಾಗದ ಕಾರಣದಿಂದ ದಿನಾಂಕ ನಿಗದಿ ಬಾಕಿ ಉಳಿದಿದೆ. ಶನಿವಾರ ಹಾಗು ಭಾನುವಾರ ರಾಜ್ಯಕ್ಕೆ ಕುಮಾರಸ್ವಾಮಿ ಆಗಮಿಸಲಿಸಿದ್ದು, ಕುಮಾರಸ್ವಾಮಿ ಉಪಸ್ಥಿತಿಯಲ್ಲಿಯೇ ಉಭಯ ಪಕ್ಷಗಳ ನಾಯಕರು ಜಂಟಿ ಸಭೆ ನಡೆಸಿ ಪಾದಯಾತ್ರೆ ದಿನಾಂಕವನ್ನು ಅಂತಿಮಗೊಳಿಸಲಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, 28 ರಂದು ಎನ್.ಡಿ.ಎ ಸಭೆ ನಡೆಸಿ ಪಾದಯಾತ್ರೆ ದಿನಾಂಕ ಹಾಗು ಮಾರ್ಗ ಸೇರಿದಂತೆ ಇತ್ಯಾದಿ ಕಾರ್ಯಕ್ರಮಗಳ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

ಪಾದಯಾತ್ರೆಯಲ್ಲಿ ಉಭಯ ಪಕ್ಷಗಳ ಪ್ರಮುಖ ನಾಯಕರು ಪಾಲ್ಗೊಳ್ಳಲಿದ್ದರೂ ಬಿಜೆಪಿ ಹಿರಿಯ ನಾಯಕರಾದ ಬಿ.ಎಸ್.ಯಡಿಯೂರಪ್ಪ, ಮಾಜಿ ಸಿಎಂಗಳಾದ ಬಸವರಾಜ ಬೊಮ್ಮಾಯಿ,‌ ಡಿಸಿ ಸದಾನದಗೌಡ, ಜಗದೀಶ್ ಶೆಟ್ಟರ್ ಸಾಂಕೇತಿಕವಾಗಿ ಪಾಲ್ಗೊಂಡು ಸಮಾವೇಶಗಳಲ್ಲಿ ಉಪಸ್ಥಿತರಿರುವಂತೆ ಮಾಡುವ ಲೆಕ್ಕಾಚಾರ ಇದೆ. ಇನ್ನು ಜೆಡಿಎಸ್​ನಿಂದ ಕುಮಾರಸ್ವಾಮಿ ಸಂಸತ್ ಅಧಿವೇಶನದ ಕಾರಣದಿಂದ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವುದು ಕಷ್ಟವಾಗಿದ್ದು, ಅವರು ಉದ್ಘಾಟಣೆ, ಸಮಾರೋಪದಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. ಅದು ಕೂಡು ಭಾನುವಾರದ ಸಭೆಯಲ್ಲಿ ಅಂತಿಮವಾಗಲಿದೆ.

2010 ರಲ್ಲಿ ಅಕ್ರಮ ಗಣಿಗಾರಿಕೆ ವಿರೋಧಿಸಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆ ನಡೆಸಿದಂತೆ ಈಗ ಬಿಜೆಪಿ ಜೆಡಿಎಸ್ ಒಟ್ಟಾಗಿ ಕಾಂಗ್ರೆಸ್ ವಿರುದ್ಧ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ನಡೆಸುತ್ತಿದೆ. ಇದು 14 ವರ್ಷದ ನಂತರ ನಡೆಯುತ್ತಿರುವ ರಾಜ್ಯದ ಬೃಹತ್ ರಾಜಕೀಯ ಪಾದಯಾತ್ರೆಯಾಗಿದೆ. ಹಿಂದಿನ ಬಿಜೆಪಿ ಸರ್ಕಾರದ ವೇಳೆ ಕಾಂಗ್ರೆಸ್ ಕಾವೇರಿ ಸಂಗಮದಿಂದ ಮೇಕೆದಾಟು ಪಾದಯಾತ್ರೆ ನಡೆಸಿತ್ತಾದರೂ ಇದು ನೂರು ಕಿಲೋಮೀಟರ್​ಗೂ ಹೆಚ್ಚಿನ ದೂರ ಕ್ರಮಿಸುವ ಬೃಹತ್ ಪಾದಯಾತ್ರೆಯಾಗಿದೆ.

ಕೇವಲ ಪಾದಯಾತ್ರೆ ನಡೆಸಿ ಸುಮ್ಮನಾಗದೆ ವಿಷಯವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕು, ಸಿಎಂ ರಾಜೀನಾಮೆ ನೀಡಬೇಕು. ಅಲ್ಲಿಯವರೆಗೂ ಒಂದಲ್ಲಾ ಒಂದು ರೀತಿಯ ಹೋರಾಟವನ್ನು ರಾಜ್ಯಾದ್ಯಂತ ಹಮ್ಮಿಕೊಳ್ಳಲು ಉಭಯ ಪಕ್ಷಗಳು ನಿರ್ಧರಿಸಿವೆ. ಹಾಗಾಗಿ ಪಾದಯಾತ್ರೆ ಹೋರಾಟದ ಆರಂಭ ಮಾತ್ರವಾಗಿದ್ದು, ಸಿಎಂ ರಾಜೀನಾಮೆವರೆಗೂ ನಿರಂತರ ಹೋರಾಟ ಇರಲಿವೆ. ಈ ಕುರಿತು ಬಿಜೆಪಿ ನಾಯಕ ಸಿಟಿ ರವಿ ಮಾಹಿತಿ ನೀಡಿದ್ದು, ಹಗರಣ ಆರೋಪದ ವಿಷಯಗಳನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವವರೆಗೂ ನಿರಂತರ ಹೋರಾಟ ಮಾಡುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.

ಒಟ್ಟಿನಲ್ಲಿ ಸದನದ ಒಳಗೆ ಮುಡಾ, ವಾಲ್ಮೀಕಿ ಹಗರಣ ಹೋರಾಟ ನಡೆಸಿರುವ ಬಿಜೆಪಿ ಜೆಡಿಎಸ್ ದೋಸ್ತಿಗಳು ಇದೀಗ ಸದನದ ಹೊರಗೆ ಪಾದಯಾತ್ರೆ ಮೂಲಕ ಬೃಹತ್ ಹೋರಾಟಕ್ಕೆ ನಿರ್ಧರಿಸಿವೆ. ಹಳೆ ಮೈಸೂರು ಭಾಗದಲ್ಲಿ ಪಕ್ಷ ಬಲವರ್ದನೆಗೂ ಈ ಪಾದಯಾತ್ರೆ ಸಹಕಾರಿಯಾಗಲಿದ್ದು, ಮಿತ್ರಪಕ್ಷಗಳ ಒಗ್ಗಟ್ಟು ಬಲಗೊಳ್ಳಲಿದೆ ಎನ್ನುವ ವಿಶ್ವಾಸ ಉಭಯ ನಾಯಕರದ್ದಾಗಿದೆ.

ಇದನ್ನೂ ಓದಿ: ಮುಡಾ ಹಗರಣ: ಹೋರಾಟ ತೀವ್ರಗೊಳಿಸಲು ಬಿಜೆಪಿ ನಿರ್ಧಾರ; ಬೆಂಗಳೂರಿಂದ ಮೈಸೂರುವರೆಗೆ ಪಾದಯಾತ್ರೆ - Muda Nigama scam

ETV Bharat Logo

Copyright © 2025 Ushodaya Enterprises Pvt. Ltd., All Rights Reserved.