ETV Bharat / state

ಪ್ರಾಕೃತಿಕ ಗತ ವೈಭವವನ್ನು ಮರಳಿ ತರಲು ಮುಂದಾದ ಬೆಂಗಳೂರು ನಗರ ವಿಶ್ವವಿದ್ಯಾಲಯ - Bengaluru City University - BENGALURU CITY UNIVERSITY

ಬೆಂಗಳೂರು ನಗರ ವಿಶ್ವವಿದ್ಯಾಲಯ ಹೊಸದಾಗಿ ಅಲಂಕಾರಿಕ ಗಿಡ- ಮರಗಳನ್ನು ನೆಟ್ಟು, ವಿದ್ಯಾರ್ಥಿಗಳಿಗೆ ಮತ್ತು ಜನರಿಗೆ ಪರಿಚಯಿಸಲು ಮುಂದಾಗಿದೆ. ಈ ಮೂಲಕ ಹಸರೀಕರಣ ಮತ್ತು ರೈನ್ ವಾಟರ್ ಹಾರ್ವೆಸ್ಟಿಂಗ್‌ಗೆ ಒತ್ತು ನೀಡುತ್ತಿದೆ.

ಬೆಂಗಳೂರು ನಗರ ವಿಶ್ವವಿದ್ಯಾಲಯ
ಬೆಂಗಳೂರು ನಗರ ವಿಶ್ವವಿದ್ಯಾಲಯ (ETV Bharat)
author img

By ETV Bharat Karnataka Team

Published : Aug 26, 2024, 7:27 PM IST

ಬೆಂಗಳೂರು: ಐತಿಹಾಸಿಕ ಪಾಮುಖ್ಯತೆ ಪಡೆದಿರುವ ಬೆಂಗಳೂರು ನಗರ ವಿಶ್ವವಿದ್ಯಾಲಯದ ಪ್ರದೇಶವು ಸಾಕಷ್ಟು ವರ್ಷಗಳಿಂದ ವಿಶಿಷ್ಟ ಗಿಡ- ಮರಗಳ ಆಗರವಾಗಿದೆ. ಈಗ ಮತ್ತೆ ಹೊಸದಾಗಿ ಅಲಂಕಾರಿಕ ಗಿಡ- ಮರಗಳನ್ನು ನೆಡುವ ಜೊತೆಗೆ ಸವಿಸ್ತಾರವಾದ ಪರಿಚಯ ಫಲಕಗಳನ್ನು ಹಾಕಿ ಪ್ರಾಕೃತಿಕ ಗತ ವೈಭವವನ್ನು ಮತ್ತೆ ವಿದ್ಯಾರ್ಥಿಗಳಿಗೆ ಮತ್ತು ಜನರಿಗೆ ಪರಿಚಯ ಮಾಡಿಕೊಡಲು ವಿಶ್ವವಿದ್ಯಾಲಯ ಮುಂದಾಗಿದೆ.

ಬೆಂಗಳೂರು ನಗರ ವಿಶ್ವವಿದ್ಯಾಲಯ
ಬೆಂಗಳೂರು ನಗರ ವಿಶ್ವವಿದ್ಯಾಲಯ (ETV Bharat)

ಬೆಂಗಳೂರು ನಗರ ವಿಶ್ವವಿದ್ಯಾಲಯದ ಉದ್ಯಾನವನಗಳನ್ನು ಪುನರ್‌ಸ್ಥಾಪನೆ ಮಾಡಲು ಮುಂದಾಗಲಾಗಿದೆ. ಹಲವು ಬಗೆಯ ಗಿಡ ಮತ್ತು ಮರಗಳ ಪ್ರಾಕೃತಿಕ ಸೌಂದರ್ಯವನ್ನು ಸವಿಯುವ ಜೊತೆಗೆ ಹುಲ್ಲುಗಾವಲಿನ ಮೈದಾನದಲ್ಲಿ ನೂತನ ಬೆಂಚ್‌ಗಳನ್ನು ಕೂಡ ಅಭಿವೃದ್ಧಿ ಮಾಡಲಾಗುತ್ತಿದೆ. ಬೇರೆ ಬೇರೆ ರಾಜ್ಯಗಳಿಂದ ಮತ್ತು ದೇಶ ವಿದೇಶಗಳಿಂದ ತಂದಿರುವ ಗಿಡಗಳನ್ನು ನೆಟ್ಟು ಹಳೆಯ ಮರ-ಗಿಡಗಳಿಗೆ ಪುನರುಜ್ಜೀವನಗೊಳಿಸುವ ಕೆಲಸ ಭರದಿಂದ ಸಾಗಿದೆ.

ಬೆಂಗಳೂರು ನಗರ ವಿಶ್ವವಿದ್ಯಾಲಯ  ಉದ್ಯಾನವನ
ಬೆಂಗಳೂರು ನಗರ ವಿಶ್ವವಿದ್ಯಾಲಯ ಉದ್ಯಾನವನ (ETV Bharat)

ಎಸ್‌ಟಿಪಿ ಪ್ಲಾಂಟ್‌ಗಳನ್ನು ಕೂಡ ನೂತನವಾಗಿ ಅಳವಡಿಸಲಾಗಿದೆ. ರೈನ್ ವಾಟರ್ ರಿಚಾರ್ಜ್ ಪಿಟ್ಸ್‌ಗಳನ್ನು ಕೂಡ ನಿರ್ಮಾಣ ಮಾಡಲಾಗಿದೆ. ಇವುಗಳಿಂದ ಅಂತರ್ಜಲ ವೃದ್ಧಿಗೆ ಕೂಡ ಕೊಡುಗೆ ನೀಡಲು ವಿಶ್ವವಿದ್ಯಾಲಯ ಪಣ ತೊಟ್ಟಿದೆ. ಇದರ ಜೊತೆಗೆ ವಿಶೇಷವಾಗಿ ಇತ್ತೀಚೆಗೆ ಅಭಿವೃದ್ಧಿಪಡಿಸಿರುವ ಉದ್ಯಾನವನವೂ ಸೇರಿದಂತೆ ವಿಶ್ವವಿದ್ಯಾಲಯದಲ್ಲಿರುವ ಗಿಡ ಮರಗಳ ಸಮೀಕ್ಷೆ ಕೈಗೊಳ್ಳಲಾಗಿದೆ. ಸಮೀಕ್ಷೆಯಲ್ಲಿ 100 ವರ್ಷಗಳಷ್ಟು ಹಳೆಯ ಪಾಲ್ಮ್ ಮರಗಳು, 150 ವರ್ಷದ ಆಲದ ಮರಗಳು ವಿಶ್ವವಿದ್ಯಾಲಯದ ಆವರಣದಲ್ಲಿದ್ದು, ಅವನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ.

ಉದ್ಯಾನವನ
ಉದ್ಯಾನವನ (ETV Bharat)

ಮರಗಳನ್ನು ಮತ್ತಷ್ಟು ವರ್ಷಗಳ ಕಾಲ ಬಾಳುವಂತೆ ಮಾಡುವ ಕೆಲಸವನ್ನು ಹಲವು ಸಂಘ ಸಂಸ್ಥೆಗಳ ಸಹಾಯದಿಂದ ಮಾಡಲಾಗುತ್ತಿದೆ. ಮತ್ತೆ ವಿಶ್ವವಿದ್ಯಾಲಯದ ಪರಿಸರ ಅಧ್ಯಯನ ಮತ್ತು ಕ್ಲೈಮೇಟ್ ಚೇಂಜ್ ವಿಭಾಗದಿಂದ ಕೂಡ ಸಾಕಷ್ಟು ಮರ ಗಿಡಗಳಿಗೆ ಹೆಸರನ್ನಿಡುವ ಕೆಲಸವನ್ನು ಕೂಡ ಮಾಡಲಾಗಿದೆ. ಒಟ್ಟಾರೆಯಾಗಿ ವಿಶ್ವವಿದ್ಯಾಲಯದಲ್ಲಿ ಹಸರೀಕರಣ ಮತ್ತು ರೈನ್ ವಾಟರ್ ಹಾರ್ವೆಸ್ಟಿಂಗ್‌ಗೆ ಒತ್ತು ನೀಡಲಾಗುತ್ತಿದೆ.

ಉದ್ಯಾನವನ
ಉದ್ಯಾನವನ (ETV Bharat)

ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಲಿಂಗರಾಜ್ ಗಾಂಧಿ ಮಾತನಾಡಿ, ಉದ್ಯಾನವನದಲ್ಲಿ ಸೋಲಾರ್ ವ್ಯವಸ್ಥೆಯನ್ನು ತರಲಾಗಿದೆ. ಈ ವ್ಯವಸ್ಥೆ ಕೈಗೊಳ್ಳಲು ಕೆಲ ಪರಿಣಿತರ ಸಹಾಯದಿಂದ ಕೇವಲ 6 ತಿಂಗಳಿನಲ್ಲಿ ಹಸರೀಕರಣ ಮಾಡಲಾಗಿದೆ. ಬರಗಾಲದ ಸಮಯದಲ್ಲೂ ಗಿಡ ಮರಗಳಿಗೆ ನೀರುಣಿಸುವ ವ್ಯವಸ್ಥೆಯನ್ನು ಸ್ಪ್ರಿಂಕ್ಲರ್ ಸಿಸ್ಟಮ್ ತರಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಉದ್ಯಾನವನ
ಉದ್ಯಾನವನ (ETV Bharat)

ನಗರ ವಿಶ್ವವಿದ್ಯಾಲಯ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ ಬೇರ್ಪಟ್ಟ ಸಮಯದಲ್ಲಿ ಸರಿಯಾದ ಡ್ರೈನೇಜ್ ವ್ಯವಸ್ಥೆ ಮತ್ತು ರಸ್ತೆಯ ವ್ಯವಸ್ಥೆ ಇರಲಿಲ್ಲ. ಎಸ್‌ಟಿಪಿ ಪ್ಲಾಂಟ್‌ಗಳು ಇರಲಿಲ್ಲ. ಆದರೆ, ಈಗ ಎಲ್ಲ ರೀತಿಯ ನೀರು ಮರುಬಳಕೆಯ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಉದ್ಯಾನವನ
ಉದ್ಯಾನವನ (ETV Bharat)

ಇದನ್ನೂ ಓದಿ: ಡೆಂಗ್ಯೂ ನಿಯಂತ್ರಣಕ್ಕೆ ಓವಿ ಟ್ರ್ಯಾಪ್ ಸಾಧನಗಳ ಅಳವಡಿಕೆ​: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ - Dinesh Gundu Rao

ETV Bharat Logo

Copyright © 2025 Ushodaya Enterprises Pvt. Ltd., All Rights Reserved.