ETV Bharat / state

ಜಾನಪದ ಗಾಯಕ ಮಾಳು ನಿಪನಾಳಗೆ ಬೆಳಗಾವಿ ಎಸ್ಪಿ ಎಚ್ಚರಿಕೆ

ಕಾನೂನನ್ನು ಯಾರೇ ಉಲ್ಲಂಘಿಸಿದರೂ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಭೀಮಾಶಂಕರ್ ಗುಳೇದ್ "ಹಿತಲಕ್ಕ ಕರಿಬೇಡ ಮಾವ" ಹಾಡು ಖ್ಯಾತಿಯ ಗಾಯಕ ಮಾಳು ನಿಪನಾಳ ಅವರಿಗೆ ಎಚ್ಚರಿಕೆ ಕೊಟ್ಟಿದ್ದಾರೆ.

SP Bheemashankar Guled
ಎಸ್​ಪಿ ಭೀಮಾಶಂಕರ್​ ಗುಳೇದ್​ (ETV Bharat)
author img

By ETV Bharat Karnataka Team

Published : Nov 5, 2024, 10:59 AM IST

Updated : Nov 5, 2024, 11:18 AM IST

ಚಿಕ್ಕೋಡಿ: ಎರಡು ದಿನಗಳ ಹಿಂದೆ ಕ್ಷುಲ್ಲಕ ಕಾರಣಕ್ಕೆ ಇಬ್ಬರು ಬೈಕ್ ಸವಾರರ ಮೇಲೆ ಹಲ್ಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಎಸ್ಪಿ ಭೀಮಾಶಂಕರ್ ಗುಳೇದ್ ಜಾನಪದ ಗಾಯಕ ಮಾಳು ನಿಪನಾಳ ಅವರಿಗೆ ಎಚ್ಚರಿಕೆ ನೀಡಿದ್ದಾರೆ.

ಚಿಕ್ಕೋಡಿ ಪಟ್ಟಣದಲ್ಲಿ ಸೋಮವಾರ ತಡರಾತ್ರಿ ಮಾಧ್ಯಮಗಳ ಜೊತೆ ಮಾತನಾಡಿದ ಎಸ್ಪಿ, "ಭಾನುವಾರ ರಾತ್ರಿ ಜಾನಪದ ಗಾಯಕ ಮಾಳು ನಿಪನಾಳ ಯಾವುದೋ ಒಂದು ವಿಚಾರಕ್ಕೆ ರಸ್ತೆಯಲ್ಲಿ ಸಂಚರಿಸುವ ಜನರ ಮೇಲೆ ಹಲ್ಲೆ ಮಾಡಿರುವುದು ಪ್ರಾಥಮಿಕವಾಗಿ ದೃಢಪಟ್ಟಿದೆ. ಸ್ಥಳೀಯ ಪೊಲೀಸ್​ ಠಾಣೆಯಲ್ಲಿ ವಿಚಾರಣೆ ನಡೆಸಿದಾಗ ಈ ವ್ಯಕ್ತಿ ಹಲ್ಲೆ ಮಾಡಿರುವುದು ನಿಜವಾಗಿದೆ. ಹಲ್ಲೆಗೆ ಒಳಗಾಗಿರುವ ಗಾಯಾಳುಗಳು ಚಿಕ್ಕೋಡಿ ಸಮುದಾಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆ ನಂತರ ಅವರು ರಾಯಭಾಗ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಲಿದ್ದಾರೆ" ಎಂದು ತಿಳಿಸಿದ್ದಾರೆ.

ಎಸ್​ಪಿ ಭೀಮಾಶಂಕರ್​ ಗುಳೇದ್​ (ETV Bharat)

"ಇಲ್ಲಿ ಯಾರೂ ಕಾನೂನಿಗಿಂತ ದೊಡ್ಡವರಲ್ಲ. ಯಾರೇ ಆದರೂ ಕಾನೂನು ಉಲ್ಲಂಘಿಸಿದರೆ ಅವರ ಮೇಲೆ ಕಾನೂನು ಪ್ರಕಾರ ಶಿಸ್ತು ಕ್ರಮ ಕೈಗೊಳ್ಳಲಾಗುವುದು" ಎಂದು ಎಚ್ಚರಿಕೆ ನೀಡಿದರು.

ಏನಿದು ಪ್ರಕರಣ?: ಚಿಕ್ಕೋಡಿ ತಾಲೂಕಿನ ಕೆರೂರು ಗ್ರಾಮದ ಶೇಖರ್​ ಹಕ್ಯಾಗೋಳ, ಅಶ್ವಿನಿ ಈರಿಗಾರ, ರೂಪಾ ಹಕ್ಯಾಗೋಳ ಎಂಬವರು ಭಾನುವಾರ ರಾತ್ರಿ ಬೈಕ್​ನಲ್ಲಿ ಕಲ್ಲೋಳಿ ಗ್ರಾಮಕ್ಕೆ ಹೋಗುತ್ತಿದ್ದರು. ಈ ಸಂದರ್ಭದಲ್ಲಿ ನಿಪನಾಳ ಗ್ರಾಮದ ಬಳಿ "ನಾ ಡ್ರೈವರ್" ಹಾಗೂ "ಹಿತಲಕ್ಕ ಕರಿಬೇಡ ಮಾವ" ಹಾಡುಗಳ ಖ್ಯಾತಿಯ ಜಾನಪದ ಗಾಯಕ ಮಾಳು ನಿಪನಾಳ ಹಾಗೂ ಅವರ ಗ್ಯಾಂಗ್ ಅತಿವೇಗವಾಗಿ ಕಾರು ಚಲಾಯಿಸಿದ್ದನ್ನು ಪ್ರಶ್ನಿಸಿದ್ದಕ್ಕೆ, ಬೈಕ್​ ಸವಾರರನ್ನು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ಬೈಯ್ದಿದ್ದರು. ಜೊತೆಗೆ ಇಬ್ಬರ ಮೇಲೆ ಮಾಳು ನಿಪನಾಳ ಗ್ಯಾಂಗ್​ ಮಾರಣಾಂತಿಕ ಹಲ್ಲೆ ಮಾಡಿದೆ ಎಂದು ಆರೋಪಿಸಲಾಗಿದೆ.

ಸಾರ್ವಜನಿಕರಿಂದ ತೀವ್ರವಾಗಿ ಅಸಮಾಧಾನ: ಜಾನಪದ ಗಾಯಕ ಮಾಳು ನಿಪನಾಳ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ನೇಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಪಾರ್ಕಿಂಗ್​ ಸ್ಥಳಕ್ಕಾಗಿ ನಡೆದ ಗಲಾಟೆ, ನೆರೆಹೊರೆಯವರ ಮೇಲೆ ಗುಂಡಿನ ದಾಳಿ ಮಾಡಿದ ನಿವೃತ್ತ ಸೈನಿಕ

Last Updated : Nov 5, 2024, 11:18 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.