ETV Bharat / state

ಕನ್ನಡ ಸುಂದರ ಭಾಷೆ: ಇಷ್ಟಪಟ್ಟು ಕಲಿತಿರುವೆ; ಬೆಳಗಾವಿ ಪೊಲೀಸ್ ಕಮಿಷನರ್ ಯಡಾ ಮಾರ್ಟಿನ್ ಕನ್ನಡ ಡಿಂಡಿಮ!

ಕನ್ನಡ ರಾಜ್ಯೋತ್ಸವ ಹಿನ್ನೆಲೆ ಬೆಳಗಾವಿ ಪೊಲೀಸ್​ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಅವರು ಈಟಿವಿ ಭಾರತದ ಜಿಲ್ಲಾ ಪ್ರತಿನಿಧಿ ಸಿದ್ದನಗೌಡ ಪಾಟೀಲ್​ ನಡೆಸಿದ ವಿಶೇಷ ಸಂದರ್ಶನಲ್ಲಿ ತಮ್ಮ ಕನ್ನಡಾಭಿಮಾನದ ಬಗ್ಗೆ ಮಾತನಾಡಿದ್ದಾರೆ.

IADA MARTIN MARBANIANG
ಬೆಳಗಾವಿ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ (ETV Bharat)
author img

By ETV Bharat Karnataka Team

Published : 2 hours ago

Updated : 39 minutes ago

ಬೆಳಗಾವಿ: "ಕನ್ನಡ ಅತ್ಯಂತ ಸುಂದರ ಮತ್ತು ಪ್ರಾಚೀನ ಭಾಷೆ.‌ ಕಲಿಯೋಕೆ ತುಂಬಾ ಕಷ್ಟ. ಆದರೆ, ಇಷ್ಟಪಟ್ಟು ಕಲಿತಿದ್ದೇನೆ. ದೂರದ ಈಶಾನ್ಯ ರಾಜ್ಯದಿಂದ ಬಂದ ನಾನು ಕನ್ನಡ ಕಲಿತಿದ್ದೇನೆ ಎಂದರೆ, ಇಲ್ಲಿಯೇ ಹುಟ್ಟಿದವರು ಕನ್ನಡ ಮಾತಾಡದಿದ್ದರೆ ಹೇಗೆ? ನಾವು ಯಾವ ರಾಜ್ಯದ ಅನ್ನ ಉಣ್ಣುತ್ತೇವೋ ಅಲ್ಲಿನ ಭಾಷೆ ಮಾತಾಡುವುದು ನಮ್ಮ ಆದ್ಯ ಕರ್ತವ್ಯ" ಎಂದು ಬೆಳಗಾವಿ ಪೊಲೀಸ್​ ಕಮಿಷನರ್​​ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಹೇಳಿದ್ದಾರೆ.

ಹೌದು, ಕರ್ನಾಟಕ ರಾಜ್ಯೋತ್ಸವ ನಿಮಿತ್ತ ಈಟಿವಿ ಭಾರತ ಪ್ರತಿ‌ನಿಧಿ ನಡೆಸಿದ ಸಂದರ್ಶನದಲ್ಲಿ ಬೆಳಗಾವಿ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಕನ್ನಡ ಬಗೆಗಿನ ತಮ್ಮ ಪ್ರೀತಿ, ಅಭಿಮಾನ ಹಂಚಿಕೊಂಡಿದ್ದು ಈ ರೀತಿ.

ಬೆಳಗಾವಿ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ (ETV Bharat)

"ನಾನು ಮೂಲತಃ ಮೇಘಾಲಯ ರಾಜ್ಯದ ಗ್ರಾಮೀಣ ಪ್ರದೇಶದಿಂದ ಬಂದವನು. ಶಿಲ್ಲಾಂಗ್​ನಲ್ಲಿ ವಿದ್ಯಾಭ್ಯಾಸ ಆಗಿದ್ದು, ಎಂಎ ಪದವಿ ಪಡೆದಿದ್ದೇನೆ. ನಮ್ಮದು ಖಾಸಿ ಭಾಷೆ. ಆದರೆ, ಹೆಚ್ಚು ನಾವು ಇಂಗ್ಲಿಷ್​​ ​ಭಾಷೆಯನ್ನೇ ಬಳಸುತ್ತೇವೆ. ನನ್ನ ತಂದೆ ಏರ್​ಫೋರ್ಸ್​ನಲ್ಲಿ ಕೆಲಸ ಮಾಡಿ, ನಿವೃತ್ತಿಯಾಗಿದ್ದು, ಸದ್ಯಕ್ಕೆ ಎಲ್ಲರೂ ಶಿಲ್ಲಾಂಗ್​ನಲ್ಲಿ ವಾಸವಿದ್ದಾರೆ. ಇನ್ನು ನನ್ನ ಕಿರಿಯ ಸಹೋದರ ಹೊರತುಪಡಿಸಿ ಉಳಿದ ಸಹೋದರರು ಸರ್ಕಾರಿ ನೌಕರಿಯಲ್ಲಿದ್ದಾರೆ" ಎಂದು ತಿಳಿಸಿದರು‌.

ಕನ್ನಡ ಕಲಿಯಲು ಪತ್ನಿ ಸಹಾಯ: "ಆರಂಭದಲ್ಲಿ ನಾನು ಕರ್ನಾಟಕಕ್ಕೆ ನೇಮಕಾತಿ ಹೊಂದಿದ ಮೇಲೆ ಸಾಕಷ್ಟು ಭಾಷೆ ಸಮಸ್ಯೆ ಉಂಟಾಯಿತು. ಎಲ್ಲ ದಾಖಲೆಗಳು ಕನ್ನಡ ಭಾಷೆಯಲ್ಲಿ ಇರುತ್ತಿದ್ದವು. ಕನ್ನಡ ಗೊತ್ತಿಲ್ಲದ ಹಿನ್ನೆಲೆಯಲ್ಲಿ ನನ್ನ ಬಳಿ ತಮ್ಮ ಕಷ್ಟ ಹೇಳಿಕೊಳ್ಳಲು ಬರುತ್ತಿದ್ದ ಸಾರ್ವಜನಿಕರಿಗೆ ಸರಿಯಾಗಿ ಸ್ಪಂದಿಸಲು ಸಾಧ್ಯವಾಗುತ್ತಿರಲಿಲ್ಲ. ಅವರು ಏನು ಹೇಳುತ್ತಿದ್ದಾರೆ ಎಂಬುದೂ ಅರ್ಥ ಆಗುತ್ತಿರಲಿಲ್ಲ. ನಂತರ ಕನ್ನಡ ಕಲಿಯಲು ಶುರು ಮಾಡಿದೆ. ಆರಂಭದಲ್ಲಿ ಕನ್ನಡ ವ್ಯಾಕರಣ ಕಲಿತೆ. ಹಲವು ಪುಸ್ತಕ ಓದಿದೆ. ಒಬ್ಬ ಕನ್ನಡ ಶಿಕ್ಷಕರನ್ನು ನೇಮಿಸಿಕೊಂಡೆ. ಅಲ್ಲದೇ ನನ್ನ ಪತ್ನಿ ಹಾಸನ ಜಿಲ್ಲೆಯವರು. ಹಾಗಾಗಿ, ಕನ್ನಡ ಕಲಿಯಲು ನನಗೆ ಅವರು ಕೂಡ ಸಾಕಷ್ಟು ಸಹಾಯ ಮಾಡಿದರು" ಎನ್ನುತ್ತಾರೆ ಯಡಾ ಮಾರ್ಟಿನ್ ಮಾರ್ಬನ್ಯಾಂಗ್.

IADA MARTIN MARBANIANG
ಬೆಳಗಾವಿ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ (ETV Bharat)

ಕನ್ನಡವನ್ನು ಇಂಗ್ಲಿಷ್​ ​ ಮತ್ತು ಖಾಸಿ ಭಾಷೆಗಳ ಜೊತೆಗೆ ಹೋಲಿಕೆ ಮಾಡಿದ್ದೇನೆ. ಇವುಗಳಿಗಿಂತ ಕನ್ನಡ ತುಂಬಾ ಸಂಕೀರ್ಣ, ಅತ್ಯಾಧುನಿಕತೆಯಿಂದ ಕೂಡಿದೆ. ಕನ್ನಡದಲ್ಲಿರುವ ವ್ಯಾಕರಣ ವಿಧಾನ ಕೂಡ ಆ ರೀತಿ ಇಲ್ಲ. ಇದೊಂದು ಸುಂದರ ಮತ್ತು ಸುದೀರ್ಘ ಇತಿಹಾಸ ಹೊಂದಿರುವ ಭಾಷೆ" ಎಂದು ವ್ಯಾಖ್ಯಾನಿಸುತ್ತಾರೆ ಯಡಾ ಮಾರ್ಟಿನ್ ಮಾರ್ಬನ್ಯಾಂಗ್.

ಅಪ್ಪು ನೆಚ್ಚಿನ ಹೀರೋ: "ಕನ್ನಡ ಕಲಿಯಲು ಕನ್ನಡ ಸಿನಿಮಾ ನೋಡಲು ಆರಂಭಿಸಿದೆ. ಅರಸು, ಮುಂಗಾರು ಮಳೆ, ಕಾಂತಾರ, ಲವ್ ಮಾಕ್ಟೇಲ್ ಸೇರಿ ಅನೇಕ ಚಲನಚಿತ್ರಗಳನ್ನು ಇತ್ತೀಚೆಗೆ ನೋಡಿದ್ದೇನೆ. ಪುನೀತ್​ ರಾಜ್​ಕುಮಾರ್​ ಮತ್ತು ಗಣೇಶ್​ ನನ್ನ ನೆಚ್ಚಿನ ಹೀರೋಗಳು" ಎಂದು ಹೇಳುತ್ತಲೇ ಡಾ. ರಾಜ್​ಕುಮಾರ್​ ಅವರ ಆಕಸ್ಮಿಕ‌ ಸಿನಿಮಾದ ಎವರ್ ಗ್ರೀನ್ ಹಾಡು "ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು" ಸಾಲನ್ನು ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಹಾಡಿದರು.

ತಂದೆ - ತಾಯಿಗೂ ಬರುತ್ತೆ ಕನ್ನಡ: ಮನೆಯಲ್ಲಿ ನನ್ನ ಪತ್ನಿ ಕ್ರಿಸ್ಟಾಲಿನ್ ಸುಶ್ಮಿತಾ ಅವರ ಜೊತೆಗೆ ಕನ್ನಡ ಮತ್ತು ಇಂಗ್ಲೀಷ್​ನಲ್ಲಿ ಮಾತಾಡುತ್ತೇನೆ. ಮಗಳ ಜೊತೆಗೆ ಖಾಸಿ ಮತ್ತು ಕನ್ನಡ ಮಾತಾಡುತ್ತೇನೆ. ಇನ್ನು ನನ್ನ ತಂದೆ-ತಾಯಿ ಕೂಡ ಕನ್ನಡ ಕಲಿತಿದ್ದಾರೆ. ಹೀಗೆ ಮನೆಯಲ್ಲೂ ಕನ್ನಡದ ವಾತಾವರಣ ನಿರ್ಮಾಣ ಆಗಿರೋದು ನೋಡಿ ತುಂಬಾ ಖುಷಿ ಆಗುತ್ತದೆ" ಎಂದರು.

"ಬೆಳಗಾವಿ ಹಲವು ಸಂಸ್ಕೃತಿಗಳ ಬೀಡು. ಹೇಗೆ ಭಾರತ ದೇಶ ನಾನಾ ರೀತಿಯ ಸಂಸ್ಕೃತಿಗಳನ್ನು ಹೊಂದಿದೆಯೋ ಅದೇ ರೀತಿ ಬೆಳಗಾವಿ ಕೂಡ ಇದೆ. ಬೆಳಗಾವಿ ಜನ ಮಹಿಳೆಯರಿಗೆ ತುಂಬಾ ಗೌರವ ಕೊಡುತ್ತಾರೆ. ಬೆಂಗಳೂರು, ಕಲಬುರ್ಗಿ ಮತ್ತು ಯಾದಗಿರಿಯಲ್ಲಿ ಸೇವೆ ಸಲ್ಲಿಸುವಾಗ ಹೋಲಿಕೆ ಮಾಡಿದರೆ, ಬೆಳಗಾವಿಗೆ ಬಂದ ಮೇಲೆ ನನ್ನ ಕನ್ನಡ ಮಾತನಾಡುವ ಶೈಲಿಯಲ್ಲಿ ಸಾಕಷ್ಟು ವ್ಯತ್ಯಾಸವಾಗಿದೆ. ಒಳ್ಳೆಯ ರೀತಿ ಮಾತಾಡುತ್ತಿದ್ದೇನೆ ಎಂಬ ಖುಷಿ ಇದೆ" ಎಂದರು‌.

ರಾಜ್ಯೋತ್ಸವ ಶುಭಾಶಯ: "ಬೆಳಗಾವಿಯಲ್ಲಿ ಎಲ್ಲ ಹಬ್ಬ - ಹರಿದಿನಗಳನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಅದರಲ್ಲೂ ಕರ್ನಾಟಕ ರಾಜ್ಯೋತ್ಸವವನ್ನು ದೊಡ್ಡ ಮಟ್ಟದಲ್ಲಿ ಆಚರಿಸುತ್ತಾರೆ. ಆ ಸಂಭ್ರಮವನ್ನು ಯೂಟ್ಯೂಬ್ ವಿಡಿಯೋಗಳಲ್ಲಿ ನೋಡಿದ್ದೇನೆ. ಈ ಬಾರಿ ಬೆಳಗಾವಿಯಲ್ಲೇ ಕಣ್ತುಂಬಿಕೊಳ್ಳುವ ಅವಕಾಶ ಸಿಕ್ಕಿದೆ. ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವ ಹಾರ್ದಿಕ ಶುಭಾಶಯಗಳು. ಶಾಂತಿಯಿಂದ ಕನ್ನಡ ಹಬ್ಬವನ್ನು ನಾವೆಲ್ಲ ಆಚರಿಸೋಣ" ಎಂದು ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಕರೆ ನೀಡಿದರು.

ಇದನ್ನೂ ಓದಿ: ಅಂದು - ಇಂದು ಬೆಳಗಾವಿ ಕನ್ನಡ ರಾಜ್ಯೋತ್ಸವ: ಹೋರಾಟಗಾರರು, ಸಾಹಿತಿಗಳು ಹೇಳೋದೇನು?

Last Updated : 39 minutes ago
ETV Bharat Logo

Copyright © 2024 Ushodaya Enterprises Pvt. Ltd., All Rights Reserved.