ETV Bharat / state

ಯುದ್ಧ ಟ್ಯಾಂಕ್‌ಗಳಿಗಾಗಿ ಸ್ವದೇಶಿ ನಿರ್ಮಿತ 1,500 ಎಚ್‌ಪಿ ಎಂಜಿನ್ ಯಶಸ್ವಿಯಾಗಿ ಪರೀಕ್ಷಿಸಿದ ಭಾರತ

ಬೆಮೆಲ್ ಸಂಸ್ಥೆಯ ಆವರಣದಲ್ಲಿ ಇಂದು ಸ್ಥಳೀಯವಾಗಿ ಅಭಿವೃದ್ಧಿಪಡಿಸಿರುವ 1,500 ಎಚ್‌ಪಿ ಎಂಜಿನ್ ಅನ್ನು ಯಶಸ್ವಿಯಾಗಿ ಪರೀಕ್ಷಿಸಲಾಗಿದೆ.

beml-conducts-maiden-test-firing-of-indias-first-indigenous-1500-hp-datran-engine-for-main-battle-tanks
ಯುದ್ಧ ಟ್ಯಾಂಕ್‌ಗಳಿಗಾಗಿ ಸ್ವದೇಶಿ ನಿರ್ಮಿತ 1,500 ಎಚ್‌ಪಿ ಎಂಜಿನ್ ಪರೀಕ್ಷಿಸಿದ ಭಾರತ
author img

By ETV Bharat Karnataka Team

Published : Mar 20, 2024, 10:47 PM IST

ಮೈಸೂರು: ನಗರದ ಬೆಮೆಲ್ ಸಂಸ್ಥೆಯ ಆವರಣದಲ್ಲಿ ಬುಧವಾರ ಸ್ಥಳೀಯವಾಗಿ ಅಭಿವೃದ್ಧಿಪಡಿಸಿರುವ 1,500 ಎಚ್‌ಪಿ ಎಂಜಿನ್ ಅನ್ನು ಯಶಸ್ವಿಯಾಗಿ ಪರೀಕ್ಷಿಸಲಾಯಿತು. ಇದನ್ನು ಮುಖ್ಯ ಯುದ್ಧ ಟ್ಯಾಂಕರ್‌ನಲ್ಲಿ ಬಳಸಲು ಯೋಜಿಸಲಾಗಿದೆ. ಬಿಇಎಂಎಲ್‌ನ ಎಂಜಿನ್ ವಿಭಾಗದ ಆವರಣದಲ್ಲಿ ನಡೆದ ಪರೀಕ್ಷಾರ್ಥ ಪ್ರಕ್ರಿಯೆ (ಫೈರಿಂಗ್) ಅನ್ನು ರಕ್ಷಣಾ ಕಾರ್ಯದರ್ಶಿ ಗಿರಿಧರ್ ಅರಮನೆ ಉದ್ಘಾಟಿಸಿದರು.

ರಕ್ಷಣಾ ಕಾರ್ಯದರ್ಶಿ ಗಿರಿಧರ್ ಅರಮನೆ ಮಾತನಾಡಿ, ಈ ಸಾಧನೆಯು ದೇಶದಲ್ಲಿ ಹೊಸ ಯುಗಕ್ಕೆ ನಾಂದಿ ಹಾಡಿದೆ. ಇದು ರಕ್ಷಣಾ ಸಾಮರ್ಥ್ಯಗಳು, ತಾಂತ್ರಿಕ ಸಾಮರ್ಥ್ಯ ಮತ್ತು ರಕ್ಷಣಾ ತಂತ್ರಜ್ಞಾನಗಳಲ್ಲಿ ಸ್ವಾವಲಂಬನೆಯ ಬದ್ಧತೆ ಪ್ರದರ್ಶಿಸುತ್ತದೆ. ಇದು ಸಶಸ್ತ್ರ ಪಡೆಗಳ ಸಾಮರ್ಥ್ಯವನ್ನು ಹೆಚ್ಚಿಸುವ ಕ್ಷಣ ಎಂದು ಒಣ್ಣಿಸಿದರು.

ಬೆಮೆಲ್​ನ ಸಿಎಂಡಿ ಶ್ರೀ ಶಂತನು ರಾಯ್ ಪ್ರತಿಕ್ರಿಯಿಸಿ, ಈ ಸಾಧನೆಯು ದೇಶದಲ್ಲಿ ರಕ್ಷಣಾ ಉತ್ಪಾದನೆಗಳಿಗೆ ಕೊಡುಗೆ ನೀಡುತ್ತಿರುವ ಬೆಮೆಲ್​ನನ್ನು ಉನ್ನತ ಸ್ಥಾನದಲ್ಲಿ ನಿಲ್ಲಿಸುತ್ತದೆ. ರಕ್ಷಣಾ ವಲಯದಲ್ಲಿ ರಾಷ್ಟ್ರದ ಅಗತ್ಯಗಳನ್ನು ಪೂರೈಸಲು ಬೆಮೆಲ್ ತೋರುತ್ತಿರುವ ಬದ್ಧತೆ ಶ್ಲಾಘನೀಯ ಎಂದರು.

1500 HP ಎಂಜಿನ್ ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡಿದೆ. ಹೆಚ್ಚಿನ ಎತ್ತರದಂತಹ ವಿಷಮ ಪರಿಸ್ಥಿತಿಗಳಲ್ಲಿ ಕಾರ್ಯಾಚರಣೆ ನಡೆಸುತ್ತದೆ. ಕಡಿಮೆ ಹಾಗೂ ಹೆಚ್ಚಿನ ತಾಪಮಾನ ಹೊಂದಿರುವ ವಾತಾವರಣದಲ್ಲೂ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ಸುಧಾರಿತ ತಂತ್ರಜ್ಞಾನಗಳನ್ನು ಹೊಂದಿರುವ ಈ ಎಂಜಿನ್ ಜಾಗತಿಕವಾಗಿ ಇರುವ ಅತ್ಯಾಧುನಿಕ ಎಂಜಿನ್‌ಗಳಿಗೆ ಸಮನಾಗಿದೆ.

1500 ಎಚ್​ಪಿ ಎಂಜಿನ್​ನ ಮೊದಲ ಪರೀಕ್ಷಾರ್ಥ ಉಡಾವಣೆಯು ತಂತ್ರಜ್ಞಾನ ಸ್ಥಿರೀಕರಣದ ಮೇಲೆ ಕೇಂದ್ರೀಕರಿಸುವ ಜನರೇಷನ್ ಒಂದನ್ನು ಪೂರ್ಣಗೊಳಿಸುವಿಕೆ ಸೂಚಿಸುತ್ತದೆ. ಡಿಆರ್​ಡಿಒ ಪ್ರಯೋಗಾಲಯವಾದ ಕಾಂಬ್ಯಾಟ್ ವೆಹಿಕಲ್ಸ್ ರಿಸರ್ಚ್ ಅಂಡ್ ಡೆವಲಪ್‌ಮೆಂಟ್ ಎಸ್ಟಾಬ್ಲಿಷ್‌ಮೆಂಟ್​ನಲ್ಲಿ ವಿವಿಧ ಪ್ರಯೋಗಗಳಿಗಾಗಿ ಬಿಇಎಂಎಲ್ ಎಂಜಿನ್​ಗಳನ್ನು ಉತ್ಪಾದಿಸುತ್ತದೆ ಮತ್ತು ಪರೀಕ್ಷೆಗಾಗಿ ಅವುಗಳನ್ನು ನೈಜ ವಾಹನಗಳಲ್ಲಿಗೆ ಸಂಯೋಜಿಸುತ್ತದೆ.

ಈ ಯೋಜನೆಯು 2025ರ ಮಧ್ಯಭಾಗದಲ್ಲಿ ಪೂರ್ಣಗೊಳ್ಳಲಿದೆ. ಆಗಸ್ಟ್ 2020 ರಲ್ಲಿ ಪ್ರಾರಂಭಿಸಲಾದ ಈ ಯೋಜನೆಯನ್ನು ಹಲವು ಮೈಲಿಗಲ್ಲುಗಳನ್ನು ಸಾಧಿಸಿದೆ. ಸಮಯೋಚಿತವಾಗಿ ಪೂರ್ಣಗೊಳಿಸುವಿಕೆ ಮತ್ತು ಗುಣಮಟ್ಟದ ಮಾನದಂಡಗಳ ಅನುಸರಣೆಯನ್ನು ಇದು ಖಚಿತಪಡಿಸುತ್ತದೆ. ಇನ್ನು ಬಿಇಎಂಎಲ್ ತಂಡದ ಅಸಾಧಾರಣ ಸಾಧನೆಯನ್ನು ಗುರುತಿಸಲು ರಕ್ಷಣಾ ಕಾರ್ಯದರ್ಶಿ ಗಿರಿಧರ್ ಅರಮನೆ 'ವಾಲ್ ಆಫ್ ಫೇಮ್' ಅನ್ನು ಉದ್ಘಾಟಿಸಿದರು. ಇದು ದೇಶದ ರಕ್ಷಣಾ ಸಾಮರ್ಥ್ಯಗಳನ್ನು ಮುನ್ನಡೆಸುವಲ್ಲಿ ಮತ್ತು ದೇಶೀಯ ತಾಂತ್ರಿಕ ನಾವೀನ್ಯತೆಯಲ್ಲಿ ಮೈಲಿಗಲ್ಲುಗಳನ್ನು ಸಾಧಿಸುವಲ್ಲಿ ಅವರ ಕೊಡುಗೆಯನ್ನು ನೆನಪಿಸುತ್ತದೆ. ಈ ವೇಳೆ ರಕ್ಷಣಾ ಸಚಿವಾಲಯದ ಹಿರಿಯ ಅಧಿಕಾರಿಗಳು, ಉದ್ಯಮ ಪಾಲುದಾರರು ಮತ್ತು ಬಿಇಎಂಎಲ್ ಲಿಮಿಟೆಡ್ ನ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ: ರಷ್ಯಾ ಅಧ್ಯಕ್ಷರಾಗಿ ಪುಟಿನ್ ಪುನರಾಯ್ಕೆ: ವ್ಲಾಡಿಮಿರ್​ಗೆ ಕರೆ ಮಾಡಿ ಅಭಿನಂದಿಸಿದ ಪಿಎಂ ಮೋದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.