ETV Bharat / state

ಬೆಳಗಾವಿ ನೂತನ ಡಿಸಿಯಾಗಿ ಮೊಹಮ್ಮದ್ ರೋಷನ್‌ ಅಧಿಕಾರ ಸ್ವೀಕಾರ - Belagavi DC - BELAGAVI DC

ಬೆಳಗಾವಿ ನೂತನ ಡಿಸಿ ಮೊಹಮ್ಮದ್ ರೋಷನ್ ಅವರಿ​ಗೆ ನಿರ್ಗಮಿತ ಡಿಸಿ ನಿತೇಶ ಪಾಟೀಲ ಅಧಿಕಾರ ಹಸ್ತಾಂತರಿಸಿದರು.

OUTGOING DC NITESH PATIL  HANDED OVER POWER  NEW DC MOHAMMAD ROSHAN  BELAGAVI
ಬೆಳಗಾವಿ ನೂತನ ಡಿಸಿಯಾಗಿ ಮೊಹಮ್ಮದ್ ರೋಷನ್‌ ಅಧಿಕಾರ ಸ್ವೀಕಾರ (ETV Bharat)
author img

By ETV Bharat Karnataka Team

Published : Jul 5, 2024, 3:04 PM IST

ಬೆಳಗಾವಿ: ಬೆಳಗಾವಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ವರ್ಗಾವಣೆಯಾಗಿರುವ ಹಿನ್ನೆಲೆಯಲ್ಲಿ ಇಂದು ನೂತನ ಜಿಲ್ಲಾಧಿಕಾರಿಯಾಗಿ ಮೊಹಮ್ಮದ್ ರೋಷನ್ ಅಧಿಕಾರ ವಹಿಸಿಕೊಂಡರು. ನಿಕಟಪೂರ್ವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೊಸ ಜಿಲ್ಲಾಧಿಕಾರಿಗೆ ಅಧಿಕಾರ ಹಸ್ತಾಂತರಿಸಿದರು.

2015ನೇ ಬ್ಯಾಚ್​​ನ ಐಎಎಸ್ ಅಧಿಕಾರಿ ಮೊಹಮ್ಮದ್ ರೋಷನ್ ಇದಕ್ಕೂ ಮುನ್ನ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಬಿ.ಟೆಕ್ ಹಾಗೂ ಎಂಬಿಎ.(ಫೈನಾನ್ಸ್), ಎಂಎ(ಪಬ್ಲಿಕ್ ಪಾಲಿಸಿ) ಪದವೀಧರರಾಗಿರುವ ಇವರು, ಹಾವೇರಿ ಮತ್ತು ಉತ್ತರ ಕನ್ನಡ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ.

OUTGOING DC NITESH PATIL  HANDED OVER POWER  NEW DC MOHAMMAD ROSHAN  BELAGAVI
ಬೆಳಗಾವಿ ನೂತನ ಡಿಸಿ ಮೊಹಮ್ಮದ್ ರೋಷನ್ ಮತ್ತು ನಿರ್ಗಮಿತ ಡಿಸಿ ನಿತೇಶ ಪಾಟೀಲ ಪರಸ್ಪರ ಆಲಿಂಗನ (ETV Bharat)

ಕಳೆದ ಎರಡು ವರ್ಷಗಳಿಂದ ಬೆಳಗಾವಿ ಜಿಲ್ಲಾಧಿಕಾರಿಯಾಗಿ ಆಡಳಿತಕ್ಕೆ ಚುರುಕು ತಂದಿದ್ದ ನಿತೇಶ್ ಪಾಟೀಲ, ಕಿರು, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಇಲಾಖೆ ನಿರ್ದೇಶಕರಾಗಿ ವರ್ಗಾವಣೆಗೊಂಡಿದ್ದಾರೆ.

ಜಿ.ಪಂ.ಸಿಇಒ ರಾಹುಲ್ ಶಿಂಧೆ ಅವರು ನಿರ್ಗಮಿತ ಜಿಲ್ಲಾಧಿಕಾರಿ ನಿತೇಶ್ ಪಾಟೀಲರಿಗೆ ಶುಭ ಕೋರಿದರು. ನೂತನ ಜಿಲ್ಲಾಧಿಕಾರಿಗಳಿಗೆ ಹೂಗುಚ್ಛ ನೀಡಿ ಬರಮಾಡಿಕೊಂಡರು. ಪ್ರೊಬೇಷನರಿ ಐಎಎಸ್ ಅಧಿಕಾರಿ ದಿನೇಶ್ ಕುಮಾರ್ ಮೀನಾ, ಅಪರ ಜಿಲ್ಲಾಧಿಕಾರಿ ವಿಜಯಕುಮಾರ್ ಹೊನಕೇರಿ ಸೇರಿ ಮತ್ತಿತರರು ಈ ಸಂದರ್ಭದಲ್ಲಿ ಇದ್ದರು.

ಇದನ್ನೂ ಓದಿ: ಕೆಂಪೇಗೌಡ ವಿಮಾನ ನಿಲ್ದಾಣದ ಏರ್ ಟ್ರಾಫಿಕ್ ಕಂಟ್ರೋಲ್​ ಆಧುನೀಕರಣ - KIA ATC

ETV Bharat Logo

Copyright © 2025 Ushodaya Enterprises Pvt. Ltd., All Rights Reserved.